News88kannada

  • Home
  • News88kannada

News88kannada "Ganavi Media Source Pvt Ltd" Karnataka's Premier Media And Entertainment Company

01/07/2025

*ಹುಬ್ಬಳ್ಳಿಯಲ್ಲಿ ಹೈಟೆಕ್ ಗ್ಯಾಸ್ ದಂಧೆ:ಸಿದ್ದಾರೂಢನ ಆಶೀರ್ವಾದವೋ ಗೊಡಚಿ ವೀರಭದ್ರನ ಕೃಪಾ ಕಟಾಕ್ಷವೋ*..!*ಹಳೆ ಹುಬ್ಬಳ್ಳಿಯಲ್ಲಿ 409 ಸಿಲಿಂಡರ್ ಸೀಜ್:ಓರ್ವ ಆರೋಪಿ ಅರೆಸ್ಟ್,ಹಾವೇರಿ ಮೂಲದ ವ್ಯಕ್ತಿ ಎಸ್ಕೇಪ್*

30/06/2025

ಅವಳಿ ನಗರದಲ್ಲಿ ನಿಲ್ಲದ ಗ್ಯಾಸ್ ರೆಫಿಲ್ಲಿಂಗ್ ದಂಧೆ:ಕಮಿಷನರ್ ಏನ್ ಶಶಿಕುಮಾರ ಮಹತ್ವದ ಪತ್ರಿಕಾಗೋಷ್ಠಿ..!

17/06/2025

ಕೋನರೆಡ್ಡಿ ಸಾಹೇಬ್ರೆ ನೀವ್ ಮಾಡ್ತಾ ಇರೋದು ಸರಿನಾ..?

13/06/2025

ಅಹಮದಾಬಾದ ವಿಮಾನ ದುರಂತ:ಸುಟ್ಟು ಕರಕಲಾದ ದೇಹಗಳು…!

✈️😉

13/06/2025

ರೊಚ್ಚಿಗೆದ್ದ ಮೃಗಶಿರಾ:ಹಳ್ಳದಲ್ಲಿ ಸಿಲುಕಿದ್ದವರ ರಕ್ಷಣೆಗೆ ನಿಂತ ಗ್ರಾಮ ಪಂಚಾಯತಿ ಸದಸ್ಯ ರೋಹಿತ್ ಮತ್ತಿಹಳ್ಳಿ..!

12/06/2025

ಇದು ಯಾವ ನದಿ ಅಲ್ಲಾ ರೀ:ನವಲಗುಂದ ತಾಲ್ಲೂಕಿನಲ್ಲಿ ಹರಿಯುವ ಬೆಣ್ಣೆ ಹಳ್ಳ..

12/06/2025

ಮೃಗಶಿರಾ ಮಳೆ ಅವಾಂತರ:ಹೊಳೆಯಂತಾದ ಹುಬ್ಬಳ್ಳಿ..!

12/06/2025

ಹುಬ್ಬಳ್ಳಿಯಲ್ಲಿ ಮಳೆಯ ರಭಸಕ್ಕೆ ಕೊಚ್ಚಿ ಹೋದ ಆಟೋ ರಿಕ್ಷಾ..!

12/06/2025

ಮಳೆಯ ನೀರಿನಲ್ಲಿ ಸ್ವಿಮ್ಮಿಂಗ್ ಮಾಡಿದ ಯುವಕರು:ಕಾರ್ಪೊರೇಟರ್ ಚೇತನ್ ಅವರೇ ನೋಡಿ ಸ್ವಲ್ಪ ನಿಮ್ಮ ಜನರ ಪರಿಸ್ಥಿತಿ..!

12/06/2025

ತಪ್ಪಿತಸ್ಥರ ಮೇಲೆ ಇಡಿ ದಾಳಿ ಕಾಮನ್:ಜಗದೀಶ್ ಶೆಟ್ಟರ್..!

ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ;ಅಂಗನವಾಡಿ,ಶಾಲಾಕಾಲೇಜುಗಳಿಗೆ ಇಂದು ರಜೆ  ಘೋಷಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ..ಧಾರವಾಡ ಜೂ.12:...
12/06/2025

ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ;ಅಂಗನವಾಡಿ,ಶಾಲಾಕಾಲೇಜುಗಳಿಗೆ ಇಂದು ರಜೆ ಘೋಷಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ..

ಧಾರವಾಡ ಜೂ.12: ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ಜೂ.12 ರಂದು ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಈ ಕುರಿತು ಇಂದು ಪ್ರಕಟಣೆ ನೀಡಿರುವ ಅವರು, ಇಂದು ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಲಾಗಿದೆ. ಮಳೆಯೂ ನಿರಂತರವಾಗಿ ಆಗುತ್ತಿರುವದರಿಂದ ಅನೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ನಿನ್ನೆ ರಾತ್ರಿ ವ್ಯಾಪಕ ಮಳೆಯಾಗಿದ್ದರಿಂದ, ಎರಡು ಹಳ್ಳದ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಇದರಿಂದ ಪ್ರವಾಹ ಪರಿಸ್ಥತಿ ಉಂಟಾಗಬಹುದು.

ರಾಜ್ಯ ಹವಾಮಾನ ಇಲಾಖೆ ಇವರ ವರದಿಯಂತೆ ಮುಂದಿನ 3 ದಿನ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಹಾಗೂ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಅವರು ಸೂಚಿಸಿದ್ದಾರೆ.

ಇಂದೂ ಪಿಯುಸಿ ವಾರ್ಷಿಕ ಪರೀಕ್ಷೆ-3 ಜರುಗುತ್ತದೆ:

ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ( ಪಿಯುಸಿ ಬೊರ್ಡ್)ಯ ವೇಳಾಪಟ್ಟಿಯಂತೆ ಈಗಾಗಲೇ ಇಂದು ನಿಗಧಿ ಆಗಿರುವ ಪಿಯುಸಿ ವಾರ್ಷಿಕ ಪರೀಕ್ಷೆ-3 ಅನ್ನು ಜರುಗಿಸಲಾಗುತ್ತದೆ. ಈ ಪರೀಕ್ಷೆಯು ಹುಬ್ಬಳ್ಳಿಯ ಮೂರು, ಧಾರವಾಡದ ಮೂರು ಹಾಗೂ ಕುಂದಗೋಳ, ಕಲಘಟಗಿ ಮತ್ತು ಅಣ್ಣಿಗೇರಿ ಪಟ್ಟಣದ ತಲಾ ಒಂದು ಕೇಂದ್ರ ಸೇರಿ ಒಟ್ಟು ಒಂಬತ್ತು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಯಥಾ ಪ್ರಕಾರ ಪರೀಕ್ಷೆ ನಡೆಯಲಿದ್ದು, ಸಂಭಂದಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಎಲ್ಲ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದು, ಮಳೆ, ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಈ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

04/06/2025

ಮಕ್ಕಳ ಶೂ ಸಾಕ್ಸ್ ನಲ್ಲೂ ಕಮಿಷನ್:ಕೋನರೆಡ್ಡಿ ಕ್ಷೇತ್ರದಲ್ಲಿ ಇನ್ನು ಏನೇನು ನಡೀತಾ ಇದೆ ಮಾರಾಯ..!

Address


Alerts

Be the first to know and let us send you an email when News88kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News88kannada:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share