16/06/2025
ಗರ್ಭಿಣಿ ಆನೆಗೆ ರೇಡಿಯೋ ಕಾಲರ್
ಮೃತ ಮರಿಯೊಂದಿಗೆ ತಾಯಿ ಆನೆ ರೋದನೆ
ಹಾಸನ: ಬೇಲೂರು ತಾಲ್ಲೂಕಿನ ಜಾಕನಹಳ್ಳಿ ಎಸ್ಟೇಟ್ ನಲ್ಲಿ ಕಾಡಾನೆಯೊಂದು ತನ್ನ ಹೆತ್ತ ಕರುಳಿನ ಸಾವಿನಿಂದ ರೋದಿಸುತ್ತಿರುವ ವಿಡಿಯೋ ಸೆರೆಯಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಆನೆಗೆ ಇತ್ತೀಚೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಆನೆಗಳ ಚಲನವಲನ ಅರಿಯಲು ಅಳವಡಿಸುವ ರೇಡಿಯೋ ಕಾಲರ್ ಕಾಡಾನೆಗಳ ಪ್ರಾಣಕ್ಕೆ ಕುತ್ತು ತರುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ಗರ್ಭಿಣಿ ಎನ್ನುವುದನ್ನು ಅರಿಯದೆ ಅರವಳಿಕೆ ಚುಚ್ಚು ಮದ್ದು ನೀಡಿ ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಈಗ ಆನೆ ಮರಿಗೆ ಜನ್ಮ ನೀಡಿದೆಯಾದರೂ ಮರಿ ಮೃತಪಟ್ಟಿದೆ. ಹೆತ್ತ ಕರುಳಿನೊಂದಿಗೆ ತಾಯಿ ಆನೆ ರೋದಿಸುತ್ತಾ ಓಡಾಡುತ್ತಿರುವ ಆನೆಯ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.