22/06/2025
ಹೀಗೆ ಸುಮ್ಮನೆ… ಅಡಿಕೆ ತೊಟದ ಒಳಗೆ ಉಪಬೆಳೆಯಾಗಿ ಐವತ್ತು ವರ್ಷಗಳ ಮೊದಲು ಬಂದಿರೋದು ಕೊಕ್ಕೋ.. 1975 ರ ಅಂದಾಜಿಗೆ ಕ್ಯಾಡ್ಬರಿ ಪ್ರೋತ್ಸಾಹದೊಂದಿಗೆ ಕೊಕ್ಕೋ ಬೆಳೆಸಿದ್ರು. ಆ ಕಾಲಕ್ಕೆ ಕೆಜಿಗೆ ಹದಿನಾಲ್ಕು ರೂಪಾಯಿ ದರದಲ್ಲಿ ಅವರಿಗೆ ಬಹಳ ಆಧಾಯ ಬಂದು ಪ್ರಸಿದ್ದಿಯಾಗಿತ್ತು.
ಅದಕ್ಕೆ ಮೊದಲು ಅಡಿಕೆ ತೋಟದಲ್ಲಿ ಬದಿಯಲ್ಲಿ ತೆಂಗು ಹಾಗೂ ಮಿಶ್ರ ಬೆಳೆಯಾಗಿ ಕದಳಿ ಹಾಗೂ ಮೈಸೂರು ಹಾಗೂ ಅಪರೂಪಕ್ಕೆ ಗಾಳಿ ಬಾಳೆಯ ನಾಟಿ ನಡೆಯುತ್ತಿತ್ತು. ಜತೆಯಲ್ಲಿ ಸಾಧ್ಯವಾದಷ್ಟು ಒಳ್ಳೆಮೆಣಸು.
ಆ ನಂತರ ಬಂದ ಬೆಳೆಗಳಲ್ಲಿ ಕೊಕ್ಕೋ ಮೊದಲನೇಯದ್ದಾಗಿದ್ರೆ ಆ ನಂತರ ವೆನಿಲ್ಲಾ, ಸ್ಟೀವಿಯಾ, ಲವಂಗ, ಜಾಯಿಕಾಯಿ ಆ ನಂತರ ಮಿಶ್ರಬೆಳೆ ಅಥವಾ stand alone ಬೆಳೆಯಾಗಿ ರಬ್ಬರ್, ರಂಬುಟನ್, ಮಾಂಗೋಸ್ಟೀನ್, ಡ್ರಾಗನ್ ಹಣ್ಣು ಬಂದಿದೆ. ಆದರೆ ಈ ಕ್ಷಣದ ವರೆಗೂ ಅಪವಾದಗಳ ಹೊರತು ಪಡಿಸಿ ಕೊಕ್ಕೋ, ರಬ್ಬರ್ ಬಿಟ್ಟು ಬಾಕಿಯಲ್ಲಿ ಬಹಳ ಸಂಪಾಧನೆ ಆದಂತಿಲ್ಲ.
ಕೊಕ್ಕೋ ಸ್ವಭಾವತಃ ಅಡಿಕೆ ತೋಟಕ್ಕೆ ಮ್ಯಾಚ್ ಆಗುವ ಬೆಳೆ. ಅದರ ನಾಟಿ ಹಾಗೂ ಸಾಕಾಣೆ ಬಹಳ ಜಟಿಲ ಏನಲ್ಲ. ಎಕ್ರೆ ತೋಟದಲ್ಲಿ ಅಂದಾಜು 180-200 ಗಿಡ ನೆಡುವುದು ಸಾಧ್ಯ ಹಾಗು ಇಷ್ಟನ್ನು ಬಹಳ ಎಡರುತೊಡರುಗಳಿಲ್ಲದೆ ಕೃಷಿ ಮಾಡಬಹುದು. ಗಿಡ ನೆಟ್ಟು ಒಳ್ಳೇ ಸಾಕಿದರೆ ಮೂರು ವರ್ಷದ ನಂತರ ಬೆಳೆ ಲಭ್ಯ. ಮರದಲ್ಲಿ ನಾಲ್ಕು ಕೆಜಿ ಹಸಿ ಬೀಜ ವಾರ್ಷಿಕ ಪಡೆಯೋದು ಬಹಳ ಕಷ್ಟ ಏನಲ್ಲ. ಬಹಳ ವೈಜ್ನಾನಿಕ ಕೃಷಿ ಮಾಡಿದರೆ ಆರೇಳು ಕೆಜಿಯೂ ಬರುವುದು ಸಾಧ್ಯ.
ಜೂನ್ ತಿಂಗಳ ಬೆಳೆಯ ಸಮಯದಲ್ಲಿ ಮರವೊಂದರಲ್ಲಿ 50-60 ಕಾಯಿಗಳು ದೊರೆಯಬಹುದು. ಜಾಸ್ತಿ ಕಾಯಿಗಳು ಹುಟ್ಟಿದ್ದರೂ ರೋಗ, ಕೊಳೆತ, ಅಳಿಲು ಹೀಗೆ ತೇಮಾನು ಕಳೆದರೆ ಮೇಲಿನ ಸಂಖ್ಯೆ attainable.
ಆರೋಗ್ಯವಂತ ಕೊಕ್ಕೋ ಕಾಯಿ (pod) ಹೇಗೂ ಸರಾಸರಿ 300 ಗ್ರಾಮ್ಸ್ ತೂಗುತ್ತೆ.. 10-12 ಪಾಡ್ ಗಳಲ್ಲಿ ಒಂದು ಕೆಜಿ ಹಸಿಬೀಜ ದೊರೆತುವುದು. ಕೆಜಿಗೆ ಈಗಿನ ದರ 120/ . ಆ ಲೆಕ್ಕದಲ್ಲಿ ಎಕ್ರೆಗೆ ಅಂದಾಜು 800 kg ಕೊಕ್ಕೊ ಬೆಳೆ ಸಾಧ್ಯ. ಅಂದರೆ ಸುಮಾರು 85,000/. ಜೂನ್ ಸಮಯದ ದೊಡ್ಡ ಬೆಳೆ ಇರುವ ಸಮಯದಲ್ಲಿ ಕೊಕ್ಕೋ ಕೊಯಿಲು ಹಾಗು ಬೀಜ ಬಿಡಿಸಲು ಕೆಜಿಗೆ ಅಂದಾಜು 13-15/₹ ಆಳು ಮಜೂರು ಬೇಕಾಗ್ತದೆ. ಮನೆಯೋರೇ ಮಾಡಬಹುದಾದ ಕೆಲಸ ಹಾಗೂ ಬಹಳ ಶ್ರಮದಾಯಕ ಅಲ್ಲ. ಹಾಗಂತ ದೊಡ್ಡ ತೋಟದವರಿಗೆ ಅಸಾಧ್ಯ.
ದೈವಾನುಕೂಲ ಕೂಡಿ ಬಂದರೆ ಮತ್ತೆ ದಶಂಬರದಲ್ಲಿ ಇದರ 25% ಬೆಳೆ ಸಿಗುತ್ತದೆ.
ಹಾಗಂತ ಇದಕ್ಕೆ ಅಳಿಲು ಹಾಗೂ ಮಂಗಗಳ ಬಾದೆ ಇದೆ. ಆದರೆ ದೊಡ್ಡ ತೋಟದಲ್ಲಿ ಅವುಗಳು ತಿನ್ನುವ ಅಂಶ ಶೇಕಡಾವಾರು ಕಡಿಮೆ. ಮಳೆಗಾಲದಲ್ಲಿ ಕೊಳೆರೋಗವೂ ಬರುತ್ತೆ.
ಅದಕ್ಕೆ ಅಡಿಕೆ ತೋಟಕ್ಕೆ ಹಾಕುವಾಗಲೇ ಗೊಬ್ಬರ ಅದರಂತೆಯೇ ಕೊಡಬಹುದು. ಡ್ರಿಪ್ ತೋಟದಲ್ಲಿ ನೀರು ಕೊಡದಿದ್ರೂ ಅದು ನೀರು ಬಳಸಿಕೊಳ್ತದೆ.
ಕೊಕೋದಲ್ಲಿ ದೊಡ್ಡ ಕೆಲಸ ಅಂದರೆ ಅದರ ಗೆಲ್ಲು ಸವರೋದು ಅಥವಾ pruning. ಆಗಷ್ಟ್ ತಿಂಗಳಲ್ಲಿ ಪ್ರೂನಿಂಗ್ ಮಾಡಿದರೆ ಅದು ಬಹಳ ದೊಡ್ಡ ಕೆಲಸ, ಶ್ರಮದಾಯಕ ಹಾಗೂ ಖರ್ಚೂ ಸಾಕಷ್ಟು ಬರ್ತದೆ. ಆದರೆ ಮೂಲದಲ್ಲಿ ಈ ಪ್ರೂನಿಂಗ್ ಯೋಚನೆಯೇ ತಪ್ಪಿದೆ. ಅಂದರೆ ಹೊಸ ಗೆಲ್ಲುಗಳು ಚಿಗುರು ರೂಪದಲ್ಲಿ ಹುಟ್ಟಿದಾಗಲೇ ಅದನ್ನು ಚಿವುಟುವುದು ಬಹಳ ಸುಲಭ ಹಾಗೂ ತಿಂಗಳಿಗೆ ಒಮ್ಮೆ ಮಾಡಬಹುದು. ಆವಾಗ ಮರಕ್ಕೆ stress ಕೂಡ
ಲೇಖನ: Vishweshwara Bhat