10/11/2025
ಪತ್ರಕರ್ತರ ಸಂಘದ ಚುನಾವಣೆ ಮಂಜುನಾಥ್ ಗುಂಪಿಗೆ ಗೆಲುವು
ದಾವಣಗೆರೆಯಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಏಕಬೋಟೆ ಮಂಜುನಾಥ್ ಪುನರಾಯ್ಕೆ ಆಗಿದ್ದಾರೆ.
ನೂತನ ಪ್ರಧಾನ ಕಾರ್ಯದರ್ಶಿಯಾಗಿ ಬದರಿನಾಥ, ಖಜಾಂಚಿಯಾಗಿ ವೀರೇಶ್ ಹಾಗೂ ರಾಜ್ಯ ಸಮಿತಿ ಸದಸ್ಯರಾಗಿ ಕೆ.ಚಂದ್ರಣ್ಣ ಆಯ್ಕೆಯಾದರು.
ದೇವರಾಜು ಅರಸು ಬಡಾಣೆಯಲ್ಲಿರುವ ವಾರ್ತಾ ಭವನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತದಾನ ಮಾಡಿದರು.
ಒಂದು ಅಧ್ಯಕ್ಷ ಸ್ಥಾನ, ಮೂರು ಉಪಾಧ್ಯಕ್ಷ ಸ್ಥಾನ, ತಲಾ ಒಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸ್ಥಾನ, ಮೂರು ಜಿಲ್ಲಾ ಕಾರ್ಯದರ್ಶಿ ಸ್ಥಾನ, ಒಂದು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ, 15 ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ಮತದಾನ ನಡೆಯಿತು.
ಸಂಘದ ಹಾಲಿ ಅಧ್ಯಕ್ಷ ಜನತಾವಾಣಿ ಮಂಜುನಾಥ್, ದಾವಣಗೆರೆ ಕನ್ನಡಿಗ ಪತ್ರಿಕೆ ಸಂಪಾದಕ ರವಿ ಕನ್ನಡಿಗ ಅವರ ನೇತೃತ್ವದ ತಲಾ 25 ಅಭ್ಯರ್ಥಿಗಳ ತಂಡ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಅನಿಲ್ ಬಾವಿ, ಮಾಗನೂರು ಮಂಜಪ್ಪ, ಎನ್.ಆರ್.ರವಿ ಕಣದಲ್ಲಿದ್ದರು. ತಡರಾತ್ರಿಯವರೆಗೂ ಮತ ಎಣಿಕೆ ನಡೆಯಿತು. ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಜಿಲ್ಲಾ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡವರು: ಜಿಲ್ಲಾ ಕಾರ್ಯ ಸಮಿತಿಗೆ ಮಂಜುನಾಥ್ ಬಣದಿಂದ 12 ಮಂದಿ ಮತ್ತು ರವಿ ಕನ್ನಡಿಗ ತಂಡದ ಮೂರು ಮಂದಿ ಜಯಶಾಲಿಯಾಗಿದ್ದಾರೆ.
ಜಿ.ಎಸ್.ಚಿದಾನಂದ ಕೆ . ಜೈಮುನಿ , ಸುರೇಶ್ ಕುಣಿಬೆಳಕೆರೆ ಪ್ರವೀಣ್ ಭಾರತಿ, ಕಿರಣ್ , ಮಂಜುನಾಥ್, ರಾಘವೇಂದ್ರರಾವ್, ವಿಷ್ಣು ಗೆನರ್, ವಿಶ್ವನಾಥ್ , ರಘು ಪ್ರಸಾದ್ , ಕೆ.ಏಕಾಂತಪ್ಪ, ಕೆ.ಎಸ್. ಚನ್ನಬಸಪ್ಪ (ಕೆ.ಎಸ್.ಶಂಭು) , ಚನ್ನಬಸವ ಶೀಲವಂತ್ , ಅಣ್ಣಪ್ಪ, ಆಯ್ಕೆಗೊಂಡಿದ್ದಾರೆ.
ಆಯ್ಕೆಗೊಂಡ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು💐💐