26/02/2022
ಧಾರವಾಡ ಗುಲಗಂಜಿಕೊಪ್ಪ ದ ಸರ್ವೆ ನಂಬರ್ 73/1 ಹಾಗೂ 73/2 ರಲ್ಲಿ 5 ಎಕರೆ 2 ಗುಂಟೆ ಹಾಗೂ ಮೂರು ಎಕರೆ, ಸರ್ವೆ ನಂಬರ್ 60ರಲ್ಲಿ 6 ಎಕರೆ ಭೂಮಿ ಪಾರ್ವತವ್ವ ಕಾಳೆಣ್ಣವರ ಹಾಗೂ ಸೋದರಿಯರ ಮಾಲಿಕತ್ವದಲ್ಲಿದೆ.
ಈ ಬಗ್ಗೆ 2013ರಲ್ಲಿ ಸಿವಿಲ್ ನ್ಯಾಯಾಲಯವು ಇವರ ಸೋದರ ಸಂಬಂಧಿಗಳಿಗೆ ಪಾಲು ಸಿಗಬೇಕು ಎಂದು ಆದೇಶ ಮಾಡಿತ್ತು.
ಇದನ್ನು ಪ್ರಶ್ನಿಸಿ ಪಾರ್ವತವ್ವ ಕಾಳೆ ಣ್ಣವರ್ ಹಾಗೂ ಸೋದರಿಯರುಹೈ ಕೋರ್ಟ್ ಮೆಟ್ಟಿಲು ಹತ್ತಿದರು.
ಸಿವಿಲ್ ನ್ಯಾಯಾಲಯದ ಆದೇಶಕ್ಕೆ ಇತ್ತೀಚೆಗೆ ಫೆಬ್ರುವರಿ 21 ರಂದು ಧಾರವಾಡ ಹೈಕೋರ್ಟ್ ತಡೆಯಾಜ್ಞೆಯನ್ನು ಕೂಡ ನೀಡಿತ್ತು.
ಆದೇಶದ ನಡುವೆ ಧಾರವಾಡ ಸಿವಿಲ್ ನ್ಯಾಯಾಲಯವು ಈ ವ್ಯಾಜ್ಯ ಇರ್ತರ್ಥ್ಯ ಆಗುವರೆಗೆ ಈ ಜಮೀನಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಿತ್ತು.
ಈ ಬಗ್ಗೆ ಧಾರವಾಡ ತಹಸಿಲ್ದಾರ್ ಸಂತೋಷ ಬಿರಾದಾರ್ ಅವರಿಗೆ ತಕರಾರು ಅರ್ಜಿ ಸಲ್ಲಿಸಿದರು ಕೂಡ ಧಾರವಾಡ ಹೈಕೋರ್ಟ್ ಆದೇಶದ ದೃಢೀಕೃತ ಪ್ರತಿ ತರುವಂತೆ ಸೂಚಿಸಿ, ರಾತ್ರೋರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹಣದ ಆಮಿಷಕ್ಕೆ ಒಳಗಾಗಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಸೋದರ ಸಂಬಂಧಿಗಳ ಹೆಸರು ಸೇರ್ಪಡೆ ಮಾಡಿದ್ವಲ್ಲದೆ, ಉತಾರದಲ್ಲಿ ಪಾರ್ವತಿ ಕಾಳೆ ಣ್ಣವರ್ ಹಾಗೂ ಅವರ ಸಹೋದರಿ ಯವರ ಹೆಸರು ತೆಗೆದು ಹಾಕಿದ್ದಾರೆ.
ಈ ಬಗ್ಗೆ ಯಾವುದೇ ನ್ಯಾಯಾಲಯವು ಆದೇಶ ನೀಡಿಲ್ಲ. ಹಾಗಿದ್ದರೂ ಅವರು ಹೆಸರು ತೆಗೆದುಹಾಕಿದ್ದು ಯಾವ ಕಾರಣಕ್ಕೆ. ಇದಕ್ಕೆ ಒತ್ತಡ ಹೇರಿ ದವರು ಯಾರು ಎಂಬ ಪ್ರಶ್ನೆ ಈಗ ಎದುರಾಗಿದೆ.
ಧಾರವಾಡ ತಹಸೀಲ್ದಾರ್ ಕಚೇರಿಗೆ ಹಲವು ಬಾರಿ ಅಲೆದಾಡಿದರು ಸಕಾರಾತ್ಮಕವಾಗಿ ಸ್ಪಂದಿಸಿದೆ, ಅವರ ಒತ್ತಡಕ್ಕೆ ಮಣಿದು ಕೇವಲ 24 ಗಂಟೆಗಳಲ್ಲಿ ಪಾಣಿಯಲ್ಲಿ ನ ಹೆಸರು ತೆಗೆದು ಹಾಕುವ ಮೂಲಕ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಪಾರ್ವತಿಕಾಳೆ ಣ್ಣವರ್ ಕುಟುಂಬದ ಸದಸ್ಯರಿಗೆ ಅನ್ಯಾಯವೆಸಗಿದ್ದಾರೆ ಎಂದು ಧಾರವಾಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ಆ ಜಮೀನಿನಲ್ಲಿ ದಿ. ಫ್ರೂಟ್ ಇರ್ಫಾನ್ ಸಹಚರರಿಂದ ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ಅನುಮಾನವಿದೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಆಪಾದಿಸಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂಲ ಮಾಲೀಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಧಾರವಾಡ ತಹಸೀಲ್ದಾರ ಕಚೇರಿ ಸಂಪೂರ್ಣ ದಲ್ಲಾಳಿಗಳ ತಾಣವಾಗಿದ್ದು, ಇಂತಹ ಹತ್ತು ಹಲವು ಪ್ರಕರಣಗಳಲ್ಲಿ ತಸಿಲ್ದಾರ ಹಾಗೂ ಅವರ ಕಚೇರಿ ಸಿಬ್ಬಂದಿ ಶಾಮೀಲಾಗಿರುವ ದೂರುಗಳು ಬಂದಿವೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸಿಬಿ ಗೂ ಕೂಡ ದೂರು ನೀಡಲಾಗುವುದು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಾರ್ವತಿ ಕಾಳೆ ಣ್ಣವರ್ ಅವರ ಸೋದರಿಯಾದ ದಾಕ್ಷಾಯಿಣಿ, ಶಾಂತವ್ವ, ರತ್ನವ್ವ, ಬಸಲಿಂಗವ್ವ, ಹಾಗೂ ಗಿರೀಶ್ ಕಾಳೆ ಣ್ಣವರ್, ಹನುಮಂತ್ ಮೊಕಾಶಿ, ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಸದಸ್ಯರಾದ ಆನಂದ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು...
#ಜನಜಾಗೃತಿಸಂಘ