YSR MEDIA Vijaynagar Updates News paper

YSR MEDIA Vijaynagar Updates News paper social media

ಹೊಸಪೇಟೆ | 1,368 ಕೆಜಿ ಅಕ್ರಮ ಪಡಿತರ ಅಕ್ಕಿ ವಶ..ವಿಜಯನಗರ (ಹೊಸಪೇಟೆ): ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾ...
16/04/2026

ಹೊಸಪೇಟೆ | 1,368 ಕೆಜಿ ಅಕ್ರಮ ಪಡಿತರ ಅಕ್ಕಿ ವಶ..

ವಿಜಯನಗರ (ಹೊಸಪೇಟೆ): ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ.
ಸಂಡೂರು ರಸ್ತೆಯ ಎಲ್.ಎಫ್.ಎಸ್ ಶಾಲೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಸಾಗಾಣಿಕೆಗೆ ಸಿದ್ಧತೆ ನಡೆಸುತ್ತಿರುವ ಕುರಿತು ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಆಹಾರ ನಿರೀಕ್ಷಕರು ಎ.14ರಂದು ದೂರು ನೀಡಿದ್ದರು.
ಈ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿ, 4 ಚಕ್ರದ ಸರಕು ಸಾಗಣೆ ವಾಹನದಲ್ಲಿ ಇರಿಸಲಾಗಿದ್ದ 36 ಚೀಲಗಳಲ್ಲಿ ಒಟ್ಟು 1,368 ಕೆ.ಜಿ ಪಡಿತರ ಅಕ್ಕಿಯನ್ನು ಪತ್ತೆಹಚ್ಚಿದರು. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ 30,944 ರೂ. ಎಂದು ತಿಳಿದುಬಂದಿದೆ.
ಅಕ್ಕಿ ಸಾಗಾಣಿಕೆಗೆ ಬಳಸಲಾಗುತ್ತಿದ್ದ ವಾಹನವನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂ. 41/26 ಅಡಿಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಪಡಿತರ ವಸ್ತುಗಳ ಸಂಗ್ರಹ ಮತ್ತು ಸಾಗಾಣಿಕೆಯನ್ನು ತಡೆಯಲು ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ವರ್ಷದ ಜನ್ಮ...
14/04/2026

ಸಮಾಜ ಕಲ್ಯಾಣ ಇಲಾಖೆಯು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಅಂಬೇಡ್ಕರ್ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಮಾಜಿ ಸಚಿವ ಹೆಚ್. ಆಂಜನೇಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಮಧುಸೂಧನ್ B K ರಾಜ್ಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರ ವಿಭಾಗ &
Social Media Incharge
























ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್‌ ಸ್ಥಳದಲ್ಲೇ ಸಾವುಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ತಡರಾತ್ರಿ ನಡೆದ ...
12/04/2026

ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್‌ ಸ್ಥಳದಲ್ಲೇ ಸಾವು

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್ (40) ದಾರುಣವಾಗಿ ಮೃತಪಟ್ಟಿದ್ದಾರೆ.

ನಿನ್ನೆ ಕೆಲಸ ಮುಗಿಸಿಕೊಂಡು ಕುಶಾಲನಗರದಿಂದ ತಮ್ಮ ಸ್ವಗ್ರಾಮ ಹೊಸಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಹರೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹಲವು ಕನ್ನಡ ಸಿನಿಮಾಗಳು ಹಾಗೂ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಹರೀಶ್ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.

ಕೊಪ್ಪಳದಲ್ಲೂ 'ಲವ್ ಜಿಹಾದ್': ಮುಸ್ತಫಾ ಮೊಬೈಲ್‌ನಲ್ಲಿ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ.! ಎಸ್‌ಪಿಗೆ ದೂರು...ಕೊಪ್ಪಳದಲ್ಲಿ ನರ್ಸಿಂಗ್ ...
11/04/2026

ಕೊಪ್ಪಳದಲ್ಲೂ 'ಲವ್ ಜಿಹಾದ್': ಮುಸ್ತಫಾ ಮೊಬೈಲ್‌ನಲ್ಲಿ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ.! ಎಸ್‌ಪಿಗೆ ದೂರು...

ಕೊಪ್ಪಳದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೊಂದಿಗೆ ಓಡಾಡುತ್ತಿದ್ದ ಮುಸ್ಲಿಂ ಯುವಕನನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಆಕ್ಷೇಪಾರ್ಹ ವಿಡಿಯೋಗಳು ಪತ್ತೆಯಾಗಿದ್ದು, ವ್ಯವಸ್ಥಿತ ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

ಕೊಪ್ಪಳ: ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣವೊಂದು ಭಾರಿ ಸಂಚಲನ ಮೂಡಿಸಿದೆ. ನರ್ಸಿಂಗ್ ಓದುತ್ತಿದ್ದ ಹಿಂದೂ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಆರೋಪದ ಮೇಲೆ ಮುಸ್ಲಿಂ ಯುವಕನೋರ್ವನನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಆರೋಪಿತ ಯುವಕನ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಆಕ್ಷೇಪಾರ್ಹ ವಿಡಿಯೋಗಳು ಪತ್ತೆಯಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಘಟನೆಯ ಹಿನ್ನೆಲೆ:
ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಫಾ ಎಂಬ ಯುವಕ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಕುಷ್ಟಗಿ ತಾಲೂಕಿನ ಗ್ರಾಮವೊಂದರ ಹಿಂದೂ ವಿದ್ಯಾರ್ಥಿನಿ ಕೊಪ್ಪಳದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ಜೊತೆ ಮುಸ್ತಫಾ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಇತ್ತೀಚೆಗೆ ಕೊಪ್ಪಳ ನಗರದಲ್ಲಿ ಇವರಿಬ್ಬರೂ ಜೊತೆಯಾಗಿ ಓಡಾಡುತ್ತಿದ್ದ ವೇಳೆ ಸ್ಥಳೀಯ ಹಿಂದೂ ಯುವಕರ ಕಣ್ಣಿಗೆ ಬಿದ್ದಿದ್ದಾರೆ. ಅನುಮಾನಗೊಂಡ ಯುವಕರು ಮುಸ್ತಫಾನನ್ನು ತಡೆದು ವಿಚಾರಣೆ ನಡೆಸಿದ್ದಾರೆ.

ಮೊಬೈಲ್‌ನಲ್ಲಿ ಪತ್ತೆಯಾದ ಅಶ್ಲೀಲ ವಿಡಿಯೋಗಳು:

ಹಿಂದೂ ಯುವಕರು ಮುಸ್ತಫಾನ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಸತ್ಯಾಂಶಗಳು ಹೊರಬಂದಿವೆ ಎನ್ನಲಾಗಿದೆ. ಮುಸ್ತಫಾನ ಮೊಬೈಲ್‌ನಲ್ಲಿ ಕೇವಲ ಈ ವಿದ್ಯಾರ್ಥಿನಿ ಮಾತ್ರವಲ್ಲದೆ, ಜಿಲ್ಲೆಯ ಹಲವಾರು ಹಿಂದೂ ಯುವತಿಯರ ಫೋಟೋಗಳು ಮತ್ತು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಈತ ‘ಮಟ್ಕಾ’ ಎಂಬ ಅಕ್ರಮ ಜೂಜಾಟದ ದಂಧೆಯಲ್ಲೂ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ. ವಿಚಾರಣೆ ನಡೆಯುತ್ತಿದ್ದಂತೆಯೇ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮುಸ್ತಫಾ ತನ್ನ ಮೊಬೈಲ್ ಅನ್ನು ‘ಫ್ಯಾಕ್ಟರಿ ರಿಸೆಟ್’ (Reset) ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ಠಾಣೆ ಎದುರು ಹೈಡ್ರಾಮಾ
ಯುವಕನ ಕೃತ್ಯದಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಆತನನ್ನು ಹಿಡಿದು ನಗರ ಪೊಲೀಸ್ ಠಾಣೆಗೆ ಕರೆತಂದರು. ಈ ವೇಳೆ ಠಾಣೆಯ ಮುಂದೆ ನೂರಾರು ಹಿಂದೂ ಯುವಕರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಿಚಾರಣೆ ವೇಳೆ ಮುಸ್ತಫಾ, ‘ನಾನು ಆ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಮತ್ತು ಈಗಾಗಲೇ ಮದುವೆಯಾಗಿದ್ದೇನೆ’ ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಇದು ವ್ಯವಸ್ಥಿತ ಲವ್ ಜಿಹಾದ್ ಕೃತ್ಯ ಎಂದು ಹಿಂದೂ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿವೆ.

ಪ್ರಕರಣದ ಗಂಭೀರತೆಯನ್ನು ಅರಿತು ವಿಶ್ವ ಹಿಂದೂ ಪರಿಷತ್ (VHP) ಜಿಲ್ಲಾಧ್ಯಕ್ಷರಾದ ಡಾ. ಸಂಗಮೇಶ ಹಿರೇಮಠ್ ಅವರ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರನ್ನು ಭೇಟಿಯಾದರು. ಮುಸ್ತಫಾ ಬಳಸುತ್ತಿದ್ದ ಎರಡು ಮೊಬೈಲ್ ಫೋನ್ ಇನ್ನುಳಿದ ದಾಖಲೆಗಳನ್ನು ಎಸ್‌ಪಿ ಅವರಿಗೆ ಹಸ್ತಾಂತರಿಸಿದ ಮುಖಂಡರು, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದರು.

ಹಿಂದೂ ಯುವತಿಯರ ಟಾರ್ಗೆಟ್
‘ಇದು ಕೇವಲ ವೈಯಕ್ತಿಕ ಪ್ರೇಮ ಪ್ರಕರಣವಲ್ಲ, ಇದೊಂದು ದೊಡ್ಡ ಜಾಲವಾಗಿರುವ ಶಂಕೆ ಇದೆ. ಮುಸ್ತಫಾ ಹಲವು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿರುವ ಸಾಧ್ಯತೆ ಇದೆ. ಆತನ ಮೊಬೈಲ್‌ನಿಂದ ಡಿಲೀಟ್ ಆಗಿರುವ ಡೇಟಾವನ್ನು ರಿಕವರಿ ಮಾಡಬೇಕು ಮತ್ತು ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಡಾ. ಸಂಗಮೇಶ ಹಿರೇಮಠ್ ಆಗ್ರಹಿಸಿದ್ದಾರೆ.

ಕೊಪ್ಪಳದಲ್ಲಿ ಬಿಗುವಿನ ವಾತಾವರಣ
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮುಸ್ತಫಾನನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಿಂದಾಗಿ ಕೊಪ್ಪಳ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
#

ಆಸ್ತಿ ವಿವಾದಕ್ಕೆ ಸಹೋದರನ ಕೊಲೆ: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ..!! ಕಾರವಾರ,ಏ.11:- ಆಸ್ತಿ ಹಂಚಿಕೆ ವಿಚಾರವಾಗಿ ನಡೆದ ಸಹೋದರ...
11/04/2026

ಆಸ್ತಿ ವಿವಾದಕ್ಕೆ ಸಹೋದರನ ಕೊಲೆ: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ..!!

ಕಾರವಾರ,ಏ.11:- ಆಸ್ತಿ ಹಂಚಿಕೆ ವಿಚಾರವಾಗಿ ನಡೆದ ಸಹೋದರನ ಕೊಲೆ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಅಕ್ಷಯ್, ಪಾಂಡುರಂಗ ಕೀರಪ್ಪ ಕಿತ್ತೂರಕರ್ ಹಾಗೂ ಲತಾ ತುಳಸಾಯಿ ಶಿಕ್ಷೆಗೆ ಗುರಿಯಾದವರು. ಹಳಿಯಾಳ ತಾಲೂಕಿನ ಬಿದ್ರಳ್ಳಿಯ ನಿವಾಸಿ ಕೇಶವ ಪಾಂಡುರಂಗ ಕಿತ್ತೂರಕರ್ ಅವರು ಆಸ್ತಿ ಪಾಲು ಕೇಳಿದ ಹಿನ್ನೆಲೆ, 2019ರ ಅಕ್ಟೋಬರ್ 15ರಂದು ಅವರನ್ನು ಕೊಲೆ ಮಾಡಲಾಗಿತ್ತು.

ಈ ಕೊಲೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ವಾದ ಮಂಡಿಸಿದ್ದರು.

ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಕಿರಣ ಕಿಣಿ, ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಮುಂದಿನ ದಿನಗಳಲ್ಲಿ 1000 ಸಬ್ ಇನ್ಸೆಪೆಕ್ಟರ್, 8000 ಕಾನ್ಸ್ಟೇಬಲ್ ಗಳ ನೇಮಕ:ಗೃಹ ಸಚಿವ ಪರಮೇಶ್ವರ್ಪೊಲೀಸ್ ಠಾಣೆಗಳು ಜನಸ್ನೇಯಾಗಿರಲಿಬೆಂಗಳೂರು ...
10/04/2026

ಮುಂದಿನ ದಿನಗಳಲ್ಲಿ 1000 ಸಬ್ ಇನ್ಸೆಪೆಕ್ಟರ್, 8000 ಕಾನ್ಸ್ಟೇಬಲ್ ಗಳ ನೇಮಕ:ಗೃಹ ಸಚಿವ ಪರಮೇಶ್ವರ್

ಪೊಲೀಸ್ ಠಾಣೆಗಳು ಜನಸ್ನೇಯಾಗಿರಲಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಏ. 09:- ಪೊಲೀಸ್ ಇಲಾಖೆಯಲ್ಲಿ 1000 ಸಬ್ ಇನ್ಸ್ಪೆಕ್ಟರ್ ಹಾಗೂ 8000 ಕಾನ್ಸ್ಟೇಬಲ್ ಗಳನ್ನು ಆದಷ್ಟು ಶೀಘ್ರ ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದರು.

ದೇವನಹಳ್ಳಿ ಟೌನ್ ನಲ್ಲಿ ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯಿಂದ ಸಿಎಸ್ಆರ್ ಅನುದಾನದಡಿ ನಿರ್ಮಿಸಲಾಗಿರುವ ದೇವನಹಳ್ಳಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ದೇವನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಪಿಎಸ್ಐ ಹಗರಣವನ್ನು ಬಗೆಹರಿಸಿ ಈಗ 545 ಜನ ತರಬೇತಿ ಪಡೆದು ಕೆಲಸಕ್ಕೆ ಸೇರಿದ್ದಾರೆ. ಇನ್ನು ಸಬ್ ಇನ್ಸ್ಪೆಕ್ಟರ್ ಗಳ ನೇಮಕ ಹಾಗೂ ಕಾನ್ಸ್ಟೇಬಲ್ ಗಳನ್ನು ನೇಮಕಕ್ಕೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದು, ಹಣಕಾಸು ಇಲಾಖೆಯು ಅನುಮೊದಿಸಿದ್ದು ಮುಂದಿನ ದಿನಗಳಲ್ಲಿ ನೇಮಕ ಮಾಡಲಾಗುವುದು ಎಂದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಕೋಮುಗಲಭೆಗಳಾಗಿಲ್ಲ ಕರಾವಳಿ ಭಾಗದಲ್ಲಿಯೂ ಕೂಡ ಗಲಾಟೆ ಆಗಿಲ್ಲ. ಸಬ್ ಇನ್ಸ್ಪೆಕ್ಟರ್ ವರ್ಗಾವಣೆಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ. ಕಡ್ಡಾಯವಾಗಿ ಎರಡು ವರ್ಷ ಪೊರೈಸಲೇಬೇಕು.

ಪೊಲೀಸ್ ಇಲಾಖೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಪೊಲೀಸ್ ಗೃಹ ಎಂಬ ಯೋಜನೆ ಯಿಂದ ಸುಮಾರು 40% ಸಿಬ್ಬಂದಿ, ಪೊಲೀಸರಿಗೆ ಮನೆ ಕಟ್ಟಿಕೊಟ್ಟಿದ್ದೀವಿ, ಒಂದು ಅಪಾರ್ಟ್ಮೆಂಟ್ಗೆ 38 ಲಕ್ಷ ಖರ್ಚು ಮಾಡಿ ಮನೆ ನಿರ್ಮಿಸಲಾಗಿದೆ. ಇನ್ನಷ್ಟು ಮನೆಗಳನ್ನು ಕಟ್ಟಲಿದ್ದೇವೆ ಎಂದು ಹೇಳಿದರು.

ಪೋಲಿಸ್ ಇಲಾಖೆ ಬಹಳ ಶಿಸ್ತು ಬದ್ಧ ಇಲಾಖೆ ಕರ್ನಾಟಕ ಪೊಲೀಸ್ ಇಲಾಖೆಗೆ ಒಂದು ಇತಿಹಾಸ ಇದೆ. ಇಡೀ ದೇಶದಲ್ಲಿ ಸಂಯಮದಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆ ಇಡೀ ದೇಶದಲ್ಲಿ ಯಾವುದಾದರೂ ಇದೆ ಎಂದರೆ ಅದು ಕರ್ನಾಟಕ ಪೊಲೀಸ್. ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ ಇಡೀ ದೇಶದಲ್ಲಿ ನ್ಯಾಯವನ್ನು ಜರೂರಾಗಿ ಒದಗಿಸುವುದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗ ಸಾಕಷ್ಟು ಭೂಮಿ ಬೆಲೆ ಜಾಸ್ತಿ ಆಗಿದೆ. ರಿಯಲ್ ಎಸ್ಟೇಟ್ ದಂಧೆ ಬಗ್ಗೆ ಸಂಸದರು ಪ್ರಸ್ತಾಪಿಸಿದ್ದಾರೆ. ನಾನು ಅನೇಕ ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ, ಯಾವ ಅಧಿಕಾರಿಯೂ ಕೂಡ ಪೊಲೀಸ್ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಬಾರದು. ಯಾರಾದರೂ ಪೊಲೀಸ್ ಸ್ಟೇಷನ್ ಗೆ ಬಂದಾಗ ಎಫ್ ಐ ಆರ್ ದಾಖಲಿಸಿ ಅವರಿಗೆ ನ್ಯಾಯ ಒದಗಿಸಿ ಕೊಡುವುದು ಬಿಟ್ಟರೆ ಪೊಲೀಸ್ ಸ್ಟೇಷನ್ನಲ್ಲಿ ಕುಳಿತುಕೊಂಡು ದಂಧೆ ಬಗ್ಗೆ ಮಾತನಾಡಿ ಹಣ ವಸೂಲಿ ಮಾಡುವುದು ಆಗಬಾರದು ಎಂದು ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದರು.

ಪ್ರೆಸ್ಟೀಜ್ ಕಂಪನಿಯವರು ಸಿಎಸ್ಆರ್ ಅನುದಾನದಲ್ಲಿ ಬಹಳ ಸುಂದರವಾದ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದಾರೆ. ದೇಶದಲ್ಲಿಯೇ ಮಾದರಿ ಪೊಲೀಸ್ ಕಟ್ಟಡ ಎಂದರೆ ತಪ್ಪಾಗಲಾರದು. ವಿನ್ಯಾಸವು ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ. ಸುಸಜ್ಜಿತ ಕಟ್ಟಡದಲ್ಲಿ ಜನಸ್ನೇಹಿ ಕೆಲಸಗಳು ಆಗಬೇಕು. ಸಾರ್ವಜನಿಕರು ಪೊಲೀಸ್ ಸ್ಟೇಷನ್ ಗೆ ಬಂದಾಗ ಅವರ ಜೊತೆ ಸರಿಯಾಗಿ ವರ್ತಿಸಿ, ಭಾಷೆ ಬದಲಾವಣೆ ಮಾಡಿಕೊಳ್ಳಿ ಎಂದು ಹಲವು ಬಾರಿ ಹೇಳುತ್ತಾ ಬಂದಿದ್ದೇನೆ. ಅದೇ ರೀತಿಯ ಜನಸ್ನೇಹಿ ಆಡಳಿತ ನೀಡಬೇಕು ಎಂದರು.

ದೇವನಹಳ್ಳಿಯ ಆವತಿಯಲ್ಲಿ ಭಾರತ ಮೀಸಲು ಪಡೆ ಆವತಿ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು ಶಾಂತಿಯನ್ನು ಕಾಪಾಡಲು ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಕೆಲಸ ನಿರ್ವಹಿಸಲು ರಿಸರ್ವ್ ಪೊಲೀಸನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ 14 ಮೀಸಲು ಪೊಲೀಸ್ ಪಡೆ ಇದ್ದು, ಬೆಂಗಳೂರು ದಕ್ಷಿಣ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಆವತಿ ಬಳಿ ಮೀಸಲು ಪಡೆ ಘಟಕ ಮಾಡಲಾಗುತ್ತಿದೆ. ಇದು 568 ಕೋಟಿ ರೂಗಳ ಯೋಜನೆ. 1000 ಕ್ಕು ಹೆಚ್ಚು ಸಿಬ್ಬಂದಿ ಇಲ್ಲಿ ತರಬೇತಿ ಪಡೆಯಲಿದ್ದಾರೆ. ಹಂತ ಹಂತವಾಗಿ ಮಾಡಲಾಗುವುದು. ಇಂದು 30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಇದು ಒಂದು ಪ್ರತಿಷ್ಠಿತ ಮೀಸಲು ಘಟಕ ಆಗಲಿದೆ ಎಂದರು.

*ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ* ಪ್ರೆಸ್ಟೀಜ್ ಕಂಪನಿಯವರು ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಿದೆ. ಜಿಲ್ಲೆಯಲ್ಲಿ ಸಿಎಸ್ಆರ್ ಅನುದಾನದಲ್ಲಿ ಶಾಲಾ ಕಾಲೇಜು ಕಟ್ಟುತ್ತಿದ್ದಾರೆ. ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದು, ಉದ್ಯೋಗ ಒದಗಿಸುವುದು ನಮ್ಮ ಆದ್ಯತೆ ಆಗಿರಬೇಕು. ಜಿಲ್ಲೆಯಲ್ಲಿರುವ ಕಂಪನಿಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿ. ಸಾಕಷ್ಟು ರೈತಾಪಿ ಕುಟುಂಬಗಳು ಕೈಗಾರಿಕೆಗಳಿಗೆ ಭೂಮಿ ನೀಡಿದ್ದು ಅಂತಹ ಕುಟುಂಬಗಳ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದರೆ ಅನುಕೂಲವಾಗಲಿದೆ ಎಂದರು.

ಪೊಲೀಸ್ ಠಾಣೆಗಳು ಸದಾ ಜನಸ್ನೇಹಿಯಾಗಿರಬೇಕು. ಯಾರಾದರೂ ಪೊಲೀಸ್ ಸ್ಟೇಷನ್ ಗೆ ಬಂದು ದೂರು ಕೊಟ್ಟಲ್ಲಿ ಅವರನ್ನ ಸಂಯಮದಿಂದ ವರ್ತಿಸಿ ಪೊಲೀಸ್ ಸ್ಟೇಷನ್ನಲ್ಲಿ ಬಗೆಹರಿಸುವಂತ ಸಮಸ್ಯೆಗಳಿದ್ದಲ್ಲಿ ಅಲ್ಲೇ ಬಗೆಹರಿಸಿ ಅವರನ್ನು ಕಳಿಸಿಕೊಡುವುದು ಉತ್ತಮ. ತೀರ ಅನಿವಾರ್ಯವಾದಲ್ಲಿ ಮಾತ್ರ ಎಫ್ ಐ ಆರ್ ದಾಖಲಿಸಿ. ಇಲ್ಲವಾದಲ್ಲಿ ಅವರು ಪೊಲೀಸ್ ಸ್ಟೇಷನ್,ಕೋರ್ಟ್ ಎಂದು ಅಲೆಯುತ್ತಾರೆ. ಇದರಿಂದ ಗ್ರಾಮಗಳಲ್ಲಿ ಮನಸ್ತಾಪಗಳು ಹೆಚ್ಚಾಗಿ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದರಾದ ಡಾ. ಕೆ.ಸುಧಾಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಡಾ. ಕೆಎನ್ ಅನುರಾಧ, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಪ್ರೆಸ್ಟಿಜ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥರಾದ ನದೀಮ್ ಮತ್ತು ನಹೀಮ್ ರವರು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ,ಬಯಪ ಅಧ್ಯಕ್ಷರಾದ ಶಾಂತಕುಮಾರ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಹೊಸಪೇಟೆ ತಹಶಿಲ್ದಾರ್, ಹೊಸಪೇಟೆ ಇಓ, ಪಿಡಿಓ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಕೃತ ದೂರು ದಾಖಲು.! ಮೂವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಮೋಟ...
10/04/2026

ಹೊಸಪೇಟೆ ತಹಶಿಲ್ದಾರ್, ಹೊಸಪೇಟೆ ಇಓ, ಪಿಡಿಓ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಕೃತ ದೂರು ದಾಖಲು.!

ಮೂವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಮೋಟೋ ಕೇಸ್ ದಾಖಲು

ಹೊಸಪೇಟೆ : ವಿಜಯನಗರ ಜಿಲ್ಲೆ ಮತ್ತು ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿನ ಹಂಪಮ್ಮ ಎಂಬ ಮಹಿಳೆ ಜೀವಂತವಾಗಿ ಇದ್ದರೂ ಆಕೆ ಸತ್ತಿದ್ದಾಳೆ ಎಂದು ಆಧಾರ್ ಕಾರ್ಡ್ ರದ್ದು ಮಾಡಿದ ಪ್ರಕಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಸ್ವಯಂಕೃತ ದೂರು ದಾಖಲಿಸಿಕೊಂಡು ಮೂವರು ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದಾರೆ.

ಹೊಸಪೇಟೆ ತಹಶಿಲ್ದಾರ್, ಇಓ, ಗ್ರಾ.ಪಂ ಪಿಡಿಓ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಕೃತ ದೂರು ದಾಖಲಾಗಿದೆ.

ಸತ್ತ ಮಹಿಳೆ ಜೀವಂತ:

ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಇದು ಸಾಮಾನ್ಯ ಲೋಪವಲ್ಲ. ಬದಲಿಗೆ ಸಂವಿಧಾನದ ಅನುಚ್ಛೇದ 14, (ಸಮಾನತೆ) 21, ಜೀವಿಸುವ ಹಕ್ಕು, 300ಎ ಆಸ್ತಿಹಕ್ಕು ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂಬುದು ಉಪಲೋಕಾಯುಕ್ತರ ಸ್ಪಷ್ಟ ನಿಲುವಾಗಿದೆ. ಬಡ ಮಹಿಳೆ ಬದುಕಿದ್ದಾಗಲೇ ಮೃತ ಎಂದು ದಾಖಲೆ ಸಮೇತ ಕಂಡು ಬಂದಿದೆ. ಇದು ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅಸಡ್ಡೆಗೆ ಸಾಕ್ಷಿಯಾದ ಅಭಿಪ್ರಾಯ ಆಗಿದೆ. ಜೀವಂತ ಮಹಿಳೆಯ ಆಧಾರ್ ರದ್ದು, ಸತ್ತಿರುವ ಮಹಿಳೆ ಜೀವಂತ ಇಟ್ಟಿರುವ ಬಗ್ಗೆ ಪೂರಕ ದಾಖಲೆ ಸಮೇತ ಮೇ.20ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಕಳೆದ ಎರಡು ವರ್ಷದಿಂದ ಮಹಿಳೆ ಹಂಪಮ್ಮ ಅವರ ಆಧಾರ್ ನಲ್ಲಿ ಡೆತ್ ಅಂತ ನಮೂದು ಮಾಡಿದ್ರಿಂದ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಿಂದ ವಂಚಿತ ಆಗಿದ್ದಾಳೆ. ಈ ಹಣ ಸಾವನ್ನಪ್ಪಿರುವ ಇನ್ನೊಬ್ಬ ಹಂಪಮ್ಮ ಅವರ ಖಾತೆಗೆ ಜಮೆ ಆಗಿದೆ ಅನ್ನೋ ಅನುಮಾನ ಇದೆ. ಇದರ ಬಗ್ಗೆಯೂ ಕೂಲಂಕುಷ ತನಿಖೆ ಆಗಬೇಕು ಅಂತ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಏನೇ ಹೇಳಿ ಅಧಿಕಾರಿಗಳಿಗೆ ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಅದೇ ಸರ್ಕಾರಿ ಅಧಿಕಾರಿಗಳು ಬಡ ಮಹಿಳೆಯ ಬಾಳಲ್ಲಿ ಬಿರುಗಾಳಿ ಸೃಷ್ಟಿಸಿರೋದು ನಿಜಕ್ಕೂ ಶೋಚನೀಯ ಸಂಗತಿ. ಅತ್ತ ಬಡ ಮಹಿಳೆಯ ಬೆನ್ನಿಗೆ ನಿಂತ ಉಪಲೋಕಾಯುಕ್ತ ಬಿ.ವೀರಪ್ಪಗೆ ಕುಟುಂಬಸ್ಥರು ಧನ್ಯವಾದ ಹೇಳಿದ್ದಾರೆ.

ಹೊಸಪೇಟೆ: ಖಾಸಗಿ ಏಜೆನ್ಸಿ ಕಳ್ಳಾಟ..! ಸರ್ಕಾರ ಹಣ ಕೊಟೂ ಸಿಬ್ಬಂದಿಗೆ ಕೊಡದೇ ವಂಚನೆ ಮಾಡ್ತಿದ್ಯಾ?ಹೊಸಪೇಟೆ : ಸಾರಿಗೆ ನಿಗಮದ 9 ಜಿಲ್ಲೆಗಳ ಹೊರಗ...
10/04/2026

ಹೊಸಪೇಟೆ: ಖಾಸಗಿ ಏಜೆನ್ಸಿ ಕಳ್ಳಾಟ..! ಸರ್ಕಾರ ಹಣ ಕೊಟೂ ಸಿಬ್ಬಂದಿಗೆ ಕೊಡದೇ ವಂಚನೆ ಮಾಡ್ತಿದ್ಯಾ?

ಹೊಸಪೇಟೆ : ಸಾರಿಗೆ ನಿಗಮದ 9 ಜಿಲ್ಲೆಗಳ ಹೊರಗುತ್ತಿಗೆ ನೌಕರರ ಜೀವನದ ಜೊತೆ ಖಾಸಗಿ ಏಜೆನ್ಸಿ ಆಟ ಆಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಕಷ್ಟಪಟ್ಟು ದುಡಿಯುವ ಸಾರಿಗೆ ಹೊರಗುತ್ತಿಗೆ ನೌಕರರ ದುಸ್ಥಿತಿ ಹೇಳತೀರದಾಗಿದೆ. ದಿನಕ್ಕೆ ಸಾವಿರಾರು ಕಿಮೀ, ಬಸ್ ಓಡಿಸೋ ಸಾರಿಗೆ ಹೊರಗುತ್ತಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಆಗುತ್ತಿಲ್ಲ ಎನ್ನಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ರೂ ಕಳೆದ ಮೂರು ವರ್ಷಗಳಿಂದ ಖಾಸಗಿ ಏಜೆನ್ಸಿ ಹೊರಗುತ್ತಿಗೆ ನೌಕರರ PF ಹಣವನ್ನೇ ಕಟ್ಟಿಲ್ಲ ಎನ್ನಲಾಗಿದೆ.ವಿಜಯನಗರ ಜಿಲ್ಲೆಯೊಂದರಲ್ಲೇ 128 ಸಾರಿಗೆ ಹೊರಗುತ್ತಿಗೆ ನೌಕರರಿಗೆ ಕಳೆದ ಮೂರು ವರ್ಷಗಳಿಂದ PF, ತುಂಬಿಲ್ಲ. ಕೊಡುವ ಸಂಬಳ ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ವಿಜಯನಗರ ಜಿಲ್ಲೆಯ ಹೊಸಪೇಟೆ 28, ಕೂಡ್ಲಿಗಿ 28, ಹೂವಿನ ಹಡಗಲಿ 30, ಹಗರಿಬೊಮ್ಮನಹಳ್ಳಿ 24 ಸಾರಿಗೆ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ನೌಕರರ ಖಾಸಗಿ ಏಜೆನ್ಸಿ ಆಟ ಆಡುತ್ತಿದೆ. ಸರಿಯಾದ ಸಮಯಕ್ಕೆ ಸಂಬಳ ನೀಡದೇ ಇದ್ರೆ, ಬಸ್‌ ಡ್ರೈವಿಂಗ್ ಮಾಡೋದನ್ನ ಬಂದ್ ಮಾಡುತ್ತೇವೆ ಅಂತ ಏಜೆನ್ಸಿ ಮೂಲಕ ಕೆಲಸ ಮಾಡುವ ಚಾಲಕರು ಎಚ್ಚರಿಕೆ ಕೊಡುತ್ತಿದ್ದಾರೆ.

2,800 ಒಬ್ಬರಿಗೆ ಒಂದು ತಿಂಗಳ PF ಕಟ್ ಮಾಡಲಾಗುತ್ತದೆ. ಇದರ ಪ್ರಕಾರ ನೋಡಿದ್ರೆ, 128 ಜನ ಹೊರಗುತ್ತಿಗೆ ನೌಕರರಿಗೆ ಕೇವಲ PF ಹಣ 1 ಕೋಟಿ 29 ಲಕ್ಷದ 02 ಸಾವಿರದ 400 ರೂಪಾಯಿ ಬಾಕಿ ಉಳಿದಿದೆ.

ಇನ್ನೂ ಮೂರು ತಿಂಗಳ ಬಾಕಿ ಉಳಿದಿದ್ದು ಒಬ್ಬ ಸಿಬ್ಬಂದಿಗೆ 15 ಸಾವಿರ ಸಂಬಳ ಅಂತ ಲೆಕ್ಕಾಚಾರ ಹಾಕಿದ್ರೂ ಮೂರು ತಿಂಗಳ 54 ಲಕ್ಷಕ್ಕೂ ಹೆಚ್ಚು ಹಣ ಖಾಸಗಿ ಏಜೆನ್ಸಿ ಬಾಕಿಸಾರಿಗೆ ಸಿಬ್ಬಂದಿ ಮನವಿ ಮಾಡಿದ್ದಾರೆ.

ಹೊಸಪೇಟೆಯಲ್ಲಿ ಅನಧಿಕೃತ 20 ಮಳಿಗೆಗಳ ತೆರವುಹೊಸಪೇಟೆ/ವಿಜಯನಗರ : ನಗರಸಭೆ ಮುಂಭಾಗದಲ್ಲಿರುವ ಮಳಿಗೆಗಳಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದ ಅನಧಿ...
10/04/2026

ಹೊಸಪೇಟೆಯಲ್ಲಿ ಅನಧಿಕೃತ 20 ಮಳಿಗೆಗಳ ತೆರವು
ಹೊಸಪೇಟೆ/ವಿಜಯನಗರ : ನಗರಸಭೆ ಮುಂಭಾಗದಲ್ಲಿರುವ ಮಳಿಗೆಗಳಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದ ಅನಧಿಕೃತ ಅಧಿಭೋಗದ ವಿರುದ್ಧ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದುವರೆಗೆ ಸುಮಾರು 20ಕ್ಕೂ ಹೆಚ್ಚು ಮಳಿಗೆಗಳನ್ನು ತೆರವುಗೊಳಿಸಲಾಗಿದೆ.

ಪೌರಾಯುಕ್ತ ಶಿವಕುಮಾ‌ರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಅನಧಿಕೃತವಾಗಿ ಮಳಿಗೆಗಳನ್ನು ವಶದಲ್ಲಿಟ್ಟುಕೊಂಡಿದ್ದವರನ್ನು ತೆರವುಗೊಳಿಸಿ ಸ್ಥಳವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ನಗರಸಭೆ ಮೂಲಗಳ ಪ್ರಕಾರ, 2016ರ ಮೊದಲು ಮಳಿಗೆದಾರರು ತಿಂಗಳಿಗೆ 535 ರೂ. ನಂತೆ ಬಾಡಿಗೆ ಪಾವತಿಸುತ್ತಿದ್ದರು. ಆದರೆ 2016ರಲ್ಲಿ ಪ್ರಕರಣ ನ್ಯಾಯಾಲಯಕ್ಕೆ ಹೋದ ಬಳಿಕದಿಂದ ಇಂದಿನವರೆಗೆ ಯಾವುದೇ ಬಾಡಿಗೆ ಪಾವತಿಯಾಗಿಲ್ಲ ಎಂದು ತಿಳಿದುಬಂದಿದೆ.ಬಾಡಿಗೆ ದರ ಅತೀ ಕಡಿಮೆಯಾಗಿದ್ದ ಹಿನ್ನೆಲೆ ಅದನ್ನು ರದ್ದುಪಡಿಸಲು ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗಿದ್ದು, ನಗರಸಭೆಗೆ ಅನುಕೂಲಕರ ತೀರ್ಪು ಬಂದ ನಂತರ ಕಾನೂನುಬದ್ಧವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ, ನಿಯಮಾನುಸಾರ ಹರಾಜು ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡುವ ಯೋಜನೆಯೂ ರೂಪಿಸಲಾಗಿದೆ.

ನಗರಸಭೆಯ ಆಸ್ತಿಗಳ ಸಂರಕ್ಷಣೆ ಮತ್ತು ಸಾರ್ವಜನಿಕರ ಸುರಕ್ಷತೆ ನಮ್ಮಮೊದಲ ಆದ್ಯತೆ. ಹೈಕೋರ್ಟ್‌ ತೀರ್ಪಿನ ನಂತರ ಶೋಕಾಸ್ ನೋಟಿಸ್‌ ನೀಡಿ 45 ದಿನಗಳ ಗಡುವು ನೀಡಲಾಗಿತ್ತು. ಅದರಂತೆ ಕೆಲವರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿರುವುದು ಶ್ಲಾಘನೀಯ."

-ಶಿವಕುಮಾ‌ರ್, ಪೌರಾಯುಕ್ತರು

"ಶೋಕಾಸ್ ನೋಟಿಸ್‌ ನಂತರ ಮಳಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ಬಾಕಿ ಇರುವಾಗಲೇ ತೆರವುಗೊಳಿಸಿರುವುದು ನ್ಯಾಯಸಮ್ಮತವಲ್ಲ. ಈ ಕ್ರಮದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ."

-ವಕೀಲ ಸದ್ಧಾಂ, ಮಳಿಗೆದಾರರ ಪರ

Address

Near BJP Office Patel Nagar
Hospet
583201

Website

Alerts

Be the first to know and let us send you an email when YSR MEDIA Vijaynagar Updates News paper posts news and promotions. Your email address will not be used for any other purpose, and you can unsubscribe at any time.

Shortcuts

Share