01/11/2021
ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಗೋಕುಲಂನಲ್ಲಿನ ವಿದೇಶಿಯರಿಗೆ ಹಾಗೂ ಅನ್ಯಭಾಷಿಕ ಟೆಕ್ಕಿಗಳಿಗೆ ಸಿಹಿ ವಿತರಿಸಿ, ಕನ್ನಡ ಧ್ವಜ ನೀಡಲಾಯಿತು.
ನಂತರ ಕರ್ನಾಟಕ ರಾಜ್ಯ ಸ್ಥಾಪನೆ, ಈ ಹಿಂದೆ ಆಳಿದವರ ಇತಿಹಾಸ ಹಾಗೂ ನಾಡಿನ ಪರಂಪರೆ ಬಗ್ಗೆ ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಇಂಗ್ಲೆಂಡಿನ ಎಲಿನಾ "ಕರ್ನಾಟಕ ಅತ್ಯಂತ ಸುಂದರ ನಾಡು. ಹಲವಾರು ವರ್ಷಗಳಿಂದ ಮೈಸೂರಿನೊಂದಿಗೆ ಒಡನಾಟ ಹೊಂದಿದ್ದು. ಇಲ್ಲಿನ ಜನ ಬಹಳ ಒಳ್ಳೆಯ ಮನಸ್ಸಿನವರು. ಇಂದು ಕನ್ನಡದ ಹಬ್ಬದಲ್ಲಿ ಭಾಗಿಯಾಗಿರುವುದು ಬಹಳ ಸಂತೋಷವಾಗಿದೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯ" ಎಂದು ತಿಳಿಸಿದರು.
ವಿದೇಶಿಯರು ಸಹ ಸಂಭ್ರಮಿಸಿ ಭಾಗವಹಿಸಿ ಶುಭಾಶಯ ಕನ್ನಡಿಗರಿಗೆ ಶುಭಾಶಯ ಕೋರಿದ್ದು ವಿಶೇಷವಾಗಿತ್ತು. ಕೇರಳ, ಆಂಧ್ರ ಹಾಗೂ ತಮಿಳುನಾಡಿನ ಟೆಕ್ಕಿಗಳು ಸಹ ಭಾಗಿಯಾಗಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿತು.
ಮೈಸೂರು ರಕ್ಷಣಾ ವೇದಿಕೆ
ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್ ,ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಕೆಂಪೇಗೌಡ ಸಹಕಾರಿ ಸಂಘ ಅಧ್ಯಕ್ಷ ಗಂಗಾಧರ ಗೌಡ ,ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ,ಜೀವಧಾರ ಪದವಿ ಕ್ಷೇತ್ರದ ಕಾರ್ಯದರ್ಶಿ ವರಲಕ್ಷ್ಮಿ ಅಜಯ್ ,ನವೀನ್ ಕೆಂಪಿ,
ಗೋಕುಲಂನ ಪ್ರಸಿದ್ದ ಚಕ್ರ ಹೌಸ್ ನ ರಾಜೇಶ್, ಮಂಜು, ಇಂಗ್ಲೆಂಡಿನ ಎಲೆನಾ, ಉತ್ತರ ಪ್ರದೇಶದ ಆಯುಷಿ, ಶೀತಲ್, ಚಿರಾಗ್, ಋಷಿಕ, ಕೇರಳದ ಗೋಕುಲ್, ಗೋವಾದ ಹೆಲೆನ್, ಚಂದ್ರಕಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.