ARUN

ARUN follow now

ಚಿತ್ರರಂಗದ ಆರಂಭದಲ್ಲೇ ಅಂದ್ರೆ 2004ರ 'ಗಿಲ್ಲಿ' ಸಿನಿಮಾ ಟೈಮಲ್ಲೇ ವಿಜಯ್-ತ್ರಿಷಾ ನಡುವೆ ಲವ್ ಇತ್ತು ಅನ್ನೋ ಮಾತಿತ್ತು. ಆದ್ರೆ ವಿಜಯ್ ಅಪ್ಪ ಎ...
12/08/2026

ಚಿತ್ರರಂಗದ ಆರಂಭದಲ್ಲೇ ಅಂದ್ರೆ 2004ರ 'ಗಿಲ್ಲಿ' ಸಿನಿಮಾ ಟೈಮಲ್ಲೇ ವಿಜಯ್-ತ್ರಿಷಾ ನಡುವೆ ಲವ್ ಇತ್ತು ಅನ್ನೋ ಮಾತಿತ್ತು. ಆದ್ರೆ ವಿಜಯ್ ಅಪ್ಪ ಎಸ್‌ಎ ಚಂದ್ರಶೇಖರ್ ಈ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಡಲಿಲ್ಲ. ಅದಾಗಲೇ ಅಂದ್ರೆ 1999ರಲ್ಲೇ ವಿಜಯ್, ಸಂಗೀತಾರನ್ನ ಮದುವೆಯಾಗಿದ್ರು. ಹೀಗಾಗಿ ಇಬ್ರೂ ತಮ್ಮ ತಮ್ಮ ದಾರಿ ನೋಡಿಕೊಂಡು, ಹತ್ತಿರತ್ತಿರ 15 ವರ್ಷಗಳ ಕಾಲ ಒಟ್ಟಿಗೆ ನಟಿಸಲೇ ಇಲ್ಲ. ಆಮೇಲೆ 2023ರಲ್ಲಿ 'ಲೋಕಿ' ನಿರ್ದೇಶನದ 'ಲಿೋ' ಸಿನಿಮಾಗಾಗಿ ಮತ್ತೆ ಒಂದಾದ್ರು. ಈಗ ವಿಜಯ್ ಪೊಲಿಟಿಕ್ಸ್‌ಗೆ ಎಂಟ್ರಿ ಕೊಟ್ಟು ಸಿನಿಮಾ ಲೈಫ್‌ಗೆ ಗುಡ್‌ಬೈ ಹೇಳ್ತಿರೋದ್ರಿಂದ, ಇಬ್ರು ಮತ್ತೆ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳೋದು ಡೌಟೇ ಅನ್ನೋ ಮಾತು ಗಾಂಧಿನಗರದಲ್ಲಿದೆ!

‘ಮೂಡ್ ಆಫ್’ ಇದ್ರೆ ಕೆಲಸಕ್ಕೆ ಬರಬೇಡಿ; ವರ್ಕರ್ಸ್‌ಗೆ ಚೀನಾ ಕಂಪನಿ ಬಿಗ್ ಆಫರ್! ಹೆನಾನ್ ಪ್ರಾಂತ್ಯದ 'ಪ್ಯಾಂಗ್ ಡಾ ಡಾಂಗ್' ಅನ್ನೋ ಪ್ರಸಿದ್ಧ ಸ...
12/08/2026

‘ಮೂಡ್ ಆಫ್’ ಇದ್ರೆ ಕೆಲಸಕ್ಕೆ ಬರಬೇಡಿ; ವರ್ಕರ್ಸ್‌ಗೆ ಚೀನಾ ಕಂಪನಿ ಬಿಗ್ ಆಫರ್! ಹೆನಾನ್ ಪ್ರಾಂತ್ಯದ 'ಪ್ಯಾಂಗ್ ಡಾ ಡಾಂಗ್' ಅನ್ನೋ ಪ್ರಸಿದ್ಧ ಸೂಪರ್‌ಮಾರ್ಕೆಟ್ ಚೈನ್ ತನ್ನ ಉದ್ಯೋಗಿಗಳಿಗೆ ವರ್ಷಕ್ಕೆ 10 ದಿನ 'ಅನ್‌ಹ್ಯಾಪಿ ಲೀವ್' ಕೊಡ್ತಿದೆ. ಮೂಡ್ ಸರಿಯಿಲ್ಲ ಅಂದಾಗ ಯಾರಿಗೂ ಉತ್ತರ ಕೊಡದೆ ಮ್ಯಾನೇಜರ್‌ಗೆ ವಿಷಯ ತಿಳಿಸಿ ರಜೆ ತಗೋಬಹುದು, ಇದನ್ನು ರಿಜೆಕ್ಟ್ ಮಾಡೋ ಅಧಿಕಾರ ಯಾವುದೇ ಬಾಸ್‌ಗೂ ಇಲ್ಲ! ಉದ್ಯೋಗಿಗಳ ಖುಷಿ ಮತ್ತು ಮಾನಸಿಕ ಆರೋಗ್ಯವೇ ಮುಖ್ಯ ಅಂತ ಕಂಪನಿ ಮಾಲೀಕ 'ಯು ಡಾಂಗ್‌ಲೈ' ಈ ಅದ್ಭುತ ಆಫರ್ ಕೊಟ್ಟಿದ್ದು, ದುರುಪಯೋಗ ಆಗಬಾರದು ಅಂತ ವರ್ಷಕ್ಕೆ 10 ದಿನಕ್ಕೆ ಮಾತ್ರ ಲಿಮಿಟ್ ಮಾಡಿದ್ದಾರೆ.

ಬಿಜೆಪಿ ಶಾಸಕ ಜ್ಞಾನ ತಿವಾರಿ ತಮ್ಮ ಮಗಳ ಮದುವೆ ವಿಷಯದಲ್ಲಿ ದೊಡ್ಡ ಮೋಸಕ್ಕೊಳಗಾಗಿದ್ದಾರೆ. 2024ರಲ್ಲಿ ಇವರ ಮಗಳ ಮದುವೆ ಪ್ರಖರ್ ತ್ರಿವೇದಿ ಅನ್ನ...
12/08/2026

ಬಿಜೆಪಿ ಶಾಸಕ ಜ್ಞಾನ ತಿವಾರಿ ತಮ್ಮ ಮಗಳ ಮದುವೆ ವಿಷಯದಲ್ಲಿ ದೊಡ್ಡ ಮೋಸಕ್ಕೊಳಗಾಗಿದ್ದಾರೆ. 2024ರಲ್ಲಿ ಇವರ ಮಗಳ ಮದುವೆ ಪ್ರಖರ್ ತ್ರಿವೇದಿ ಅನ್ನೋನ ಜೊತೆ ನಡೆದಿತ್ತು. ಆದ್ರೆ ಈ ಆಸಾಮಿ ಈಗಾಗಲೇ ನಕಲಿ ಹೆಸರುಗಳನ್ನು ಬಳಸಿ ಬರೋಬ್ಬರಿ 25 ಮದುವೆಗಳಾಗಿ, ಅನೇಕ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾನೆ ಅನ್ನೋ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ! ಈ ವಂಚಕ ಮದುವೆ ಉಡುಗೊರೆ, ಆಸ್ತಿ ಮತ್ತು ಬಿಸಿನೆಸ್ ನೆಪದಲ್ಲಿ ಹುಡುಗಿಯರ ಕುಟುಂಬದಿಂದ ಕೋಟಿ ಕೋಟಿ ಹಣ ಲಪಟಾಯಿಸುತ್ತಿದ್ದ. ಅಷ್ಟೇ ಅಲ್ಲ, ಜ್ಞಾನ ತಿವಾರಿ ಅವರ ಕುಟುಂಬಕ್ಕೂ ಜೀವ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಶಾಸಕರು ನೀಡಿದ ದೂರಿನನ್ವಯ ಪೊಲೀಸರು ಸದ್ಯ ಈ ಮಹಾವಂಚಕ ಪ್ರಖರ್ ತ್ರಿವೇದಿ ಮತ್ತು ಆತನಿಗೆ ಸಾಥ್ ನೀಡಿದ್ದ ತಂದೆ ಅನುಜ್ ತ್ರಿವೇದಿಯನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.

ಸ್ಪಾನಲ್ಲಿ ಬಂಗಾರದ ಮಂಗಳಸೂತ್ರ ಕಳೆದುಕೊಂಡ ನಟಿ ವಿನೋದಿನಿ ಶ್ವೇತಾ! ಚೆನ್ನೈನ ಸ್ಪಾಗೆ ಮಸಾಜ್ ಮಾಡಿಸಿಕೊಳ್ಳೋಕೆ ಹೋದಾಗ ನಟಿ ವಿನೋದಿನಿ ಶ್ವೇತಾ ...
12/08/2026

ಸ್ಪಾನಲ್ಲಿ ಬಂಗಾರದ ಮಂಗಳಸೂತ್ರ ಕಳೆದುಕೊಂಡ ನಟಿ ವಿನೋದಿನಿ ಶ್ವೇತಾ! ಚೆನ್ನೈನ ಸ್ಪಾಗೆ ಮಸಾಜ್ ಮಾಡಿಸಿಕೊಳ್ಳೋಕೆ ಹೋದಾಗ ನಟಿ ವಿನೋದಿನಿ ಶ್ವೇತಾ ತಮ್ಮ 15 ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನ ಕಳಚಿ ಅಲ್ಲಿದ್ದ ಬಾಕ್ಸ್‌ನಲ್ಲಿ ಇಟ್ಟಿದ್ರು. ಮಸಾಜ್ ಮುಗಿದ ಮೇಲೆ ಹಾಗೇ ಮರೆತು ಮನೆಗೆ ಹೊರಟು ಬಂದಿದ್ದ ಅವರಿಗೆ, 2 ದಿನಗಳ ನಂತ್ರ ನೆಗೆಟಿವ್ ಶಾಕ್ ಕಾದಿತ್ತು! ಮಂಗಳಸೂತ್ರ ಕಳೆದಿರೋದು ಗೊತ್ತಾಗಿ ವಾಪಸ್ ಸ್ಪಾಗೆ ಹೋಗಿ ಕೇಳಿದ್ರೆ, ಅಲ್ಲಿನ ಸಿಬ್ಬಂದಿ "ನಮಗೆ ಗೊತ್ತಿಲ್ಲ" ಅಂತ ಉಡಾಫೆ ಉತ್ತರ ಕೊಟ್ಟಿದ್ದಾರೆ. ಇದ್ರಿಂದ ಕಂಗಾಲಾದ ನಟಿ ಕಣ್ಣೀರು ಹಾಕುತ್ತಾ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು, "ಯಾರೂ ಸ್ಪಾಗಳಿಗೆ ಹೋಗುವಾಗ ಇಂಥ ಬೆಲೆಬಾಳುವ ಒಡವೆಗಳನ್ನು ಹಾಕೊಂಡು ಹೋಗಬೇಡಿ" ಅಂತ ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿನ ವಿಡಿಯೋ ಹಂಚಿಕೊಂಡಿದ್ದಾರೆ!

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಜೋಡಿಯ ಸೀಮಂತ ಶಾಸ್ತ್ರ ಮೈಸೂರಿನಲ್ಲಿ ಕುಟುಂಬಸ್ಥರು ಹಾಗೂ ಯೂಟ್ಯೂಬರ್ ಗ...
12/08/2026

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಜೋಡಿಯ ಸೀಮಂತ ಶಾಸ್ತ್ರ ಮೈಸೂರಿನಲ್ಲಿ ಕುಟುಂಬಸ್ಥರು ಹಾಗೂ ಯೂಟ್ಯೂಬರ್ ಗೆಳೆಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದಿದೆ. ಹಳದಿ ಬಣ್ಣದ ರೇಷ್ಮೆ ಸೀರೆಯಲ್ಲಿ ಮಿಂಚಿದ ಮಧು ಅವರ ಈ ಸಂಭ್ರಮದ ಕ್ಷಣಗಳನ್ನು ಅವರ ತಂಗಿ ಸ್ವಾತಿ ವ್ಲಾಗ್ ಮೂಲಕ ಸೆರೆಹಿಡಿದಿದ್ದಾರೆ.

​ಸಮಾರಂಭ ಮುಗಿಸಿ ಮಧು ಬೆಂಗಳೂರಿಗೆ ಹೊರಡುವಾಗ ಅವರ ಅತ್ತೆ ಅಗಲಿಕೆ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತಿದ್ದು, ಮಧು ಕೂಡ ಭಾವುಕರಾಗಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು 'ಈ ಕಾಲದಲ್ಲೂ ಸೊಸೆಗಾಗಿ ಅಳುವ ಇಂತಹ ಅತ್ತೆಯನ್ನು ಪಡೆಯಲು ಮಧು ಪುಣ್ಯ ಮಾಡಿದ್ದಾರೆ' ಎಂದು ಕಾಮೆಂಟ್ ಮಾಡಿ ಅತ್ತೆಯ ಪ್ರೀತಿಯನ್ನು ಕೊಂಡಾಡುತ್ತಿದ್ದಾರೆ. ಇದೇ ವೇಳೆ ಮಗು ಗಂಡೋ-ಹೆಣ್ಣೋ ಎಂಬ ನೆಟ್ಟಿಗರ ಕುತೂಹಲಕ್ಕೆ, ಯಾವುದೇ ಮಗು ಬಂದರೂ ಪ್ರೀತಿಯಿಂದ ಸ್ವೀಕರಿಸುವುದಾಗಿ ಮಧು ಹೇಳಿದ್ದಾರೆ.

ಇಂದು ಭೀಮನ ಅಮಾವಾಸ್ಯೆ; ಇದೇ ದಿನ 2000ರಲ್ಲಿ ಕನ್ನಡಿಗರ ಆರಾಧ್ಯದೈವ ಅಣ್ಣಾವ್ರನ್ನು ವೀರಪ್ಪನ್ ಅಪಹರಿಸಿದ್ದ. ಜುಲೈ 30ರ ರಾತ್ರಿ ಗಾಜನೂರಿನ ತಮ್...
12/08/2026

ಇಂದು ಭೀಮನ ಅಮಾವಾಸ್ಯೆ; ಇದೇ ದಿನ 2000ರಲ್ಲಿ ಕನ್ನಡಿಗರ ಆರಾಧ್ಯದೈವ ಅಣ್ಣಾವ್ರನ್ನು ವೀರಪ್ಪನ್ ಅಪಹರಿಸಿದ್ದ. ಜುಲೈ 30ರ ರಾತ್ರಿ ಗಾಜನೂರಿನ ತಮ್ಮ ಮನೆಯಲ್ಲಿದ್ದ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಆತನ ಸಹಚರರು ಕರೆದೊಯ್ದಿದ್ದರು. ಅವರ ಜೊತೆ ಅಳಿಯ ಗೋವಿಂದರಾಜ್, ಸಂಬಂಧಿ ನಾಗೇಶ್ ಹಾಗೂ ನಾಗಪ್ಪ ಅವರನ್ನೂ ಅಪಹರಿಸಲಾಗಿತ್ತು. ಈ ವೇಳೆ ಪಾರ್ವತಮ್ಮ ಅವರಿಗೆ ಒಂದು ಆಡಿಯೋ ಕ್ಯಾಸೆಟ್ ನೀಡಿ, ಅದನ್ನು ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಗೆ ತಲುಪಿಸುವಂತೆ ಹೇಳಲಾಗಿತ್ತು.

ಅಣ್ಣಾವ್ರ ಅಪಹರಣದ ಸುದ್ದಿ ಕರ್ನಾಟಕದಾದ್ಯಂತ ಭಾರೀ ಆತಂಕ ಸೃಷ್ಟಿಸಿತ್ತು. ನಂತರ ಸರ್ಕಾರದ ಮಾತುಕತೆ ಹಾಗೂ ಮಧ್ಯಸ್ಥಿಕೆಗಳ ನಡುವೆ ಅಣ್ಣಾವ್ರು ಬರೋಬ್ಬರಿ 108 ದಿನಗಳ ಬಳಿಕ, 2000ರ ನವೆಂಬರ್ 15ರಂದು ಬಿಡುಗಡೆಯಾದರು.

ಇನ್ನೊಂದು ವಿಶೇಷ ಅಂದ್ರೆ, ಈ ಪ್ರಕರಣದ ವಿಚಾರಣೆ ಬರೋಬ್ಬರಿ 18 ವರ್ಷ ನಡೆದಿತ್ತು. 2026ರ ಫೆಬ್ರವರಿಯಲ್ಲಿ ಮದ್ರಾಸ್ ಹೈಕೋರ್ಟ್, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯವಿಲ್ಲ ಎಂಬ ಕಾರಣಕ್ಕೆ 9 ಆರೋಪಿಗಳ ಖುಲಾಸೆಯನ್ನು ಎತ್ತಿಹಿಡಿದಿದೆ.

ಜಪಾನ್‌ನ ಮಿಯಾಕೊ ಕೆಟ್ಲೆಟ್ ತಮ್ಮ ತೀರಿಹೋದ ಗಂಡನ ಕೊನೆ ಆಸೆ ತೀರಿಸೋಕೆ ಉತ್ತರಾಖಂಡದ ಬಾಗೇಶ್ವರಕ್ಕೆ ಬಂದಿದ್ದಾರೆ. 2007ರಲ್ಲಿ ಈ ಜೋಡಿ ಮೊದಲ ಸಲ...
12/08/2026

ಜಪಾನ್‌ನ ಮಿಯಾಕೊ ಕೆಟ್ಲೆಟ್ ತಮ್ಮ ತೀರಿಹೋದ ಗಂಡನ ಕೊನೆ ಆಸೆ ತೀರಿಸೋಕೆ ಉತ್ತರಾಖಂಡದ ಬಾಗೇಶ್ವರಕ್ಕೆ ಬಂದಿದ್ದಾರೆ. 2007ರಲ್ಲಿ ಈ ಜೋಡಿ ಮೊದಲ ಸಲ ಬಾಗೇಶ್ವರಕ್ಕೆ ಬಂದಾಗ, ಇಲ್ಲಿನ ವಾತಾವರಣ ನೋಡಿ ಇಬ್ಬರಿಗೂ ತುಂಬಾ ಇಷ್ಟವಾಗಿತ್ತು. ಈಗ ಗಂಡ ತೀರಿಹೋದ ಮೇಲೆ, ಅವರ ಕೊನೆ ಆಸೆಯಂತೆ ಮಿಯಾಕೊ ಅವರು ಗಂಡನ ಅಸ್ಥಿಯನ್ನು ತಂದು ಇಲ್ಲಿನ ಸರಯೂ ನದಿಯಲ್ಲಿ ವಿಸರ್ಜನೆ ಮಾಡಿ, ಅವರ ಕೊನೆ ಆಸೆಯನ್ನು ನೆರವೇರಿಸಿದ್ದಾರೆ.

ದಣಿದ ದೇಹಕ್ಕೆ ಸಿಕ್ಕಿದ್ದನ್ನೇ ತಿಂದು ವಿಶ್ರಾಂತಿ ಪಡೆಯುವ ಮನಸ್ಥಿತಿ ಮತ್ತೆ ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ಕಾಯುವ ಜ...
12/08/2026

ದಣಿದ ದೇಹಕ್ಕೆ ಸಿಕ್ಕಿದ್ದನ್ನೇ ತಿಂದು ವಿಶ್ರಾಂತಿ ಪಡೆಯುವ ಮನಸ್ಥಿತಿ ಮತ್ತೆ ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ಕಾಯುವ ಜನರ ಹಸಿವನ್ನೇ ಬಂಡವಾಳ ಮಾಡಿಕೊಂಡು ಕೆಲವರು ಆಹಾರವನ್ನು ವಿಷ ಮಾಡುತ್ತಿದ್ದಾರೆ. ಹೊಟ್ಟೆ ತುಂಬಿಸಬೇಕಾದ ಅನ್ನವನ್ನೇ ಕಲ್ಮಶಗೊಳಿಸಿ ಮಾರಾಟ ಮಾಡುತ್ತಿರುವ ಈ ಹೋಟೆಲ್ ಮಾಫಿಯಾ ವಿರುದ್ಧ ನಟ ಜಗ್ಗೇಶ್ ಉಗ್ರವಾಗಿ ಸಿಡಿದೆದ್ದಿದ್ದಾರೆ. "ಆಹಾರದಲ್ಲಿ ಮೋಸ ಮಾಡುವ ಇಂತಹ ದುರಾತ್ಮರಿಗೆ ಸರಿಯಾದ ತಕ್ಕ ಶಾಸ್ತಿಯಾಗಬೇಕು. ಅನ್ನಂ ಪರಬ್ರಹ್ಮ ಸ್ವರೂಪ, ಅನ್ನಕ್ಕೆ ಮೋಸ ಮಾಡಿದರೆ ಅವರ ವಂಶವೇ ಸರ್ವನಾಶವಾಗುತ್ತದೆ. ಪ್ರತಿಯೊಬ್ಬರೂ ಊಟದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಿ, ಆರೋಗ್ಯ ಚನ್ನಾಗಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

​ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆನ್‌ಲೈನ್ ಫುಡ್‌ಗಳಲ್ಲಿ ಹುಳು, ಹಲ್ಲಿ ಮತ್ತು ಡೆಡ್ ಲೈನ್‌ ಮುಗಿದ ಕೆಟ್ಟ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುತ್ತಿರುವ ಶಾಕಿಂಗ್ ವಿಡಿಯೋಗಳು ಜನರನ್ನು ಬೆಚ್ಚಿಬೀಳಿಸಿವೆ. ಇದರ ಜೊತೆಗೆ, ಲಾಭಕ್ಕಾಗಿ ಕಳಪೆ ಗುಣಮಟ್ಟದ ಎಣ್ಣೆ ಹಾಗೂ ಅಪಾಯಕಾರಿ ಕೆಮಿಕಲ್ ಕಲರಿಂಗ್ ಏಜೆಂಟ್‌ಗಳನ್ನು ಬಳಸಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ನೋಟಿಸ್ ನೀಡುತ್ತಿದ್ದಾರೆ. ಇಂತಹ ಘಟನೆಗಳಿಂದಾಗಿ ಆನ್‌ಲೈನ್ ಆರ್ಡರ್ ಮಾಡಿ ತಿನ್ನುವ ಮುನ್ನ ಪ್ರತಿಯೊಬ್ಬರೂ ನೂರು ಬಾರಿ ಯೋಚಿಸುವಂತಾಗಿದೆ.

ಬಿಗ್ ಬಾಸ್ ಕನ್ನಡ 13 'ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸಖತ್ ಹೈಡ್ರಾಮಾ ನಡೆದಿದೆ. ನಿರೂಪಕ ನಿರಂಜನ್ ದೇಶಪಾಂಡೆ "ಸಂಗೀತಾ ಶೃಂಗೇರಿ ಅವರಿಗೆ ನಿಮ್...
11/08/2026

ಬಿಗ್ ಬಾಸ್ ಕನ್ನಡ 13 'ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸಖತ್ ಹೈಡ್ರಾಮಾ ನಡೆದಿದೆ. ನಿರೂಪಕ ನಿರಂಜನ್ ದೇಶಪಾಂಡೆ "ಸಂಗೀತಾ ಶೃಂಗೇರಿ ಅವರಿಗೆ ನಿಮ್ಮನ್ನ ಕಂಡರೆ ಇಷ್ಟ ಅಂತ ಹೇಳ್ಬೇಕು" ಎಂದಾಗ, ಸೋಶಿಯಲ್ ಮೀಡಿಯಾ ವೈರಲ್ ಅಮುಕು ಡುಮುಕು ಮಂಜು "ನಾನು ಇಲ್ಲಿ ಯಾರನ್ನೂ ಇಂಪ್ರೆಸ್ ಮಾಡೋಕೆ ಬಂದಿಲ್ಲ, ನಾನು ಹೀಗೆ ಇರೋದು, ಹೀಗೆ ಹೋಗೋದು" ಎಂದು ಜಡ್ಜ್‌ಗಳ ಎದುರಲ್ಲೇ ಏರು ಧ್ವನಿಯಲ್ಲಿ ಆಟಿಟ್ಯೂಡ್ ತೋರಿಸಿದ್ದಾರೆ. ಇದರಿಂದ ಸಕ್ಕತ್ ಕೋಪಗೊಂಡ ತೀರ್ಪುಗಾರ ವಿನಯ್ ಗೌಡ "ಆಗಲ್ಲ ಅಂದ್ರೆ ಹೋಗ್ತಾ ಇರು, ಗೆಟ್‌ಔಟ್" ಎಂದು ವೇದಿಕೆಯಿಂದ ಆಚೆಗೆ ಕಳುಹಿಸಿದ್ದಾರೆ.
​ದೊಡ್ಮನೆಗೆ ಹೋಗಲು 60 ಕಾಮನ್ ಮ್ಯಾನ್ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳು ನಡೆಯುತ್ತಿವೆ. ಈ 'ಅಗ್ನಿಪರೀಕ್ಷೆ'ಯ ಜಡ್ಜ್‌ಗಳಾಗಿ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ ಹಾಗೂ ಶ್ರುತಿ ಭಾಗವಹಿಸಿದ್ದು, ಶೋ ಅವಕಾಶಕ್ಕಾಗಿ ಒಬ್ಬ ಸ್ಪರ್ಧಿ ತನ್ನ ಗಿನ್ನೆಸ್ ದಾಖಲೆಯ ಸರ್ಟಿಫಿಕೇಟ್‌ ಅನ್ನೇ ಹರಿದು ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

ಸಿನಿಮಾ ರಂಗದಲ್ಲಿ ಅವಕಾಶ ಕೊಡ್ತೀವಿ ಅಂತ ಹೆಣ್ಣುಮಕ್ಕಳನ್ನು ಹೇಗೆಲ್ಲಾ ಬಳಸಿಕೊಳ್ತಾರೆ ಅನ್ನೋದಕ್ಕೆ 'ಅಮೃತಧಾರೆ' ಧಾರಾವಾಹಿ ಖ್ಯಾತಿಯ ನಟಿ ರಾಧಾ...
11/08/2026

ಸಿನಿಮಾ ರಂಗದಲ್ಲಿ ಅವಕಾಶ ಕೊಡ್ತೀವಿ ಅಂತ ಹೆಣ್ಣುಮಕ್ಕಳನ್ನು ಹೇಗೆಲ್ಲಾ ಬಳಸಿಕೊಳ್ತಾರೆ ಅನ್ನೋದಕ್ಕೆ 'ಅಮೃತಧಾರೆ' ಧಾರಾವಾಹಿ ಖ್ಯಾತಿಯ ನಟಿ ರಾಧಾ ಭಗವತಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಆಡಿಷನ್ ಹೆಸರಿನಲ್ಲಿ ಒಬ್ಬ ವ್ಯಕ್ತಿ ಇವರ ಅಮ್ಮನ ಎದುರೇ ಅಸಭ್ಯ ಬಟ್ಟೆ ಕೊಟ್ಟು, "ನೀನು ಬಟ್ಟೆ ಬಿಚ್ಚಿ ನಟಿಸಿದ್ರೆ ಮಾತ್ರ ಇಂಡಸ್ಟ್ರಿಯಲ್ಲಿ ಬೆಳೆಯೋಕೆ ಸಾಧ್ಯ" ಅಂತ ಮುಖಕ್ಕೆ ಹೊಡೆದಂತೆ ಹೇಳಿದಾಗ ರಾಧಾ ಅಲ್ಲಿಂದ ಶಾಕ್ ಆಗಿ ಓಡಿ ಬಂದಿದ್ದರಂತೆ. ಕರಿಯರ್ ಮುಖ್ಯ ಅಂತ ಇಂಥ ಕಾಸ್ಟಿಂಗ್ ಕೌಚ್ ವ್ಯಕ್ತಿಗಳ ಬಲೆಗೆ ಬೀಳಬೇಡಿ, ನಿಮ್ಮ ಗೌರವ ಹಾಗೂ ಸುರಕ್ಷತೆ ಮೊದಲು ಆಮೇಲೆ ಕೆಲಸ ಅಂತ ಹೊಸಬರಿಗೆ ಸಂದೇಶ ಕೊಟ್ಟಿದ್ದಾರೆ. ಚಿತ್ರರಂಗಕ್ಕೆ ಬರೋ ಮುನ್ನ ಪ್ರೊಡಕ್ಷನ್ ಹೌಸ್ ಹಾಗೂ ಏಜೆನ್ಸಿಗಳ ಹಿನ್ನೆಲೆಯನ್ನು ಸರಿಯಾಗಿ ಚೆಕ್ ಮಾಡಿಕೊಳ್ಳುವುದು ಮತ್ತು ಯಾವುದೇ ಕಾರಣಕ್ಕೂ ಒಂಟಿಯಾಗಿ ಆಡಿಷನ್‌ಗೆ ಹೋಗದೆ ಹತ್ತಿರದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಇಂಥ ವಂಚಕರಿಂದ ಬಚಾವ್ ಆಗಲು ಬಹಳ ಮುಖ್ಯ.

Address

Hospet

Website

Alerts

Be the first to know and let us send you an email when ARUN posts news and promotions. Your email address will not be used for any other purpose, and you can unsubscribe at any time.

Shortcuts

Share