26/08/2026
ಜನತಾವಾಣಿ ಹಿರಿಯ ವರದಿಗಾರರಾದ ಶ್ರೀ ಸಿದ್ದಯ್ಯ ಅವರ ನಿಧನದ ಸುದ್ದಿ ಕೇಳಿ ಅತೀವ ಆಘಾತ ಹಾಗೂ ದುಃಖವಾಯಿತು. ಅನಾರೋಗ್ಯದ ಕಾರಣ ನಮ್ಮನ್ನು ಅಗಲಿರುವುದು ಅತ್ಯಂತ ನೋವು ತಂದಿದೆ.
ಸರಳ, ಸಜ್ಜನ ಹಾಗೂ ಪ್ರಾಮಾಣಿಕ ಪತ್ರಕರ್ತರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಸದಾ ಸ್ಮರಣೀಯರು.
ದಿವಂಗತ ಸಿದ್ದಯ್ಯ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಹಾಗೂ ಬಂಧು-ಬಳಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏
Native Davangerians ( ಮೂಲ ದಾವಣಗೆರಿಗರು )