20/08/2026
ರಾಯಭಗ ಸುದ್ದಿ
ಚಿಂಚಲಿಯಲ್ಲಿ ಶ್ರೀ ಮರುಗುಬಾಯಿ ದೇವಿ ದೇವಸ್ಥಾನದ ಕಳಸಾರೋಹಣ
ರಾಯಬಾಗ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮರುಗುಬಾಯಿ ತೋಟದಲ್ಲಿರುವ ಶ್ರೀ ಮರುಗುಬಾಯಿ ದೇವಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಭಕ್ತಿಭಾವ ಹಾಗೂ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನ ಬೆಳಗ್ಗೆ ಹಾಲಾಳದಿಂದ ಭವ್ಯ ಕುಂಭಮೇಳ ಮೆರವಣಿಗೆ ನಡೆಯಿತು. ನಂತರ ಪೂಜ್ಯರಿಂದ ಆಶೀರ್ವಚನ, ಸತ್ಕಾರ ಸಮಾರಂಭ ಹಾಗೂ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಎರಡನೇ ದಿನ ಶ್ರೀದೇವಿಯ ಮಹಾಪೂಜೆ, ಹೋಮ-ಹವನ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳಿಗೆ ಸತ್ಕಾರ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ವಹಿಸಿ, ಭಕ್ತರಿಗೆ ಮಂಗಲ ಪ್ರವಚನ ನೀಡಿದರು. ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಆಶ್ರಮ, ಗುರುದೇವ ಆಶ್ರಮ, ಚಿಂಚಲಿಯ ಪರಮಪೂಜ್ಯ ಶ್ರೀ ಸಿದ್ಧಪ್ರಸಾದ ಮಹಾಸ್ವಾಮಿಗಳು ಪ್ರವಚನ ನೀಡಿದರು. ಸೇತಿಮನಿ ಧರ್ಮರ ಮಠದ ಪರಮಪೂಜ್ಯ ಶ್ರೀ ಮಹಾದೇವಸ್ವಾಮಿಗಳು ಸಹ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಧೂಳಗೌಡ ಪಾಟೀಲ, ಅಂಕುಶಣ್ಣ ಜಾಧವ, ಶ್ರೀಪಾಲ್ ಖೋತ, ಶಿವಾಜಿ ಸೌಂದಲಗಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಯಶಸ್ವಿಯಾಗಲು ಶ್ರೀ ಕಲ್ಲಪ್ಪ ಖೋತ, ಸಿದ್ದಪ್ಪ ಹಾರೂಗೇರಿ, ಮಾರುತಿ ಅರವಳ್ಳಿ, ಮಾಯಪ್ಪ ಖೋತ, ಎಲ್ಲಪ್ಪ ಹಾರೂಗೇರಿ, ಬಬ್ಲು ಜಾಧವ, ರವಿ ಸರಗಾಂವಿ, ಬಾಳು ಅಡಪಾಡಿ, ಪರಶುರಾಮ ಹಾರೂಗೇರಿ, ಲಕ್ಷ್ಮಣ ಅರವಳಿ, ಕಾಮು ಖೋತ ಸೇರಿದಂತೆ ಅನೇಕರು ಶ್ರಮಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರು, ಹಿರಿಯರು, ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಹಾಗೂ ಶಿಕ್ಷಕರು ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮರುಗುಬಾಯಿ ದೇವಿಯ ಕೃಪೆಗೆ ಪಾತ್ರರಾದರು.
ವರದಿ: ಭರತ ಮುರಗುಂಡೆ
ಅಮರ ವಾಹಿನಿ ಕನ್ನಡ ನ್ಯೂಸ್, ರಾಯಬಾಗ