02/01/2026
ಪಾಲಿಕೆ ಸಭೆಯಲ್ಲೆ ಗುಟ್ಕಾ ಹಾಕಿಕೊಂಡ ಸದಸ್ಯ
ವಿಜಯಪುರ: ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಪ್ರದೇಶವಾಗಿಸಲು ಹಾಗೂ ತಂಬಾಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ನಿತ್ಯ ಪ್ರಯತ್ನಶೀಲವಾಗಿದ್ದು ಒಂದೆಡೆಯಾದರೆ ಅತ್ತ ಮಂಗಳವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ರಾಜಾರೋಷವಾಗಿ ಗುಟ್ಕಾ ಜಗಿಯುವ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ.
ಅನೇಕ ದಿನಗಳ ನಂತರ ಪಾಲಿಕೆ ಸಭೆ ಮಹತ್ವಪೂರ್ಣವಾಗಿ ನಡೆಯುತ್ತಿದ್ದು, ಗಂಭೀರವಾಗಿ ನಗರ ಅಭಿವೃದ್ಧಿ ಚರ್ಚೆ, ಇ ಸ್ವೊತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಗ್ರಂಥ ಖರೀದಿಯಲ್ಲಿ ಅವ್ಯವಹಾರ ಚರ್ಚೆ ನಡೆಯುವಾಗ ಸದಸ್ಯರೋರ್ವರು ಗುಟ್ಕಾ ಜಗಿಯುವಲ್ಲಿ ನಿರತರಾಗಿದ್ದರು, ಪಾನ ಮಸಾಲಾಗೆ, ತಂಬಾಕು ಚೀಟಿ ಹರಿದು ಮಿಕ್ಸ್ ಮಾಡುವಲ್ಲಿ ಮಗ್ನರಾಗಿದ್ದರು, ಮಾಧ್ಯಮಗಳ ಕ್ಯಾಮೆರಾ ಕಣ್ಣುಗಳು ಅವರಿದ್ದ ಆಯಾಮದಲ್ಲಿ ಸಭೆ ಶೂಟಿಂಗ್ ತಿರುಗಿದಾಗ ಜಾಣ ನಡೆಯ ಮೂಲಕ ಕಾಗದದ ಮರೆಯಲ್ಲಿ ಜಾಣ ನಡೆಯಿಂದ ತಂಬಾಕು ಬಾಯಿಗೆ ಹಾಕಿ ಸಭೆಯತ್ತ ಗಮನ ಹರಿಸಿದರು.