07/07/2025
ವಿಜಯಪುರ ಜಿಲ್ಲೆಯ 270 ಜನ ನರೇಗಾ ಸಿಬ್ಬಂದಿ ಜೊತೆಯಲ್ಲಿ ನಾನಿದ್ದೇನೆ, ಯಾವುದೇ ಕಾರಣಕ್ಕೂ ಆತಂಕಪಡಬೇಡಿ ಆದಷ್ಟು ಬೇಗ ಸರ್ಕಾರದಿಂದ ಸಂಬಳ ಕೊಡಿಸುವ ಜವಾಬ್ದಾರಿ ನನ್ನದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಈ ಕುರಿತು ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿ ಕಳೆದ 2 ವರ್ಷದಿಂದ ಒಂದು ರಸ್ತೆ ನಿರ್ಮಾಣ ಮಾಡಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ, ಒಂದೇ ಒಂದು ಅಭಿವೃದ್ಧಿ ಕಾರ್ಯಗಳಿಲ್ಲ. ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಬೇಕಾದಷ್ಟು ಸರ್ಕಾರ ನೋಡಿದ್ದೇನೆ. ಇಷ್ಟೊಂದು ರಾದ್ಧಾಂತ ಯಾವ ಸರ್ಕಾರದಲ್ಲೂ ನೋಡಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ನಿಮ್ಮ ಸರ್ಕಾರದಲ್ಲಿ ದಿನಗೂಲಿ ನೌಕರರಿಗೂ ಸಂಬಳ ಕೊಡಲು ಸಾಧ್ಯವಾಗದಂತಹ ದುಸ್ಥಿತಿ ಇದೆ ಎಂದು ಮನವರಿಕೆ ಮಾಡುತ್ತೇನೆ ಎಂದರು. ಇದೇ ವೇಳೆ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ರಾಮಣ್ಣ ರಾಜ್ಯದ ಜನ ನಿಮ್ಮ ಬಳಿ ಗ್ಯಾರಂಟಿ ಕೊಡಿ ಎಂದು ಕೇಳಲು ಬಂದಿರಲಿಲ್ಲ. ಕೇವಲ ಸರ್ಕಾರ ರಚಿಸಲೇಬೇಕು ಎನ್ನುವ ಹಟದಿಂದ, ಅಧಿಕಾರ ದಾಹದಿಂದ ರಾಜ್ಯದ ಜನರಿಗೆ ಮೋಸ ಮಾಡಿ ಸರ್ಕಾರ ತಂದಿದ್ದಿರಿ. ಈ ಸರ್ಕಾರದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ನಿಮಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದಾದರೆ, ಸಕಾರವನ್ನು ವಿಸರ್ಜಿಸಿ ಹೊರ ಬನ್ನಿ, ಇಲ್ಲಾ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಜನರಿಗೆ ಹೇಳಿ ಕ್ಷಮೆಯಾಚಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಖರ್ಗೆ ಅವರು ತಮ್ಮ ಮನೆ ಪಾತ್ರೆಯಲ್ಲಿಯೇ ಕತ್ತೆ ಬಿದ್ದಿದೆ. ಅದನ್ನು ಬಿಟ್ಟು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ, ನಿನ್ನದೇ ಇಲಾಖೆಯಲ್ಲಿನ ಸಿಬ್ಬಂದಿ ಸಂಬಳ ನೀಡಲು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿಯಾ.. ಎಂದು ಗ್ರಾಮಿಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದವೂ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಬಸವರಾಜ್ ರಾಯರೆಡ್ಡಿ ಅವರ ಬಾಯಿಂದಲೇ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಕೊಡಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಂಸದ ಜಿಗಜಿಣಗಿ ಹೇಳಿದರು | TV NEWS KARNATAKA JULY 07 2025