Negila Dore

Negila Dore Contact information, map and directions, contact form, opening hours, services, ratings, photos, videos and announcements from Negila Dore, News & Media Website, D Corporates #15, gadag, Gadag.

14/04/2026
ಶಿರಹಟ್ಟಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತುಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮಗದಗ : ಏಪ್ರಿಲ್ 4: ಅಪರ ಪೊಲೀಸ್ ಮಹಾ ನಿರ್ದೇಶ...
04/04/2026

ಶಿರಹಟ್ಟಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು
ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

ಗದಗ : ಏಪ್ರಿಲ್ 4: ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರ ನಿರ್ದೇಶನದಂತೆ ಕರ್ನಾಟಕ ಲೋಕಾಯುಕ್ತ ಗದಗ ಕಚೇರಿಯ ಪೊಲೀಸ್ ಅಧಿಕಾರಿಗಳು ಏಪ್ರಿಲ್ 10 ರಂದು ಬೆಳಿಗ್ಗೆ 10.30 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ ತಹಶೀಲ್ದಾರ ಕಾರ್ಯಾಲಯ ಶಿರಹಟ್ಟಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ದಿನಾಂಕದAದು ಸಾರ್ವಜನಿಕರಿಂದ ದೂರು/ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಗದಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ : ಜಲ ಸಂರಕ್ಷಣೆಗೆ ಒಗ್ಗೂಡೋಣ: “ನೀರಿದ್ದರೆ ಜೀವ, ಜೀವನ” – ಶ್ರೀಮತಿ ನಾಗವೇಣಿಗದಗ : ವಿಶ್ವ ಜಲ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ • ...
01/04/2026

ಗದಗ : ಜಲ ಸಂರಕ್ಷಣೆಗೆ ಒಗ್ಗೂಡೋಣ: “ನೀರಿದ್ದರೆ ಜೀವ, ಜೀವನ” – ಶ್ರೀಮತಿ ನಾಗವೇಣಿ

ಗದಗ : ವಿಶ್ವ ಜಲ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ • ಪ್ರಾಣಿ–ಪಕ್ಷಿಗಳಿಗೂ ನೀರಿನ ಮಹತ್ವ ಸಾರಿದ ನ್ಯಾಯಾಧೀಶರು

ಗದಗ , ಏ. ೧: “ನೀರಿದ್ದರೆ ಜೀವ, ಜೀವನ” ಎಂಬ ಸಂದೇಶವನ್ನು ಅರಿತು ಪ್ರತಿಯೊಬ್ಬರೂ ನೀರಿನ ಸಂರಕ್ಷಣೆಗೆ ಬದ್ಧರಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಅವರು ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಎರಡನೇ ಮಹಡಿಯ ವಿ.ಸಿ. ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮನೆಯ ಮುಂಭಾಗದಲ್ಲಿ ಪ್ರಾಣಿ–ಪಕ್ಷಿಗಳಿಗಾಗಿ ತೆಂಗಿನ ಚಿಪ್ಪು ಅಥವಾ ಪಾತ್ರೆಗಳಲ್ಲಿ ನೀರು ಇಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನೀರು ಮಾನವರಿಗೆ ಮಾತ್ರವಲ್ಲ, ಪ್ರಾಣಿ–ಪಕ್ಷಿಗಳ ಬದುಕಿಗೂ ಅತಿ ಮುಖ್ಯವಾಗಿದ್ದು, ಅವುಗಳ ಸಂರಕ್ಷಣೆಯೂ ನಮ್ಮ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸಿ ಅದರ ಅಪವ್ಯಯವನ್ನು ತಡೆಯಬೇಕು. ಮಳೆನೀರು ಸಂಗ್ರಹಣೆ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ನೀರು ಸಂರಕ್ಷಿಸುವ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.

ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಬೆಳೆಗಳಿಗೂ ಹಾಗೂ ಪ್ರಾಣಿಗಳಿಗೂ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ ಅವರು ಮಾತನಾಡಿ, ನೀರಿನ ಮಹತ್ವವನ್ನು ವರ್ಷದಿಂದ ವರ್ಷಕ್ಕೆ ಜಾಗೃತಿಯ ಮೂಲಕ ಸಾರಬೇಕಿದೆ. ಇಂದಿನ ಪರಿಸ್ಥಿತಿಯಲ್ಲಿ ನೀರನ್ನು ಖರೀದಿಸುವ ಮಟ್ಟಕ್ಕೆ ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯ ಸಂಸ್ಥಾಪಕರಾದ ಜೈನ್ ಸನ್ನಿ ಹಸ್ತಿಮಲ್ ಅವರು ಪಿಪಿಟಿ ಪ್ರಸ್ತುತಿಯ ಮೂಲಕ ನೀರಿನ ಕೊರತೆ, ಅದರ ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಕುರಿತು ವಿವರಿಸಿದರು.

ಪ್ರಾಣಿ–ಪಕ್ಷಿಗಳಿಗೆ ಶುದ್ಧ ನೀರು ಸಿಗದಿದ್ದರೆ ಅವುಗಳು ವಲಸೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ನೀರಿನ ಕೊರತೆ ಕಾಡುಪ್ರಾಣಿಗಳನ್ನು ಗ್ರಾಮಗಳತ್ತ ಸೆಳೆಯುತ್ತಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಒಂದು ಆಕಳಿಗೆ ದಿನಕ್ಕೆ ಸುಮಾರು ೪೦ ಲೀಟರ್ ನೀರು ಅಗತ್ಯವಿದ್ದು, ನೀರಿನ ಕೊರತೆಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತವೆ. ಗರ್ಭಿಣಿ ಪ್ರಾಣಿಗಳು ನೀರಿಗಾಗಿ ಹೆಚ್ಚು ಸಂಕಷ್ಟ ಅನುಭವಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗಂಗಾಧರ ಸಿ.ಎಂ., ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕು. ಗೀತಾ ಶಿಂಧೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂರಾದ ಗಿರಿಮಲ್ಲಪ್ಪ ಆರ್. ಶೆಟ್ಟರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಪದ್ಮಶ್ರೀ ಆರ್. ಪಾಟೀಲ, ದ್ವಿತೀಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲಕ ಸಂಘದ ಉಪಾಧ್ಯಕ್ಷ ಎಂ ಎ ಸಂಗನಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ವಸಂತ ಮಡ್ಲೂರ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಶ್ರೀಮತಿ ಖಿಮಿ ಸನ್ನಿ ಜೈನ್, ಅರಿಹಂತ ಸುರೇಶ ಕುಮಾರ್ ಜೈನ್ ಸೇರಿದಂತೆ ಕಾನೂನು ನೆರವು ಅಭಿರಕ್ಷಕರು, ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರು ಹಾಜರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಪ್ರಾಣಿ–ಪಕ್ಷಿಗಳಿಗಾಗಿ ನೀರು ಇಡುವ ಮಣ್ಣಿನ ಪಾತ್ರೆಗಳನ್ನು ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯಿAದ ವಿತರಿಸಲಾಯಿತು

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಂದ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿಬೆಂಗಳೂರು, ಏಪ್ರಿಲ್ 1 ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ...
01/04/2026

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಂದ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ

ಬೆಂಗಳೂರು, ಏಪ್ರಿಲ್ 1
ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಜನ ಗಣತಿ 2027ರ ಅಂಗವಾಗಿ ಸ್ವಯಂ ಗಣತಿ ವ್ಯವಸ್ಥೆ ಪರಿಚಯಿಸಿದ್ದು, ಇಂದು ಬುಧವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ತಮ್ಮ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ ಪೂರ್ಣಗೊಳಿಸಿದರು.

2026 ರ ಏಪ್ರಿಲ್ 1 ರಿಂದ 15 ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ನಮ್ಮ ಜನಗಣತಿ - ನಮ್ಮ ಅಭಿವೃದ್ಧಿ ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ಕಾರ ಜನಗಣತಿ 2027 ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸರ್ಕಾರ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದೆ.ಈ ಪ್ರಕ್ರಿಯೆ ಸರಳ ಮತ್ತು ಸುರಕ್ಷಿತವಾಗಿದೆ ಎಂದರು.

ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಸುಲಭವಾಗಿ 5 ರಿಂದ 10 ನಿಮಿಷಗಳಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಬಹುದಾಗಿದೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾ, ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಅರ್ಜಿಯ ಸಂಖ್ಯೆ ದೊರೆಯುವುದು. ಈ ಸಂಖ್ಯೆಯನ್ನು ಏಪ್ರಿಲ್ 16 ರಿಂದ ಮೇ 15 ರವರೆಗೆ ಮನೆಮನೆಗೆ ಭೇಟಿ ನೀಡುವ ಗಣತಿದಾರರಿಗೆ ನೀಡಿದಲ್ಲಿ, ಗಣತಿದಾರರು ಸ್ವಲ್ಪ ಸಮಯದಲ್ಲಿ ಗಣತಿ ಪೂರ್ಣಗೊಳಿಸಲು ಹಾಗೂ ಯಾವುದಾದರೂ ತಿದ್ದುಪಡಿ ಇದ್ದಲ್ಲಿ ಮಾಡಿಕೊಳ್ಳಬಹುದಾಗಿದೆ ಎಂದ ಅವರು, ಒಂದು ವೇಳೆ ಮೊಬೈಲ್ ಅಥವಾ ಕಂಪ್ಯೂಟರ್ ಇಲ್ಲದಿದ್ದಲ್ಲಿ ಸಮೀಪದ ಕಂಪ್ಯೂಟರ್ ಕೇಂದ್ರಗಳಿಂದ ಅಥವಾ ಸ್ನೇಹಿತರ ಮೊಬೈಲಿನಿಂದ ಮಾಹಿತಿ ಸಲ್ಲಿಸಿ ನೋಂದಣಿ ಸಂಖ್ಯೆಯನ್ನು ಪಡೆಯಬೇಕು ಎಂದು ಹೇಳಿದರು.

ಜನಗಣತಿ ನಮ್ಮ ರಾಜ್ಯ ಮತ್ತು ದೇಶದ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ. ಇದು ದತ್ತಾಂಶ ಆಧಾರಿತ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ. ಆರೋಗ್ಯ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಮರ್ಪಕ ಸಂಪನ್ಮೂಲ ಹಂಚಿಕೆಗೆ ದಾರಿ ತೋರುತ್ತದೆ. ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಇದು ಕೇವಲ ಕರ್ತವ್ಯವಲ್ಲ— ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆಯಾಗಿದೆ. ಇಂದು ನೀಡುವ ನಿಖರ ಮಾಹಿತಿ, ನಾಳೆಯ ಉತ್ತಮ ನೀತಿಗಳು ಮತ್ತು ಸೇವೆಗಳಿಗೆ ಆಧಾರ ವಾಗುತ್ತದೆ. ಜನಗಣತಿಯಿಂದ ಯಾರು ಬಿಟ್ಟು ಹೋಗದಂತೆ ಸರ್ಕಾರ ಮುತುವರ್ಜಿ ವಹಿಸಿದೆ. ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ, ಜನಗಣತಿ 2027 ಅನ್ನು ಯಶಸ್ವಿಗೊಳಿಸಲು ನಾವು ಎಲ್ಲರೂ ಕೈಜೋಡಿಸೋಣ ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ, ಜನಗಣತಿ ನಿರ್ದೇಶಕ ರಾಮಚಂದ್ರನ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಸ್ವಯಂ ಗಣತಿ ವ್ಯವಸ್ಥೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಗದಗ : ತಂಬಾಕು ನಿಯಂತ್ರಣದ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ.. ಗದಗ  ಮಾರ್ಚ 31: ಮಾರ್ಚ 2026 ತಿಂಗಳಲ್ಲಿ ಡಾ.ವೈ.ಕೆ.ಭಜಂತ್ರಿ ಜಿಲ್ಲಾ...
01/04/2026

ಗದಗ : ತಂಬಾಕು ನಿಯಂತ್ರಣದ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ..

ಗದಗ ಮಾರ್ಚ 31: ಮಾರ್ಚ 2026 ತಿಂಗಳಲ್ಲಿ ಡಾ.ವೈ.ಕೆ.ಭಜಂತ್ರಿ ಜಿಲ್ಲಾ ಜಾರಿ ಅಧಿಕಾರಿಗಳು ಗದಗ ಇವರ ಮಾರ್ಗದರ್ಶನದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತಾಲೂಕಾ ತನಿಖಾ ದಳ ಪೊಲೀಸ್ ಇಲಾಖೆ ಪುರಸಭೆ ಸ್ಥಳಿಯ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯ ಗದಗ ನಗರ,ನರಸಾಪುರ, ಶಿರಹಟ್ಟಿ ತಾಲೂಕಿನ ಸೂರಣಗಿ, ನರಗುಂದ ಪಟ್ಟಣ, ಮುಂಡರಗಿ ತಾಲೂಕಿನ ಡಂಬಳ, ರೋಣ ಪಟ್ಟಣದಲ್ಲಿ ಕೋಟ್ಪಾ ದಾಳಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ 2003 ಉಲ್ಲಂಘನೆ ಕುರಿತು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, 52 ಪ್ರಕರಣ ದಾಖಲಿಸಿ, ರೂ. 25050 ದಂಡ ವಿಧಿಸಿ ಕ್ರಮ ಕೈಗೊಳ್ಳಲಾಯಿತು,

ಕೋಟ್ಪಾ ಕಾಯ್ದೆ ಸೆಕ್ಷನ್ 4. ಕಾಯ್ದೆ ಉಲ್ಲಂಘನೆಯಾದಲ್ಲಿ ದಂಡದ ಮೊತ್ತ ರೂ.1000/- ವಾಗಿದ್ದು ಧೂಮಪಾನದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದನ್ನು ನಷೇಧಿಸಲಾಗಿದೆ. ಹಾಗೂ ಸೆಕ್ಷನ್ 6ಎ ಪ್ರಕಾರ 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನನಿಷೇಧಿಸಲಾಗಿದ್ದು ಈ ಸೆಕ್ಷನ್ ರೂ.1000/-ವರೆಗೆ ದಂಡ ಹೆಚ್ಚಿಸಲಾಗಿದೆ. ಸೆಕ್ಷನ್ 6ಬಿ ಪ್ರಕಾರ ಶಾಲಾ ಕಾಲೇಜುಗಳ ಸುತ್ತ 100 ಗಜದವರೆಗೆ ತಂಬಾಕು ಉತ್ಪನ್ನಗಳ ನಿಷೇಧಿಸಲಾಗಿದ್ದರು ಸಹ ಕೆಲವು ಸ್ಥಳಗಳಲ್ಲಿ ಮಾರಾಟ ಮಾಡುತ್ತಿರುವದು ಕಂಡುಬAದಿದ್ದು ಅಂತಹ ಅಂಗಡಿಗಳ ವಿರುದ್ಧ ದಂಡ ವಿಧಿಸಿ ಅಂಗಡಿಗಳನ್ನು ಮುಚ್ಚಿಸಿ ಕ್ರಮ ವಹಿಸಲಾಯಿತು. ಪಾನ್ ಬೀಡಾ ಅಂಗಡಿ ,ಹೋಟೆಲ್‌ಗಳÀಲ್ಲಿ ಅನಧಿಕೃತ ಧೂಮಪಾನ ಅಡ್ಡಾಗಳು ಮಾಡಿಕೊಂಡು ಸಾರ್ವಜನಿಕರ ಜೀವದ ಜೋತೆ ಚೆಲ್ಲಾಟವಾಡುತ್ತಿದ್ದು, ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂವiಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಆ ಹೊಗೆ ಸೇವನೆಯಿಂದ ಪರೋಕ್ಷ ಧೂಮಪಾನಿಗಳಾಗಿ ತಂಬಾಕು ಸೇವೆನೆಯಿಂದಾಗುವ ಅಪಾಯಕಾರಿ ಕ್ಯಾನ್ಸರ್,ಹೃದಯ ಸಂಬAಧಿ ಕಾಯಿಲೆ, ಪಾರ್ಶ್ವವಾಯ, ಇತರ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಧಿಕೃತ ಸೆಕ್ಷನ್ 4 ಹಾಗೂ ಸೆಕ್ಷನ್ 6ಎ ನಾಮಫಲಕ ಕಡ್ಡಾಯವಾಗಿ ಸ್ಥಳದ ಮಾಲಿಕರು ಬಿತ್ತರಿಸಬೇಕು,ಕಾರಣ ಶಾಲಾ ಕಾಲೇಜುಗಳ ಸುತ್ತಲಿನ ತಂಬಾಕು ಮಾರಾಟಗಾರರು ಮಾರಾಟ ನಿಲ್ಲಿಸದಿದ್ದಲ್ಲಿ ಮುಂದಿನ ದಿನ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವದು.

ದಾಳಿಯಲ್ಲಿ ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ. ರಾಜೇಂದ್ರಗಡಾದ, ಸಿ.ಆರ್.ಹಾದಿಮನಿ, ಪ್ರಕಾಶ ಕರ್ಜಗಿ, ಶ್ರೀಮತಿ,ಮಂಜುಳಾ ಸಜ್ಜನ್, ಐ.ಆರ್.ಗಂಜಿ ಎಸ್.ಆರ್.ದೆಸಾಯಿ. ಸಿ.ಕುಂಬಾರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಪೊಲೀಸ್ ಇಲಾಖೆಯ ಎಸ್.ಎಸ್.ಚಿನ್ನಪ್ಪಗೌಡರ, ಶೇµಮಗೌಡರ ಪಟ್ಟಣ ಪಂಚಾಯತ್‌ನ ಗಿರೀಶ್ ನರಗುಂದ, ಶ್ರೀಮತಿ ಬಸಮ್ಮ ಚಿತ್ತರಗಿ ಸಾಮಾಜಿಕ ಕಾರ್ಯಕರ್ತೆ, ಆರ್.ಡಿ.ಪಿಆರ್ .ವಿಶ್ವವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು. ಉಪಸ್ಥಿತರಿದ್ದರು.

ಗದಗ :  ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ! ಕೊಲೆ ಆರೋಪ!ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಹುಯಿಲಗೋಳ ಗ್ರಾಮದಲ್ಲಿ...
30/03/2026

ಗದಗ : ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ! ಕೊಲೆ ಆರೋಪ!

ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಹುಯಿಲಗೋಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಚಂದ್ರು ಕುರಿ (28) ಮೃತನಾಗಿದ್ದು, ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ.

ಚಂದ್ರು ಕಳೆದ ಐದು ದಿನಗಳ ಹಿಂದೆ ರಾತ್ರಿ ಸುಮಾರು 12 ಗಂಟೆಗೆ ಮನೆಯಿಂದ ಹೊರಹೋಗಿದ್ದವನು ಮನೆಗೆ ಮರಳಿ ಬಾರದ ಹಿನ್ನೆಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶನಿವಾರ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.

ಇದೀಗ ಐದು ದಿನಗಳ ಬಳಿಕ ಸುಟ್ಟ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.

ದುಷ್ಕರ್ಮಿಗಳು ಚಂದ್ರುನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ನಂತರ ಗುರುತು ಸಿಗದಂತೆ ಮಾಡಲು ಶವವನ್ನು ಸುಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗದಗ : ಚಾಲಕನ ನಿಯಂತ್ರಣ ತಪ್ಪಿ, ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ ಗದಗ : ರಾಜ್ಯದಲ್ಲಿ ಸಿಲಿಂಡರ್ ಗಳ ಅಭಾವ ತುಂಬಾ ಇದ್ದು, ಇದೀಗ ಗದಗದಲ್...
30/03/2026

ಗದಗ : ಚಾಲಕನ ನಿಯಂತ್ರಣ ತಪ್ಪಿ, ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ
ಗದಗ : ರಾಜ್ಯದಲ್ಲಿ ಸಿಲಿಂಡರ್ ಗಳ ಅಭಾವ ತುಂಬಾ ಇದ್ದು, ಇದೀಗ ಗದಗದಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ರೋಣ - ಗಜೇಂದ್ರಗಡ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಹೊರಟಿದ್ದ ಲಾರಿ ತಿರುವಿನಲ್ಲಿ ಓವರಟೇಕ್ ಮಾಡಲು ಹೋದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದೆ.

ಸಿಲಿಂಡರ್ ತುಂಬಿದ್ದ ವಾಹನ ಇದಾಗಿದ್ದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಅನಿಲ ಸ್ಫೋಟ ಆಗಿಲ್ಲ. ಭಾರತ್ ಗ್ಯಾಸ್‌ ಕಂಪನಿಗೆ ಸೇರಿದ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದಿದ್ದರಿಂದ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಡಿ.ಆರ್. ಪಾಟೀಲ ಅವರಿಗೆ ಸಂಯಮ ಪ್ರಶಸ್ತಿ ಪ್ರದಾನ ಮಾರ್ಚ 31ರಂದು  ಗದಗ: ಬೆಂಗಳೂರಿನ ಕುಮಾರ ಪಾರ್ಕನ...
28/03/2026

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಡಿ.ಆರ್. ಪಾಟೀಲ ಅವರಿಗೆ ಸಂಯಮ ಪ್ರಶಸ್ತಿ ಪ್ರದಾನ ಮಾರ್ಚ 31ರಂದು

ಗದಗ: ಬೆಂಗಳೂರಿನ ಕುಮಾರ ಪಾರ್ಕನ ಗಾಂಧೀ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಮಾ. 31ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಂಡಿರುವ 2023, 2024 ಹಾಗೂ 2025ನೇ ಸಾಲಿನ “ಸಂಯಮ ಪ್ರಶಸ್ತಿ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಶಾಸಕರು, ಕರ್ನಾಟಕ ರಾಜ್ಯ ಯೋಜನೆ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಹಾಗೂ ಸಂತ ರಾಜಕಾರಣಿ ಎಂದೇ ಖ್ಯಾತರಾಗಿರುವ ಡಿ.ಆರ್. ಪಾಟೀಲ ಅವರಿಗೆ 2023ನೇ ಸಾಲಿನ “ಸಂಯಮ ಪ್ರಶಸ್ತಿ” ಪ್ರಶಸ್ತಿ ಪ್ರದಾನ ಜರುಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಯಮ ಪ್ರಶಸ್ತಿ ಪ್ರದಾನ ಮಾಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮ್ನ, ಶೋಭಾ ಕರಂದ್ಲಾಜೆ ಅವರು ಘನ ಉಪಸ್ಥಿತಿ ವಹಿಸಲಿದ್ದು, ಶಾಸಕ ರಿಜ್ವಾನ ಅರ್ಷದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಎಸ್.ಎಸ್. ಬೋಸರಾಜು, ಡಾ. ಶರಣಪ್ರಕಾಶ ಪಾಟೀಲ ಪಾಲ್ಗೊಳ್ಳುವರು.
ಇದೇ ವೇಳೆ 2024ನೇ ಸಾಲಿನ ಸಂಯಮ ಪ್ರಶಸ್ತಿ ಬಿ.ಆರ್, ಪಾಟೀಲ, 2025ನೇ ಸಾಲಿನ ಸಂಯಮ ಪ್ರಶಸ್ತಿ ಡಾ ವುಡೇಪಿ ಕೃಷ್ಣಾ ಅವರಿಗೆ ಪ್ರದಾನ ಜರುಗಲಿದೆ. ಡಿ.ಆರ್. ಪಾಟೀಲ ಅಭಿಮಾನಿ ಬಳಗದವರು ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ವಾಸಣ್ಣ ಕುರುಡುಗಿ, ಗುರಣ್ಣ ಬಳಗಾನೂರ, ವಿದ್ಯಾಧರ ದೊಡ್ಡಮನಿ ಹಾಗೂ ಜೆ.ಕೆ. ಜಮಾದಾರ ಹಾಗೂ ಇತರರು ವಿನಂತಿಸಿದ್ದಾರೆ.

ಜನಗಣತಿ- 2027ಏಪ್ರಿಲ್ 1 ರಿಂದ ಪೋರ್ಟಲ್‌ನಲ್ಲಿ ಮಾಹಿತಿ ದಾಖಲೆಗೆ ಅವಕಾಶಸರಿಯಾದ ಮಾಹಿತಿ ಒದಗಿಸಿ ದೇಶದ ಪ್ರಗತಿಗೆ ಸಹಕರಿಸಿ: ಜಿಲ್ಲಾಧಿಕಾರಿ ಸಿ...
27/03/2026

ಜನಗಣತಿ- 2027
ಏಪ್ರಿಲ್ 1 ರಿಂದ ಪೋರ್ಟಲ್‌ನಲ್ಲಿ ಮಾಹಿತಿ ದಾಖಲೆಗೆ ಅವಕಾಶ
ಸರಿಯಾದ ಮಾಹಿತಿ ಒದಗಿಸಿ ದೇಶದ ಪ್ರಗತಿಗೆ ಸಹಕರಿಸಿ: ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

ಮಾರ್ಚ್ 27 : 2027 ರ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ 15 ರವರೆಗೆ ಸಾರ್ವಜನಿಕರು ಎಂದರೆ ( self enumerator ) ಸ್ವಯಂ ಎಣಿಕೆದಾರರು ತಮ್ಮ ಮಾಹಿತಿಯನ್ನು ಸ್ವಯಂ ಆಗಿ ಆನ್‌ಲೈನ್ ಪೋರ್ಟಲ್ ( se.census.gov.in ) ನಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜನಗಣತಿ 2027ರ ಕುರಿತು ಜರುಗಿದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ( ಆ್ಯಪ್ ಮೂಲಕ) ನಡೆಯಲಿರುವ ಈ ಜನಗಣತಿ ಕಾರ್ಯಕ್ಕಾಗಿ ಜಿಲ್ಲೆಯಾದ್ಯಂತ ಅಧಿಕಾರಿಗಳ ತಂಡ ರಚನೆ ಹಾಗೂ ತರಬೇತಿ ಪ್ರಕ್ರಿಯೆಗಳು ಭರದಿಂದ ಸಾಗಿವೆ. ಈ ಬಾರಿಯ ಜನಗಣತಿಯ ವಿಶೇಷತೆಯೆಂದರೆ, ಸಾರ್ವಜನಿಕರು ಖುದ್ದಾಗಿ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದರು.

ಏಪ್ರಿಲ್ 16 ರಿಂದ ಮೇ 15 ರ ಒಂದು ತಿಂಗಳ ಅವಧಿಯಲ್ಲಿ ನಿಯೋಜಿಸಿದ ಗಣತಿದಾರರು ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯಾಚರಣೆಯು ನಡೆಯಲಿದೆ. ಪ್ರತಿ ಮನೆಗೆ ಹಾಜರಾಗಿ ಕುಟುಂಬಸ್ಥರಿಂದ ಗಣತಿದಾರರು ಮಾಹಿತಿ ಸಂಗ್ರಹಿಸಲಿದ್ದು ಆ ಸಂದರ್ಭದಲ್ಲಿ ಸಾರ್ವಜನಿಕರು ಸಂಬಂಧಿತ ಮಾಹಿತಿಯನ್ನು ಗಣತಿದಾರರಿಗೆ ಒದಗಿಸಬೇಕು. ಗಣತಿದಾರರಿಗೆ ಕುಟುಂಬದ‌ ಮುಖ್ಯಸ್ಥರ ಆಧಾರ ಕಾರ್ಡ್ ಗೆ ಜೊಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಆದಾರ ಕಾರ್ಡ ಸಂಖ್ಯೆ ನೀಡಬೇಕು.

ಸರಿಯಾದ ಮಾಹಿತಿ ಆಧಾರದ ಮೇಲೆ ದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲು ಇದು ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಜನಗಣತಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಜನಗಣತಿ ಸಮಿತಿಯು ಹೆಚ್ಚುವರಿ ಪ್ರಧಾನ ಜನಗಣತಿ ಅಧಿಕಾರಿಯಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಯನ್ನು ಉಪವಿಭಾಗ ಜನಗಣತಿ ಅದಿಕಾರಿ ಹಾಗೂ ಹೆಚ್ಚುವರಿ ಜನಗಣತಿ ಅಧಿಕಾರಿಗಳನ್ನಾಗಿ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಯೋಜನಾ ನಿರ್ದೇಶಕರು ಮತ್ತು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಇವರನ್ನು ನೇಮಿಸಲಾಗಿದೆ.

ಜಿಲ್ಲಾ ಹಂತದಿಂದ ಪ್ರತಿ ತಾಲೂಕು ತಹಶೀಲ್ದಾರ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಗರ ಸಭೆಯ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿ ಮತ್ತು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಅವರನ್ನು ಚಾರ್ಜ ಆಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇಬ್ಬರು ಜಿಲ್ಲಾ ಮಟ್ಟದ ತರಬೇತಿದಾರರು, 38 ಕ್ಷೇತ್ರ ಮಟ್ಟದ ತರಬೇತಿದಾರರು ಹಾಗೂ ಪ್ರತಿ ಗ್ರಾಮಾಂತರ ಮತ್ತು ನಗರ ವ್ಯಾಪ್ತಿಗೆ ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಸಂಬಂಧಿತ ಚಾರ್ಜ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯ ಕೈಗೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ ಎಂದರು.

ಜನಗಣತಿ ಕಾರ್ಯವು ಮೊದಲ ಹಂತದಲ್ಲಿ ಮನೆ ಗಣತಿ ಕೈಗೊಳ್ಳಲಾಗುತ್ತಿದ್ದು 150 ರಿಂದ 200 ಕುಟುಂಬಗಳು ಅಥವಾ ಅಂದಾಜು 700- 800 ಜನಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಒಂದು ಗಣತಿ ಬ್ಲಾಕ್ ರಚಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ಕರ ವಸೂಲಿಗಾರರು, ಜಲಗಾರರು, ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ/ ಸಿಬ್ಬಂದಿಗಳು ಗ್ರಾಮ, ವಾರ್ಡ ತಾಲೂಕು ವಿಭಾಗದಂತೆ ಬ್ಲಾಕ್ ರಚನೆಯ ಕಾರ್ಯನಿರ್ವಹಿಸಿರುತ್ತಾರೆ. ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 1905 ಗಣತಿ ಬ್ಲಾಕ್ ಗಳು ರಚನೆಯಾಗಿವೆ.

ಆ ಪೈಕಿ ತಾಲೂಕುವಾರು ವಿವರ ಇಂತಿದೆ:

ಗದಗ – 658. ನರಗುಂದ-175, ಶಿರಹಟ್ಟಿ- 160, ಮುಂಡರಗಿ-242, ಗಜೇಂದ್ರಗಡ-228, ಲಕ್ಷ್ಮೇಶ್ವರ- 196, ರೋಣ -246 ಸೇರಿದಂತೆ 1905 ಗಣತಿ ಬ್ಲಾಕ್ ಗಳು ರಚನೆಯಾಗಿವೆ.
ಈ ಜನಗಣತಿಯಲ್ಲಿ ಪ್ರತ್ಯೇಕವಾಗಿ 90 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದೆ.

ಜನಗಣತಿ ಕಾರ್ಯಕ್ಕೆ ಅಗತ್ಯವಿರುವ ಗಣತಿದಾರರು ಮತ್ತು ಮೇಲ್ವಿಚಾರಕರು :

ಗಣತಿ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಶಿಕ್ಷಕರು ( ಸರ್ಕಾರಿ ಮತ್ತು ಅನುದಾನಿತ ) ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು, ನಿಲಯ ಮೇಲ್ವಿಚಾರಕರು ಮತ್ತು ಇತರೇ ಇಲಾಖೆಯ ಪ್ರಥಮ ಮತ್ತು ದ್ವಿತೀಯ ದರ್ಜೆಯ ಸಹಾಯಕರು/ ಸಿಬ್ಬಂದಿಗಳನ್ನು ಗಣತಿದಾರರನ್ನಾಗಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು/ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಅಧಿಕಾರಿಗಳನ್ನು ಕನಿಷ್ಟ 6 ಜನ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 298 ಮೇಲ್ವಿಚಾರಕರು, 1480 ಗಣತಿದಾರರು, 1205 ಎಚ್‌ಎಲ್‌ಬಿಗಳು ಕಾರ್ಯನಿರ್ವಹಿಸಲಿದ್ದಾರೆ. ಪಟ್ಟಣ ಪ್ರದೇಶದಲ್ಲಿ 134 ಮೇಲ್ವಿಚಾರಕರು, 744 ಗಣತಿದಾರರು , 701 ಎಚ್ ಎಲ್ ಬಿಗಳು ಕಾರ್ಯನಿರ್ವಹಿಸಲಿದ್ದಾರೆ.

ಈಗಾಗಲೇ ಇಬ್ಬರು ಮಾಸ್ಟರ್ ಟ್ರೆನರ್‌ಗಳಿಗೆ ತರಬೇತಿ ನೀಡಲಾಗಿದ್ದು, ಇವರು ತಾಲೂಕು ಮತ್ತು ನಗರ ಮಟ್ಟದ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದಾರೆ. ಗಣತಿದಾರರು ಏಪ್ರಿಲ್ 1 ರೊಳಗೆ ತರಬೇತಿ ಮುಗಿಸಿ, ಆ್ಯಪ್ ಮೂಲಕ ಗಣತಿ ಮಾಡಲು ಸನ್ನದ್ಧರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ವಾರ್ತಾಧಿಕಾರಿ ವಸಂತ ಮಡ್ಲೂರ, ಜನಗಣತಿ ಜಿಲ್ಲಾ ನೋಡಲ್ ಅಧಿಕಾರಿ ರಂಜಿತ್ ಜಾಲಾ ಹಾಜರಿದ್ದರು.

27/03/2026

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯಾಗಿ ಕೃಷ್ಣಗೌಡ ಎಚ್. ಪಾಟೀಲ ಅವರು ನೇಮಕ

ಗದಗ: ರಾಜ್ಯದಲ್ಲಿ ಪ್ರಸ್ತುತ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ಕೃಷ್ಣಗೌಡ ಎಚ್‌. ಪಾಟೀಲ ಅವರನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಈ ಕುರಿತು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾಗಿರುವ ಮಂಜುನಾಥ ಎಚ್.ಎಸ್. ಅವರು ಆದೇಶ ಹೊರಡಿಸಿದ್ದಾರೆ.

2,000 ರೂ. ಜಮಾ ಆಗದ ಗೃಹಲಕ್ಷ್ಮೀ ಫಲಾನುಭವಿಗಳು NPCI ಲಿಂಕ್ ಮಾಡಿಸಲು ವಿನಂತಿ: ಅಶೋಕ ಮಂದಾಲಿಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್...
24/03/2026

2,000 ರೂ. ಜಮಾ ಆಗದ ಗೃಹಲಕ್ಷ್ಮೀ ಫಲಾನುಭವಿಗಳು NPCI ಲಿಂಕ್ ಮಾಡಿಸಲು ವಿನಂತಿ: ಅಶೋಕ ಮಂದಾಲಿ

ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮನವಿ

ಗದಗ: 2,000 ರೂ. ಜಮಾ ಆಗದ ಗೃಹಲಕ್ಷ್ಮೀ ಫಲಾನುಭವಿಗಳು ಬ್ಯಾಂಕ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಆನ್‌ಲೈನ್ ಸೆಂಟರ್‌ಗಳಲ್ಲಿ NPCI ಲಿಂಕ್ ಮಾಡಿಸಬೇಕು ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಗೃಹಲಕ್ಷ್ಮೀ ಫಲಾನುಭವಿಗಳಿಗೆ 2,000 ರೂ. ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವ ಫಲಾನುಭವಿಗಳು ತಮ್ಮ ಪಾಸ್‌ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ತೆಗೆದುಕೊಂಡು ತಮ್ಮ ಖಾತೆ ಇರುವ ಬ್ಯಾಂಕ್ ಇಲ್ಲವೇ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಆನ್‌ಲೈನ್ ಸೆಂಟರ್‌ಗಳಲ್ಲಿ ಎನ್‌ಸಿಪಿಐ ಲಿಂಕ್ ಮಾಡಿಸಬೇಕು.

ಮಾಹಿತಿಗಾಗಿ ಮುಳಗುಂದ ನಾಕಾ ಬಳಿಯ ಕೆಎಸ್‌ಆರ್‌ಟಿಸಿ ಡಿಪೋ ಎದುರಿಗಿನ ಉಪವಿಭಾಗೀಯ ಕಚೇರಿ ಆವರಣದಲ್ಲಿರುವ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಕಚೇರಿಗೆ ಕಚೇರಿ ಅವಧಿಯಲ್ಲಿ ಭೇಟಿ ನೀಡಬಹುದಾಗಿದೆ.

Address

D Corporates #15, Gadag
Gadag
582101

Alerts

Be the first to know and let us send you an email when Negila Dore posts news and promotions. Your email address will not be used for any other purpose, and you can unsubscribe at any time.

Share