29/10/2025
📌 *ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಗಳ ಕುರಿತು ಒಂದೆಡೆ ಸಿಐಡಿ ತನಿಖೆ ನಡೆಯುತ್ತಿದೆ. ಈ ಬೆನ್ನಲ್ಲೇ, ಕ್ರೀಡಾವಸತಿ ನಿಲಯದಲ್ಲಿನ ಮಕ್ಕಳಿಗೆ ನೀಡುವ ಊಟಕ್ಕೂ ಸಹ ಸರ್ಕಾರದ ಅನ್ನಭಾಗ್ಯ/ಪಡಿತರ ಅಕ್ಕಿ ಬಳಕೆ ಹತ್ತು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.*
📌 *ಬಡವರಿಗೆಂದು ನೀಡುವ ಸರ್ಕಾರದ ಪಡಿತರ ಅಕ್ಕಿ-ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಖರೀದಿಸಿ, ವಸತಿ ನಿಲಯಗಳಲ್ಲಿನ ಮಕ್ಕಳಿಗೆ ಪೂರೈಸುವ ಅಡುಗೆ ಟೆಂಡರ್ ಪಡೆದು, ಈ ರೂಪದಲ್ಲಿ ಸರ್ಕಾರಕ್ಕೇ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ಅಚ್ಚರಿಯ ಪ್ರಕರಣವೊಂದು ಯಾದಗಿರಿಯಲ್ಲಿ ನಡೆದಿರುವ ಆರೋಪಗಳು ಕೇಳಿ ಬಂದಿವೆ. ರೈಸ್‌ಮಿಲ್‌ಗಳಷ್ಟೇ ಅಲ್ಲ, ಸರ್ಕಾರದ ವಿವಿಧ ಯೋಜನೆಗಳ ಮೂಲಕ ಟೆಂಡರ್ ಪಡೆಯುವ ಕೆಲವು ಏಜೆನ್ಸಿಗಳು ಸರ್ಕಾರಕ್ಕೇ ಹೀಗೆ ವಂಚಿಸುತ್ತಿರುವ ದೊಡ್ಡ ಜಾಲವೇ ಇದರ ಹಿಂದಿರಬಹುದು ಎಂಬ ಶಂಕೆಗಳ ಮೂಡಿಸಿವೆ.*
📌 *"ಕನ್ನಡಪ್ರಭ"ದಲ್ಲಿ ಈ ಕುರಿತು ಇಂದು ಬುಧವಾರ (ಅ.29) ಪ್ರಕಟಗೊಂಡಿರುವ ವರದಿ.*
-
ಆನಂದ್ ಎಂ. ಸೌದಿ
29-10-2025