G G News

G G News jarnalisum

26/06/2025

ಅರಭಾವಿ ಶಾಸಕರಾದ #ಶ್ರೀ ಬಾಲಚಂದ್ರ. ಲ ಜಾರಕಿಹೊಳಿ ರವರ ಮದ್ಯಸ್ತಿಕೆಯಲ್ಲಿ ಮೂಡಲಗಿ ತಾಲೂಕ ಶಿವಾಪುರ (ಹ) ಸ್ವಾಮೀಜಿ ಪ್ರಕರಣಕ್ಕೆ ತೆರೆ ಎಳೆಯಲಾಯಿತು

ಗೌರವಾನ್ವಿತ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರನ್ನು  ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಜೊತೆಗೆ  ರಾಷ್ಟ್ರಪತಿ‌ ನಿವಾಸದಲ...
24/06/2025

ಗೌರವಾನ್ವಿತ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರನ್ನು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಜೊತೆಗೆ ರಾಷ್ಟ್ರಪತಿ‌ ನಿವಾಸದಲ್ಲಿ ಭೇಟಿಯಾಗಿ, ಸನ್ಮಾನಿಸಲಾಯಿತು.

ಈ ವೇಳೆ ಸಚಿವರಾದ ಶ್ರೀ ಕೆ.ಜೆ.ಜಾರ್ಜ್, ಹೆಚ್.ಸಿ.ಮಹದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಶಾಲಿನಿ‌ ರಜನೀಶ್ ಅವರು ಉಪಸ್ಥಿತರಿದ್ದರು.

24/06/2025

ನೋಡಿ ರೈತ ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ
ಬರೀ ಬಾಯಿ ಮಾತಲ್ಲಿ ರೈತ ದೇಶದ ಬೆನ್ನೆಲುಬು ಎನ್ನುವ ಸರಕಾರ ರೈತರಿಗೆ ಬೆಂಬಲ ನೀಡದಿದ್ದರೆ ಮುಂದೊಂದು ದಿನ ಯಾವ ಪರಿಸ್ಥಿತಿ ಬರುತ್ತದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ

19/06/2025
*ಕುಡಚಿ ದರ್ಗಾಕ್ಕೆ 05 ಲಕ್ಷ ರೂ. ನಿಧಿಗೆ ಅನುಮೋದನೆ..*ಕುಡಚಿ: ಇಲ್ಲಿನ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ನಿಧಿ ಮಂಜೂರಾತಿ ಪತ್ರ ವಿತರಿಸ...
16/06/2025

*ಕುಡಚಿ ದರ್ಗಾಕ್ಕೆ 05 ಲಕ್ಷ ರೂ. ನಿಧಿಗೆ ಅನುಮೋದನೆ..*

ಕುಡಚಿ: ಇಲ್ಲಿನ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ನಿಧಿ ಮಂಜೂರಾತಿ ಪತ್ರ ವಿತರಿಸಿದ ಶಾಸಕ ಲಖನ್ ಜಾರಕಿಹೊಳಿ, ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ, ವೀರಕುಮಾರ ಪಾಟೀಲ, ಶ್ಯಾಮ್ ಘಾಟಗೆ ಮತ್ತಿತರರು ಉಪಸ್ತಿತಿ.

ಬೆಳಗಾವಿ ವಿಧಾನ ಪರಿಷತ್ ಸದಸ್ಯ ಶಾಸಕ ಶ್ರೀ ಲಖನ್ ಜಾರಕಿಹೊಳಿ ಅವರು ಇಲ್ಲಿನ ಗ್ರಾಮ ದೇವತೆ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ರೂಪಾಯಿಗಳ ನಿಧಿಯನ್ನು ಅನುಮೋದಿಸಿದ್ದಾರೆ. ಭಾನುವಾರ ಬೆಳಿಗ್ಗೆ, ಶಾಸಕ ಲಖನ್ ಜಾರಕಿಹೊಳಿ ಅವರು ಕುಡ್ಚಿಯಲ್ಲಿರುವ ಗ್ರಾಮ ದೇವತೆ ಹಜರತ್ ಮಾಸಾಹೇಬಿ ದರ್ಗಾಕ್ಕೆ ಭೇಟಿ ನೀಡಿ ತಮ್ಮ ಪರವಾಗಿ ಚಾದರ್ ಅರ್ಪಿಸಿದರು. ನಂತರ, ದರ್ಗಾದ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕರ ನಿಧಿಯಿಂದ ಐದು ಲಕ್ಷ ರೂಪಾಯಿಗಳ ನಿಧಿಯನ್ನು ಅನುಮೋದಿಸಲಾಗಿದೆ ಎಂದು ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಿಧಿ ತನ್ನ ಕೈಗಳಿಂದ ಇಳಿಯದಂತೆ ಜಾರಕಿಹೊಳಿ ಈಗ ಈ ಸಣ್ಣ ನಿಧಿಯನ್ನು ಒದಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹಣವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಗೋಕಾಕ್ ಮತಕ್ಷೇತ್ರದ ಶಾಸಕರಾದ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ, ವೀರಕುಮಾರ್ ಪಾಟೀಲ್, ಮಾಜಿ ಶಾಸಕ ಶಾಮ್ ಘಾಟ್ಗೆ, ಅಂಬಿರಾವ್ ಪಾಟೀಲ್, ಯುವನಾಯಕ ಶ್ರೀ ಅಮರನಾಥ ಜಾರಕಿಹೊಳಿ, ನ್ಯಾಯವಾದಿಗಳಾದ ಸೊಹೈಲ್ ಜಮದಾರ್, ನ್ಯಾಯವಾದಿಗಳಾದ ರಾಜು ಶಿರ್ಗಾವೆ, ಮೊಹಮ್ಮದ್ ಹುಸೇನ್ ರೋಹಿಲೆ, ನಿಸಾರ್ ಬಾಗೆ, ಜಯಕುಮಾರ್ ಸನದಿ, ಅಸ್ಫಾನ್ ಮುಲ್ಲಾ, ಇರ್ಫಾನ್ ಜಹಾಂಗೀರ್, ಮಹೇಶ್ ಕೊರ್ವಿ, ಸಂಭಾ ಶಿಂಧೆ, ಮುಂತಾದವರು ಉಪಸ್ಥಿತರಿದ್ದರು.

15/06/2025
ಶಾಸಕ ರಮೇಶ್ ಜಾರಕಿಹೊಳಿ ಅವರು ಹಾಗೂ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ಮುಸಗುಪ್ಪಿ ಶ್ರೀ ಲಕ್ಷ್ಮೀ ದೇವಿ ಹಾಗೂ ಉದಗಟ್ಟಿ ಶ್ರೀ ಉದ್ದಮ...
10/06/2025

ಶಾಸಕ ರಮೇಶ್ ಜಾರಕಿಹೊಳಿ ಅವರು ಹಾಗೂ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ಮುಸಗುಪ್ಪಿ ಶ್ರೀ ಲಕ್ಷ್ಮೀ ದೇವಿ ಹಾಗೂ ಉದಗಟ್ಟಿ ಶ್ರೀ ಉದ್ದಮ್ಮ ದೇವಿ ದರ್ಶನ ಮಾಡಿ ಆಶೀರ್ವಾದ ಪಡೆದರು.

ಲೋಕೋಪಯೋಗಿ ಇಲಾಖೆಗೆ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕರಾದ ಶ್ರೀ ಅಲ್ಮಾನ್‌ ಆದಿತ್ಯ ಬಿಸ್ವಾಸ್‌ ಅವರು ಇಂದು ‌ಬೆಂಗಳೂರಿನಲ್ಲಿ ಭೇಟಿಯಾಗಿ ...
05/06/2025

ಲೋಕೋಪಯೋಗಿ ಇಲಾಖೆಗೆ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕರಾದ ಶ್ರೀ ಅಲ್ಮಾನ್‌ ಆದಿತ್ಯ ಬಿಸ್ವಾಸ್‌ ಅವರು ಇಂದು ‌ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

SSLC ಫಲಿತಾಂಶ ರಾಜ್ಯಕ್ಕೆ 7 ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರಿಂದ ಸತ್ಕಾರ ಗೋಕಾಕ ನಗರದ ನವಜೀವನ ಇಂಗ್ಲಿಷ್ ಮಾಧ್ಯಮ ಶಾ...
24/05/2025

SSLC ಫಲಿತಾಂಶ ರಾಜ್ಯಕ್ಕೆ 7 ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರಿಂದ ಸತ್ಕಾರ

ಗೋಕಾಕ ನಗರದ ನವಜೀವನ
ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಶೀಮ್ ಕೊತ್ವಾಲ್‌ ವಿದ್ಯಾರ್ಥಿ ರಾಜ್ಯಕ್ಕೆ 7 ನೇ ಸ್ಥಾನ ಪಡೆದಿದ್ದಾನೆ ಈ ವಿದ್ಯಾರ್ಥಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರು ಸತ್ಕಾರ ಮಾಡಿ, ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು
ಈ ವಿದ್ಯಾರ್ಥಿ 625 ಕ್ಕೆ 618 ಅಂಕ ಪಡೆದಿದ್ದಾರೆ.

ಕತ್ತಿ ಕುಟುಂಬದ ಕೈ ತಪ್ಪಿದ ಹುಕ್ಕೇರಿ ಪವರ ಹೌಸ್. ಹುಕ್ಕೇರಿ ಪವರ ಹೌಸಗೆ ಜೊಲ್ಲೆ ಹಾಗೂ ಜಾರಕಿಹೊಳಿ ಗ್ರ್ಯಾಂಡ್ ಎಂಟ್ರಿ..!
23/05/2025

ಕತ್ತಿ ಕುಟುಂಬದ ಕೈ ತಪ್ಪಿದ ಹುಕ್ಕೇರಿ ಪವರ ಹೌಸ್. ಹುಕ್ಕೇರಿ ಪವರ ಹೌಸಗೆ ಜೊಲ್ಲೆ ಹಾಗೂ ಜಾರಕಿಹೊಳಿ ಗ್ರ್ಯಾಂಡ್ ಎಂಟ್ರಿ..!

ಗೋಕಾಕ - ಪ್ರಸಕ್ತ ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿ. ಜೂನ್ , ಜುಲೈ ...
15/05/2025

ಗೋಕಾಕ - ಪ್ರಸಕ್ತ ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿ. ಜೂನ್ , ಜುಲೈ ತಿಂಗಳಲ್ಲಿ ಮಳೆಗಾಲ ಬರುತ್ತಿರುವುದರಿಂದ ಈಗಲೇ ಅಗತ್ಯವಿರುವ ಎಲ್ಲಾ ಏರ್ಪಾಡುಗಳನ್ನು ಮಾಡಿಕೊಳ್ಳಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರದಂದು ಸಂಜೆ ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ಕರೆದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂಡಲಗಿ ತಾಲೂಕಿನ ಹೊನಕುಪ್ಪಿ, ಲಕ್ಷ್ಮೇಶ್ವರ,ಮತ್ತು ಸಿದ್ಧಾಪುರ ಹಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆವಿದ್ದು, ಈಗಾಗಲೇ ಅಲ್ಲಿ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದನ್ನು ಬಿಟ್ಟರೆ ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಅಷ್ಟೊಂದು ಉದ್ಬವಿಸಿಲ್ಲ. ಆದರೂ ಸ್ಥಾನಿಕ ಮಟ್ಟದಲ್ಲಿ ಇದ್ದುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಗಳು ಬರದಂತೆ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಬೇಸಿಗೆಯು ಇನ್ನೇನು ೧೫ ದಿನದಲ್ಲಿ ಮುಗಿಯಲಿದೆ. ನಂತರ ಮಳೆಗಾಲ ಆರಂಭವಾಗಲಿದೆ. ದೇವರ ದಯೆಯಿಂದ ಮಳೆಯಾಗಬೇಕು. ಉತ್ತಮ ಬೆಳೆ ಬರಬೇಕು. ರೈತ ಸಮೂಹವು ಖುಷಿಯಿಂದ ಬದುಕಬೇಕು. ಜೂನ್- ಜುಲೈ ತಿಂಗಳಲ್ಲಿ ಧಾರಾಕಾರ ಮಳೆಯು ಬಂದರೂ ಬರಬಹುದು. ಲೋಳಸುರ ಸೇತುವೆ ಮೇಲೆ ೭೦ ಸಾವಿರ ಕ್ಯೂಸೆಕ್ಸ್ ನೀರು ಬಂದರೆ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಮತ್ತೊಮ್ಮೆ ಸಂಕಟ ಎದುರಾಗಬಹುದು. ಪ್ರವಾಹ ಭೀತಿ ಎದುರಿಸಲು ಈಗಲೇ ಅಧಿಕಾರಿಗಳು ಸಿದ್ಧರಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಅಂಥ ಸಂದರ್ಭದಲ್ಲಿ ಯಾವುದೇ ಕುಂಟು ನೆಪ ಹೇಳದೇ ಸಂಭವನೀಯ ಪ್ರವಾಹ ಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನದಿಂದ ಬಿಡಲಾಗಿದ್ದು , ನಿನ್ನೆ ಬುಧವಾರದಿಂದ ಮುಂದಿನ ೧೦ ದಿನಗಳವರೆಗೆ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರನ್ನು ಹರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗೋಕಾಕ ತಹಶೀಲ್ದಾರ ಮೋಹನ ಭಸ್ಮೆ, ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಗೋಕಾಕ ತಾ ಪಂ ಇಓ ಪರಶುರಾಮ ಗಸ್ತಿ , ಮೂಡಲಗಿ ಇಓ ಚಿನ್ನಣ್ಣವರ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಘಟಪ್ರಭಾ ಸಿಪಿಐ ಎಚ್.ಡಿ. ಮುಲ್ಲಾ, ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು
ಉಪಸ್ಥಿತರಿದ್ದರು.
ಎಂಜನಿಯರ,ಪಿಡಿಓ, ಗ್ರಾಮ ಆಡಳಿತ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಗೋಕಾಕ - ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರದಂದು ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದರು.
ಅವಳಿ ತಾಲೂಕುಗಳ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Address

Gokak

Telephone

+919902897797

Website

Alerts

Be the first to know and let us send you an email when G G News posts news and promotions. Your email address will not be used for any other purpose, and you can unsubscribe at any time.

Contact The Business

Send a message to G G News:

Share