31/07/2024
RDPR & ITBT ಸಚಿವರು ಕಲಬುರಗಿ ಉಸ್ತುವಾರಿ ಶ್ರೀ ಹಾಗೂ KKRDB ಅಧ್ಯಕ್ಷರು ಶ್ರೀ ಅಜಯ್ ಧರಮ್ ಸಿಂಗ್ ನೇತೃತ್ವದಲ್ಲಿ ಕಲಬುರಗಿ
ಬಹಮನಿ ಕೋಟೆಗೆ ಹೊಸ ಕಳೆ
ಕೋಟೆಯ ಸುತ್ತಲಿನ ಕಂದಕಗಳು ಸ್ವಚ್ಛ ಕೊಳಚೆ ನೀರು ಸೇರದಂತೆ ವಿಭಜನೆ ಮಾಡಲಾಗಿದೆ ಮತ್ತು ಐತಿಹಾಸಿಕ ಬಹಮನಿ ಕೋಟೆಗೆ ಈಗ ಹೊಸ ಕಳೆ
ಬರುತ್ತಿದೆ. KKRDB ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಲ್ಲಿ ನಡೆಯುತ್ತಿದ್ದು, ಕೋಟೆಯ ಸುತ್ತ ಅಸ್ವಚ್ಛತೆ, ಕೊಳಚೆಗೆ ಮುಕ್ತಿ ದೊರೆಯುತಿದೆ.
ಕಲಬುರಗಿಯ ಕೋಟೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಕೋಟೆಯ ಸುತ್ತಲಿನ ಕಂದಕಗಳಲ್ಲಿ ಚರಂಡಿ ನೀರು ತುಂಬಿತ್ತು. ದನ ಕರುಗಳು, ಎಮ್ಮೆಗಳು ಈಜಾಡುತ್ತಿದ್ದವು. ಇದರಿಂದ ಈ ಕೋಟೆಯನ್ನು ಅಭಿವೃದ್ಧಿಪಡಿಸಬೇಕೆಂದು ಮಹಾನಗರ ಪಾಲಿಕೆ ಅಧಿ ಕಾರಿಗಳು ಪ್ಲಾನ್ ಮಾಡಿ ಕೆಕೆಆರ್‌ಡಿಬಿಗೆ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರಿಂದ ಈಗ ಕೆಕೆಆರ್‌ಡಿಬಿ ಬಿಡುಗಡೆ ಮಾಡಿದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದ್ದು, ಕೋಟೆಯ ಸುತ್ತಲಿನ ಚಿತ್ರಣ ಬದಲಾಗುತ್ತಿದೆ.
ಸೌಂದರ್ಯೀಕರಣ ಬಾಕಿ ಅಂದು.
ಇಂದು
ಕೆಕೆಆರ್‌ಡಿಬಿಯಿಂದ 3.41 ಕೋಟಿ ಅನುದಾನ
ಕಲಬುರಗಿಯ ಬಹಮನಿ ಕೋಟೆಯ ಅಭಿವೃದ್ಧಿ ಕಾರ್ಯ ಈಗ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ
ಮಂಡಳಿಯು ಬಿಡುಗಡೆ ಮಾಡಿರುವ 3.41 ಕೋಟಿ ರೂ.ಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಕೋಟೆಯ 800 ಮೀಟರ್‌ನಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ಪ್ರದೇಶದಲ್ಲಿ ಕಂದಕದಲ್ಲಿನ ಹೊಲಸು ನೀರು ತೆರವು, ಗಿಡಗಳ ಕಟಿಂಗ್ ಆಗಿದೆ. ಕೋಟೆಯ ಒಳಗಿರುವ ಏಳು
ಬಾವಿಗಳು ಕ್ಲೀನ್ ಆಗಿವೆ. ಕೋಟೆಗೆ ಸೇರುತ್ತಿದ್ದ ಚರಂಡಿ ಹೊಲಸು ನೀರನ್ನು ಡೈನೇಜ್ ಮಾಡಿ ಡೈವಟ್ ೯ ಮಾಡಲಾಗಿದೆ. ಇದರಿಂದ ಕೋಟೆಯ ಕಂದಕಕ್ಕೆ ಈಗ ಹೊಲಸು ನೀರು ಸೇರುತ್ತಿಲ್ಲ.
ಕೋಟೆಯ ಸುತ್ತ ಇನ್ನೂ ಏನೇನು ಆಗಬೇಕು ? ಪ್ರಸ್ತುತ ಡಿ ಸಿಲ್ಡಿಂಗ್ ಸಂಪೂರ್ಣ ಮಾಡಲಾಗಿದೆ. ಡೆನೇಜ್ ಮಾಡಿ ಹೊಲಸು ನೀರು ಬರುವುದನ್ನು ತಡೆಯಲಾಗಿದೆ. ಈಗ ಸ್ಟೋನ್ ಪಿಚಿಂಗ್ ಮಾಡಲಾಗುತ್ತಿದೆ. ಬಳಿಕ ಕಾಂಪೌಂಡ್ ಗೋಡೆ ನಿರ್ಮಾಣ, ಕಾಂಪೌಂಡ್ ಗ್ರಿಲ್ ಮಾಡುವ ಕಾರ್ಯಗಳು ಆಗಬೇಕಿದೆ.ಕೋಟೆ ಸುತ್ತ ಅಭಿವೃದ್ಧಿ ಕಾರ್ಯ ಮಾಡುವುದು ಸಂಪೂರ್ಣ 2.5 ಕಿಮೀ ಇದೆ. ಈಗ ಕೆಕೆಆರ್ ಡಿಬಿಯಿಂದ ಅಭಿವೃದ್ಧಿ ಆಗುತ್ತಿರುವುದು ಕೇವಲ 850 ಮೀಟರ್ ಮಾತ್ರ. ಈ ಹಿನ್ನೆಲೆಯಲ್ಲಿ ಉಳಿದ ಪ್ರದೇಶವನ್ನೂ ಅಭಿವೃದ್ಧಿ ಮಾಡಲು ಸರಕಾರಕ್ಕೆ ಈಗಾಗಲೇ 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಅನುದಾನ ಬಿಡುಗಡೆಯಾದರೆ ಕಂದಕ ಕ್ಲೀನ್ ಮಡುವುದು, ಸೌಂದರ್ಯೀಕರಣ ಮಾಡುವುದು, ಲೈಟಿಂಗ್ ಮಾಡಿಸುವುದು, ಪಾರ್ ಲೈಟಿಂಗ್ ಅಳವಡಿಸುವುದು ಸೇರಿ ಇತರೆ ಕೆಲಸಗಳಿಗೆ ಒಟ್ಟು 14.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಡಿಪಿಆರ್ ತಯಾರಿಗಿಲ್ಲ. ಅನುದಾನ ಬಿಡುಗಡೆ ನಂತರ ಡಿಪಿಆರ್ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ
ಪ್ರಸ್ತುತ ಕೋಟೆಗೆ ಹರಿಯುವ ನಾಲಾ ನೀರು ಬಂದ್ ಮಾಡಿದ್ದರಿಂದ ಕೋಟೆ ಕಂದಕಕ್ಕೆ ನೀರು ಬಿಡಲು 4 ಎಂಎಲ್‌ಡಿ ವಾಟರ್ ಟ್ರೇಟ್‌ಮೆಂಟ್ ಪ್ಲಾಂಟ್‌ಗೆ 4.50 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ನೀರು ಶುದ್ದೀಕರಣಗೊಳಿಸಿ ಕೋಟೆಯ ಕಂದಕಕ್ಕೆ ಬಿಡುವುದು, ಇನ್ನು ಶ್ರೀ ಶರಣಬಸವೇಶ್ವರ ಅಪ್ಪನ ಕೆರೆಗೆ ವಾಟರ್ ಟ್ರೇಟ್‌ಮೆಂಟ್ ಪ್ಲಾಂಟ್ ನೀರು ಬಿಡುತ್ತಿರುವುದರಿಂದ ಹೂಳು ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸೆಟಲೆಂಟ್ ಟ್ಯಾಂಕ್ ಹೂಳು ಬೇರ್ಪಡಿಸಿ ನೀರನ್ನು ಕೆರೆಗೆ ಮತ್ತು ಕೋಟೆಗೆ ಬಳಕೆಗೆ ಅನುಕೂಲ ಆಗಲಿದೆ. ಇದಕ್ಕೆ 1 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಒಟ್ಟು 20 ಕೋಟಿ ರೂ. ಸರಕಾರಕ್ಕೆ ಕೇಳಲಾಗಿದೆ.
ಸಿ.ಅನಿರುದ್ಧ ಶ್ರವಣ ಕನಸು ಕೋಟೆಯನ್ನು ಅಭಿವೃದ್ಧಿ ಮಾಡಬೇಕು ಎಂಬುದು ಈ
ಹಿಂದೆ ಕೆಕೆಆರ್ ಡಿಬಿಯ ಕಾರ್ಯದರ್ಶಿ ಆಗಿದ್ದ ಅನಿರುದ್ಧ ಶ್ರವಣ ಅವರ ಕನಸಾಗಿತ್ತು. ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಭಾರತದ ಪುರಾತತ್ವ ಇಲಾಖೆ (ಎಎಸ್‌ಐ) ಅವರು
ಅವಕಾಶ ನೀಡಿದ್ದಿಲ್ಲ. ಆದರೆ, ಅನಿರುದ್ಧಶ್ರವಣ್ ಅವರು ವಿಶೇಷ ಮುತುವರ್ಜಿವಹಿಸಿ ಅಭಿವೃದ್ಧಿಗೆ ಪರವಾನಗಿ ಪಡೆದಿದ್ದರು. ಇದರಿಂದ ಈಗ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಪ್ರಸ್ತುತ ಕೆಕೆಆರ್ ಡಿಬಿ ಬಿಡುಗಡೆ ಮಾಡಿರುವ 3.41 ಕೋಟಿ ರೂ.ಯಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಕೇವಲ 850 ಮೀಟರ್‌ನಲ್ಲಿ ಕೆಲಸ ನಡೆಯುತ್ತಿದೆ. ಉಳಿದ ಕೆಲಸಗಳಿಗೆ ಸರಕಾರಕ್ಕೆ ಒಟ್ಟು 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಿಡುಗಡೆ ನಂತರ ಎಲ್ಲ ಸೌಂದರ್ಯೀಕರಣ, ವಾಟರ್ ಟ್ರೇಟ್‌ಮೆಂಟ್ ಪ್ಲಾಂಟ್ ಸೇರಿ ಇತರೆ ಕಾರ್ಯಗಳು ಆಗಲಿವೆ.
- ಆರ್.ಪಿ.ಜಾಧವ್ ಉಪ ಆಯುಕ್ತ ಮಹಾನಗರ ಪಾಲಿಕೆ
https://youtu.be/rVRTYawMiWc?si=apckokOLOI0nzFxC