12/12/2025
ತಮಿಳುನಾಡಿನ ತಿರುಪಾರಂಕುಂದ್ರಂ ಬೆಟ್ಟದ ಕಾರ್ತಿಕ ದೀಪೋತ್ಸವ ಪ್ರಕರಣವನ್ನು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ನಿರ್ವಹಿಸಿದ ವಿಧಾನವು, ನ್ಯಾಯಾಂಗ ನಿಷ್ಪಕ್ಷಪಾತತೆ, ಸಂವಿಧಾನಿಕ ತಟಸ್ಥತೆ ಹಾಗೂ ಜಾತ್ಯತೀತ ಸ್ವಭಾವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದಶಕಗಳಿಂದ ನಡೆಯುತ್ತಿದ್ದ ಶಾಂತಿಯುತ ಆಚರಣೆಯ ಸ್ಥಳವನ್ನು ಬದಲಿಸಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಕೋಮು ಸಂವೇದನೆಗಳ ಕುರಿತು ರಾಜ್ಯ ಸರ್ಕಾರ ವ್ಯಕ್ತಪಡಿಸಿದ ಕಾಳಜಿಯನ್ನು ನಿರ್ಲಕ್ಷಿಸಿ ಆದೇಶ ನೀಡಿರುವುದು, ಬಳಿಕ ನ್ಯಾಯಾಂಗ ನಿಂದನೆ ಕ್ರಮಗಳು ಹಾಗೂ ಸಿಐಎಸ್ಎಫ್ ರಕ್ಷಣೆಯಲ್ಲಿ ಖಾಸಗಿ ಆಚರಣೆಗೆ ಅನುಮತಿ ನೀಡಲಾಗಿದೆ.ಇದು ನಾಗರಿಕ ಅಧಿಕಾರವನ್ನು ಮೀರಿಸುವುದು, ಭದ್ರತಾ ಮೌಲ್ಯಮಾಪನಗಳನ್ನು ಕಡೆಗಣಿಸುವುದು ಮತ್ತು ಕೋಮು ಅಶಾಂತಿಯ ಅಪಾಯವನ್ನು ಹೆಚ್ಚಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಇದಲ್ಲದೆ, ನ್ಯಾಯಮೂರ್ತಿಯವರು ಧಾರ್ಮಿಕ ತತ್ವಶಾಸ್ತ್ರವನ್ನು ಕಾನೂನು ತೀರ್ಮಾನಗಳಿಗೆ ಜೋಡಿಸುವ ಸಾರ್ವಜನಿಕ ಹೇಳಿಕೆಗಳು, ನ್ಯಾಯಾಂಗ ತಟಸ್ಥತೆಯ ಮಿತಿಯನ್ನು ಮಸುಕುಗೊಳಿಸುತ್ತವೆ ಎಂಬ ಆತಂಕವೂ ಇದೆ.
ತಿರುಪಾರಂಕುಂದ್ರಂ ಬೆಟ್ಟವು ಮುರುಗನ್ ದೇವಸ್ಥಾನ ಮತ್ತು ದರ್ಗಾ ದಶಕಗಳಿಂದ ಸಹಬಾಳ್ವೆಯ ಸಂಕೇತವಾಗಿದ್ದು, ನ್ಯಾಯಾಂಗ ಹಸ್ತಕ್ಷೇಪವು ಆ ಸೂಕ್ಷ್ಮ ಸಮತೋಲನಕ್ಕೆ ಧಕ್ಕೆ ತರುವ ಸಾಧ್ಯತೆಯಿದೆ.
ನಾವು ಸಹಿ ಹಾಕಿರುವುದು ಧರ್ಮದ ವಿರುದ್ಧವಲ್ಲ ಇದು ಸಂವಿಧಾನದ ರಕ್ಷಣೆಗೆ ಸಂಬಂಧಿಸಿದೆ. ನ್ಯಾಯಾಂಗದ ಪಾರದರ್ಶಕತೆ, ನಿಷ್ಪಕ್ಷಪಾತತೆ ಮತ್ತು ಜಾತ್ಯತೀತ ಚೌಕಟ್ಟನ್ನು ಕಾಪಾಡುವುದು ಸಂಸತ್ತಿನ ಕರ್ತವ್ಯವಾಗಿದ್ದು, ಅದಕ್ಕಾಗಿ ಈ ಮಹಾಭಿಯೋಗ ಪ್ರಸ್ತಾವನೆಗೆ ಸಹಿ ಹಾಕಲಾಗಿದೆ.
RuleOfLaw ProtectTheConstitution JudicialAccountability