News kannada

News kannada news of the time

06/06/2022

ರಾಜ್ಯದಲಿ ಇರೋದು ಬಾರಿ ಜನತಾ ಪರಿವಾರ- ಎಚ್‌ಡಿಕೆ

09/05/2022

IPLನಲ್ಲಿ ದಾಖಲೆ ಮಾಡಿದ ಧೋನಿ.

ಐಪಿಎಲ್‌ನ ಡೆತ್ ಓವರ್‌ಗಳಲ್ಲಿ 2500 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು.

15 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಬೇರೆಯವರಿಗೆ ಯಾರಿಗೂ ಸಾಧ್ಯವಾಗಿಲ್ಲ.

ಇದೇ ಪಂದ್ಯದೊಂದಿಗೆ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಟಿ 20 ಯಲ್ಲಿ ನಾಯಕನಾಗಿ 6,000 ರನ್ ಮೈಲುಗಲ್ಲು ದಾಟಿದರು .

31/03/2021

Like us for more videos

ಕರ್ನಾಟಕದಲ್ಲಿ ಕರುಣಾ ರಣಕೇಕೆ !ಇಂದು ಕೂಡ 1272 ಪ್ರಕರಣಗಳು ಪತ್ತೆ .ಬೆಂಗಳೂರಿನಲ್ಲಿ 753 ಪ್ರಕರಣಗಳು ಪತ್ತೆ ದಿನೇ ದಿನೇ ಹೆಚ್ಚುತ್ತಿರುವ ಆತಂಕ...
01/07/2020

ಕರ್ನಾಟಕದಲ್ಲಿ ಕರುಣಾ ರಣಕೇಕೆ !
ಇಂದು ಕೂಡ 1272 ಪ್ರಕರಣಗಳು ಪತ್ತೆ .
ಬೆಂಗಳೂರಿನಲ್ಲಿ 753 ಪ್ರಕರಣಗಳು ಪತ್ತೆ ದಿನೇ ದಿನೇ ಹೆಚ್ಚುತ್ತಿರುವ ಆತಂಕ .

25/01/2020

ರಾಜ್ಯಕ್ಕೂ ಎದುರಾಯ್ತು ಕೊರೊನಾ ವೈರಸ್ ಭೀತಿ : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ ಶಂಕೆ

ಚೀನಾದಲ್ಲಿ ಭಾರಿ ಆತಂಕ ಸೃಷ್ಟಿಸಿರು ಮಾರಣಾಂತಿಕ ಕೊರೊನಾ ವೈರಸ್ ಭೀತಿ ರಾಜ್ಯದಲ್ಲೂ ಎದುರಾಗಿದೆ. ರಾಜ್ಯದಲ್ಲಿ ಮೊದಲ ಕೊರೊನಾ ವೈರಸ್ ಶಂಕೆಯ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಿಗಳ ಆಸ್ಪತ್ರೆಯಲ್ಲಿ ವೈರಸ್ ಸೋಂಕು ತಗುಲಿರುವ ಶಂಕೆಯ ಮೇಲೆ ರೋಗಿಯೊಬ್ಬರು ದಾಖಲಾಗಿದ್ದಾರೆ.

24/01/2020

ಎಲ್.ಇ.ಡಿ ಮತ್ತು ಎಲ್.ಸಿ.ಡಿ ಟಿವಿ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇದೇ ಜನವರಿ ತಿಂಗಳ 27ನೇ ತಾರೀಖಿನಿಂದ 30 ದಿನಗಳ ಎಲ್.ಇ.ಡಿ ಮತ್ತು ಎಲ್.ಸಿ.ಡಿ ಟಿವಿ ಹಾಗೂ ವಿಶೇಷವಾಗಿ ಆಡಿಯೋ ಮತ್ತು ವಿಡಿಯೋ ರಿಪೇರಿ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ.

ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುವುದು, ಹಾಗೂ ತರಬೇತಿ ಸಂದರ್ಭದಲ್ಲಿ ಉದ್ಯಮಶೀಲತ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತಿಯಿರುವಂತಹ 18 ರಿಂದ 45ರ ವಯೋಮಿತಿಯ ನಿರುದ್ಯೋಗ ಯುವಕರು ಸಂಸ್ಥೆಗೆ ಅರ್ಜಿ ಸಲ್ಲಿಸಬಹುದು.

ಈ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

ಅರ್ಜಿಯನ್ನು ಸಲ್ಲಿಸುವವರು ಈ ಕೂಡಲೇ ಸಂಸ್ಥೆಯಿಂದ ಅರ್ಜಿ ಪಡೆದು ನೇರವಾಗಿ ಸಂಸ್ಥೆಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ : 08172-297013, 7353654000, 8147903497, 7338358600 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಆರ್....
24/01/2020

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಆರ್. ಧ್ರುವ ನಾರಾಯಣ್ ರವರು ಉದ್ಘಾಟಿಸುತ್ತಿರುವುದು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸದಾನಂದ ಗೌಡರವರು, ಶಾಸಕರಾದ ಶ್ರೀ ಎಂ. ಪಿ. ರೇಣುಕಾಚಾರ್ಯ ರವರು, ಬಿ. ಸಿ. ಪಾಟೀಲ್ ರವರು, ಶ್ರೀಮತಿ ಸೌಮ್ಯ ರೆಡ್ಡಿ ರವರು, ಭಾಷಣಕಾರರಾಗಿ ಮಹಮ್ಮದ್ ಕುನ್ನಿ ರವರು, ವಸಂತಕುಮಾರ್ ಅವರು, ಅಲ್ಮೇಡಾ ರವರು ಹಾಗೂ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಶ್ರೀ 1008 ವಿದ್ಯಾಶ್ರೀ ತೀರ್ಥ ಶ್ರೀಪಾದರು ರವರು ಹಾಗೂ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

24/01/2020

ಇದು ಜನರ ಧ್ವನಿ ಪ್ರಾಮಾಣಿಕ ಮೊದಲ ಪ್ರಯತ್ನ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : KPSCಯಿಂದ ಶೀಘ್ರದಲ್ಲಿಯೇ 2000 FDA, SDA ಹುದ್ದೆಗಳಿಗೆ ಅಧಿಸೂಚನೆಉದ್ಯೋಗಾಕಾಂಕ್ಷೆಯ ನಿರೀಕ್ಷೆಯಲ್ಲಿದ...
23/01/2020

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : KPSCಯಿಂದ ಶೀಘ್ರದಲ್ಲಿಯೇ 2000 FDA, SDA ಹುದ್ದೆಗಳಿಗೆ ಅಧಿಸೂಚನೆ

ಉದ್ಯೋಗಾಕಾಂಕ್ಷೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಸದ್ಯದಲ್ಲಿಯೇ 2020ನೇ ಸಾಲಿಗೆ ಸಂಬಂಧಿಸಿದಂತೆ ಗ್ರೂಪ್-ಸಿ ಯ ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಿದೆಯಂತೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ 2000 ಎಫ್ ಡಿ ಎ, ಎಸ್ ಡಿ ಎ ಹುದ್ದೆಗಳಿಗೆ ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಿದೆಯಂತೆ. ಈ ಮೂಲಕ ಗುಡ್ ನ್ಯೂಸ್ ದೊರೆಯಲಿದೆ.

ಫೆಬ್ರವರಿ 1 ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡಲಿದ್ದು , ಕೇಂದ್ರ ಬಜೆಟ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ , ಈ ಬಜೆಟ್ ನಲ್ಲಿ ವೇತನದ...
23/01/2020

ಫೆಬ್ರವರಿ 1 ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡಲಿದ್ದು , ಕೇಂದ್ರ ಬಜೆಟ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ , ಈ ಬಜೆಟ್ ನಲ್ಲಿ ವೇತನದಾರರಿಗೆ ಕೇಂದ್ರ ಸರ್ಕಾರದ ವತಿಯಿಂದ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆ ಇದೆ .

CAA ವಿರೋಧಿಸುವವರೆಲ್ಲ 'ದೇಶದ್ರೋಹಿ'ಗಳು : ವಿವಾದಿತ ಹೇಳಿಕೆ ಪುನರುಚ್ಚರಿಸಿದ ರೇಣುಕಾಚಾರ್ಯಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವವರೆಲ್...
23/01/2020

CAA ವಿರೋಧಿಸುವವರೆಲ್ಲ 'ದೇಶದ್ರೋಹಿ'ಗಳು : ವಿವಾದಿತ ಹೇಳಿಕೆ ಪುನರುಚ್ಚರಿಸಿದ ರೇಣುಕಾಚಾರ್ಯ

ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವವರೆಲ್ಲ ದೇಶದ್ರೋಹಿಗಳು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಿತ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ಇಂದು ಸುತ್ತೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, ಯಾರು ಪೌರತ್ವ ಕಾಯ್ದೆ ವಿರೋಧಿಸುತ್ತಾರೋ ಅವರು ದೇಶದ್ರೋಹಿಗಳು. ಅವರು ಕಾಂಗ್ರೆಸ್ ಇರಬಹುದು, ಜೆಡಿಎಸ್ ಇರಬಹುದು. ಯಾರೇ ಆಗಲಿ ಸಿಎಎಗೆ ವಿರೋಧ ವ್ಯಕ್ತಪಡಿಸುವವರು ದೇಶದ್ರೋಹಿಗಳೇ ಎಂದವರು ಟೀಕಿಸಿದ್ಧಾರೆ. ಕಾಂಗ್ರೆಸ್ ನವರು, ಸಮಾಜದಲ್ಲಿ ಮತ್ತು ಅಲ್ಪಸಂಖ್ಯಾತರಲ್ಲಿ ವಿಷಬೀಜ, ಜಾತಿ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ಧಾರೆ. ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಜಾತಿಗಣತಿ ಮಾಡಿಸಿದರು. ಅವರು ಯಾವ ಕಾರಣಕ್ಕಾಗಿ ಈ ರೀತಿ ಮಾಡಿಸಿದರೆಂದು ಪ್ರಶ್ನಿಸಿ ಹರಿಹಾಯ್ದರು.

ಇದೇ ವೇಳೆ ಅಲ್ಪಸಂಖ್ಯಾತರಿಗೆ ಯಾವುದೇ ಪ್ಯಾಕೇಜ್ ನೀಡುವುದಿಲ್ಲ ಎಂಬ ತಮ್ಮ ಹೇಳಿಕೆಯನ್ನು ರೇಣುಕಾಚಾರ್ಯ ಸಮರ್ಥಿಸಿಕೊಂಡರು.

Address

Halli Mysore

Website

Alerts

Be the first to know and let us send you an email when News kannada posts news and promotions. Your email address will not be used for any other purpose, and you can unsubscribe at any time.

Share