
16/07/2025
ಫೈನಲ್ ಕವರ್ ಪೇಜ್...
#ಯಕ್ಷಗಾನ #ಪೂರ್ವರಂಗ #ಕೃತಿ...
ಇನ್ನು ಕೆಲವೇ ದಿನಗಳಲ್ಲಿ...
ಕೃತಿಗಾಗಿ ಸಂಪರ್ಕಿಸಿ...
#ಯಕ್ಷಗಾನ #ಪೂರ್ವರಂಗ #ಕೃತಿ
(ತೆಂಕು-ಬಡಗು-ಉತ್ತರಕನ್ನಡತಿಟ್ಟು)
ಡಾ. ಶಿವಕುಮಾರ ಅಳಗೋಡು ರಚನೆಯ 10ನೆಯ ಸಂಶೋಧನ ಕೃತಿ ಇನ್ನು ಕೆಲವೇ ದಿನಗಳಲ್ಲಿ ಮುದ್ರಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಇದು ಐದು ವರ್ಷಗಳ ಕಾಲ ನಿರಂತರವಾಗಿ ಕ್ಷೇತ್ರಕಾರ್ಯದ ಮೂಲಕ ಹಿರಿಯ ಯಕ್ಷಗಾನ ಕಲಾವಿದರು, ವಿಮರ್ಶಕರು, ವಿದ್ವಾಂಸರನ್ನು ಭೇಟಿಯಾಗಿ ಸಂಗ್ರಹಿಸಿದ ಅತ್ಯಮೂಲ್ಯ ಮಾಹಿತಿಗಳನ್ನೊಳಗೊಂಡ ಕೃತಿ. ಸುಮಾರು ಇನ್ನೂರು-ಇನ್ನೂರೈವತ್ತು ವರ್ಷಗಳ ಈಚೆಗಿನ ಮೂರೂ ತಿಟ್ಟುಗಳ ಯಕ್ಷಗಾನ ಪೂರ್ವರಂಗವನ್ನಷ್ಟೇ ಕೇಂದ್ರೀಕರಿಸಿ ರೂಪುಗೊಂಡ 268ಪುಟಗಳ ಅಪೂರ್ವ ಕೃತಿಯಿದು.
ಪೂರ್ವರಂಗದ ಉಗಮ, ವಿಕಾಸ, ಸ್ವರೂಪ, ಆರಾಧನ ಮೌಲ್ಯ, ಪೂರ್ವರಂಗದ ಹಿಮ್ಮೇಳ, ಕಲಾವಿದರ ಕಲಿಕೆಯ ಕ್ರಮಗಳು, ಪೂರ್ವರಂಗದ ಸಿದ್ಧತೆಗಳು,
ಪೂರ್ವರಂಗದ ಅರ್ಧನಾರೀ, ಷಣ್ಮುಖ ಸುಬ್ಬರಾಯ, ಚಂದಭಾಮಾ, ಕೋಡಂಗಿ, ಬಾಲಗೋಪಾಲ, ಬಹುಬಗೆಯ ಕಟ್ಟುಹಾಸ್ಯಗಳನ್ನೊಳಗೊಂಡ 33 ವೇಷಗಳ ಸ್ವರೂಪ, ಹಿನ್ನೆಲೆ, ರಂಗಕ್ರಿಯೆಗಳ ವಿವರಗಳು,
ಪೂರ್ವರಂಗದ ಸಭಾಲಕ್ಷಣ ಪಠ್ಯಗಳ ಪದ್ಯ, ಶ್ಲೋಕಗಳ ಮಹತ್ತ್ವ-ಔಚಿತ್ಯ, ಛಂದಸ್ಸಿನ ಗುಣಾಂಶಗಳು,
ಪೂರ್ವರಂಗದ ಮೇಲೆ ದೇವದಾಸಿ ಪದ್ಧತಿ, ನಾಟ್ಯಶಾಸ್ತ್ರ, ಶೈವ-ಮಧ್ವಸಿದ್ಧಾಂತ, ನಾಗಾರಾಧನೆ, ಭೂತಾರಾಧನೆಗಳು ಬೀರಿದ ಪ್ರಭಾವ,
ತೆಂಕು, ಬಡಗು, ಉತ್ತರಕನ್ನಡದ ಹರಕೆ ಮೇಳಗಳು, ಡೇರೆ ಮೇಳಗಳಲ್ಲಿನ ಪೂರ್ವರಂಗದ ವರ್ತಮಾನದ ಸ್ಥಿತಿಗತಿ,
ಮೂಡಲಪಾಯ ಬಯಲಾಟದ ಪ್ರಕಾರಗಳಾದ ಶ್ರೀಕೃಷ್ಣ ಪಾರಿಜಾತ, ಘಟ್ಟದಕೋರೆ, ಸಣ್ಣಾಟ, ದೊಡ್ಡಾಟಗಳಲ್ಲಿನ ಪೂರ್ವರಂಗದ ಸ್ಥಿತಿಗತಿ,
ಪೂರ್ವರಂಗದ ಉಗಮ-ವಿಕಾಸವನ್ನು ದೃಢಪಡಿಸುವ ರೇಖಾಚಿತ್ರಗಳು,
ಪೂರ್ವರಂಗದ ಅಪೂರ್ವ ವೇಷಗಳ 6 ಪುಟಗಳ ವರ್ಣಚಿತ್ರಗಳು
ಇವೆಲ್ಲವನ್ನು ಒಂದೇ ಚೌಕಟ್ಟಿನಲ್ಲಿ ಹೊಂದಿರುವ ಕೃತಿ ಇದು. ಈ ಕೃತಿಯನ್ನು ಬೆಂಗಳೂರಿನ 'ಸಾಹಿತ್ಯಲೋಕ' ಪ್ರಕಾಶನದವರು ಪ್ರಕಟಿಸುತ್ತಿದ್ದಾರೆ. ಇದಕ್ಕೆ "ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್ (ISBN)" ಕೂಡ ಲಭ್ಯವಾಗಿದೆ.
ಸುಮಾರು ಒಂದು ತಿಂಗಳ ಒಳಗಾಗಿ ಈ ಕೃತಿಯು ಮುದ್ರಣಗೊಳ್ಳಲಿದೆ. ಇದರ ಮುಖಬೆಲೆಯು 320 ರೂಪಾಯಿ.
ಪುಸ್ತಕವನ್ನು ಕೊಂಡು ಪ್ರೋತ್ಸಾಹಿಸಿ ಎಂದು ಪ್ರಾರ್ಥನೆ.
ಕೃತಿಯನ್ನು ಪಡೆಯುವುದಕ್ಕಾಗಿ ಸಂಪರ್ಕಿಸಿ. (ಈಗಾಗಲೇ ತಿಳಿಸಿದವರನ್ನು ಹೊರತುಪಡಿಸಿ)
ಡಾ. ಶಿವಕುಮಾರ ಅಳಗೋಡು
9482703082
ಡಾ. ಶಿವಕುಮಾರ ಅಳಗೋಡು