26/10/2025
ಇಂದು ಬೀದರ ನಗರದ ಡಾ. ಚನ್ನಬಸವ ಪಟ್ಟದೇವರ ರಂಗ ಮಂದಿರ ಬೀದರನಲ್ಲಿ ಆಯೋಜಿಸಲಾದ್ ಬೀದರ ಜಿಲ್ಲೆಯ ಮಾಜಿ ಸೈನಿಕರ ಸಂಘ (ರಿ ) ವತಿಯಿಂದ ಸುವರ್ಣ ಮಹೋತ್ಸವಕ ಸಮಾರಂಭದಲ್ಲಿ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮಾತಾನಾಡಿದರು. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುವ ಭಾರತೀಯ ಸೇನೆ ತನ್ನ ಶೌರ್ಯಕ್ಕೆ ಹೆಸರಾಗಿದೆ. ನಮ್ಮ ಯೋಧರ ತ್ಯಾಗ, ಬಲಿದಾನದಿಂದಾಗಿಯೇ ನಾವಿಂದು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ದೇಶ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಭಾರತ ಶಕ್ತಿಶಾಲಿ ರಾಷ್ಟçವಾಗಿ ಹೆಸರಾಗಿದೆ. ನಮ್ಮಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿದೆ.
ದೇಶವನ್ನು ಹಗಲೂರಾತ್ರಿ ಕಾಯುವ ಯೋಧರ ಸೇವೆ ಸ್ಮರಣೀಯ. ಅವರ ಕರ್ತವ್ಯನಿಷ್ಠೆ, ಸೇವೆ, ತ್ಯಾಗ, ಬಲಿದಾನದಿಂದಾಗಿಯೇ ಶಾಂತಿ ನೆಲೆಗೊಂಡಿದೆ. ಯೋಧರ ಸೇವೆ, ಕೊಡುಗೆಯನ್ನು ಪ್ರತಿಯೊಬ್ಬರು ಗುರುತಿಸಿ, ಗೌರವಿಸುವ ಅಗತ್ಯವಿದೆ. ಇದು ನಮ್ಮೆಲ್ಲರ ಕರ್ತವ್ಯವೂ ಆಗಿದೆ.
ಪರಿವಾರದಿಂದ ದೂರವಿದ್ದು, ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ನಮ್ಮ ವೀರಯೋಧರ ಬದುಕು ಎಲ್ಲರಿಗೂ ಮಾದರಿಯಾಗಬೇಕು. ಅವರೇ ನಮ್ಮ ನಿಜವಾದ ಹೀರೋಗಳು. ಅವರ ಕರ್ತವ್ಯನಿಷ್ಠೆ, ತ್ಯಾಗ, ಬಲಿದಾನಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಉಸಿರಾಡಲೂ ಆಗದಂತಹ ಪರ್ವತ ಪ್ರದೇಶಗಳಲ್ಲಿ, ರಕ್ತ ಹೆಪ್ಪುಗಟ್ಟಿಸುವಂತಹ ಹಿಮಪರ್ವತಗಳಲ್ಲಿ ಪ್ರಾಣಾಪಾಯವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ವೀರ ಯೋಧರ ಬದುಕು ಸ್ಫೂರ್ತಿದಾಯಕವಾಗಿದೆ.
ನಮ್ಮ ಯೋಧರು ನಿವೃತ್ತಿಯ ನಂತರವೂ ಉತ್ತಮ ಸಮಾಜ ಕಟ್ಟುವಲ್ಲಿ ನಿರತರಾಗಿರುವುದು ಅತ್ಯಂತ ಮಹತ್ವದ ಸಂಗತಿ. ನಿವೃತ್ತ ಯೋಧರ ಸುಖೀ ಜೀವನಕ್ಕಾಗಿ ಮಾಜಿ ಸೈನಿಕರ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ. ಸಂಘವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಮತ್ತು ಹೆಮ್ಮೆಯ ಸಂಗತಿ.
ನಮ್ಮ ತಂದೆಯವರಾದ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಮಾಜಿ ಸೈನಿಕರ ಸಂಘದ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿರುವುದು ನಿಮಗೆಲ್ಲ ತಿಳಿದೇ ಇದೆ. ಸ್ಮಾರಕ ನಿರ್ಮಾಣ ಸೇರಿದಂತೆ ಎಲ್ಲ ಕಾರ್ಯಗಳಿಗೆ ದಿ. ನಾಗಮಾರಪಳ್ಳಿ ಅವರು ಸಹಕಾರ, ಕೊಡುಗೆ ನೀಡಿದ್ದರು. ಮಾಜಿ ಸೈನಿಕರ ಬಗ್ಗೆ ಅವರಲ್ಲಿ ಅತೀವ ಪ್ರೀತಿ ಇತ್ತು. ಮಾಜಿ ಸೈನಿಕರ ಬಗ್ಗೆ ಕಾಳಜಿ ಇತ್ತು. ಮಾಜಿ ಸೈನಿಕರ ಕಷ್ಟ ಸುಖಗಳಲ್ಲಿ ಅವರು ಸದಾ ಭಾಗಿಯಾಗುತ್ತಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ. ಮಾಜಿ ಸೈನಿಕರನ್ನು ಗೌರವಿಸುವ, ನೆರವಾಗುವ ಕಾರ್ಯವನ್ನು ನಾಗಮಾರಪಳ್ಳಿ ಪರಿವಾರವು ಮುಂದುವರೆಸಿಕೊAಡು ಹೋಗುತ್ತಿದೆ. ಮಾಜಿ ಸೈನಿಕರ ಶ್ರೇಯೋಭಿವೃದ್ದಿಗಾಗಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುತ್ತದೆ ಎಂದು ಹೇಳಲು ಸಂತೋಷವಾಗುತ್ತಿದೆ.
ಮಾಜಿ ಸೈನಿಕರಿಗಾಗಿ ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ದಿಸೆಯಲ್ಲಿ ಸಮಾಜವೂ ಸಹಕರಿಸಬೇಕು. ವೀರ ಯೋಧರ ನಿವೃತ್ತಿ ಜೀವನ ಸುಖೀಯಾಗಲು ಸಹಕಾರ ನೀಡಬೇಕು. ಶ್ರಮಿಸಬೇಕು. ಮಾಜಿ ಸೈನಿಕರ ಯೋಗಕ್ಷೇಮ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಈ ಸಂಧರ್ಭದಲ್ಲಿ ಡಾ. ವೆಂಕಟ್ ರಾವ್ ತೆಲಗ, ಅಶೋಕ್ ಕರಂಜಿ, ಪಂಡ್ಡಪ್ಪ ಮೇತ್ರೆ,ಡಾ. ದೀಪಕ್ ಚೋಕಡೆ, ಕಾಶೀನಾಥ್ ಬೆಳ್ದಲೇ, ಈಶ್ವರ್ ಸಿಂಗ್ ಟಾಕುರ್, ಎಮ್. ವಿ. ಪಾಟೀಲ್ , ಸೂರ್ಯಕಾಂತ್ ಮೇತ್ರೆ
ಭೂಷಣ ಚಿಕಲೆ , ಪ್ರವೀಣ್ ಕುಮಾರ್, ಸತೀಶ್ ಚಂದ್ರ , ರಾಜೇಶ್ ಚಲ್ವಾ , ಡಾ. ಜಗದೀಶ್ ತೆಲಗ, ಪ್ರಕಾಶ್ ನೆಟೆ , ಜಗನಾಥ್ ಕಮಲಕರ್ , ಜಿತೇಂದ್ರ ದೇವ್
ಇತರರು ಇದ್ದರು.