30/07/2025
ಓವರ್ಡೋಸ್ ಇಂಜೆಕ್ಷನ್ ಸಾವು ಆರೋಪ ಸಾಯಿ ಗಂಗಾ ಆಸ್ಪತ್ರೆಯ ಅಧಿಕೃತ ಪ್ರತಿಕ್ರಿಯೆ #ಎಲ್ಲಾ ಹಿರಿ ಕಿರಿ ಸಖ, ಅಕ್ಕ ತಂಗಿ ಅಮ್ಮ ಅಪ್ಪಂದಿರಿಗೆಲ್ಲರಿಗೂ ನಮಸ್ಕಾರ
ದಿನಾಂಕ: 22 ಜುಲೈ 2025
ಆಸ್ಪತ್ರೆಗೆ ಸ್ಕ್ಯಾನಿಂಗ್ ಗೆ ಬಂದ ಪುಷ್ಪವತಿ ಎನ್ನುವ ಹೆಂಗಸಿಗೆ ಸ್ಕ್ಯಾನಿಂಗ್ ಇಲ್ಲ ಎಂದು ಹೇಳಲಾಗಿದೆ. ಹೊರಗಡೆ ಹೋದ ಆಕೆ ಕುಸಿದು ಕುಳಿತಾಗ ಅವರನ್ನು ಅವರ ಕಡೆಯವರು ಕೈ ಹಿಡಿದು ಮತ್ತೆ ಒಳಗಡೆ ಕರೆದುಕೊಂಡು ಬಂದು ಬಲಗಡೆ ಹೊಟ್ಟೆನೋವು, ಮತ್ತೆ ಮತ್ತೆ ರೀಸಸ್ ಓಗುತ್ತೆ ಅಂತ ಹೇಳಿದಾಗ. Vitals: BP, GRBS, SPo2, ಟೆಂಪ್ ಸರಿಯಿದ್ದ ಕಾರಣಕ್ಕೆ, ಸ್ಟೋನ್ ಇರಬಹುದು ಎಂದು, ಇಂಜೆಕ್ಷನ್ ಡ್ರೋಟವೇರಿನ್ IM ಕೊಟ್ಟು, SV Set ಹಾಕಿದಾಗ ಆಕೆಗೆ ಪಿಟ್ಸ್ ಬಂದಿರುತ್ತೆ, ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿರುತ್ತೆ.
ಅಲ್ಲಿಂದ ಜಿಲ್ಲಾ ಆಸ್ಪತ್ರೆಯ ICU ನಲ್ಲಿ ಇದ್ದು ನೆನ್ನೆ ಸಂಜೆ 4 ಗಂಟೆಗೆ ಮೃತರಾಗಿರುತ್ತಾರೆ.
ಈಗ ಸಾಮಾಜಿಕ ಜಾಲತಾಣ ಮಧ್ಯಮಗಳ ಮೂಲಕ ಆಸ್ಪತ್ರೆಯ ಬಗ್ಗೆ ದುರಾಭಿಪ್ರಾಯ ಮೂಡಿಸುವ ಪ್ರಯತ್ನದ ನಂತರ ಈಗ ಆಸ್ಪತ್ರೆಯ ಮುಂದೆ ಮೃತ ದೇಹವನಿಟ್ಟು ಪ್ರತಿಭಟನೆ ಮಾಡುತ್ತಾರೆ ಎನ್ನುವ ಮಾಹಿತಿ ಇದೆ.
ನಿಮ್ಮ ಅವಗಾಹನೆಗೆ...
ಇಲ್ಲಿ ನನಗೆ ಈ ಸಹಾಯ ಬೇಕು ಎಂದು ಕೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ.
ಯಾರು ಯಾರು ಯಾವರೀತಿ ಸಹಾಯ ಮಾಡಬಹುದು ನಿಮಗೇ ಬಿಟ್ಟಿದ್ದು.
ಇದು ವೃತ್ತಿಯ ಗೌರವದ ಪ್ರಶ್ನೆ ಎಂದು ನಾನಾದರೂ ಬಾವಿಸಿದ್ದೇನೆ.
ನಿಮ್ಮ ಜೊತೆ ನನಗೀಗ ಬೇಕಿದೆ.
ನಮನ