Prajakiran News

Prajakiran News Contact information, map and directions, contact form, opening hours, services, ratings, photos, videos and announcements from Prajakiran News, News & Media Website, nirmal nagar garden, kud Road barakotri, Dharwad.

www.prajakiran.com ಉತ್ತರ ಕರ್ನಾಟಕದ ಮೊಟ್ಟಮೊದಲ ಹಾಗೂ ನಂಬರ್ ಒನ್ ನ್ಯೂಸ್ ಪೋರ್ಟಲ್. ಪ್ರಜಾಕಿರಣ ಮೀಡಿಯಾ ಹೌಸ್ ಗೆ ಇದೀಗ ಸತತ 9 ನೇ ವರ್ಷದ ಸಂಭ್ರಮ. ಕೋಟ್ಯಾಂತರ ಓದುಗರ ಜನಮನದ ಆಶಾಕಿರಣವಾಗಿದೆ.
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಚಿರೃಣಿ
ನಾಗರಾಜ ಕಿರಣಗಿ
ಪ್ರಧಾನ ಸಂಪಾದಕರು,
ಪ್ರಜಾಕಿರಣ.ಕಾಮ್,ಧಾರವಾಡ

17/07/2026

ಧಾರವಾಡ Prajakiran News : ವೈದ್ಯ ಕಿರಣ್ ಹೊನ್ನಣ್ಣವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮಗುವಿಗೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈಗ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಿದರು.
ಇದೇ ವೇಳೆ ಪತ್ನಿ ಪ್ರಿಯಾಂಕಾ ಕೃತ್ಯ ಮಾಡಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿದೆ. ಆಕೆಯನ್ನು ನಾವು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಆಕೆ ತಲೆ ಸುತ್ತುತ್ತಿದೆ, ಆಘಾತವಾಗಿದೆ ಅಂದಾಗ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ವಿವರಿಸಿದರು.
ಅವಳೇ ಇನ್ಶೂಲೆನ್ ಇಂಜೆಕ್ಷನ್ ಮಾಡ್ಕೊಂಡಿದ್ದೇನೆ ಅಂದಿದ್ದಾಳೆ.
ಸದ್ಯ ಪಿಜಿಕಲಿ ಹಾಗೂ ಮೆಂಟಲ್ಲಿ ಆಕೆ ಸದೃಡವಾಗಿಲ್ಲ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸ್ತಾಯಿದ್ದೇವೆ ಎಂದರು.
ಆಕೆಯನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ. ಕೌಟುಂಬಿಕ ಕಲಹ ಅಂತ ಕುಟುಂಬಸ್ಥರು ದೂರು ಕೊಟ್ಟಿದ್ದಾರೆ.
ಕಿರಣ್ ಗೆ ಬೇರೆ ಹೆಣ್ಮಕ್ಕಳ ಜೊತೆ ಸಂಪರ್ಕ ಇದೆ ಅಂತ ಗಲಾಟೆ ಮಾಡ್ತಿದ್ದಳು. ಇದೇ ಕಾರಣಕ್ಕೆ ಹಿಂದೆಯೂ ಕಿರಣ್ ಮೇಲೆ ಅಟ್ಯಾಕ್ ಆಗಿತ್ತು. ಚಾಕುವಿನಿಂದ ಹಿಂದೆಯೂ ದಾಳಿ ಮಾಡಿದ್ದಳು ಎಂದರು.
ಕಿರಣ್ ಗೆ ಹತ್ತಕ್ಕೂ ಹೆಚ್ಚು ಬಾರಿ ಚಾಕುವಿನಿಂದ ದಾಳಿ ಆಗಿದೆ.
ಇದೊಂದು ಅತ್ಯಂತ ವಿಷಾದಕ ಘಟನೆ ಆಗಿದೆ.
ಮಗುವಿಗೆ ಒಂದು ಮೂರು ಬಾರಿ ಚಾಕು ದಾಳಿ ಆಗಿದೆ.
ಆಕೆ ಆರೋಗ್ಯವಾಗಿ ವಿಚಾರಣೆ ಸಹಕರಿಸದ್ಮೇಲೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು -ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.

15/07/2026

ವಿದ್ಯಾನಗರಿ ಧಾರವಾಡದಲ್ಲಿ ಕಟ್ಟಿಕೊಂಡ ಗಂಡನಿಗೆ ಚಟ್ಟ ಕಟ್ಟಿದ ಪಾಪಿ ಹೆಂಡತಿ

ಧಾರವಾಡ Prajakiran News ಧಾರವಾಡದ ರಂಕಾ ಅಪಾರ್ಟ್ಮೆಂಟ್ ನಲ್ಲಿ ಪಾಪಿ ಪತ್ನಿಯೊಬ್ಬಳು ಕಟ್ಟಿಕೊಂಡ ಗಂಡನಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ ಬುಧವಾರ ರಾತ್ರಿ ನಡೆದಿದೆ.
ಗಂಡನ ಕೊಲೆಗೈದ ಬಳಿಕ ಹೆತ್ತ ಮಗನ ಮೇಲೂ ಈ ನರ ರಾಕ್ಷಿಸಿ ದಾಳಿ ನಡೆಸಿದ್ದಾಳೆ.
ಪತ್ನಿ ಪ್ರಿಯಾಂಕಾಳಿಂದಲೇ ಕೊಲೆ ನಡೆದಿರೋ ಆರೋಪ ಕೇಳಿ ಬಂದಿದ್ದು,ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಗನನ್ನು
ರಕ್ತದ ಮಡುವಿನಿಲ್ಲಿ ಬಿದ್ದರೂ ಇನ್ನು ಉಸಿರಾಡುತ್ತಿದ್ದ ಮಗುವನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೊತ್ತು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕಿರಣ್ ಹೊನಣ್ಣವರ್(45) ಹತ್ಯೆಯಾದ ದುರ್ದೈವಿ ಡಾಕ್ಟರ್ ಆಗಿದ್ದಾರೆ. ಒಂದು ರೂಮ್ ನಲ್ಲಿ ಗಂಡನ ಬರ್ಬರ ಕೊಲೆ ಮಾಡಿ
ಮತ್ತೊಂದು ರೂಮ್ ನಲ್ಲಿ ಮಗುವಿಗೆ ಚಾಕು ಇರಿದು ಕುತಿದ್ದ ಪಾಪಿ ಪ್ರಿಯಾಂಕಾ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನ ಜೊತೆ ಮೊಬೈಲ್ ನೋಡ್ತಿದ್ದಳು ಎಂಬುದು ಬೆಚ್ಚಿ ಬೀಳಿಸಿದೆ.
ಸದ್ಯ ಪತ್ನಿ ಪ್ರಿಯಾಂಕಾಳನ್ನ ವಶಕ್ಕೆ ಪಡೆದಿರು ಪೊಲೀಸರು ಮುಂದಿನ‌ ತನಿಖೆ ಆರಂಭಿಸಿದ್ದಾರೆ.
ಅಪಾರ್ಟ್ಮೆಂಟ್ ನಲ್ಲಿ ಕಿರಣ್ ಸಹೋದರಿಯರ ಆಕ್ರಂದನ
ಮುಗಿಲು ಮುಟ್ಟಿದೆ.
ಇದೇ ವೇಳೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಿ ಖಾಕಿಯ ಖದರ್ ಜೊತೆಗೆ ಅಕ್ಕ ಪಕ್ಕದ ನಿವಾಸಿಗಳು ಕಕ್ಕಾಬಿಕ್ಕಿಯಾಗಿ ನಿಂತು ನೋಡುತ್ತಿದ್ದರು, ಅದನ್ನು ಲೆಕ್ಕಿಸದೆ ತಾಯ್ತನದ ಪ್ರೀತಿ, ಕಾಳಜಿ ಮರೆದಿರುವುದು ಸ್ಥಳೀಯ ನಿವಾಸಿಗಳು ತಲೆ ತಗ್ಗಿಸುವಂತೆ ಮಾಡಿದೆ.

15/07/2026

ಧಾರವಾಡ Prajakiran News ಚಿತ್ರದುರ್ಗದ ರೇಣುಕಾಸ್ವಾಮಿ ಮಾದರಿಯಲ್ಲೇ ವಿದ್ಯಾನಗರಿ ಧಾರವಾಡದಲ್ಲಿ ಇಬ್ಬರು ಯುವಕರನ್ನು ಕಿಡ್ನಾಪ್ ಮಾಡಿ ಶೆಡ್ ನಲ್ಲಿ ಕೂಡಿ ಹಾಕಿ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಧಾರವಾಡಿಗರನ್ನು ಬೆಚ್ವಿಬೀಳಿಸುವಂತೆ ಮಾಡಿದೆ.
ಹೊಟೇಲ್ ನಲ್ಲಿ ಪೋನ್ ಪೇ ಮಾಡುವ ವಿಚಾರಕ್ಕೆ ಶುರುವಾದ ಗಲಾಟೆ, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಘಟನೆ ಧಾರವಾಡದ ಹನುಮಂತ ನಗರದಲ್ಲಿ ನಡೆದಿದ್ದು,
ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ
ಬಂದಿದೆ.
ಆನಂದ್ ಕೊಪ್ಪದ(26) ಹರೀಶ್(18) ಹಲ್ಲೆಗೊಳಗಾದ ಯುವಕರು ಎಂದು ಗುರುತಿಸಲಾಗಿದೆ.
ಮೂರು ದಿನದ ಹಿಂದೆ ಹೊಟೇಲ್ ತಿಂಡಿ ತರಲು ಹೋಗಿದ್ದ ಆನಂದ್, ಈ ವೇಳೆ 25 ರೂಪಾಯಿ ಹಣ ಪೋನ್ ಪೇ ಮಾಡುತ್ತಿದ್ದ. ಆದ್ರೇ ಸರ್ವರ್ ಸಮಸ್ಯೆಯಿಂದ ಹಣ ವರ್ಗಾವಣೆ ಆಗಿರಲಿಲ್ಲ. ಆಗ ಹಣ ವರ್ಗಾವಣೆ ಆಗದಕ್ಕೆ ಆನಂದ್ ಗೆ ಹೊಡೆದಿದ್ದ ಮಂಜುನಾಥ್, ಇದರಿಂದ ಸಿಟ್ಟಿಗೆದ್ದು ಸಂಜೆ ಸ್ನೇಹಿತನೊಂದಿಗೆ ಪ್ರಶ್ನಿಸಲು ಹೋಗಿದ್ದ ಆನಂದ್ ಹಾಗೂ ಸ್ನೇಹಿತ ಹರೀಶ್ ನನ್ನ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ.
ಶೆಡ್ ವೊಂದರಲ್ಲಿ ಕೂಡಿ ಹಾಕಿ ರಾತ್ರಿ ಇಡೀ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಶೆಡ್ ನಲ್ಲಿ ‌ಕೂಡಿ ಹಾಕಿ 20 ಜನರ ಗ್ಯಾಂಗ್ ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಡ್ರಿಂಕ್ಸ್, ಸಿಗರೇಟ್ ಸೇದುತ್ತಾ ರೇಣುಕಾಸ್ವಾಮಿಗೆ ಹಲ್ಲೆಗೈದಂತೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಸದ್ಯ ಹಲ್ಲೆಗೊಳಗಾದ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನ ತಾವೇ ಆಟೋದಲ್ಲಿ ತಂದು ಜಿಲ್ಲಾಸ್ಪತ್ರೆಗೆ ಸೇರಿಸಿ, ಹಲ್ಲೆ ನಡೆಸಿದ ರೌಡಿಶೀಟರ್ ಸಹೋದರರು ಹಾಗೂ ಗ್ಯಾಂಗ್ ಎಸ್ಕೇಪ್ ಆಗಿದೆ.
ಸದ್ಯ ಹಲ್ಲೆಗೈದ ಯುವಕರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ರೌಡಿಶೀಟರ್ ಮಂಜುನಾಥ್ ಹಿರೇಮನಿ, ತಿರುಪತಿ ಹಿರೇಮನಿ, ಕೃಷ್ಣಾ ಹಿರೇಮನಿ ಸೇರಿ ಏಳು ಜನರ ವಿರುದ್ಧ ಹಲ್ಲೆಗೊಳಗಾದ ಆನಂದ್ ಕುಟುಂಬಸ್ಥರು ದೂರು ನೀಡಿದ್ದಾರೆ.
ಇತ್ತ, ಆನಂದ್ ಮೇಲೆಯೂ ಮಂಜುನಾಥ್ ಹಿರೇಮನಿ ಹಾಗೂ ಗ್ಯಾಂಗ್ ದೂರು ದಾಖಲಿಸಿರುವುದು ಗೊತ್ತಾಗಿದೆ.
ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು ಆಗಿದ್ದು,
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ಪೊಲೀಸರ ತನಿಖೆ ಕುತೂಹಲ ಕೆರಳಿಸಿದೆ.

14/07/2026

ಕಲಬುರಗಿ Prajakiran News ರಾಜ್ಯದ ಗೃಹ ಸಚಿವರಾದ ಪ್ರಿಯಾಂಕಾ ಖರ್ಗೆಯವರ ತವರು ಜಿಲ್ಲೆ ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಮೂವರು ಸಜಾಬಂಧಿಗಳು ಪರಾರಿ ಯಾಗಿರುವ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ತಪ್ಪಿಸಿಕೊಂಡ ಸಜಾಬಂಧಿಗಳನ್ನು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದ ಮಸ್ತಾನ್, ಔರಾದ್ ತಾಲೂಕಿನ ಸಂತಪುರ ಗ್ರಾಮದ ಸಂತೋಷ್ ಮತ್ತು ಬೀದರ್ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ್ ಎಂದು ಗುರುತಿಸಲಾಗಿದೆ.
ಬೀದರ್‌ನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಈ ಮೂವರಿಗೆ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿತ್ತು. ಆದರೆ, ಮಂಗಳವಾರ ಬೆಳಗ್ಗಿನ ಜಾವ ಜೈಲಿನ ಗೋಡೆ ಹಾರಿ ಈ ಮೂವರು ಪರಾರಿಯಾಗಿದ್ದಾರೆ. ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ
ಈ ಕೈದಿಗಳು ಪರಾರಿಯಾಗಲು ಜೈಲು ಸಿಬ್ಬಂದಿ ಸಹಕಾರ ನೀಡಿದ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕಲಬುರಗಿ ಜಿಲ್ಲೆಯ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

14/07/2026

ಧಾರವಾಡ Prajakiran News ಧಾರವಾಡ ತಾಲೂಕಿನ ಅಂಬ್ಲೀಕೊಪ್ಪ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವರ ಮೂರ್ತಿಯನ್ನು ಕಿಡಿಗೇಡಿಗಳು ಒಡೆದು ಹಾಕಿದ ಘಟನೆ ನಿನ್ನೆ‌ ರಾತ್ರಿ ನಡೆದಿದೆ.
ಕಳೆದ 13 ವರ್ಷದ ಹಿಂದೆ ಗ್ರಾಮ ಪಂಚಾಯತಿ ಜಾಗದಲ್ಲಿ ಕುರುಬ ಸಮಾಜದ ಮುಖಂಡರು ಪ್ರತಿಷ್ಠಾನ ಮಾಡಿದ್ದರು.
ಆದರೆ ಏಕಾಏಕಿ ಕಿಡಗೇಡಿಗಳು ಮೂರ್ತಿ ದ್ವಂಸ ಮಾಡಿದ್ದರಿಂದ
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ವಿವಾದ ಕೋರ್ಟ ನಲ್ಲಿ ಇರುವ ಕಾರಣಕ್ಕೆ ಕೇವಲ ಮೂರ್ತಿಯನ್ನ ಪೂಜೆ ಮಾಡಿಕ್ಕೊಂಡು ಬರುತ್ತಿದ್ದರು.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್ಸಪೆಕ್ಟರ್ ಶಿವಾನಂದ ಕಮತಗಿ ಭೇಟಿ ನೀಡಿ ಪರಿಶೀಲಿಸಿದರು.

10/07/2026

ಧಾರವಾಡದಿಂದ ಧರ್ಮಸ್ಥಳ, ಕುಕ್ಕೆಗೆ ಹೊರಟಿದ್ದ ಎಳು ಸಿಗ್ಗಿ ಗೆಳೆಯರು ಅಪಘಾತದಲ್ಲಿ ಸಾವು
ಧಾರವಾಡ Prajakiran News ಧಾರವಾಡದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಗೆ ಹೊರಟಿದ್ದ ಎಳು ಸಿಗ್ಗಿ ಗೆಳೆಯರು
ಯಲ್ಲಾಪುರದ ಅರೆಬೈಲ್ ಬಳಿ ಸಂಭವಿಸಿದ ಅಪಘಾತ
ದಲ್ಲಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಧಾರವಾಡದ ಕುರಬಗಟ್ಟಿಯ ಸಂಜೀವ ಮೈಲಾರ ಅಂಗಡಿ, ಬಸವರಾಜ ಕನಕನವರ, ಮಂಜುನಾಥ್ ಚುಳಕಿ, ಅಭಿಷೇಕ ಮಡಬಾವಿ, ಅಕ್ಷಯ ಮುರಳನವರ ಅಭಿಷೃಕ ಈಶ್ವರ ಸೇರಿದಂತೆ ಎಳು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

10/07/2026

ಧಾರವಾಡ Prajakiran News ರಾಜ್ಯದ ಹಲವಾರು ಜಿಲ್ಲೆಯಲ್ಲಿ
ಮಳೆ ಕೊರತೆ, ಬರ ಪರಿಸ್ಥಿತಿ ಹಿನ್ನೆಲೆ ರೈತರು–ಕಾರ್ಮಿಕರ ನೆರವಿಗೆ ಆಗ್ರಹಿಸಿ ಶಿವಸೇನೆ ಕರ್ನಾಟಕ ಪಕ್ಷದ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು.
ಕಳ್ಳಸಂತೆಯಲ್ಲಿ ಬೀಜ, ಗೊಬ್ಬರ ಮಾರಾಟಕ್ಕೆ ತಡೆ ವಿಧಿಸುವಂತೆ ಒತ್ತಾಯಿಸಿದರು.
ವಿಶೇಷ ಅನುದಾನ ಘೋಷಿಸಿ, ರೈತರ ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಶಿವಸೇನೆ ಕರ್ನಾಟಕ ಎಚ್ಚರಿಕೆ ನೀಡಿದೆ.

09/07/2026

ಹುಬ್ಬಳ್ಳಿ Prajakiran News ಹಸೆ‌ ಮಣೆ‌ ಏರಿ ಕೇವಲ ಐದೇ ತಿಂಗಳಲ್ಲಿ ಕಟ್ಟಿಕೊಂಡ ಹೆಂಡತಿಯನ್ನೇ ಕೊಂದ ಘಟನೆ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ನಡೆದಿದೆ.
ನಾಗರತ್ನ ಹಳೆಮನಿ(19) ಕೊಲೆಯಾದ ನವವಿವಾಹಿತೆಯಾಗಿದ್ದು, ಶಿವರಾಜ್ ಕೊಲೆ ಮಾಡಿದ ಪತಿಯಾಗಿದ್ದಾನೆ‌. ಕಳೆದ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಾಗರತ್ನ ಮೃತ ರ್ದುದೈವಿ. ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣವರ ಹಾಗೂ ತಂಡ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದರು. ಈ ಘಟನೆ ತಾರಿಹಾಳ ಗ್ರಾಮದಲ್ಲಿ ಆತಂಕ ಮತ್ತು ಶೋಕದ ವಾತಾವರಣ ಸೃಷ್ಟಿಸಿದೆ. ಕೊಲೆಯಾದ ಘಟನಾ ಸ್ಥಳಕ್ಕೆ ಎಸ್ ಪಿ ಗುಂಜನ್ ಆರ್ಯ ಭೇಟಿ ನೀಡಿ ಮಾಹಿತಿ ಪಡೆದಿದ್ದು ಕೊಲೆಯಾದ ನಾಗರತ್ನಳನ್ನ ಹೆಲ್ಮೆಟ್ ದಿಂದ ಗಂಡ ‌ಶಿವರಾಜ್ ಹೊಡದಿದ್ದು ಮದುವೆಯಾದಗಿನಿಂದ ವೈಮನಸ್ಯ ಇತ್ತು .‌ಕೊಲೆ ಆರೋಪಿಯನ್ನ ಬಂಧನ ಮಾಡಲಾಗಿದೆ ಎಂದರು.

09/07/2026

ಧಾರವಾಡ Prajakiran News ಶಿವಮೊಗ್ಗ ಎಸಿಎಫ್ ಕಿರಣ ಅಂಗಡಿ ಅವರ ಧಾರವಾಡದ ಮನೆ ಹಾಗೂ ಶಿವಮೊಗ್ಗದ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ.
ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರೋ ಐಷಾರಾಮಿ‌ ಮನೆ, ಫಾರ್ಮ್ ಹೌಸ್ ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿ ಹೊಂದಿರುವುದು ಪತ್ತೆಯಾಗಿದೆ.
ಎಸಿಎಫ್ ಕಿರಣ್ ಅಂಗಡಿ ಸೋದರ ಮಾವನ ಮನೆ ಮೇಲೂ ಅಧಿಕಾರಿಗಳ ದಾಳಿ ನಡೆದಿದೆ.
ನಾಲ್ಕು ಕಡೆ ಏಕಕಾಲಕ್ಕೆ ದಾಳಿ ನಡೆಸಿ, ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಇನ್ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಹಾಗೂ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Address

Nirmal Nagar Garden, Kud Road Barakotri
Dharwad
580008

Alerts

Be the first to know and let us send you an email when Prajakiran News posts news and promotions. Your email address will not be used for any other purpose, and you can unsubscribe at any time.

Contact The Business

Send a message to Prajakiran News:

Shortcuts

Share