09/06/2026
ಅನಿಲ್ ಜಾದವ ಅವರು ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ವೋಟ್ ಚೋರಿ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಹಾಗೂ ಕ್ರೆöÊಸ್ತ ನಿಗಮ ಮಂಡಳಿಗಾಗಿ ಅನೇಕ ಹೋರಾಟ ನಡೆಸಿದ್ದಾರೆ. ಪಕ್ಷ ಸಂಘಟನೆ, ಬಲಪಡಿಸುವಲ್ಲಿ ಹಾಗೂ ವಿವಿಧ ಜನಪರ ಹೋರಾಟಗಳಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದು, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ 5 MLC ಸ್ಥಾನಗಳು ಖಾಲಿ ಇದ್ದು ಅದರಲ್ಲಿ ಒಂದು ಸ್ಥಾನ ಕ್ರಿಶ್ಚಿಯನ್ ಕೋಟಾ ದಲ್ಲಿ ಅನಿಲ್ ಜಾಧವರವರಿಗೆ ನಾಮಿನೇಟ್ ಮಾಡಬೇಕು ಎಂದು ಬೀದರ್ ಕ್ರಿಶ್ಚಿಯನ್ ಹಕ್ಕು ಗಳ ಸಮಿತಿ ವತಿಯಿಂದ ಕಾಂಗ್ರೆಸ್ ಹೈ ಕಮಾಂಡ್ ಗೆ ಮನವಿ ಮಾಡಿಕೊಂಡರು.
ಕ್ರಿಶ್ಚಿಯನ್ ಸಮುದಾಯದ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅನಿಲ್ ಜಾದವ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ, ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಹೇಳಿದ್ದಾರೆ.
ಈ ಭಾಗದಲ್ಲಿ 60 ವರ್ಷ ದಿಂದ ಕಾಂಗ್ರೆಸ್ ಗೋಸ್ಕರ ಮತಗಳನ್ನು ನೀಡ್ತಾ ಇದ್ದಾರೆ, ಅದರಲ್ಲಿ ಒಂದು MP, MLA, MLC , ಮತ್ತು ಒಂದು ZP ಟಿಕೆಟ್ ಸಹ ನೀಡಿಲ್ಲ. ಅದಕ್ಕೋಸ್ಕರ ಈ ಸಲ 5 MLC ನಾಮಿನೇಟ್ ಅಲ್ಲಿ ಒಂದು ಸ್ಥಾನ ಕ್ರೈಸ್ತ ಕೋಟಾದಲ್ಲಿ ಅನಿಲ್ ಜಾಧವರವರಿಗೆ ಕೊಡಬೇಕಾಗಿ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿಯ ರಾಜ್ಯದಕ್ಷರಾದ rev.manoj Paul ರವರು ಮನವಿ ಮಾಡಿ ಕೊಂಡರು.