25/01/2024
" ಲೋಕ ಸ್ಪಂದನ” & “ಆಪರೇಶನ್ ಬ್ರೊಕನ್ ವಿಂಡೊ 2023 ರಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಸಿಬ್ಬಂದಿಗೆ ಬಹುಮಾನ ಮತ್ತು ಪ್ರಶ೦ಸನೆ ಪತ್ರ ನೀಡಿ ಅಭಿನಂದಿಸಲಾಗಿದೆ."
ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ ಬೀದರ ಜಿಲ್ಲಾ ಪೊಲೀಸ್ ರಾತ್ರಿ ಸಮಯದಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕಗಳಲ್ಲಿ ರಸ್ತೆ ಬದಿಯಲ್ಲಿ ಮದ್ಯಪಾನ ಮಾಡುವವರ, ಚುಡಾಯಿಸುವವರ ವಿರುದ್ಧ ಮತ್ತು ಕಿಡಿಗೇಡಿಗಳ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಲು ಆಪರೇಶನ್ ಬ್ರೊಕನ್ ವಿಂಡೊ ಕೈಗೊಂಡಿದ್ದು, ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 13863 ನ್ಯಾಯಾಲಯದಲ್ಲಿ ದಂಡ ವಿಧಿಸುವ ಪ್ರಕರಣಗಳನ್ನು ದಾಖಲಿಸಿದ್ದು, ಜಿಲ್ಲೆಯಲ್ಲಿಯೇ ಮಂಠಾಳ ಪೊಲೀಸ್ ಠಾಣೆ ಅತೀ ಹೆಚ್ಚು 840 ಪ್ರಕರಣ ದಾಖಲಿಸಿದ್ದು, ಬ.ಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 839 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಕೊಂಡಿರುತ್ತಾರೆ.
ಅದರಂತೆ 2023 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನೀಡಿದ ಸೇವೆಗೆ “ ಲೋಕ ಸ್ಪಂದನ” ನಿಮ್ಮ ನುಡಿ ನಮ್ಮ ನಡೆ ವಾಕ್ಯದೊಂದಿಗೆ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಲ್ಲಿ ಮೊಬೈಲ್ ನಿಂದ ಕ್ಯೂ ಆರ್ ಕೋಡ್ ಸ್ಕ್ಯಾನ ಮಾಡಿ ಠಾಣೆ/ಕಛೇರಿಗಳಲ್ಲಿ ತಮಗೆ ದೊರಕಿದ ಸ್ಪಂದನೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಮತ್ತು ರೇಟಿಂಗ್ ನೀಡಬಹುದಾಗಿದು, ಜಿಲ್ಲೆಯ ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಅತೀ ಹೆಚ್ಚು 634 ನೊಂದಣಿಯಾಗಿದ್ದು ಅತಿ ಹೆಚ್ಚು 5 ಮತ್ತು 4 ಸ್ಟಾರ್ ರೇಟಿಂಗ್ ಪಡೆದಿರುತ್ತಾರೆ.
ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ, ಶಿವಪ್ಪಾ, ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ, ವಸೀಂ ಪಟೇಲ್, ಹಾಗು ಶ್ರೀ, ಬಾಶುಮಿಯ್ಯಾ, ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಹಾಗು ಅವರ ಸಹದ್ಯೋಗಿಗಳಿಗೆ ಅಭಿನಂದಿಸಿ ಬಹುಮಾನ ನೀಡಿ ಪ್ರಶಂಶನಾ ಪತ್ರದೊಂದಿಗೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.