
09/06/2025
ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ
ಅಥಣಿ: ಅಥಣಿ ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತವಾಗಿದ್ದು ಯಾವುದೆ ಪ್ರಾಣ ಹಾನಿಯಾಗಿಲ್ಲ.
ಅಥಣಿಯಿಂದ ಗೋಕಾಕ್ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಶಾಸಕ ಲಕ್ಷ್ಮಣ ಸವದಿ ಕಾರು ತಾಲೂಕಿನ ದರೂರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಇಂದು ಸಾಯಂಕಾಲ 4:00 ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಶಾಸಕ ಲಕ್ಷ್ಮಣ್ ಸವದಿ ಕುಳಿತಿದ್ದ ಕಾರ್ ಗೆ ಗೂಡ್ಸ ವಾಹನ ಡಿಕ್ಕಿಯಾಗಿದೆ.ಈ ಅಘಾತದಲ್ಲಿ ಗೂಡ್ಸ್ ವಾಹನ ಚಾಲಕನ ನಿರ್ಲಕ್ಷ ವೆಂದು ಮೇಲ್ನೋಟಕ್ಕೆ ಕಂಡುಬದಿದೆ.
ಅಪಘಾತದ ಬಳಿಕ ಶಾಸಕ ಲಕ್ಷ್ಮಣ ಸವದಿ ಕೆಳಗಿಳಿದು ಗೂಡ್ಸ ವಾಹನ ಚಾಲಕನ ಅರೋಗ್ಯ ವಿಚಾರಿಸಿದ್ದಾರೆ. ಅಪಘಾತದಲ್ಲಿ ಎರಡು ವಾಹನ ಸವಾರರಿಗೆ ಯಾವುದೆ ಗಾಯಗಳಾಗಿರುವುದಿಲ್ಲ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.