
02/07/2025
ದಾವಣಗೆರೆಗೆ ಐಟಿ ವಲಯ :
ಬೆಂಗಳೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಐಟಿ ಅಧಿಕಾರಿಗಳ ಮಹತ್ವದ ಸಮನ್ವಯ ಸಭೆ
ಬೆಂಗಳೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನ ಸಿಇಓ ಸಂಜೀವ್ ಗುಪ್ತ ಮತ್ತು ಅಧ್ಯಕ್ಷರಾದ ಬಿ ವಿ ನಾಯ್ಡು ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ) ದ ನಿರ್ದೇಶಕರಾದ ಡಾ. ಸಂಜಯ್ ತ್ಯಾಗಿ ಅವರನ್ನು ಪ್ರತ್ಯೇಕವಾಗಿ ಅವರ ಕಚೇರಿಗಳಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಭೇಟಿ ಮಾಡಿ ದಾವಣಗೆರೆಯಲ್ಲಿ ಐಟಿ ವಲಯಕ್ಕೆ ಉತ್ತೇಜನ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯ ಕುರಿತುಮಹತ್ವದ ಸಮನ್ವಯ ಸಭೆ ನಡೆಸಲಾಯಿತು.
ಕ್ಯೂ-ಸ್ಪೈಡೆರ್ಸ್ ಹಾಗೂ ಟೆಸ್ಟ್ ಯಂತ್ರ ಸಾಫ್ಟ್‌ವೇರ್ ಸಲ್ಯೂಷನ್ಸ್ ನ ಸಿಇಓ ಗೀರೀಶ್ ರಾಮಣ್ಣ ನವರು ಮಧ್ಯ ಕರ್ನಾಟಕ ದಾವಣಗೆರೆ ಯಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪನಿ ಯ ಕಾರ್ಯಾಚಟುವಟಿಕೆ ಗಳನ್ನು ಪ್ರಾರಂಭಿಸಲು ಇಂಗಿತ ವ್ಯಕ್ತಪಡಿಸಿ, ಸರ್ಕಾರದಿಂದ ಐಟಿ ಗೆ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ಪೂರಕ ವಾತಾವರಣ ಒದಗಿಸಿಕೊಡಲು ಕೊಡಲು ಸಭೆಯಲ್ಲಿ ಕೋರಿದರು. ಈ ಸಂದರ್ಭದಲ್ಲಿ ಐಟಿ ಉದ್ಯೋಗಾವಕಾಶ ಬಯಸಿ ವರ್ಷಕ್ಕೆ ಸುಮಾರು 5000-10000 ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲೆಯಿಂದ ಬೆಂಗಳೂರಿಗೆ ಬರುತ್ತಿರುವುದರ ಬಗ್ಗೆ ವಿವರಿಸಲಾಯಿತು.
ಈ ಮಹತ್ವದ ಸಭೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ ಗಂಗಾಧರಸ್ವಾಮಿ ಮತ್ತು ದಾವಣಗೆರೆ ಐಟಿ ವಿಷನ್ ಗ್ರೂಪ್ ಸದಸ್ಯರು ಭಾಗವಹಿಸಿದ್ದರು.
ಎಸ್ ಟಿಪಿಐ - ಐಟಿ ಪಾರ್ಕ್ ಗೆ ಆದ್ಯತೆಮೇರೆಗೆ ಸೂಕ್ತ ಸ್ಥಳವನ್ನು ಶೀಘ್ರ ಒದಗಿಸಿ ಹಾಗೂ ತಾತ್ಕಾಲಿಕ ಸ್ಥಾಪನೆಗೆ ಲಭ್ಯವಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕೂಡ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.