Hassan Express

Hassan Express ನಿಮ್ಮ ನಂಬಿಕೆಯ ಸುದ್ದಿ ಸಾರಥಿ

17/12/2025
ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ಆ ಮೂಲಕ‌ ಅಮಾಯಕ‌ ಜನರ ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ...
04/12/2025

ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ಆ ಮೂಲಕ‌ ಅಮಾಯಕ‌ ಜನರ ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡುತ್ತಿದ್ದು, ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದೊಂದಿಗೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ಮುಂದಿನ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದು ಕಾಯ್ದೆಯಾಗಿ ಜಾರಿಗೆ ಬಂದ ನಂತರದಿಂದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಕೃತ್ಯ ಎಸಗುವ ವ್ಯಕ್ತಿ ಅಥವಾ ಸಂಘಟನೆಗಳಿಗೆ ಶಿಕ್ಷೆ ವಿಧಿಸಲು ಕಾನೂನಾತ್ಮಕ ಅವಕಾಶ ಲಭ್ಯವಾಗಲಿದೆ.

ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಬೇಕು ಎನ್ನುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ.

21/11/2025

ಬೇಲೂರು ತಾಲ್ಲೂಕು ಬಿಕ್ಕೋಡು ಗ್ರಾಮ ಸಮೀಪ ಕಾಡಲ್ಲಿ ಕ್ಯಾಪ್ಟನ್ ಎಂಬ ಮತ್ತೊಂದು ಆನೆಯೊಂದಿಗೆ ನಡೆದ ಕಾಳಗದಲ್ಲಿ ದಂತ ಕಳೆದುಕೊಂಡ ಭೀಮ ಆನೆ ಒಂಟಿಯಾಗಿ ಸಂಚರಿಸುತ್ತಿದೆ.

19/11/2025

💥 ಹಾಸನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನ್ಯಾಯಾಲಯದ ಪ್ರಹಾರ! 😡
​15 ವರ್ಷಗಳಿಂದ ಭೂ ಪರಿಹಾರ ನೀಡದೆ ರೈತರನ್ನು ಅಲೆದಾಡಿಸಿದ ಹೇಮಾವತಿ ಜಲಾಶಯ ಯೋಜನೆ ವಿಭಾಗದ ಕಚೇರಿಗೆ ನ್ಯಾಯಾಲಯದ ಶಾಕ್!
​ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಹೇಮಾವತಿ ಯೋಜನೆ ವಿಭಾಗದ ಕಚೇರಿಯ ಪೀಠೋಪಕರಣಗಳನ್ನು (ಟೇಬಲ್, ಕಂಪ್ಯೂಟರ್, ಕುರ್ಚಿಗಳು) ಬುಧವಾರದಂದು ವಕೀಲರು ಹಾಗೂ ರೈತರ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು.
​🌾 ಸಮಸ್ಯೆ ಏನು?
​2009ರಲ್ಲಿ ಯಗಚಿ ನಾಲೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಇಬ್ಬರು ರೈತರಿಗೆ (ಬಿ.ಟಿ. ಶಿವಶಂಕರ್ ಮತ್ತು ತಿಮೇಗೌಡ) ನ್ಯಾಯಾಲಯ ಆದೇಶ ನೀಡಿದರೂ, ಸುಮಾರು ₹ 1 ಕೋಟಿ 29 ಲಕ್ಷಕ್ಕೂ ಹೆಚ್ಚು ಪರಿಹಾರವನ್ನು ಇಲಾಖೆ ಇನ್ನೂ ನೀಡಿಲ್ಲ.
​15 ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡಿ ರೈತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
​⚖️ ವಕೀಲರ ಆಕ್ರೋಶ:
"ಸುಪ್ರೀಂಕೋರ್ಟ್ ಆದೇಶದಂತೆ 6 ತಿಂಗಳಲ್ಲಿ ಮುಗಿಯಬೇಕಾದ ಪ್ರಕರಣಗಳು 15 ವರ್ಷವಾದರೂ ಇತ್ಯರ್ಥವಾಗಿಲ್ಲ. ಪರಿಹಾರ ನೀಡಲು ಸರ್ಕಾರಕ್ಕೆ ಹಣವಿಲ್ಲ ಎಂದು ಹೇಳುವುದು ನಾಚಿಕೆಗೇಡಿತನ!"
​ರೈತರ ವರ್ಷಗಳ ಹೋರಾಟಕ್ಕೆ ನ್ಯಾಯ ಸಿಗುವ ದಿನ ಬರಲಿ. ತಕ್ಷಣ ಸರ್ಕಾರ ಸ್ಪಂದಿಸಲಿ! 🙏
​ #ರೈತಪರಹಾರ #ಭೂಪರಿಹಾರ #ಹಾಸನ #ನ್ಯಾಯಕ್ಕಾಗಿಹೋರಾಟ #ಕಚೇರಿಜಪ್ತಿ

18/11/2025

ಪೂರ್ವ ತಯಾರಿ ಇಲ್ಲದೇ ಮಾಡೋ ಭಾಷಣ ಹೀಗೆಯೇ ಅಗುತ್ತೆ. ಎಂತಹ ಅಭಾಸ ಅಲ್ವಾ

15/11/2025

🎂 ನಮ್ಮ ಸಂಸದರಿಗೆ ಹುಟ್ಟುಹಬ್ಬದ ಶುಭಾಶಯಗಳು! 🎉
​ಹಾಸನ ಲೋಕಸಭಾ ಕ್ಷೇತ್ರದ ಪ್ರೀತಿಯ ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!
​ಸಂಸದರ ಹುಟ್ಟುಹಬ್ಬದ ಪ್ರಯುಕ್ತ ಇಂದು (ಶನಿವಾರ) ಹಾಸನದಲ್ಲಿ ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
​✅ ಸೇವಾ ಕಾರ್ಯಗಳು: ವಿವಿಧ ಸ್ಥಳಗಳಲ್ಲಿ ಅಗತ್ಯವಿರುವವರಿಗೆ ನೆರವು ನೀಡಲಾಯಿತು.
​🙏 ಧಾರ್ಮಿಕ ಕಾರ್ಯಕ್ರಮಗಳು: ಸಂಸದರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಕೋರಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.
​ಜನಪ್ರತಿನಿಧಿಯಾಗಿ ಅವರ ಕೆಲಸ ಕಾರ್ಯಗಳು ಹೀಗೆಯೇ ಮುಂದುವರಿಯಲಿ. ಅವರಿಗೆ ದೇವರು ಆಯುರಾರೋಗ್ಯ, ಸುಖ-ಸಮೃದ್ಧಿಯನ್ನು ನೀಡಲಿ ಎಂದು ಹಾರೈಸೋಣ.
​ #ಹಾಸನಸಂಸದ #ಯುವಕಾಂಗ್ರೆಸ್ #ಶುಭಾಶಯ

14/11/2025

Address

Sakleshpur

Alerts

Be the first to know and let us send you an email when Hassan Express posts news and promotions. Your email address will not be used for any other purpose, and you can unsubscribe at any time.

Share