G G News

G G News jarnalisum

17/08/2025

What a dance.... ❤️

*ಮೂಡಲಗಿ-* ರಾಜ್ಯದಲ್ಲಿರುವ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಮಂಜೂರಾಗಿರುವ ದೇವರಾಜ ಅರಸು ವಸತಿ ಶಾಲೆಯು ನನ್ನ ಕ್ಷೇತ್ರಕ್ಕೆ ಬಂದಿರುವ...
28/07/2025

*ಮೂಡಲಗಿ-* ರಾಜ್ಯದಲ್ಲಿರುವ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಮಂಜೂರಾಗಿರುವ ದೇವರಾಜ ಅರಸು ವಸತಿ ಶಾಲೆಯು ನನ್ನ ಕ್ಷೇತ್ರಕ್ಕೆ ಬಂದಿರುವುದು ಅತೀವ ಸಂತಸವಾಗಿದೆ. ಇದರಿಂದ 14 ವಿವಿಧ ವಸತಿ ಶಾಲೆಗಳನ್ನು ಹೊಂದಿರುವ ಅವಿಭಜಿತ ಗೋಕಾಕ ತಾಲ್ಲೂಕು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು.
ಶನಿವಾರದಂದು ಕಲ್ಲೊಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ
ಜರುಗಿದ ಡಿ. ದೇವರಾಜ ಅರಸು ವಸತಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಗಾವಿ, ಕಲ್ಬುರ್ಗಿ, ಮೈಸೂರು, ಬೆಂಗಳೂರು ವಿಭಾಗಕ್ಕೊಂದು ದೇವರಾಜ ಅರಸು ವಸತಿ ಶಾಲೆಗಳನ್ನು ಸರ್ಕಾರ ಈ ವರ್ಷದಿಂದ ಆರಂಭಿಸಿದೆ. ಅದರಲ್ಲಿ ಬೆಳಗಾವಿ ವಿಭಾಗದಿಂದ ಅರಭಾವಿ ಕ್ಷೇತ್ರದ ಬಿಲಕುಂದಿ ಗ್ರಾಮಕ್ಕೆ ಮಂಜೂರಾಗಿರುವುದು ತುಂಬ ಖುಷಿಯಾಗಿದೆ. ಈ ಮೊದಲೇ
ಮಂಜೂರಾಗಿ ರದ್ದಾಗಿದ್ದ ವಸತಿ ಶಾಲೆಯನ್ನು ಮತ್ತೇ ನಮ್ಮ ಕ್ಷೇತ್ರಕ್ಕೆ ಮಂಜೂರು ಮಾಡಿಸಲು ವಿಶೇಷ ಕಾಳಜಿಯನ್ನು ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನದಾಳದಿಂದ
ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಅಲೆಮಾರಿ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಮೊದಲೇ ಬಿಲಕುಂದಿಗೆ ಮಂಜೂರಾಗಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಇದು ಬೇರೇಡೆಗೆ ಸ್ಥಳಾಂತರಗೊಂಡಿತ್ತು. ಇದರಿಂದ ಅಲೆಮಾರಿ ಜನಾಂಗದವರು ತೀವ್ರ ನಿರಾಶೆಯನ್ನು ನನ್ನ ಬಳಿ ವ್ಯಕ್ತಪಡಿಸಿದ್ದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಮಧ್ಯ ಪ್ರವೇಶದಿಂದ ಬೇರೆಡೆಗೆ ಹೋಗಿದ್ದ ಈ ಶಾಲೆಯು ಮತ್ತೇ ನಮ್ಮ ಕ್ಷೇತ್ರಕ್ಕೆ ಮಂಜೂರಾಯಿತು. ಸತೀಶ್ ಜಾರಕಿಹೊಳಿಯವರ ವಿಶೇಷ ಕೋರಿಕೆಯನ್ನು ಮನ್ನಿಸಿ ಬಿಲಕುಂದಿಗೆ ಬರಲು ಕಾರಣೀಕರ್ತರಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ಬಿಲಕುಂದಿ ಗ್ರಾಮಕ್ಕೆ ಮಂಜೂರಾಗಿರುವ ಇದು ಕಟ್ಟಡದ ಸಮಸ್ಯೆಯಿಂದ ಕಲ್ಲೋಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಬಿಲಕುಂದಿ ಗ್ರಾಮದಲ್ಲಿ 10 ಎಕರೆ ಜಮೀನನ್ನು ಗುರುತಿಸಲಾಗಿದೆ. 25 ಕೋಟಿ ರೂಪಾಯಿ ವೆಚ್ಚದ ಕಟ್ಟಡವು ಬಿಲಕುಂದಿ ಗ್ರಾಮದಲ್ಲಿ ಈ ವಸತಿ ಶಾಲೆಯು ಮುಂದಿನ ದಿನಗಳಲ್ಲಿ ತಲೆಯೆತ್ತಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸಗೌಡ ಪಾಟೀಲ, ಜಿ.ಪಂ.ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಬಿ.ಬಿ. ದಾಸನವರ, ಅಲೆಮಾರಿ ಜನಾಂಗದ ಮುಖಂಡರಾದ ಅಮೃತ ದಪ್ಪಿನವರ, ಸದಾಶಿವ ಹೆಳವರ, ಉದ್ದಪ್ಪ ಹೆಳವರ, ಶಾನೂರ ಹೆಳವರ, ನಾಗರಾಜ ಹೆಳವರ, ರಾಜಶೇಖರ ವಾಕುಡಿ, ಗಣಪತಿ ಇಗಳೆ, ರುದ್ರಪ್ಪ ದೊಡಮನಿ, ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ,
ಬಿಸಿಎಂ ಅಧಿಕಾರಿ ಬಸವರಾಜ ಮಾಲದಿನ್ನಿ, ಮೂಡಲಗಿ ಬಿಇಓ ಎ.ಸಿ.ಮನ್ನಿಕೇರಿ, ಪ.ಪಂ.ಮುಖ್ಯಾಧಿಕಾರಿ ಚಿದಾನಂದ ಮುಗಳಖೋಡ, ಕಲ್ಲೊಳ್ಳಿ ಪ.ಪಂ. ಸದಸ್ಯರು, ಗೋಸಬಾಳ ಗ್ರಾ.ಪಂ. ವ್ಯಾಪ್ತಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

09/07/2025

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನವಾಗಿದ್ದು, ಪೈಲಟ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಕಳೆದ ಐದು ತಿಂಗಳಲ್ಲಿ IAF ಯುದ್ಧ ವಿಮಾನ ಅಪಘಾತಕ್ಕೀಡಾಗುತ್ತಿರುವ ಮೂರನೇ ಪ್ರಕರಣ ಇದಾಗಿದೆ.

ಪೈಲಟ್‌ನ ದೇಹವು ತೀವ್ರವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೀಡಾದ ಎರಡನೇ ವ್ಯಕ್ತಿಯ ಗುರುತನ್ನು ವಾಯುಪಡೆ ಮತ್ತು ಸ್ಥಳೀಯ ಆಡಳಿತ ಇನ್ನೂ ದೃಢಪಡಿಸಿಲ್ಲ.

02/07/2025

ಗೋಕಾಕ ಜಾತ್ರೆಯ ವೈಭವ

ಗೋಕಾಕದ ಗ್ರಾಮ ದೇವತೆಯ ಜಾತ್ರಾ ನಿಮಿತ್ಯ ಜಾತ್ರೆಗೆ ಬರುವ ಭಕ್ತಾದಿಗಳಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಆಯಾ ಸ್ಥಳದಲ್ಲಿ ಅಳವಡಿಸಲಾಗಿದೆ ...
29/06/2025

ಗೋಕಾಕದ ಗ್ರಾಮ ದೇವತೆಯ ಜಾತ್ರಾ ನಿಮಿತ್ಯ ಜಾತ್ರೆಗೆ ಬರುವ ಭಕ್ತಾದಿಗಳಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಆಯಾ ಸ್ಥಳದಲ್ಲಿ ಅಳವಡಿಸಲಾಗಿದೆ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು

26/06/2025

ಅರಭಾವಿ ಶಾಸಕರಾದ #ಶ್ರೀ ಬಾಲಚಂದ್ರ. ಲ ಜಾರಕಿಹೊಳಿ ರವರ ಮದ್ಯಸ್ತಿಕೆಯಲ್ಲಿ ಮೂಡಲಗಿ ತಾಲೂಕ ಶಿವಾಪುರ (ಹ) ಸ್ವಾಮೀಜಿ ಪ್ರಕರಣಕ್ಕೆ ತೆರೆ ಎಳೆಯಲಾಯಿತು

ಗೌರವಾನ್ವಿತ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರನ್ನು  ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಜೊತೆಗೆ  ರಾಷ್ಟ್ರಪತಿ‌ ನಿವಾಸದಲ...
24/06/2025

ಗೌರವಾನ್ವಿತ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರನ್ನು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಜೊತೆಗೆ ರಾಷ್ಟ್ರಪತಿ‌ ನಿವಾಸದಲ್ಲಿ ಭೇಟಿಯಾಗಿ, ಸನ್ಮಾನಿಸಲಾಯಿತು.

ಈ ವೇಳೆ ಸಚಿವರಾದ ಶ್ರೀ ಕೆ.ಜೆ.ಜಾರ್ಜ್, ಹೆಚ್.ಸಿ.ಮಹದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಶಾಲಿನಿ‌ ರಜನೀಶ್ ಅವರು ಉಪಸ್ಥಿತರಿದ್ದರು.

24/06/2025

ನೋಡಿ ರೈತ ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ
ಬರೀ ಬಾಯಿ ಮಾತಲ್ಲಿ ರೈತ ದೇಶದ ಬೆನ್ನೆಲುಬು ಎನ್ನುವ ಸರಕಾರ ರೈತರಿಗೆ ಬೆಂಬಲ ನೀಡದಿದ್ದರೆ ಮುಂದೊಂದು ದಿನ ಯಾವ ಪರಿಸ್ಥಿತಿ ಬರುತ್ತದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ

19/06/2025
*ಕುಡಚಿ ದರ್ಗಾಕ್ಕೆ 05 ಲಕ್ಷ ರೂ. ನಿಧಿಗೆ ಅನುಮೋದನೆ..*ಕುಡಚಿ: ಇಲ್ಲಿನ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ನಿಧಿ ಮಂಜೂರಾತಿ ಪತ್ರ ವಿತರಿಸ...
16/06/2025

*ಕುಡಚಿ ದರ್ಗಾಕ್ಕೆ 05 ಲಕ್ಷ ರೂ. ನಿಧಿಗೆ ಅನುಮೋದನೆ..*

ಕುಡಚಿ: ಇಲ್ಲಿನ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ನಿಧಿ ಮಂಜೂರಾತಿ ಪತ್ರ ವಿತರಿಸಿದ ಶಾಸಕ ಲಖನ್ ಜಾರಕಿಹೊಳಿ, ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ, ವೀರಕುಮಾರ ಪಾಟೀಲ, ಶ್ಯಾಮ್ ಘಾಟಗೆ ಮತ್ತಿತರರು ಉಪಸ್ತಿತಿ.

ಬೆಳಗಾವಿ ವಿಧಾನ ಪರಿಷತ್ ಸದಸ್ಯ ಶಾಸಕ ಶ್ರೀ ಲಖನ್ ಜಾರಕಿಹೊಳಿ ಅವರು ಇಲ್ಲಿನ ಗ್ರಾಮ ದೇವತೆ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ರೂಪಾಯಿಗಳ ನಿಧಿಯನ್ನು ಅನುಮೋದಿಸಿದ್ದಾರೆ. ಭಾನುವಾರ ಬೆಳಿಗ್ಗೆ, ಶಾಸಕ ಲಖನ್ ಜಾರಕಿಹೊಳಿ ಅವರು ಕುಡ್ಚಿಯಲ್ಲಿರುವ ಗ್ರಾಮ ದೇವತೆ ಹಜರತ್ ಮಾಸಾಹೇಬಿ ದರ್ಗಾಕ್ಕೆ ಭೇಟಿ ನೀಡಿ ತಮ್ಮ ಪರವಾಗಿ ಚಾದರ್ ಅರ್ಪಿಸಿದರು. ನಂತರ, ದರ್ಗಾದ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕರ ನಿಧಿಯಿಂದ ಐದು ಲಕ್ಷ ರೂಪಾಯಿಗಳ ನಿಧಿಯನ್ನು ಅನುಮೋದಿಸಲಾಗಿದೆ ಎಂದು ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಿಧಿ ತನ್ನ ಕೈಗಳಿಂದ ಇಳಿಯದಂತೆ ಜಾರಕಿಹೊಳಿ ಈಗ ಈ ಸಣ್ಣ ನಿಧಿಯನ್ನು ಒದಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹಣವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಗೋಕಾಕ್ ಮತಕ್ಷೇತ್ರದ ಶಾಸಕರಾದ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ, ವೀರಕುಮಾರ್ ಪಾಟೀಲ್, ಮಾಜಿ ಶಾಸಕ ಶಾಮ್ ಘಾಟ್ಗೆ, ಅಂಬಿರಾವ್ ಪಾಟೀಲ್, ಯುವನಾಯಕ ಶ್ರೀ ಅಮರನಾಥ ಜಾರಕಿಹೊಳಿ, ನ್ಯಾಯವಾದಿಗಳಾದ ಸೊಹೈಲ್ ಜಮದಾರ್, ನ್ಯಾಯವಾದಿಗಳಾದ ರಾಜು ಶಿರ್ಗಾವೆ, ಮೊಹಮ್ಮದ್ ಹುಸೇನ್ ರೋಹಿಲೆ, ನಿಸಾರ್ ಬಾಗೆ, ಜಯಕುಮಾರ್ ಸನದಿ, ಅಸ್ಫಾನ್ ಮುಲ್ಲಾ, ಇರ್ಫಾನ್ ಜಹಾಂಗೀರ್, ಮಹೇಶ್ ಕೊರ್ವಿ, ಸಂಭಾ ಶಿಂಧೆ, ಮುಂತಾದವರು ಉಪಸ್ಥಿತರಿದ್ದರು.

15/06/2025
ಶಾಸಕ ರಮೇಶ್ ಜಾರಕಿಹೊಳಿ ಅವರು ಹಾಗೂ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ಮುಸಗುಪ್ಪಿ ಶ್ರೀ ಲಕ್ಷ್ಮೀ ದೇವಿ ಹಾಗೂ ಉದಗಟ್ಟಿ ಶ್ರೀ ಉದ್ದಮ...
10/06/2025

ಶಾಸಕ ರಮೇಶ್ ಜಾರಕಿಹೊಳಿ ಅವರು ಹಾಗೂ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ಮುಸಗುಪ್ಪಿ ಶ್ರೀ ಲಕ್ಷ್ಮೀ ದೇವಿ ಹಾಗೂ ಉದಗಟ್ಟಿ ಶ್ರೀ ಉದ್ದಮ್ಮ ದೇವಿ ದರ್ಶನ ಮಾಡಿ ಆಶೀರ್ವಾದ ಪಡೆದರು.

Address

Gokak

Telephone

+919902897797

Website

Alerts

Be the first to know and let us send you an email when G G News posts news and promotions. Your email address will not be used for any other purpose, and you can unsubscribe at any time.

Contact The Business

Send a message to G G News:

Share