ಹಾಸನ ಟಿವಿ - Hassan tv

ಹಾಸನ ಟಿವಿ - Hassan tv Contact information, map and directions, contact form, opening hours, services, ratings, photos, videos and announcements from ಹಾಸನ ಟಿವಿ - Hassan tv, Media/News Company, Hassan Tv, Hassan.

ಹಾಸನದ ಚರಿತ್ರೆ, ಇತಿಹಾಸ, ಜನಪದ , ಸಂಸ್ಕೃತಿಯ ಬಗ್ಗೆ ತಿಳಿಯೋಣ. ನಮ್ಮ ಹುಟ್ಟೂರು, ನೀವಿರುವ ಊರು, ನಿಮಗಿಷ್ಟವಾದ ಊರಿನ ಬಗ್ಗೆ, ಅದರ ಇತಿಹಾಸ, ಸಂಸ್ಕೃತಿ, ಜನಪದ ಆಚರಣೆಗಳನ್ನು ಹೊರಜನರಿಗೆ ತಿಳಿಸೋಣ.... ❤️

02/11/2025

ಮಾನ್ಯ ಮಹಿಳಾ ಆಯೋಗ ಅಧ್ಯಕ್ಷ ಡಾ.ನಾಗಲಕ್ಷ್ಮಿ ಇದೇ 3-11-2025 - 5-11-2025 ರ ವರೆಗೂ ಹಾಸನದಲ್ಲಿ... ಇರಲಿದ್ದಾರೆ . ನಿಮ್ಮ ( ಮಹಿಳಾ ) ದೂರುಗಳಿದ್ದರೆ ತಿಳಿಸಬಹುದು

 #ಆನೆಗುಡ್ಡೆ_ಶ್ರೀ_ವಿನಾಯಕ_ದೇವಸ್ಥಾನ ದಿನಾಂಕ 29:10:2025ಲೈಕ್ ಮಾಡಿ ಮತ್ತು ಶೇರ್ ಮಾಡಿ
29/10/2025

#ಆನೆಗುಡ್ಡೆ_ಶ್ರೀ_ವಿನಾಯಕ_ದೇವಸ್ಥಾನ

ದಿನಾಂಕ 29:10:2025

ಲೈಕ್ ಮಾಡಿ ಮತ್ತು ಶೇರ್ ಮಾಡಿ

ಹಾಸನಾಂಬ ದೇವಸ್ಥಾನದಲ್ಲಿ ನಿರಂತರವಾಗಿ 15*ದಿನಗಳ ಕಾಲ  ತಮ್ಮ ನಿಸ್ವಾರ್ಥ ಸೇವೆ ನೀಡಿದ ಹಾಸನ ಹಾಗೂ ಹೊರ ಜಿಲ್ಲೆಯ ಎಲ್ಲಾ ಸ್ಕೌಟ್ಸ್ ಗೈಡ್ಸ್ ರೇಂ...
24/10/2025

ಹಾಸನಾಂಬ ದೇವಸ್ಥಾನದಲ್ಲಿ ನಿರಂತರವಾಗಿ 15*ದಿನಗಳ ಕಾಲ ತಮ್ಮ ನಿಸ್ವಾರ್ಥ ಸೇವೆ ನೀಡಿದ ಹಾಸನ ಹಾಗೂ ಹೊರ ಜಿಲ್ಲೆಯ ಎಲ್ಲಾ ಸ್ಕೌಟ್ಸ್ ಗೈಡ್ಸ್ ರೇಂಜರ್ಸ್ ರೋವರ್ಸ್ ಗಳಿಗೆ ಹಾಸನಾಂಬ ಭಕ್ತರ ಪರವಾಗಿ ಕೃತಜ್ಞತೆ ಗಳು

23/10/2025

ಹಾಸನಾಂಬ ದೇವಿಯ ವಿಶ್ವ ರೂಪ...

22/10/2025

ಸಾರ್ವಜನಿಕರಿಗೆ 2025ನೇ ಸಾಲಿನ ಅಧಿಕೃತ ದರ್ಶನ ಮುಕ್ತಾಯ , ಈ ವಿಡಿಯೋ ಯಾರು ಈ ವರೆಗೂ ದರ್ಶನ ಮಾಡಿಲ್ಲ ಅವರಿಗೆ ಮಾತ್ರ 🙏
ಹಾಸನ ನಮ್ಮ ಊರು - Haasana Namma Ooru
ಹಾಸನ ಟಿವಿ - Hassan tv ಹಾಸನ ಟಿವಿ ಹಾಸನ ಟಿವಿ

21/10/2025

ಶ್ರೀ ಹಾಸನಾಂಬೆ ತಾಯಿಯ ಈ ದಿನದ ದರ್ಶನ : ದಿನ 13
ಬುಧವಾರದ ದರ್ಶನ ಮಾಹಿತಿ
ಬುಧವಾರ ದರ್ಶನ ಬೆಳಗ್ಗೆ 5.30 ರಿಂದ ಸಂಜೆ 7.00ರವರೆಗೆ ನಿರಂತರವಾಗಿ ನಡೆಯುತ್ತದೆ.
ಈ ದಿನ ಮಧ್ಯಾಹ್ನ ನೈವೇದ್ಯ ಪೂಜೆ ಇರುವುದಿಲ್ಲ, ಆದ್ದರಿಂದ ದರ್ಶನ ದಿನಪೂರ್ತಿ ನಿರಂತರವಾಗಿ ನಡೆಯಲಿದೆ.
ಸಾರ್ವಜನಿಕ ದರ್ಶನ ಸಂಜೆ 7.00 ಗಂಟೆಗೆ ಮುಕ್ತಾಯವಾಗುತ್ತದೆ.
ದರ್ಶನ ಪಡೆಯಲು ಬಯಸುವ ಭಕ್ತರು ಸಂಜೆ 5.00 ಗಂಟೆಯೊಳಗೆ ಆಗಮಿಸಲು ವಿನಂತಿ.
ದಯವಿಟ್ಟು ಗಮನಿಸಿ — ಗುರುವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ.
Wednesday - Darshana is available from 5.30 AM to 7 PM non stop. There will be no Naivedya Pooje on Wednesday afternoon. So, Darshana will continue throughout the day from morning 5.30 to evening 7 pm without any stop. Public Darshana will stop at 7 PM. Those who want to seek Darshana tomo are requested to come before 5 pm.

Thursday public will not be allowed.

ಪೊಲೀಸ್ ಹುತಾತ್ಮರ ದಿನಾಚರಣೆ : ಗೌರವ ಸಮರ್ಪಣೆಹಾಸನ- ದೇಶದೊಳಗಿನ ಕಾನೂನು ಸುವ್ಯವಸ್ಥೆ ಪಾಲನೆ, ನಾಗರೀಕರ ಆಸ್ತಿ ಪಾಸ್ತಿ ರಕ್ಷಣೆ, ಅಪರಾಧ ತಡೆ ಹ...
21/10/2025

ಪೊಲೀಸ್ ಹುತಾತ್ಮರ ದಿನಾಚರಣೆ : ಗೌರವ ಸಮರ್ಪಣೆ
ಹಾಸನ- ದೇಶದೊಳಗಿನ ಕಾನೂನು ಸುವ್ಯವಸ್ಥೆ ಪಾಲನೆ, ನಾಗರೀಕರ ಆಸ್ತಿ ಪಾಸ್ತಿ ರಕ್ಷಣೆ, ಅಪರಾಧ ತಡೆ ಹೀಗೆ ಹತ್ತು ಹಲವಾರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಪೊಲೀಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿ ಗೌರವ ಸಲ್ಲಿಸಿ ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು 1959 ರಲ್ಲಿ ಸಿಯಾಚಿನ್ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ದಾಳಿಯಿಂದ ಮೃತಪಟ್ಟವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಸುವುದರ ಮೂಲಕ ಗೌರವ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಹುತಾತ್ಮರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರಲ್ಲದೆ, ಬಂದು ಬಸ್ತ್ ಮತ್ತಿತರ ಕರ್ತವ್ಯದ ಮೇಲೆ 24x7 ಸಮಯ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಕುಟುಂಬ ಹಾಗೂ ವೈಯಕ್ತಿಕವಾಗಿಯೂ ಗಮನಹರಿಸಲು ಸಾಧ್ಯವಾಗುವುದಿಲ್ಲ, ಇವರ ಸೇವಾ ಭದ್ರತೆ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯತೆ ಇದೆ ಎಂದರು.

ದೇಶ, ಸಮಾಜಕ್ಕಾಗಿ ಬಲಿದಾನ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕುಟುಂಬದವರ ಬೆಂಬಲ ಇಲ್ಲದಿದ್ದರೆ ತಮ್ಮ ಕರ್ತವ್ಯ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ ಆ ಕಾರಣಕ್ಕಾಗಿ ಅವರ ಕುಟುಂಬ ವರ್ಗದವರಿಗೂ ದೊಡ್ಡ ನಮನ ಸಲ್ಲಿಸುತ್ತೇನೆ ಎಂದರು.

ಸರ್ಕಾರಿ ಸೇವೆ ಬಗ್ಗೆ ಅಭಿಮಾನ ನಿಷ್ಠೆ ಇರಲೇಬೇಕು. ಅದನ್ನಿಟ್ಟುಕೊಂಡು ಕುಟುಂಬದ ವೈಯಕ್ತಿಕ ಭಾವನೆಗಳಿಗೂ ಬೆಲೆಕೊಡಬೇಕು. ಕರ್ತವ್ಯದಲ್ಲಿದ್ದು ಅದನ್ನು ಮರೆಯಬೇಡಿ, ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಲು ತಮಗೆ ಹೆಚ್ಚಿನ ಶಕ್ತಿ ದೊರೆಯಲಿ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿ ಗೌರವ ಸಮರ್ಪಣೆ ಮಾಡಿದ ನಂತರ ಮಾತನಾಡಿ ದೇಶ, ಸಮಾಜದ ಸ್ವಾಸ್ಥö್ಯ ಕಾಪಾಡುವುದಕ್ಕಾಗಿ ದುಡಿಯುವ ಪೊಲೀಸ್ ಇಲಾಖೆಯ ಅಮೋಘ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸಮಾಜದ ನೆಮ್ಮದಿ ಕಾಪಾಡುವ ಹೊಣೆ ಹೊತ್ತು ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆಗೆ ಸಮಾಜ ಎಷ್ಟರಮಟ್ಟಿಗೆ ಗೌರವ ನೀಡುತ್ತದೆ ಎಂದು ನೋಡಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತಿಳಿ ಹೇಳಬೇಕು ಎಂದರಲ್ಲದೆ, ಇದಕ್ಕೆ ಉತ್ತಮ ಉದಾಹರಣೆ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಜನಸಂದಣಿ ನಿಯಂತ್ರಣ ಮಾಡುವುದನ್ನು ಕಣ್ಣಾರೆ ನೋಡಿದ್ದೇವೆ. ಇವರಿಗೆ ನೈತಿಕ ಬೆಂಬಲ ನೀಡಬೇಕು ಎಂದರು.

ಕರ್ತವ್ಯ ಪಾಲನೆಯಲ್ಲಿ ಸದಾ ನಿರತರಾಗಿ ನಮ್ಮೆಲ್ಲರ ಸುರಕ್ಷತೆಗೆ ಶ್ರಮಿಸುವ ದೇಶದ ಭದ್ರತೆಗೆ ಹೋರಾಡಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಶೌರ್ಯ, ಸಮರ್ಪಣೆ, ತ್ಯಾಗವನ್ನು ಸ್ಮರಿಸಿ ಗೌರವಿಸುವುದು ನಮ್ಮೆಲರ ಕರ್ತವ್ಯ, ಅಂತಹ ಮಹಾನುಬಾವರನ್ನೆಲ್ಲ ಸ್ಮರಿಸುತ್ತಾ ಅವರ ಕುಟುಂಬಸ್ಥರಿಗೆ ವಂದಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಅವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿ ಗೌರವ ಸಮರ್ಪಣೆ ಮಾಡಿದ ನಂತರ 2024 ರ ಸೆಪ್ಟೆಂಬರ್ ತಿಂಗಳಿನಿAದ 2025 ರ ಆಗಸ್ಟ್ 31 ವರೆಗೆ ದೇಶದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮ ಜೀವ ಅರ್ಪಣೆ ಮಾಡಿದ ಒಟ್ಟು 191 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಟ್ಟಿಯನ್ನು ಓದಿ ಸ್ಮರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
************-

21/10/2025

ಮಂಗಳವಾರ ಬೆಳಗಿನ ಅಪ್ಡೇಟ್
ದರ್ಶನ ಬಹಳ ಸರಾಗವಾಗಿ ನಡೆಯುತ್ತಿದೆ. ನಿನ್ನೆ ಸುಮಾರು 2 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಪ್ರಸ್ತುತ ವರ್ಷ ಇಲ್ಲಿಯವರೆಗೆ 23,00,000 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಒಟ್ಟಾರೆ 17,46,000 ಜನ ದರ್ಶನ ಪಡೆದಿದ್ದರು.

ಈ ವರ್ಷ ₹ 300/1000 ಟಿಕೆಟ್‌ ಸಾಲಿನಲ್ಲಿ 3,40,260 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಈ ಸಾಲಿನಲ್ಲಿ ಒಟ್ಟಾರೆ 1,29,956 ಜನ ದರ್ಶನ ಪಡೆದಿದ್ದರು.

ಇಂದು ಮತ್ತು ನಾಳೆ ದರ್ಶನ ಲಭ್ಯವಿದೆ. ಇಂದು ಮಧ್ಯಾಹ್ನ 2 ರಿಂದ 3.30 ರವರೆಗೆ ನೈವೇದ್ಯ ಇರುವುದರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಇಂದು ಕ್ಯೂ ಲೈನ್‌ಗಳ ಪ್ರವೇಶ ದ್ವಾರಗಳು ರಾತ್ರಿ 9 ಗಂಟೆಗೆ ಮುಚ್ಚಲ್ಪಡುತ್ತವೆ ಮತ್ತು ದರ್ಶನ ಮಧ್ಯರಾತ್ರಿ 12 ಗಂಟೆಗೆ ನಿಲ್ಲುತ್ತದೆ.

ಬುಧವಾರ - ದರ್ಶನ ಬೆಳಿಗ್ಗೆ 5 ರಿಂದ ಪ್ರಾರಂಭವಾಗಿ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಸಾರ್ವಜನಿಕ ದರ್ಶನ ಸಂಜೆ 7 ಗಂಟೆಗೆ ಮುಗಿಯುತ್ತದೆ. ಅದರ ನಂತರ ಸಾರ್ವಜನಿಕ ದರ್ಶನವಿಲ್ಲ.

ಗುರುವಾರ - ಸಾರ್ವಜನಿಕರಿಗೆ ಅವಕಾಶವಿಲ್ಲ.

Tuesday morning update.

Darshana proceeding very smoothly.
About 2 lakh people have obtained Darshana yesterday. So far this season 23,00,000 people have obtained Darshana, as compared to 17,46,000 for all the days of last year.
3,40,260 people have obtained Darshana with ₹ 300/1000 tickets as compared to 1,29,956 people for all the days of last year.
Darshana is available today and tomorrow.
Today 2-3.30 pm Darshana will stop for Naivedya.
Today entry gates for Q lines will close about 9 pm and Darshana will stop at 12 midnight.
Wednesday - Darshana will start from 5 am and go on till 7 pm continuously.
Public Darshan will stop at 7 pm.
No public Darshana after that.
Thursday - public will not be allowed.

20/10/2025

ಬಿಂಡಿಗ ದೇವಿರಮ್ಮ ಬೆಟ್ಟ ಚಿಕ್ಕಮಗಳೂರು

19/10/2025

ಸಿದ್ದೇಶ್ವರಸ್ವಾಮಿ ಜಾತ್ರೆಯ ಅಂಗವಾಗಿ ತೆಪ್ಪೋತ್ಸವಕ್ಕೆ ಭೇಟಿ ನೀಡಿದ ಲತಾಕುಮಾರಿ IAS ಜಿಲ್ಲಾಧಿಕಾರಿಗಳು ಹಾಸನ 🙏

19/10/2025

ಶ್ರೀ ಸಿದ್ದೇಶ್ವರಸ್ವಾಮಿ ಯವರ ಜಾತ್ರಾ ಮಹೋತ್ಸವ-2025
ಶ್ರೀ ಸಿದ್ಧೇಶ್ವರಸ್ವಾಮಿ ಮತ್ತು ಶ್ರೀ ವೀರಭದ್ರಸ್ವಾಮಿಯವರ
ತೆಪ್ಪೋತ್ಸವ ದೇವಿಗೆರೆ ಹಾಸನ

18/10/2025

ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ವೇಳೆ ಫಲಪುಷ್ಪ ಪ್ರದರ್ಶನ ಏರ್ಪಡಿಸಿ , ಜನತೆಯ ಮನಗೆದ್ದ ಜಿಲ್ಲಾಡಳಿತ

Address

Hassan Tv
Hassan
573201

Telephone

+919886463333

Website

Alerts

Be the first to know and let us send you an email when ಹಾಸನ ಟಿವಿ - Hassan tv posts news and promotions. Your email address will not be used for any other purpose, and you can unsubscribe at any time.

Share