
30/05/2025
ಆಲೂರು
ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದ್ದು ವಿದ್ಯುತ್ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಚೆಸ್ಕಾಂನ ಅಧಿಕಾರಿಗೆ ಮನವಿ ಸಲ್ಲಿಸಿದರು ಅವರು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದು. ಇದರಿಂದ ಬೇಸತ್ತ ಗ್ರಾಮಸ್ಥರು ಕರುನಾಡ ವಿಜಯ ಸೇನೆಯ ಜಿಲ್ಲಾಅಧ್ಯಕ್ಷರಾದ
ಕಟ್ಟೆ ಗದ್ದೆ ನಾಗರಾಜ್ ರವರ ಗಮನಕ್ಕೆ ಈ ವಿಷಯವನ್ನು ತಂದಿದ್ದು, ತಕ್ಷಣವೇ ಸಂಘಟನೆಯ ಸದಸ್ಯರೊಡಗೂಡಿ ಚೆಸ್ಕಾಂನ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದು ಕೇವಲ 24 ಗಂಟೆ ಒಳಗೆ ಟಿಸಿ ಅಳವಡಿಸಲು ಕ್ರಮ ಕೈಗೊಂಡಿದ್ದು.ಇದಕ್ಕೆ ಗ್ರಾಮಸ್ಥರು ಕಟ್ಟೆಗದ್ದೆ ನಾಗರಾಜ್ ಅವರಿಗೆ ಹಾಗೂ ಕರುನಾಡು ವಿಜಯ ಸೇನೆಯ ಸದಸ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ