20/01/2025
Hunsur updates
ಮೈಕ್ರೋ ಪೈನಾನ್ಸ್ ಕಿರುಕುಳ - ಬ್ರಾಂಚ್ ಮ್ಯಾನೇಜರ್ ಬಂಧನ.
ಪಿರ್ಯಾದುದಾರರು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ, ಪಿರ್ಯಾದುದಾರರಿಗೆ, ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್ ನ ಕಡೆಯವರು ರಾಮನಗರ ತಾಲ್ಲೂಕು, ಕೂನಮುದ್ದನಹಳ್ಳಿ ಗ್ರಾಮಕ್ಕೆ ಬಂದು, 7-8 ಜನರಿರುವ ಗುಂಪನ್ನು ಮಾಡಿ, ನಾವು ನಿಮಗೆ ಸಾಲ ನೀಡುತ್ತೇವೆ ಹೇಳಿದ್ದು, ಅದರಂತೆ ಪಿರ್ಯಾದುದಾರರು ಸೇರಿ 7 ಜನರಿರುವ ಒಂದು ಗುಂಪನ್ನು ಮಾಡಿಕೊಂಡಿದ್ದು, ಸದರಿ ಗುಂಪಿಗೆ ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್ ರವರು 52000/- ರೂ ಗಳ ಸಾಲವನ್ನು ಪಿರ್ಯಾದುದಾರರ ಖಾತೆ ಜಮಾ ಮಾಡಿದ್ದು, ಅದರಂತೆ ಪ್ರತಿ ತಿಂಗಳು ಮೊದಲ ವಾರದಲ್ಲಿ 2810/- ರೂ ಗಳನ್ನು ಕಟ್ಟುತ್ತಿದ್ದು, ಈಗ್ಗೆ 3 ತಿಂಗಳಿಂದ ಪಿರ್ಯಾದುದಾರರಿಗೆ ಹಣಕಾಸಿನ ತೊಂದರೆ ಉಂಟಾಗಿ ಕಂತು ಕಟ್ಟಲು ಆಗಿರುವುದಿಲ್ಲ. ಈ ವಿಚಾರವಾಗಿ ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್ ಬ್ರಾಂಚ್ ಮ್ಯಾನೇಜರ್ ರವರು ದಿನಾಂಕ:20.12.2024 ರಂದು ಗ್ರಾಮಕ್ಕೆ ಬಂದು ತಮ್ಮ ಮೇಲೆ ಗಲಾಟೆ ಮಾಡಿ ಅವಮಾನವಾಗುವ ರೀತಿಯಲ್ಲಿ ಬೈಯ್ದು ಸಾಲ ಕಟ್ಟುವಂತೆ ಬೆದರಿಕೆ ಹಾಕಿ, ನಮಗೆ ಬೆದರಿಸುವಂತೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ತೊಂದರೆ ಮಾಡಿರುತ್ತಾರೆ ಎಂದು, ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ 16/2025 ಕಲಂ: 126, 352, 351, 74 ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಂಡು, ಸದರಿ ಪ್ರಕರಣದ ಆರೋಪಿಯಾದ ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್ ನ ಬ್ರಾಂಚ್ ಮ್ಯಾನೇಜರ್ ರವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.