30/07/2018
https://m.facebook.com/story.php?story_fbid=2304377746247016&id=1176722392345896
*ಶ್ರೀ ರಾಮ ಜಯ ರಾಮ ಜಯ ಜಯ ರಾಮ*
*ಶ್ರೀ ಕ್ಷೇತ್ರದಲ್ಲಿ ಮೊಟ್ಟಮೊದಲನೇ ಸಲ ನಡೆಯುವ ಶ್ರಾವಣ ಮಾಸದ ಕಾರ್ಯಕ್ರಮ.*
*ಶ್ರಾವಣ ಮಾಸದ ಮಹತ್ವ.*
*ಪರಶಿವನಿಂದ ಬ್ರಹ್ಮ,ಬ್ರಹ್ಮನಿಂದ ದಕ್ಷ,ದಕ್ಷನಿಂದ ಮನು,ಮನುವಿನಿಂದ ರಾಜರು,ಪ್ರಜೆಗಳು,ಪ್ರಜೆಗಳಲ್ಲಿ, ಸ್ತ್ರೀ-ಪುರುಷರೆಂಬ ಎರಡು ವರ್ಗ, ಪ್ರಜೆಗಳುಸೌಖ್ಯದಿಂದ ಬಾಳಿ ಬದುಕಲೆಂದು ಇಳೆ, ಗಾಳಿ, ಮಳೆ, ನದಿ, ಬೆಟ್ಟ, ಪರ್ವತ, ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಸಕಲ ಸಂಪನ್ಮೂಲಗಳಿಂದ ಈ ಸಷ್ಟಿಯು ಸಮೃದ್ಧವಾಯಿತು.*
ಹೀಗೆ ಜೀವ-ಶಿವರ ಐಕ್ಯತ್ವ ಘಟಿಸುವುದು. ಮತ್ತು ಅತ್ಯಂತ ದು:ಖ ನಿವೃತ್ತಿ, ಪರಮಾನಂದ ಪ್ರಾಪ್ತಿಯಾಗುವುದು. ಇದು ಶ್ರವಣ ಮಾತ್ರದಿಂದ ಘಟಿಸುವುದು. ಅಂದರೆ ಪರೋಕ್ಷವಾಗಿ ಶ್ರಾವಣ-ಶ್ರವಣ-ಆಲಿಸು, ಆಲಿಸಿದಾಗಲೇ ಮುಕ್ತಿ ಎಂದರ್ಥ. ಆದ್ದರಿಂದ ಶ್ರಾವಣದಲ್ಲಿಯ ಶ್ರವಣ ಪದವು ಮೋಕ್ಷದಾಯಕವಾಗಿದೆ.*
*ಇದೇ ಮುಕ್ತಿಯ ಸಾಮ್ರಾಜ್ಯವಾಗಿದೆ. ಆದ್ದರಿಂದ ಶ್ರಾವಣವು ಮುಕ್ತಿಯ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂಬ ಮಾತನ್ನು ಸಮರ್ಥಿಸುವಂತಿದೆ.*
*ಶ್ರಾವಣ ಮಾಸದ ಶನಿವಾರ* ದಂದು ನಡೆಯುವ ಕಾರ್ಯಕ್ರಮಗಳು:
ದಿನಾಂಕ 18: 08: 2018- ಸಹಸ್ರ ತುಳಸಿ ಅರ್ಚನೆ.
(ಸದ್ಭಕ್ತರು ಯತಾನಶಕ್ತಿಯಾಗಿ ತುಳಸಿ ತರಬೇಕು).
*ದಿನಾಂಕ 25: 08: 2018*- ಎಳನೀರು ಅಭಿಷೇಕ.
(ಸದ್ಭಕ್ತರು ಯತಾನಶಕ್ತಿಯಾಗಿ ಎಳನೀರು ತರಬೇಕು)
*ದಿನಾಂಕ 01: 09: 2018-* ಶ್ರೀ ವೀರಾಂಜನೇಯನ ಅಭಿಷೇಕದ ತೀರ್ಥದಿಂದ ಭಕ್ತರಿಗೆ ವಿಶೇಷ ತಿರ್ಥ ಸ್ನಾನ.
(ತೀರ್ಥ ಸ್ನಾನ ಸೇವೆ ಮಾಡಲು ಇಚ್ಛಿಸುವ ಸದ್ಭಕ್ತರು ಬೆಳಿಗ್ಗೆ 9 ರಿಂದ 10 ಗಂಟೆಯ ಒಳಗೆ ಸಾನಿಧ್ಯದಲ್ಲಿಯೇ ರೂ:101ರ ರಸೀದಿ ಪಡೆಯತಕ್ಕದ್ದು).
*ದಿನಾಂಕ 08:09:2018*- ತೈಲ(ಎಳ್ಳೆಣ್ಣೆ) ಅಭಿಷೇಕ ಹಾಗೂ ಹೂವಿನ ಅಲಂಕಾರ.
(ಸದ್ಭಕ್ತರು ಯತಾನಶಕ್ತಿಯಾಗಿ ತೈಲ(ಎಳ್ಳೆಣ್ಣೆ) ತರಬೇಕು)
ಎನ್ನುವ ಒಂದು ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ,
ವಿ.ಸೂ: ಶ್ರಾವಣ ಮಾಸದ ಈ ನಾಲ್ಕು ವಿಶೇಷ ಶನಿವಾರದ ಬೆಳಿಗ್ಗೆ 9.30 ಗಂಟೆಯಿಂದ *ಅಭಿಷೇಕ** ನಡೆಯುವುದು.
ಅಭಿಷೇಕ ಹಾಗೂ ತೀರ್ಥ ಸ್ನಾನದ ಸೇವೆ ಮಾಡಿಸುವವರು ಬೆಳಿಗ್ಗೆ 9.00 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಹಾಜರಿರಬೇಕು.
*ಲಘು ಉಪಹಾರದ ವ್ಯವಸ್ಥೆ ಇರುತ್ತದೆ*
*ಅಂದಾಜು ಖರ್ಚು*
*ಲಘುಉಪಹಾರ* = ರೂ: 4.000/ದಿನಕ್ಕೆ.
*ಕುರ್ಚಿ ಹಾಗೂ ಟೇಬಲ್*
= ರೂ: 2.000 ದಿನಕ್ಕೆ
*ಹೂವಿನ ಅಲಂಕಾರ*
= ರೂ: 3.000/ದಿನಕ್ಕೆ.
*ಎಳನೀರು ಅಭಿಷೇಕ*= ರೂ: 2500/ 108 ಏಳನೀರು.
*ತೈಲ(ಎಳ್ಳೆಣ್ಣೆ) ಅಭಿಷೇಕ* = ರೂ: 1000/ 1ಡಬ್ಬಿ ಎಣ್ಣೆ.
*ಭಕ್ತರು ತಮ್ಮ ಸ್ವ ಇಚ್ಛೆಯಿಂದ ಯಾವುದೇ ಸೇವಾ ವೆಚ್ಚವನ್ನು ವಹಿಸಿಕೊಳ್ಳಬಹುದು ಅಥವಾ ತಮ್ಮ ಯತಾನಶಕ್ತಿಯಾಗಿ ಸೇವೆಗೆ ಸಹಾಯ ಮಾಡಬಹುದು*
ಈ ಕಾರ್ಯಕ್ರಮದಲ್ಲಿ ಹೊಗೆವಡ್ಡಿಯ ಸದ್ಭಕ್ತರಾದ ತಾವೆಲ್ಲರೂ ಹಾಗೂ ತಮ್ಮ ಮಿತ್ರರೊಡಗೂಡಿ ಸೇವೆ ಸಲ್ಲಿಸಿ *ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ*,
*ಶ್ರೀ ವೀರಾಂಜನೇಯನ ಕೃಪೆಗೆ ಪಾತ್ರರಾಗಿ*
ಎಂದು ಹಾರೈಸುವ.
ಉಗ್ರಾಣಿಮನೆ ಕುಟುಂಬದವರು ಹಾಗೂ ಹೊಗೆವಡ್ಡಿ ಪುರದ ಸಮಸ್ತ ನಾಗರೊಂದಿಗೆ *ಧರ್ಮದರ್ಶಿಗಳು.*
ಹಾಗೂ *ಅರ್ಚಕರು*