
16/07/2025
🌿 ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ! 🐘
ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ ನಿಯಂತ್ರಿಸಲು, ಐಐಎಸ್ಸಿ (IISc)ಯೊಂದಿಗೆ ಅರಣ್ಯ ಇಲಾಖೆ ಐತಿಹಾಸಿಕ ಒಡಂಬಡಿಕೆ ಮಾಡಿಕೊಂಡಿದೆ.
ಈ ಒಡಂಬಡಿಕೆ ಮೂಲಕ ಆಧುನಿಕ ತಂತ್ರಜ್ಞಾನಗಳಾದ ಸ್ಯಾಟಲೈಟ್ ಟೆಲಿಮೆಟ್ರಿ, ಕ್ಯಾಮೆರಾ ಟ್ರಾಪ್, ಜಿ.ಐ.ಎಸ್ ಮಾದರಿಗಳ ಸಹಾಯದಿಂದ ಆನೆಪಥ ಮತ್ತು ಆವಾಸಸ್ಥಾನಗಳನ್ನು ಗುರುತಿಸಿ, ಸಂರಕ್ಷಿಸಲಾಗುತ್ತದೆ.
🌾 ರೈತರ ಬೆಳೆ ರಕ್ಷಣೆ, 🛰️ ಮುನ್ನೆಚ್ಚರಿಕೆ ವ್ಯವಸ್ಥೆ, 🔔 ಘಂಟೆಗಳ ಮೂಲಕ ಎಚ್ಚರಿಕೆ, ಮತ್ತು 📊 ದತ್ತಾಂಶ ಆಧಾರಿತ ನಿರ್ಧಾರಗಳನ್ನು ರೂಪಿಸುವ ಮಹತ್ವದ ಪ್ರಯತ್ನ ಇದಾಗಿದೆ.
2025 ರಿಂದ 2029 ರವರೆಗೆ ₹4.74 ಕೋಟಿಯ ಯೋಜನೆ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಾನವ–ಆನೆ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಈ ಒಡಂಬಡಿಕೆ ಬಹುಮುಖ ಪಾತ್ರ ವಹಿಸಲಿದೆ ಎಂಬ ನಂಬಿಕೆ ನಮಗಿದೆ.
🙏 ಈ ಯೋಜನೆಯಲ್ಲಿ ಸಹಕರಿಸುತ್ತಿರುವ ಭಾರತೀಯ ವಿಜ್ಞಾನ ಸಂಸ್ಥೆ (IISc), ಇತರ ಪಾರ್ಟ್‌ನರ್ ಸಂಸ್ಥೆಗಳೆಲ್ಲರಿಗೂ ಧನ್ಯವಾದಗಳು.