Bhavana Tv Bhatkal

Bhavana Tv Bhatkal North Kanara most popular channel

17/08/2025

ಹೊನ್ಮಾವರ ತಾಲೂಕ ಆಡಳಿತದ ವತಿಯಿಂದ ಸ್ವಾಂತತ್ರ‍್ಯೊತ್ಸವ

17/08/2025

ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆ

17/08/2025

ಪ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (ರಿ), ಕಿಕ್ಕೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

17/08/2025

ಸಡಗರ ಸಂಭ್ರಮದಿAದ ಅದ್ದೂರಿಯಾಗಿ ನಡೆದ ಬೋಳಾರೆ ರಂಗನಾಥ ಸ್ವಾಮಿಯವರ ಬ್ರಹ್ಮರಥೋತ್ಸವ.
ಹರಿದು ಬಂದ ಭಕ್ತ ಸಾಗರ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಕ್ಷೇತ್ರಕ್ಕೆ ಭೇಟಿ.
ಉದ್ಭವ ಬೋಳಾರೇ ರಂಗನಾಥಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ಕೆಲಸ ಮಾಡುವೆ.

17/08/2025

ರೈತರ ಮೇಲೆ ದೌರ್ಜನ್ಯ ಗ್ರಾಮಸ್ಥರಿಂದ ಪ್ರತಿಭಟನೆ

17/08/2025

ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಇ,ಡಿ ದಾಳಿ-ಮೀನುಗಾರಿಕಾ ಸಚಿವ ಮಂಕಾಳು ವೈದ್ಯ

17/08/2025

ತಾಯಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಾಲಯದ ಲೋಕಾರ್ಪಣೆ
ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳು ಜೀವಂತ ಸ್ಮಾರಕಗಳಾಗಿವೆ ಎಂದು ಶಾಸಕ ಹೆಚ್.ಟಿ.ಮಂಜು.

17/08/2025

ಮೈಸೂರು ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ‍್ಯ ದಿನಾಚರಣೆ ಆಚರಣೆ

ಹೆಂಡತಿ ಸಾವಿನಿಂದ ಬೇಸರಗೊಂಡ ಪತಿ ಆತ್ಮಹತ್ಯೆಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಹೊನ್ನಗದ್ದೆಯಲ್ಲಿ, ಹೆಂಡತಿ ಸಾವಿನಿಂದ ಬೇಸರಗೊಂಡಿದ್ದ ವ್ಯಕ್ತಿಯೊ...
17/08/2025

ಹೆಂಡತಿ ಸಾವಿನಿಂದ ಬೇಸರಗೊಂಡ ಪತಿ ಆತ್ಮಹತ್ಯೆ

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಹೊನ್ನಗದ್ದೆಯಲ್ಲಿ, ಹೆಂಡತಿ ಸಾವಿನಿಂದ ಬೇಸರಗೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಮಂಜುನಾಥ ಈರಪ್ಪ ನಾಯ್ಕ (64) ಎಂದು ಗುರುತಿಸಲಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಇವರು ತಮ್ಮ ಹೆಂಡತಿ ನಿಧನದ ಬಳಿಕ ಜೀವನದಲ್ಲಿ ನಿರಾಸೆಗೊಂಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಮನೆಯ ಸಮೀಪದ ಅರಣ್ಯ ಪ್ರದೇಶದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬAಧ ಮೃತರ ಮಗ ಪಾಂಡುರAಗ ನಾಯ್ಕ (38) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಹೊನ್ನಗದ್ದೆಯಲ್ಲಿ, ಹೆಂಡತಿ ಸಾವಿನಿಂದ ಬೇಸರಗೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘ...

ಹಿಂದೂ ಪರ ಹೋರಾಟಗಾರ ಶಂಕರ ಶೆಟ್ಟಿ ನಿಧನಭಟ್ಕಳ: ಸಿಂಡಿಕೇಟ್ ಬ್ಯಾಂಕ್ (ಪ್ರಸ್ತುತ ಕೆನರಾ ಬ್ಯಾಂಕ್)ನ ನಿವೃತ್ತ ಉದ್ಯೋಗಿ, ಹಿಂದೂ ಪರ ಹೋರಾಟಗಾರ,...
17/08/2025

ಹಿಂದೂ ಪರ ಹೋರಾಟಗಾರ ಶಂಕರ ಶೆಟ್ಟಿ ನಿಧನ

ಭಟ್ಕಳ: ಸಿಂಡಿಕೇಟ್ ಬ್ಯಾಂಕ್ (ಪ್ರಸ್ತುತ ಕೆನರಾ ಬ್ಯಾಂಕ್)ನ ನಿವೃತ್ತ ಉದ್ಯೋಗಿ, ಹಿಂದೂ ಪರ ಹೋರಾಟಗಾರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಂಕರ ಶೆಟ್ಟಿ ಅವರು ರವಿವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ನಿದನರಾಗಿದ್ದಾರೆ.
ಹಿಂದೂ ಧರ್ಮ ಮತ್ತು ಸಮಾಜದ ಏಳಿಗೆಯ ಕುರಿತು ಸದಾ ಚಿಂತಿಸುತ್ತಿದ್ದ ಅವರು ಹಿಂದೂ ಸಮಾಜದ ಪ್ರತಿಯೊಂದು ಕೆಲಸದಲ್ಲಿಯೂ ಕೂಡಾ ಮುಂಚೂಣಿಯಲ್ಲಿ ನಿಂತು ಸ್ವತಹ ಮಾಡುತ್ತಿದ್ದರಲ್ಲದೇ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು.
ಆರ್.ಎಸ್.ಎಸ್., ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಪೇಟೆ ಹನುಮಂತ ದೇವಸ್ಥಾನದ ಸದಸ್ಯ, ಮಾರಿಕಾಂಬ ದೇವಸ್ಥಾನದ ಧರ್ಮದರ್ಶಿ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಧರ್ಮದರ್ಶಿ, ಮಣ್ಕುಳಿ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿದ್ದರು. ಡಾ. ಚಿತ್ತರಂಜನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಅವರ ಪ್ರತಿಯೊಂದು ಸಮಾಜ ಸೇವೆಯಲ್ಲಿಯೂ ಜೊತೆಯಾಗಿ ನಿಲ್ಲುತ್ತಿದ್ದದರು. ನಿವೃತ್ತಿಯ ನಂತರ ಪೂರ್ಣಾವಧಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶಂಕರ ಶೆಟ್ಟಿ ಅವರ ನಿದನಕ್ಕೆ ಮಣ್ಕುಳಿ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಗಾಣಿಗ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

ಭಟ್ಕಳ: ಸಿಂಡಿಕೇಟ್ ಬ್ಯಾಂಕ್ (ಪ್ರಸ್ತುತ ಕೆನರಾ ಬ್ಯಾಂಕ್)ನ ನಿವೃತ್ತ ಉದ್ಯೋಗಿ, ಹಿಂದೂ ಪರ ಹೋರಾಟಗಾರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ.....

ಬೋಟ್ ಕ್ಯಾಬಿನ್‌ನಲ್ಲಿ ಮಲಗಿದ್ದ ವ್ಯಕ್ತಿ ಸಾವುಭಟ್ಕಳ: ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ಬೋಟ್ ಕ್ಯಾಬಿನ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು...
17/08/2025

ಬೋಟ್ ಕ್ಯಾಬಿನ್‌ನಲ್ಲಿ ಮಲಗಿದ್ದ ವ್ಯಕ್ತಿ ಸಾವು

ಭಟ್ಕಳ: ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ಬೋಟ್ ಕ್ಯಾಬಿನ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ ಬಂದಿದೆ. ಮೃತರನ್ನು ಛತ್ತೀಸ್‌ಗಢ ಮೂಲದ ಬುಧನ ಸಾಯ್ ತಂದೆ ಜನೇಶ್ವರ ಸಾಯ್ (39) ಎಂದು ಗುರುತಿಸಲಾಗಿದೆ.ಇವರು ಮದ್ಯಪಾನದ ಚಟ ಹೊಂದಿದ್ದರು ಎಂದು ತಿಳಿದುಬಂದಿದೆ.
ಬೋಟ್ ಕ್ಯಾಬಿನ್‌ನಲ್ಲಿ ಮಲಗಿದ್ದ ಇವರನ್ನು ಬೆಳಿಗ್ಗೆ ಎಬ್ಬಿಸಲು ಹೋದಾಗ ಪ್ರತಿಕ್ರಿಯಿಸದೇ ಇರುವುದರಿಂದ ತಕ್ಷಣ ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರಿಶೀಲಿಸಿದ ವೈದ್ಯರು ಈತ ಮೃತಪಟ್ಟಿರುವುದನ್ನು ದೃಢ ಪಡಿಸಿದ್ದಾರೆ.
ಈ ಕುರಿತು ಮೃತನ ಸಹೋದರ ಗೌತಮ ಪೈಂಕರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಭಟ್ಕಳ: ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ಬೋಟ್ ಕ್ಯಾಬಿನ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ ಬಂದಿದೆ...

ಭಟ್ಕಳದಲ್ಲಿ ಬಾಲಕಿಯ ಅಪಹರಣ ಯತ್ನ:  ಇಬ್ಬರು ಆರೋಪಗಳು ಪೊಲೀಸರ ವಶಕ್ಕೆಭಟ್ಕಳ: ಹನೀಫಾಬಾದ್ 1ನೇ ಕ್ರಾಸ್‌ನಿಂದ ಬಾಲಕಿಯೋರ್ವಳನ್ನು ಬಲವಂತವಾಗಿ ವಾ...
17/08/2025

ಭಟ್ಕಳದಲ್ಲಿ ಬಾಲಕಿಯ ಅಪಹರಣ ಯತ್ನ: ಇಬ್ಬರು ಆರೋಪಗಳು ಪೊಲೀಸರ ವಶಕ್ಕೆ

ಭಟ್ಕಳ: ಹನೀಫಾಬಾದ್ 1ನೇ ಕ್ರಾಸ್‌ನಿಂದ ಬಾಲಕಿಯೋರ್ವಳನ್ನು ಬಲವಂತವಾಗಿ ವಾಹನಕ್ಕೆ ಕೂರಿಸಿ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಭಟ್ಕಳ ಗ್ರಾಮೀಣ ಪೊಲೀಸರು ತ್ವರಿತ ಕಾರ್ಯಾಚರಣೆಗೆ ಇಳಿದು ಆರೋಪಿ ಇಬ್ಬರನ್ನು ಬಲೆ ಬೀಸಿ ವಶಕ್ಕೆ ಪಡೆದಿದ್ದಾರೆ.

ಅಪಹರಣಕ್ಕೆ ಮುಂದಾದವರು ಹಾವೇರಿ ಜಿಲ್ಲೆಯ ಶಿವಪುರದ ಆಸೀಫ್ ಜಮಾಲಸಾಬ್ ಹಾಗೂ ಭಟ್ಕಳದ ಜಾಲಿ ತಗ್ಗರಗೋಡ ನಿವಾಸಿ ಮೊಹ್ಮದ್ ಮೋಸಿನ್ ಮೊಹ್ಮದ್ ರಿಜ್ವಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಬುಲೆರೋ ಪಿಕ್ ಅಪ್ ವಾಹನದಲ್ಲಿ ಬಾಲಕಿಯನ್ನು ಕೊಂಡೊಯ್ಯಲು ಯತ್ನಿಸಿದ ಆರೋಪಿಗಳ ವಿರುದ್ಧ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ನಾರಾಯಣ, ಹೆಡ್ ಕಾನ್‌ಸ್ಟೇಬಲ್ ನಾರಾಯಣ ಮತ್ತು ಸಿಬ್ಬಂದಿ ಅಕ್ಷಯಕುಮಾರ ಅವರನ್ನು ಒಳಗೊಂಡ ತಂಡ ಕೇವಲ ಆರು ಗಂಟೆಯೊಳಗೆ ಆರೋಪಿಗಳನ್ನು ಮಾವಿನಗುಂಡಿ ಬಳಿ ಪತ್ತೆಹಚ್ಚಿ ಬಾಲಕಿಯನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಎಸ್‌ಪಿ ದಿಲೀಪನ್, ಗ್ರಾಮೀಣ ಠಾಣಾ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.

ಭಟ್ಕಳ: ಹನೀಫಾಬಾದ್ 1ನೇ ಕ್ರಾಸ್‌ನಿಂದ ಬಾಲಕಿಯೋರ್ವಳನ್ನು ಬಲವಂತವಾಗಿ ವಾಹನಕ್ಕೆ ಕೂರಿಸಿ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಭ.....

Address

Gandinagar
Honavar

Alerts

Be the first to know and let us send you an email when Bhavana Tv Bhatkal posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhavana Tv Bhatkal:

Share

Category