Active News 24×7

06/03/2026
26/02/2026

ಅರಕಲಗೂಡು ಪಟ್ಟಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಫುಡ್ ಕೋರ್ಟ್ ನಿರ್ಮಾಣ. ಆರು ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎ.ಮಂಜು

#ಫುಡ್_ಕೋರ್ಟ್ #ರಸ್ತೆ_ಅಭಿವೃದ್ಧಿ

#ಅರಕಲಗೂಡು #ನ್ಯೂಸ್ #ಅರಕಲಗೂಡು_ನ್ಯೂಸ್ #ಬ್ರೇಕಿಂಗ್_ನ್ಯೂಸ್ #ಹಾಸನ #ಆಕ್ಟೀವ್_ನ್ಯೂಸ್ #ಕನ್ನಡ #ಕನ್ನಡ_ನ್ಯೂಸ್ #ಸುದ್ದಿಗಳು

ಂಜು #ಶಾಸಕರು #ಮಾಜಿ_ಸಚಿವರು_ಎ_ಮಂಜು #ಅರಕಲಗೂಡು_ಶಾಸಕರು

25/02/2026

ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಂಥಪಾಲಕರ ವಿರುದ್ಧ ಗ್ರಾಮಸ್ಥರ ಅಸಮಾಧಾನ. ಸಮಜಾಯಿಷಿ ನೀಡಲು ಬಂದ ಗ್ರಂಥಪಾಲಕರಿಗೆ ಗ್ರಾಮಸ್ಥರು ತರಾಟೆ. ಕಸ ಗುಡಿಸೋದು ಗಂಡ. ಸಂಬಳ ಪಡೆಯೋದು ಹೆಂಡತಿ ಹೆಸರಿನಲ್ಲಿ.

ಅರಕಲಗೂಡು ಪಟ್ಟಣ ಪಂಚಾಯತಿ ವ್ಯಾಪ್ತಿಯ ಅರಕಲಗೂಡು ಮುಖ್ಯ ರಸ್ತೆಗೆ 6 ಕೋಟಿ ವೆಚ್ಚದಲ್ಲಿ Kship ಸಹಯೋಗದೊಂದಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ  ...
25/02/2026

ಅರಕಲಗೂಡು ಪಟ್ಟಣ ಪಂಚಾಯತಿ ವ್ಯಾಪ್ತಿಯ ಅರಕಲಗೂಡು ಮುಖ್ಯ ರಸ್ತೆಗೆ 6 ಕೋಟಿ ವೆಚ್ಚದಲ್ಲಿ Kship ಸಹಯೋಗದೊಂದಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ ಮಂಜು ಅವರು ಗುದ್ದಲಿ ಪೂಜೆ ಕಾರ್ಯ ನೆರವೇರಿಸಿದರು.
ಆರು ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿದ್ದು ನಾಲ್ಕು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿಯೊಂದಿಗೆ ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಸುಸಜ್ಜಿತ ಫುಡ್ ಕೋರ್ಟ್ ನಿರ್ಮಾಣಕ್ಕೆ ಒಂದು ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದ್ದು ತುರ್ತಾಗಿ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದರು ಪಟ್ಟಣದ ಎಲ್ಲಾ ಸಾರ್ವಜನಿಕರು ಗುಣಮಟ್ಟದ ರಸ್ತೆಗೆ ಸಹಕರಿಸುವಂತೆ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಮುಖಂಡರು ಉಪಸ್ಥಿತರಿದ್ದರು

25/02/2026

ವೈಯಕ್ತಿಕ ದ್ವೇಷಕ್ಕೆ ತೆಂಗಿನ ಮರಕ್ಕೆ ವಿಷ ಹಾಕಿದ್ದಾರೆ ಆದ್ದರಿಂದಲೇ ತೆಂಗಿನ ಮರಗಳ ಸುಳಿಗಳು ಒಣಗುತ್ತಿದ್ದಾವೆ ಎಂದು ಅರಕಲಗೂಡು ತಾಲ್ಲೂಕಿನ ವಿಜಾಪುರ ಅರಣ್ಯ ಗ್ರಾಮದ ಚಲುವರಾಜು ಎಂಬ‌ ರೈತರು ಆರೋಪಿಸಿದ್ದರು. ಇದಕ್ಕೆ ಅರಕಲಗೂಡು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ರಾಜೇಶ್ ರವರು ಮಾತನಾಡಿ ತೆಂಗಿನ ಮರಕ್ಕೆ ಸುಳಿ ಕೊಳೆ ರೋಗ ಎನ್ನುವುದು ಇದ್ದೆ ಇದೆ. ಅಲ್ಲದೇ ರೈತರು ಹೇಳುತ್ತಿರುವುದು ಸಹ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪರಿಶೀಲಿಸದ ಹೊರತು ತೆಂಗಿನ ಮರದ ಸುಳಿಗಳು ಒಣಗುತ್ತಿರುವುದಕ್ಕೆ ನಿಖರ ಕಾರಣ ಹೇಳಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರವಾಗಿ‌ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ವಿಜ್ಞಾನಿಗಳ ತಂಡದಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
#ರೈತರು #ಅನ್ನದಾತ #ತೆಂಗಿನಮರ #ತೆಂಗಿನಗಿಡ #ಕೃಷಿ #ವ್ಯವಸಾಯ #ಅರಕಲಗೂಡು_ನ್ಯೂಸ್

#ಅರಕಲಗೂಡು #ನ್ಯೂಸ್ #ಅರಕಲಗೂಡು_ನ್ಯೂಸ್ #ಬ್ರೇಕಿಂಗ್_ನ್ಯೂಸ್ #ಹಾಸನ #ಆಕ್ಟೀವ್_ನ್ಯೂಸ್ #ಕನ್ನಡ #ಕನ್ನಡ_ನ್ಯೂಸ್ #ಸುದ್ದಿಗಳು

25/02/2026

ಹೊನ್ನವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ & ಜನಪ್ರತಿನಿಧಿಗಳಿಗೆ ಲಗುವಾಗಿ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಹರಿಬಿಟ್ಟು ಅವಮಾನಿಸಿದ ಗ್ರಂಥಪಾಲಕ.

ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಗ್ರಂಥಪಾಲಕರು ಒಬ್ಬರು ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮಸ್ಥರಿಗೆ ಲಗುವಾಗಿ ಮಾತನಾಡುತ್ತಾರೆ ಹಾಗೂ ಗ್ರಂಥಾಲಯದ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದು ಈತನನ್ನು ತಕ್ಷಣವೇ ಗ್ರಂಥಪಾಲಕರ ಹುದ್ದೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಕ್ಕೆ ಗ್ರಾಮದ ಯುವಕರು ಬೀಗ ಹಾಕಿದ್ದಾರೆ.

#ಗ್ರಂಥಾಲಯ #ಹೊನ್ನವಳ್ಳಿ

#ಅರಕಲಗೂಡು #ನ್ಯೂಸ್ #ಅರಕಲಗೂಡು_ನ್ಯೂಸ್ #ಬ್ರೇಕಿಂಗ್_ನ್ಯೂಸ್ #ಹಾಸನ #ಆಕ್ಟೀವ್_ನ್ಯೂಸ್ #ಕನ್ನಡ #ಕನ್ನಡ_ನ್ಯೂಸ್ #ಸುದ್ದಿಗಳು #ಗ್ರಾಮಪಂಚಾಯಿತಿ

25/02/2026

ನಿಮ್ ಅಪ್ಪನದ ಡೇರಿ, ನಿಮ್‌ ಅಪ್ಪನದ ಗ್ರಂಥಾಲಯ, ಗ್ರಂಥಾಲಯಕ್ಕೆ ಬೀಗ ಜಡಿದ ಗ್ರಾಮಸ್ಥರು.

ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಗ್ರಂಥಪಾಲಕರು ಒಬ್ಬರು ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮಸ್ಥರಿಗೆ ಲಗುವಾಗಿ ಮಾತನಾಡುತ್ತಾರೆ ಹಾಗೂ ಗ್ರಂಥಾಲಯದ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದು ಈತನನ್ನು ತಕ್ಷಣವೇ ಗ್ರಂಥಪಾಲಕರ ಹುದ್ದೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಕ್ಕೆ ಗ್ರಾಮದ ಯುವಕರು ಬೀಗ ಹಾಕಿದ್ದಾರೆ.

#ಗ್ರಂಥಾಲಯ #ಹೊನ್ನವಳ್ಳಿ

#ಅರಕಲಗೂಡು #ನ್ಯೂಸ್ #ಅರಕಲಗೂಡು_ನ್ಯೂಸ್ #ಬ್ರೇಕಿಂಗ್_ನ್ಯೂಸ್ #ಹಾಸನ #ಆಕ್ಟೀವ್_ನ್ಯೂಸ್ #ಕನ್ನಡ #ಕನ್ನಡ_ನ್ಯೂಸ್ #ಸುದ್ದಿಗಳು #ಗ್ರಾಮಪಂಚಾಯಿತಿ

ಅರಕಲಗೂಡು ಪಟ್ಟಣದ ಕ್ರಿಸ್ತ ಜ್ಯೋತಿ ಸ್ಕೂಲ್ ರಸ್ತೆಯಲ್ಲಿ ಆಯತಪ್ಪಿ ಹಳ್ಳಕ್ಕೆ ಉರುಳಿದ ಕಾರು. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು. ತಡೆಗೋಡೆ ...
25/02/2026

ಅರಕಲಗೂಡು ಪಟ್ಟಣದ ಕ್ರಿಸ್ತ ಜ್ಯೋತಿ ಸ್ಕೂಲ್ ರಸ್ತೆಯಲ್ಲಿ ಆಯತಪ್ಪಿ ಹಳ್ಳಕ್ಕೆ ಉರುಳಿದ ಕಾರು. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು. ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರ ಒತ್ತಾಯ...

ಅರಕಲಗೂಡಿನ ಶ್ರೀ ರಾಮಭವನದಲ್ಲಿ  ಎಲ್ಲಾ ಸವಿತಾ ಸಮಾಜದ ಬಾಂಧವರಿಗೆ ಆರೋಗ್ಯ ಅರಿವು ಹಾಗೂ ತಪಾಸಣಾ ಶಿಬಿರ ಕಾರ್ಯಕ್ರಮ ಸರ್ಕಾರದ ಆದೇಶದಂತೆ ಹೈ ರಿಸ...
24/02/2026

ಅರಕಲಗೂಡಿನ ಶ್ರೀ ರಾಮಭವನದಲ್ಲಿ ಎಲ್ಲಾ ಸವಿತಾ ಸಮಾಜದ ಬಾಂಧವರಿಗೆ ಆರೋಗ್ಯ ಅರಿವು ಹಾಗೂ ತಪಾಸಣಾ ಶಿಬಿರ ಕಾರ್ಯಕ್ರಮ
ಸರ್ಕಾರದ ಆದೇಶದಂತೆ ಹೈ ರಿಸ್ಕನಲ್ಲಿ ಕೆಲಸ ಮಾಡುವ ಯುನಿ ಸೆಕ್ಸ್ ಸಲೂನ್ ಸ್ಪಾ ಬ್ಯೂಟಿ ಪಾರ್ಲರ್ ಮಸಾಜ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸವಿತಾ ಸಮಾಜದ ಎಲ್ಲಾ ಬಂಧುಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕು ಆಡಳಿತ ಅಧಿಕಾರಿಗಳಾಗಿರುವ ಡಾಕ್ಟರ್ ಪುಷ್ಪಲತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಲತಲಾಂತರದಿಂದ ಸಮಾಜದಲ್ಲಿ ಜನರು ಸ್ವಚ್ಛತೆ ಸುಭ್ರ ವಾಗಿರುವಂತೆ ಸೇವೆ ಸಲ್ಲಿಸುತ್ತಾ ಬಂದಿರುವ ಸಲೂನ್ ಸ್ಪಾ ಬ್ಯೂಟಿ ಪಾರ್ಲರ್ ಹಾಗೂ ಮಸಾಜ್ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಮಾಲೀಕರಿಗೆ ಹೆಚ್ಐವಿ ಏಡ್ಸ್ ಕ್ಷಯ ರೋಗ ಕಾಮಾಲೆ ವೆರಿಕೋಸ್ ಹೀಗೆ ಹಲವಾರು ಕಾಯಿಲೆಗಳ ಕುರಿತು ಅರಿವು ಮೂಡಿಸುವುದು ಹಾಗೂ ಅವರು ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕೆಂದು ಉದ್ಘಾಟನಾ ಪರ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತಸಮಾಲೋಚಕರಾದ ಪರಶುರಾಮ ಶಿರೂರ ಅವರು ಮಾತನಾಡಿ ಇವತ್ತು ಸವಿತಾ ಸಮಾಜದ ಎಲ್ಲ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ ಇವತ್ತು ಇಡೀ ದೇಶದಲ್ಲಿ ಹೈ ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವಂತ ಕಾರ್ಮಿಕರಲ್ಲಿ ನೀವು ಕೂಡ ಒಬ್ಬರು ನಿಮ್ಮ ಆರೋಗ್ಯವು ಅಷ್ಟೇ ಮುಖ್ಯವಾಗಿರುತ್ತದೆ ಅದೇ ರೀತಿಯಾಗಿ ಇಡೀ ದೇಶದಲ್ಲಿ ಹೆಚ್ ಐ ವಿ ಸೋಂಕಿತರ ಸಂಖ್ಯೆ ಕರ್ನಾಟಕ 3ನೇ ಸ್ಥಾನದಲ್ಲಿದೆ ನಮ್ಮ ರಾಜ್ಯದಲ್ಲಿ ಹಾಸನ ಜಿಲ್ಲೆ 13ನೇ ಸ್ಥಾನದಲ್ಲಿದ್ದು 13,000 ಕ್ಕಿಂತ ಹೆಚ್ಚು ಜನ ಜಿಲ್ಲೆಯಲ್ಲಿ ಸೋಂಕಿತರು ಇದ್ದು ಅರಕಲಗೂಡು ಹಾಸನ ಜಿಲ್ಲೆಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ ತಾಲೂಕಿನಲ್ಲಿಯೂ 350 ಕ್ಕಿಂತ ಹೆಚ್ಚು ಜನರು ಎಆರ್‌ಟಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಹಾಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಬೇರೆಬೇರೆ ರಾಜ್ಯಗಳಿಂದ ಆಗಮಿಸಿದಂತ ವಲಸಿಗರಿಂದ ಸೋಂಕಿತ ಪ್ರಕರಣಗಳು ಕಂಡು ಬರುತ್ತಿದ್ದು ಆದ್ದರಿಂದ ಬ್ಯೂಟಿ ಪಾರ್ಲರ್ ಮಸಾಜ್ ಸ್ಪಾ ಸಲೂನ್ ಮುಂತಾದ ಹೈ ರಿಸ್ಕ್ ಕಾರ್ಖಾನೆಗಳಲ್ಲಿ ಅಡಿಕೆ ಫ್ಯಾಕ್ಟರಿ ತಂಬಾಕು ಉತ್ಪಾದನಾ ಫ್ಯಾಕ್ಟರಿ ಜೆಲ್ಲಿ ಫ್ಯಾಕ್ಟರಿಗಳಲ್ಲಿ ಹಾಗೂ ರೋಡ್ ಕೆಲಸ ಮಾಡುವಂತಹ ಕಾರ್ಮಿಕರು ವಿವಿಧ ರೀತಿಯ ಕಾರ್ಮಿಕರನ್ನು ಗುರುತಿಸಿ ಅವರುಗಳಿಗೆ ಆರೋಗ್ಯದ ಅರಿವು ಹಾಗೂ ತಪಾಸಣಾ ಶಿಬಿರವನ್ನು ಕೈಗೊಳ್ಳಲಾಗುತ್ತಿದೆ ಹೆಚ್ಐವಿ ಏಡ್ಸ್ ಹರಡುವಂತ ಮಾರ್ಗಗಳನ್ನ ಹಾಗೂ ಮುನ್ನೆಚ್ಚರಿಕೆ ವಹಿಸಬೇಕಾದಂತ ಕ್ರಮಗಳನ್ನ ಕುರಿತು ಆಪ್ತಸಮಾಲೋಚಕರು ಮಾಹಿತಿಯನ್ನು ಒದಗಿಸಿದರು. ಸುಮಾರು 45ಕ್ಕೂ ಹೆಚ್ಚು ಜನರಿಗೆ ಆರೋಗ್ಯದ ಅರಿವು ಹಾಗೂ ಹೆಚ್ ಐ ವಿ /ಏಡ್ಸ್ ಅಧಿಕ ರಕ್ತದ ಒತ್ತಡ ಮಧುಮೇಹ ಹಾಗೂ ಕ್ಷಯ ರೋಗ ತಪಾಸನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಐಸಿಟಿಸಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞ ಗೌರಮ್ಮ ಹಿರಿಯ ಆರೋಗ್ಯ ನಿರೀಕ್ಷಕರಾದ ಜಯರಾಮ್ ಏನ್ ಸಿ ಡಿ ವಿಭಾಗದ ಆಪ್ತ ಸಮಾಲೋಚಕರಾದ ಉಮೇಶ್ ಶುಶ್ರುಷಕರಾದ ಲಲಿತ ಹಾಗೂ ಪ್ರಕಾಶ್ ಚಂದ್ರಶೇಖರ್ ಹೆಲನ್ ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಕುಮಾರ ತಾಲೂಕಿನ ಅಧ್ಯಕ್ಷರಾದ ಗಿರೀಶ್ ತಾಲೂಕಿನ ಗೌರವಾಧ್ಯಕ್ಷರಾದ ಶ್ರೀನಿವಾಸ ಕಾರ್ಯದರ್ಶಿಯಾದ ರಂಜಿತ್ ಖಜಾಂಚಿಯಾದ ಲಕ್ಷ್ಮಣ್ ಹಾಗೂ ಸವಿತಾ ಸಮಾಜದ ಎಲ್ಲಾ ನಿರ್ದೇಶಕರು ಜಗದೀಶ್ ಸದಾನಂದ ಸವಿತಾ ಸಮಾಜದ ಎಲ್ಲ ಬಾಂಧವರು ಮುಖಂಡರು ಭಾಗವಹಿಸಿದ್ದರು

24/02/2026

ರಾಮನಾಥಪುರ ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್. ತೂಕ ಪರಿಶೀಲನೆ ವೇಳೆ ಅಧಿಕಾರಿಗಳ ಕಳ್ಳಾಟ ಬಯಲು. ಅರಕಲಗೂಡು ತಾಲ್ಲೂಕಿನ ರಾಮನಾಥಪುರ ರಾಗಿ ಖರೀದಿ ಕೇಂದ್ರಕ್ಕೆ ರೈತ ಸಂಘದ ಮುಖಂಡರು ಭೇಟಿ ನೀಡಿ ತೂಕ ಪರಿಶೀಲನೆ ವೇಳೆ ಪ್ರತಿ ಚೀಲಕ್ಕೆ 1 kg ಇಂದ 1.3 kg ವರೆಗೆ ಹೆಚ್ಚುವರಿ ರೈತರಿಂದ ಅನಧಿಕೃತವಾಗಿ ರಾಗಿ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ತಾಲ್ಲೂಕಿನ ರೈತ ಸಂಘ ತೀರ್ವ ವಿರೋಧ ವ್ಯಕ್ತಪಡಿಸಿದ್ದು ಹೆಚ್ಚುವರಿ ರಾಗಿ ಪಡೆಯದಂತೆ ಎಚ್ಚರಿಸಿದರು. ಅಲ್ಲದೇ ರೈತರ ಸೋಗಿನಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಗಿದ್ದು ಯಾವುದೇ ದಳ್ಳಾಳಿಗಳಿಂದ ರಾಗಿ ಖರೀದಿ ಮಾಡದಂತೆ ಕ್ರಮ ವಹಿಸುವಂತೆ ಆಗ್ರಹಿಸಿದರು.

#ರೈತರು #ಕೃಷಿ #ಅನ್ನದಾತ #ರಾಗಿಖರೀದಿಕೇಂದ್ರ #ರಾಮನಾಥಪುರ

#ಅರಕಲಗೂಡು #ನ್ಯೂಸ್ #ಅರಕಲಗೂಡು_ನ್ಯೂಸ್ #ಬ್ರೇಕಿಂಗ್_ನ್ಯೂಸ್ #ಹಾಸನ #ಆಕ್ಟೀವ್_ನ್ಯೂಸ್ #ಕನ್ನಡ #ಕನ್ನಡ_ನ್ಯೂಸ್ #ಸುದ್ದಿಗಳು

Address

Arkalgud Arakalgud Arakalagudu
Hassan
573102

Alerts

Be the first to know and let us send you an email when Active News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Active News 24×7:

Share