28/09/2025
ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಸಪ್ತ ಅಶ್ವರೂಢ ಬೆಳ್ಳಿ ರಥದಲ್ಲಿ ವಿಶ್ವಕರ್ಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಪುರಸ್ಕಾರ ನೆರವೇರಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೆರವಣಿಗೆಗೆ ರಥಕ್ಕೆ ಚಾಲನೆ ನೀಡಿದೆನು.
ನಂತರ ಮಾತನಾಡಿ ಇಂತಹ ಮಹನೀಯರ ತತ್ವ ಆದರ್ಶಗಳು ನಮಗೆ ದಾರಿ ದೀಪವಾಗಬೇಕು. ಇಂತಹ ಪವಾಡ ಪುರುಷರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರು ನಡೆಯುವ ಮೂಲಕ ಅವರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಜೊತೆಗೆ ನಾನು ಸಹ ನಿಮ್ಮೆಲ್ಲರ ಜನಪ್ರತಿನಿಯಾಗಿ ಸಮುದಾಯದ ಜನತೆಗೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದೇನು.
ಇದೇ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಚೈತ್ರ, ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಟಿ ಮುತ್ತುರಾಜು, ಉಪಾಧ್ಯಕ್ಷ ರವಿ, ಖಜಾಂಚಿ ಮುತ್ತುರಾಜು, ಸದಸ್ಯರಾದ ರಾಜೇಶ್, ನಾಗಾಚಾರಿ, ಯೋಗೇಶ್, ನವೀನ, ಪ್ರಕಾಶ್, ಕುಮಾರ್,ವಿಶ್ವಕರ್ಮ ಸಮುದಾಯದ ಯಜಮಾನರು,ಯುವಕರು, ಮಹಿಳೆಯರು, ಭಾಗವಹಿಸಿದ್ದರು.