Publik Power 24×7

Publik Power 24×7 Public Power

29/05/2026

ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಮಹಾಗಾಂವ ಕ್ರಾಸ್ ನಲ್ಲಿ ಇಂದು ರಾತ್ರಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರ ಪಲ್ಟಿಯಾಗಿದ್ದು ಒಳಗಿದ್ದ ಇಬ್ಬರು ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

29/05/2026

Road Accident: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಬೈಕ್ ಮೇಲೆ ತೆರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟ ಘಟನೆ ಸೇಡಂ ....

 #ಬೈಕ್_ಟ್ರ್ಯಾಕ್ಟರ್_ಡಿಕ್ಕಿ:   #ನವವಿವಾಹಿತ_ಸೇರಿ_ಇಬ್ಬರು_ಸಾವುಕಮಲಾಪುರ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಬೈಕ್ ಮೇಲೆ ತೆರಳುತ...
29/05/2026

#ಬೈಕ್_ಟ್ರ್ಯಾಕ್ಟರ್_ಡಿಕ್ಕಿ: #ನವವಿವಾಹಿತ_ಸೇರಿ_ಇಬ್ಬರು_ಸಾವು
ಕಮಲಾಪುರ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಬೈಕ್ ಮೇಲೆ ತೆರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟ ಘಟನೆ ಸೇಡಂ ರಸ್ತೆಯ ಬ್ರಹ್ಮಕುಮಾರಿ ಆಶ್ರಮದ ಬಳಿ ಗುರುವಾರ ರಾತ್ರಿ ನಡೆದಿದೆ.
ಕಮಲಾಪುರ ತಾಲ್ಲೂಕಿನ ಅಂಕಲಗಿ ಗ್ರಾಮದ ದಿನೇಶ ಶರಣಪ್ಪ ಕಮ್ಮನಕರ್ (25),
ಕಾಳಗಿ ತಾಲ್ಲೂಕಿನ ಮುಗಟಿ ಗ್ರಾಮದ ಸಂದೀಪ ಸಿದ್ದಣ್ಣ ಕಂಟೀಕರ್ (25) ಮೃತ ಯುವಕರಾಗಿದ್ದಾರೆ.
ಸಂದೀಪ ಹಾಗೂ ದಿನೇಶ ಸ್ನೇಹಿತರಾಗಿದ್ದು ಇಬ್ಬರು ಬೈಕ್ ಮೇಲೆ ಕಲಬುರಗಿಯಿಂದ ಮುಗಟಿ ಗ್ರಾಮಕ್ಕೆ ತೆರಳುತ್ತಿದ್ದರು. ಎದುರಿಗೆ ಬಂದ ಟ್ರ್ಯಕ್ಟರ್ ಡಿಕ್ಕಿಯಾಗಿದೆ.
ಮೃತದೇಹಗಳನ್ನು ಕಲಬುರಿಗಿ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದು ಶವ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.
ಕಳೆದ ಮೇ 15 ರಂದು ಸಂದೀಪ ಕಂಟೀಕರ್ ಅವರ ಮದುವೆಯಾಗಿತ್ತು.
ಮದುವೆ ಪಾರ್ಟಿ ಕೊಡಲು ಸಂದೀಪ ಗೆಳೆಯರನ್ನು ತನ್ನೂರಿಗೆ ಕರೆದೊಯ್ಯುತ್ತಿದ್ದ. ಕೆಲವರು ಕಾರಿನಲ್ಲಿದ್ದು, ಸಂದೀಪ ಹಾಗೂ ದಿನೇಶ ಬೈಕ್ ಮೇಲೆ ತೆರಳುತ್ತಿದ್ದರು.
ಮದುವೆಯಾಗಿ ಇನ್ನೂ 15 ದಿನ ಸಹ ಕಳೆದಿಲ್ಲ ವಿಧಿಯಾಟಕ್ಕೆ ಬಲಿಯಾದ ಸಂದೀಪ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತ ವಯಸ್ಸಿಗೆ ಬಂದ ಮಗ ಕಳೆದುಕೊಂಡ ದುಃಖದಲ್ಲಿರು ದಿನೇಶನ ಪಾಲಕರು ದಿಕ್ಕುತೋಚದಂತೆ ಮಮ್ಮಲ ಮರಗುತ್ತಿದ್ದಾರೆ.
ಈ ಘಟನೆ ಕಲಬುರಗಿ ಸಂಚಾರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ

26/05/2026
 #ಕಮಲಾಪುರದಲ್ಲಿ_ನ್ಯಾಯಾಲಯ_ಆರಂಭ_ಶೀಘ್ರ
23/05/2026

#ಕಮಲಾಪುರದಲ್ಲಿ_ನ್ಯಾಯಾಲಯ_ಆರಂಭ_ಶೀಘ್ರ

22/05/2026

ಕಮಲಾಪುರ ಪಟ್ಟಣದಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ಜೆಎಮ್ಎಫ್ ಸಿ) ಮತ್ತು ಕಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಕಾರ್ಯಕಲಾಪ ಅತಿ ಶೀಘ್ರದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಏ. 22 ರಂದು ಉಚ್ಚ ನ್ಯಾಯಾಲಯ ನಾಯ್ಯಾಧೀಶ ಹಾಗೂ ಕಲಬುರಗಿ ಜಿಲ್ಲೆಯ ಆಡಳಿತ ನ್ಯಾಯಾಧೀಶರಾದ ಶಿವಶಂಕರ ಬಿ.ಅಮರಣ್ಣವರ್ ಸ್ಥಳ ಪರಿಶೀಲಿಸಿದರು.

ಬಾರ್ ಕೌನ್ಸಿಲ್ ಜಿಲ್ಲಾ ಅಧ್ಯಕ್ಷ ಶಿವಕುಮಾರ ಪಸಾರ ಮಾತನಾಡಿ ಸದ್ಯ ಲೋಕೋಪಯೋಗಿ ಕಚೇರಿ ಕಟ್ಟಡದಲ್ಲಿ ನ್ಯಾಯಾಲಯ ಕಾರ್ಯಕಲಾಪ ನಡೆಸಲು ಇಚ್ಚಿಸಿದ್ದು, ಪರವಾನಗಿಗಾಗಿ ಈಗಾಗಲೆ ಶಾಸಕ ಬಸವರಾಜ ಮತ್ತಿಮಡು ಹಾಗೂ ನಾನು ಪತ್ರ ಬರೆದಿದ್ದೇವೆ. ನ್ಯಾಯಾಧೀಶರು ಸಹ ಪತ್ರ ಬರೆಯಲಿದ್ದಾರೆ ಎಂದರು.

ನಿಧನ ವಾರ್ತೆನಿರ್ಮಲಾ ವಿಜಯಕುಮಾರ ರಟಕಲ್ಕಮಲಾಪುರ: ಪಟ್ಟಣದ ನಿವಾಸಿ ನಿರ್ಮಲಾ ವಿಜಯಕುಮಾರ ರಟಕಲ್ (60) ಇಂದು (ಶುಕ್ರವಾರ)  ನಿಧನರಾದರು.ಮೃತರಿಗೆ...
22/05/2026

ನಿಧನ ವಾರ್ತೆ
ನಿರ್ಮಲಾ ವಿಜಯಕುಮಾರ ರಟಕಲ್
ಕಮಲಾಪುರ: ಪಟ್ಟಣದ ನಿವಾಸಿ ನಿರ್ಮಲಾ ವಿಜಯಕುಮಾರ ರಟಕಲ್ (60) ಇಂದು (ಶುಕ್ರವಾರ) ನಿಧನರಾದರು.
ಮೃತರಿಗೆ ಪತಿ ವಿಜಯಕುಮಾರ ರಟಕಲ್, ಪುತ್ರರಾದ ಬಿಜೆಪಿ ಗ್ರಾಮೀಣ ಯುವ ಮೋರ್ಚಾ ಅಧ್ಯಕ್ಷ ಶರಣು ರಟಕಲ್, ಸಿದ್ದರಾಜ ರಟಕಲ್ ಹಾಗೂ ನಾಲ್ವರು ಪುತ್ರಿಯರಿದ್ದಾರೆ.
ಮೃತರ ಅಂತ್ಯಕ್ರಿಯೆ ಕಲಮೂಡ ರಸ್ತೆ ಬಳಿಯ ಸ್ವಂತ ಹೊಲದಲ್ಲಿ ಏ.23 ಶನಿವಾರ ಮಧ್ಯಾಹ್ನ 3ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Address

Gulbarga
585313

Telephone

+918050973678

Website

Alerts

Be the first to know and let us send you an email when Publik Power 24×7 posts news and promotions. Your email address will not be used for any other purpose, and you can unsubscribe at any time.

Share