csnewskannada

csnewskannada csnewskannada csofficialcs

ಕರ್ನಾಟಕದಲ್ಲಿ 66.05% ಮತದಾನ..  ಚಿಕ್ಕೋಡಿಯಲ್ಲಿ ಗರಿಷ್ಠ, ಕಲಬುರಗಿಯಲ್ಲಿ ಕನಿಷ್ಠ
07/05/2024

ಕರ್ನಾಟಕದಲ್ಲಿ 66.05% ಮತದಾನ.. ಚಿಕ್ಕೋಡಿಯಲ್ಲಿ ಗರಿಷ್ಠ, ಕಲಬುರಗಿಯಲ್ಲಿ ಕನಿಷ್ಠ

ಶ್ರೀ ಹನುಮ ಜಯಂತಿಯ ಅಂಗವಾಗಿ ಕಲ್ಲೋಳಿ ಗ್ರಾಮದ ಶ್ರೀ ಹನುಮ ಹಾಗೂ ಶ್ರೀರಾಮ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆ.ಈ ಸಮಯದಲ್ಲಿ ಸ್ಥಳೀಯ ಮ...
23/04/2024

ಶ್ರೀ ಹನುಮ ಜಯಂತಿಯ ಅಂಗವಾಗಿ ಕಲ್ಲೋಳಿ ಗ್ರಾಮದ ಶ್ರೀ ಹನುಮ ಹಾಗೂ ಶ್ರೀರಾಮ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆ.

ಈ ಸಮಯದಲ್ಲಿ ಸ್ಥಳೀಯ ಮುಖಂಡರಾದ ರಾವಸಾಬ್ ಬೆಳಕೊಡ, ಬಸವರಾಜ ಬೆಳಕೊಡ, ಭೀಮರಾಯ ಕಡಾಡಿ, ಶಂಕರ ಗೋರೊಶಿ, ಚಂದು ಕಲಾಲ, ಗಂಗಾರಾಮ ಕಲಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Laxmi Hebbalkar
Mrinal Hebbalkar

csnewskannada
CsNews Kannada

*ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್...
11/03/2024

*ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ*

*ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ*

*ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ*
*************************************************

*ಬೆಳಗಾವಿ:* ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಬೆಳಗಾವಿ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅರಭಾವಿ ಶಾಸಕ ಮತ್ತು ಕೆಎಂಎಫ್ ನಿಕಟಪೂರ್ವ ಅಧ್ಯಕ್ಷ, ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿವೇಕರಾವ್ ಪಾಟೀಲ (ರಾಯಬಾಗ), ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಗೋಕಾಕ್), ಮಲ್ಲಪ್ಪ ಬಾಳಪ್ಪ ಪಾಟೀಲ (ಮೂಡಲಗಿ), ಕಲ್ಲಪ್ಪ ನಿಂಗಪ್ಪ ಗಿರೆನ್ನವರ (ಬೆಳಗಾವಿ), ಡಾ. ಬಸವರಾಜ ಮ. ಪರವಣ್ಣನವರ (ಕಿತ್ತೂರು), ಬಾಬುರಾವ ಸತ್ತೆಪ್ಪ ವಾಘಮೋಡೆ (ಕಾಗವಾಡ), ವಿರೂಪಾಕ್ಷಿ ಬಾಳಪ್ಪ ಈಟಿ (ಚಿಕ್ಕೋಡಿ), ರಾಯಪ್ಪ ಬಾಳಪ್ಪ ಡೂಗ (ಹುಕ್ಕೇರಿ), ಪ್ರಕಾಶ ಯಲ್ಲಪ್ಪ ಅಂಬೋಜಿ (ಖಾನಾಪುರ), ಸಂಜಯ ಶ್ರೀಶೈಲಪ್ಪ ಶಿಂತ್ರೆ (ನಿಪ್ಪಾಣಿ), ಸದೆಪ್ಪ ಬಸಲಿಂಗಪ್ಪ ವಾರಿ (ಸವದತ್ತಿ), ಶಂಕರ ಕೆಂಚಪ್ಪ ಇಟ್ನಾಳ (ಯರಗಟ್ಟಿ), ಸವಿತಾ ಸುರೇಶ ಖಾನಪ್ಪಗೋಳ (ಮೂಡಲಗಿ-ಮಹಿಳಾ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ರಾಜಶ್ರೀ ಜೈನಾಪುರ ಪ್ರಕಟಿಸಿದರು. ಇನ್ನು ಅಥಣಿ, ಬೈಲಹೊಂಗಲ ಮತ್ತು ರಾಮದುರ್ಗ ಕ್ಷೇತ್ರಗಳಿಗೆ ತಲಾ ಒಂದೊಂದು ಸ್ಥಾನಗಳಿಗೆ ಬರುವ ಭಾನುವಾರ 17 ರಂದು ಚುನಾವಣೆ ನಡೆಯಲಿದೆ ಎಂದು ಜೈನಾಪುರ ತಿಳಿಸಿದರು.
ನಾಮಪತ್ರಗಳನ್ನು ವಾಪಸ್ಸು ಪಡೆಯಲು ಇಂದು ಸೋಮವಾರದಂದು ಕಡೆಯ ದಿನವಾಗಿತ್ತು. ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕ ಮಂಡಳಿಯವರನ್ನು ಇದೇ ಸಂದರ್ಭದಲ್ಲಿ ಅವರು ಅಭಿನಂದಿಸಿದರು.

*ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಕ್ರಮ- ಶಾಸಕ ಬಾಲಚಂದ್ರ ಜಾರಕಿಹೊಳಿ*
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಭಿವೃದ್ಧಿಗೆ ಸಹಕಾರಿ ತತ್ವದಡಿ ಶ್ರಮಿಸುವುದಾಗಿ ಆಡಳಿತ ಮಂಡಳಿಯ ಚುನಾವಣೆಯ ನೇತೃತ್ವ ವಹಿಸಿರುವ ಶಾಸಕ ಮತ್ತು ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಇದೇ ದಿ. 17 ರಂದು ಜಿಲ್ಲಾ ಹಾಲು ಒಕ್ಕೂಟಕ್ಕೆ ಚುನಾವಣೆ ನಿಗದಿಯಾಗಿದ್ದು, ರೈತರು ಮತ್ತು ಸಹಕಾರಿಗಳ ಸಹಕಾರದಿಂದ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಕಳೆದ ಮೂರು ಅವಧಿಗಳಿಂದ ಈ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಈ ಬಾರಿಯೂ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆಯಾದರೂ ಕೆಲವರಲ್ಲಿ ಹೊಂದಾಣಿಕೆ ಕೊರತೆಯಿಂದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಮೂರೂ ಸ್ಥಾನಗಳು ಸಹ ತಮ್ಮ ನೇತೃತ್ವದ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಸಹಕಾರ ತತ್ವಗಳನ್ನು ಪಾಲನೆ ಮಾಡಿಕೊಂಡು ಹಾಲು ಒಕ್ಕೂಟದ ಪ್ರಗತಿಗೆ ಶ್ರಮಿಸುತ್ತಿರುವ ರೈತರ ಸಂಸ್ಥೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಚುನಾವಣೆಯನ್ನು ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಸಹ ಸಹಕಾರ ನೀಡಿದ್ದಾರೆ.

ಅದರಲ್ಲಿಯೂ ರಾಜ್ಯ ಸರ್ಕಾರದ ಸಚಿವರುಗಳ ಸಹ ನಮಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವ ಮೂಲಕ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದಾರೆ. ಅವರಿಗೂ, ವಿವಿಧ ಪಕ್ಷಗಳ ಮುಖಂಡರಿಗೂ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆಯನ್ನು ಸಲ್ಲಿಸಿದರು.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲಾಗುವುದು. ರೈತರು, ಹಾಲು ಉತ್ಪಾದಕರು ಮತ್ತು ನೌಕರರ ಆಶಯದಂತೆ ಒಕ್ಕೂಟದ ಬಲವರ್ಧನೆಗೆ ಸಹಕಾರ ತತ್ವದಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಫೋಟೋ
ಬಾಲಚಂದ್ರ ಜಾರಕಿಹೊಳಿ ಶಾಸಕರು ಹಾಗೂ ಕೆಎಮ್‍ಎಫ್ ನಿರ್ದೇಶಕರು.

ವಿವೇಕರಾವ ಪಾಟೀಲ ಮಾಜಿ ಎಮ್‍ಎಲ್‍ಸಿ.

ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಲಯದ ಘಟಕಗಳನ್ನು ರಕ್ಷಿಸುವಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿಗಳ ಅಮೂಲ್ಯ ಸೇವೆಗಾಗಿ ರಾಷ್ಟ್ರವು ಕೃತಜ್ಞ...
10/03/2024

ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಲಯದ ಘಟಕಗಳನ್ನು ರಕ್ಷಿಸುವಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿಗಳ ಅಮೂಲ್ಯ ಸೇವೆಗಾಗಿ ರಾಷ್ಟ್ರವು ಕೃತಜ್ಞವಾಗಿದೆ.

ಸಿಐಎಸ್‌ಎಫ್‌ ಸಂಸ್ಥಾಪನಾ ದಿನದ ಶುಭಾಶಯಗಳು.

ಗೋಕಾಕ : ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಅತಿ ಅಗತ್ಯ ಎಂದು ಶಿಕ್ಷಣ ಇ...
04/12/2023

ಗೋಕಾಕ : ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಅತಿ ಅಗತ್ಯ ಎಂದು ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ಶ್ರೀಮತಿ ರೇವತಿ ಮಠದ ಹೇಳಿದರು.

ನಗರದ ಅಡಿಬಟ್ಟಿ ಬಡಾವಣೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ, ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಯನ್ಸ್ ಕಬ್ಲ್ ಇವುಗಳ ಸಂಯುಕ್ತಾಶ್ರಯದಲ್ಲಿ
ಹಮ್ಮಿಕೊಂಡ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ಅನುಕಂಪದ ಅವಶ್ಯಕತೆ ಇಲ್ಲ, ಆದರೆ ಅವಕಾಶಗಳ ನೀಡಬೇಕು.ವಿಕಲಚೇತನರು ಒಂದಿಲ್ಲೊಂದು ವಿಚಾರದಲ್ಲಿ ಅದಮ್ಯ ಕೌಶಲ್ಯನ್ನು ಹೊಂದಿರುತ್ತಾರೆ, ಅವರಿಗೆ ಎಲ್ಲರಂತೆ ಎಲ್ಲಾ ವಿಭಾಗಗಳಲ್ಲಿ ಅವಕಾಶ ಮಾಡಿ ಕೊಟ್ಟಾಗ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಾರೆ, ಆರೋಗ್ಯ ಇಲಾಖೆಯಿಂದ ದೃಷ್ಟಿ ದೋಷ ಉಳ್ಳವರಿಗೆ ಕನ್ನಡಕ, ಶ್ರವಣ ದೋಷವನ್ನು ಉಳ್ಳವರಿಗೆ ಕಾಕ್ಲಿಯರ್ ಇಂಪ್ಲಾಂಟ್ ನಂತಹ ಸೂಕ್ತ ಸಾಧನ ಸಲಕರಣಗಳನ್ನು ಒದಗಿಸುವುದು, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಹಾರ ಒದಗಿಸುವುದು,ಸಂಘ ಸಂಸ್ಥೆಗಳ ಸಹಕಾರದಿಂದ ಕೃತಕ ಅಂಗಾಂಗ ಜೋಡಣೆ ಯನ್ನು ಒದಗಿಸುವ ಕಾರ್ಯದಲ್ಲಿ ಮುಂದಾದರೆ ವಿಕಲಚೇತನರಿಂದ ವಿಶೇಷ ಕೊಡುಗೆಯನ್ನು ಆಶಿಸಬಹುದು ಎಂದ ಅವರು ಗೋಕಾಕ ವಲಯದಲ್ಲಿ 410 ವಿಕಲಚೇತನ ಮಕ್ಕಳು ವಿವಿಧ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ವಿಕಲಚೇತನ ಮಕ್ಕಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿದರೆ ಅವರು ಶಾಲೆ ಕಲಿತು ಪ್ರತಿಭಾವಂತರಾಗುತ್ತಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲಯನ್ಸ್ ಕಬ್ಲ್ ವತಿಯಿಂದ ವಿಕಲಚೇತನ ಮಕ್ಕಳಿಗೆ ಸ್ಕೂಲ್ ಬ್ಯಾಗಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಲ್.ಕೆ ತೋರಣಗಟ್ಟಿ, ಲಯನ್ಸ್ ಕಬ್ಲ್ ಅಧ್ಯಕ್ಷ ಡಾ.ಅಶೋಕ ಪಾಟೀಲ, ಶಂಕರ ದೊಡಮನಿ, ಮಹೇಂದ್ರ ಪೋರವಾಲ, ಸುರೇಶ್ ಶಿಂದಿಹಟ್ಟಿ, ಶಿಕ್ಷಣ ಇಲಾಖೆಯ ಎ.ವಿ.ದಳವಾಯಿ, ಆರ್.ಬಿ.ಡವಳೇಶ್ವರ, ಎ.ಎಸ್ ಜರಾಳೆ, ಸಂಗಮೇಶ್ ಕೊಂತಿ, ಕೆ.ಎಸ್.ದಡ್ಡಿ, ಎ.ಎಸ್.ಕಬ್ಬೂರ, ವ್ಹಿ.ಎನ್.ಖನಗಾವಿ , ಎಮ್.ಎಚ್.ವೆಂಕಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
csnewskannada CsNews Kannada Cs news kannada

04/12/2023

Address

Gokak
591310

Telephone

+919731656526

Website

Alerts

Be the first to know and let us send you an email when csnewskannada posts news and promotions. Your email address will not be used for any other purpose, and you can unsubscribe at any time.

Contact The Business

Send a message to csnewskannada:

Share