22/02/2022
ವಿಶ್ವ ಹಿಂದೂ ಪರಿಷದ್ ಬೀದರ ಜಿಲ್ಲೆ
ಇವರಿಗೆ,ದಿನಾಂಕ:
ಸನ್ಮಾನ್ಯ ಗೃಹ ಮಂತ್ರಿಗಳು
ಕರ್ನಾಟಕ ಸರ್ಕಾರ, ಬೆಂಗಳೂರು
ಮಾನ್ಯರೇ,
ಮುಖೇನ: ಜಿಲ್ಲಾಧಿಕಾರಿಗಳು
ವಿಷಯ: ದಾರುಣವಾಗಿ ಕಗ್ಗೊಲೆಯಾದ ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗದಳ ಸಹ ಸಂಯೋಜಕ ಶ್ರೀ ಹರ್ಷನ ಹತ್ಯೆಯನ್ನು ಖಂಡಿಸಿ
ದಿನಾಂಕ: 20.02.2022 ರಂದು ರಾತ್ರಿ ದೇಶದ್ರೋಹಿ ಸಂಘಟನೆಗಳಾದ PFI ಮತ್ತು SDPI ಕೊಲೆಪಾತಕರಿಂದ ಶಿವಮೊಗ್ಗ ನಗರದಲ್ಲಿ ದಾರುಣ ಹತ್ಯೆಗೊಳಗಾದ ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗದಳ ಸಹ ಸಂಯೋಜಕ ಶ್ರೀ ಹರ್ಷನ ಹತ್ಯೆಯನ್ನು ವಿಶ್ವ ಹಿಂದೂ ಪರಿಷದ್ ಉಗ್ರವಾಗಿ ಖಂಡಿಸುತ್ತದೆ. ಧರ್ಮರಕ್ಷಣೆಗೆಂದೇ ಬಾಳನ್ನು ಮುಡುಪಾಗಿಟ್ಟು ತನ್ನದೆಲ್ಲವನ್ನೂ ಸಮಾಜಕ್ಕೆ ಸಮರ್ಪಿಸಿ ಬಜರಂಗದಳದ ಸಕ್ರಿಯ ಕಾರ್ಯಕರ್ತನಾಗಿ ಭಾರತಮಾತೆಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದ ಶ್ರೀಹರ್ಷ ದ್ರೋಹಿಗಳ ಸಂಚಿಗೆ ಬಲಿಯಾಗಿ ಕಗ್ಗೊಲೆಯಾಗಿದ್ದಾನೆ. ಕೊಲೆಪಾತಕರು ಇಂತಹ ಕಾರ್ಯಕರ್ತರನ್ನೇ ನೇರವಾಗಿ ಗುರಿ ಇಟ್ಟು ಹತ್ಯೆ ಮಾಡುತ್ತಾ ಬಂದಿರುವುದು ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಿದ್ದು, ಇದು ಸರ್ಕಾರಕ್ಕೆ ಸವಾಲಾಗಿದ್ದರೆ ಸಾಮಾನ್ಯ ಪ್ರಜೆಯಾದ ಜಾಗೃತ ಹಿಂದೂ ಕಂಗಾಲಾಗಿದ್ದಾನೆ. ಪರಿಸ್ಥಿತಿಯನ್ನು ಹೀಗೆಯೆ ಬಿಟ್ಟರೆ ಇಡೀ ದೇಶಕ್ಕೆ ಗಂಡಾಂತರ ಕಾದಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ.. ಸರ್ಕಾರವು ಎಚ್ಚೆತ್ತುಕೊಂಡು ದಾರುಣ ಹತ್ಯೆ ಮಾಡಿದ ಕೊಲೆಪಾತುಕರನ್ನು ಈ ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು ಮತ್ತು ನ್ಯಾಯಾಲಯವು ಇವರನ್ನು ಕಠಿಣವಾಗಿ ಶಿಕ್ಷಿಸಿ ಉಗ್ರರಿಗೆ ಎಚ್ಚರಿಕೆಯನ್ನು ನೀಡಬೇಕು ಎಂದು ವಿವಂತಿಸುತ್ತೇವೆ.
ಇದು ಸಾಮಾನ್ಯ ಹತ್ಯೆಯಾಗಿರದೆ ದೇಶದ್ರೋಹಿ ಸಂಚಿನ ಹತ್ಯೆಯಾಗಿರುವುದರಿಂದ, ಇದರ ತನಿಖೆಯನ್ನು ಕೇಂದ್ರ ತನಿಖಾದಳಗಳಾದ NIA ಮತ್ತು CBI ಗೆ ಒಪ್ಪಿಸಿ ಈ ಹತ್ಯೆಯ ಹಿಂದಿರುವ ಸಮಾಜಘಾತುಕರ ಸಂಚನ್ನು ಬಯಲಿಗೆಳೆದು ಅವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ವಿನಂತಿಸುತ್ತೇವೆ.
ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸಿ ಸಮಾಜದ ಶಾಂತಿಯನ್ನು ಕದಡುತ್ತಿರುವ ದೇಶದ್ರೋಹಿ ಸಂಘಟನೆಗಳಾದ PFI ಮತ್ತು SDPI ಗಳನ್ನು ಕರ್ನಾಟಕ ಸರ್ಕಾರವು ಈ ಕೂಡಲೇ ನಿಷೇಧಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ತಮ್ಮಲ್ಲಿ ವಿನಂತಿಸುತ್ತಿದೆ.
ಹತ್ಯೆಗೊಳಗಾದ 26 ರ ಹರೆಯದ ತರುಣ ಹರ್ಷ ಬಡ ಕುಟುಂಬದಿಂದ ಬಂದಿದ್ದು ವಯಸ್ಸಾದ ತಂದೆ ತಾಯಿಗಳಿಗೆ ಆಧಾರವಾಗಿದ್ದ. ಪುತ್ರನನ್ನು ಕಳೆದುಕೊಂಡು ನಿರಾಶ್ರಿತರಾಗಿ ದುಃಖತಪ್ತರಾಗಿರುವ ಮೃತ ಹರ್ಷನ ತಂದೆತಾಯಿಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಈ ಕೂಡಲೇ 25 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡುವಂತೆ ಮಾನ್ಯ ಗೃಹಮಂತ್ರಿಗಳಲ್ಲಿ ವಿನಂತಿಸುತ್ತೇವೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿಗಳು
ವಿಶ್ವ ಹಿಂದೂ ಪರಿಷದ್ – ಬಜರಂಗದಳ
ಪ್ರತಿ:
1. ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
2. ಸನ್ಮಾನ್ಯ ಗೃಹಮಂತ್ರಿಗಳು