Public Karnataka

Public Karnataka ಜಾತ್ಯಾತೀತತೆ

*ಎದ್ದೇಳಿ ಸಮಾಜವೇ..*🔥✊*ನಾಳೆ ಸಂಜೆ 4:00 ಗಂಟೆಗೆ ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಅತ್ಯಾಚಾರ ಕೊಲೆ ವಿರುದ್ಧ ಮತ್ತು SIT ತನಿಖೆಗೆ ಒಪ್ಪಿಸಿ ಎಂಬ...
19/07/2025

*ಎದ್ದೇಳಿ ಸಮಾಜವೇ..*🔥✊

*ನಾಳೆ ಸಂಜೆ 4:00 ಗಂಟೆಗೆ ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಅತ್ಯಾಚಾರ ಕೊಲೆ ವಿರುದ್ಧ ಮತ್ತು SIT ತನಿಖೆಗೆ ಒಪ್ಪಿಸಿ ಎಂಬ ಬೇಡಿಕೆಯೊಂದಿಗೆ Twitter ಕ್ಯಾಂಪೇನ್ ನಡೆಯಲಿಕ್ಕಿದೆ...*

*ಈ ಒಂದು ಹೋರಾಟದಲ್ಲಿ ಇಲ್ಲಿರುವ ಪ್ರತಿಯೊಬ್ಬ ಸೌಜನ್ಯ ಹೋರಾಟಗಾರರು ಭಾಗವಹಿಸಬೇಕು...*🙏



*ಈ ಒಂದು ಸಂದೇಶವನ್ನು ಇಡೀ ರಾಜ್ಯಕ್ಕೆ ತಲುಪಿಸಬೇಕು...*

🔥🔥🔥🔥🔥🔥🔥

05/07/2025
(ಸಂಪೂರ್ಣವಾಗಿ ಓದಲೇ ಬೇಕಾದ ಬರಹ) 👆👆👆👆*ಬಿಜೆಪಿ ಮುಖಂಡನ ಪುತ್ರನ ಕಾಮಕಾಂಡ ಪ್ರಕರಣದಲ್ಲಿ ನುಣುಚಿಕೊಳ್ಳಲು ಯತ್ನಿಸಿದ ನಕಲಿ ಧರ್ಮ ರಕ್ಷಕರ  ಮುಖವ...
05/07/2025

(ಸಂಪೂರ್ಣವಾಗಿ ಓದಲೇ ಬೇಕಾದ ಬರಹ) 👆👆👆👆

*ಬಿಜೆಪಿ ಮುಖಂಡನ ಪುತ್ರನ ಕಾಮಕಾಂಡ ಪ್ರಕರಣದಲ್ಲಿ ನುಣುಚಿಕೊಳ್ಳಲು ಯತ್ನಿಸಿದ ನಕಲಿ ಧರ್ಮ ರಕ್ಷಕರ ಮುಖವಾಡ ಕಳಚಿದ SDPI*

🔸🔸🔸🔸🔸🔸🔸🔸

*✍🏻ಅನ್ವರ್ ಸಾದತ್ ಬಜತ್ತೂರು*

*ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನ ಕಾಮಕಾಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಡಿಪಿಐಯ ಮಧ್ಯ ಪ್ರವೇಶವು ಬಿಜೆಪಿ-ಸಂಘಪರಿವಾರದ ಹಿಂದುತ್ವದ ಅಸಲಿಯತ್ತು, ಸ್ವತಃ ಹಿಂದುಗಳಿಗೆ ಹಾಗೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೂ ಅರ್ಥವಾಗಿದೆ.*

*SDPI ಯ ಪ್ರತಿಭಟನೆಯಿಂದ ಇವರ ನಕಲಿ ಮುಖವಾಡ ಕಳಚಿಬಿದ್ದಾಗ ಇಲಾಖೆಯ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ಸುಳ್ಳು ಕೇಸ್ ಹಾಕಲಾಯಿತು. ಅದಲ್ಲದೇ ರಾಜ್ಯಾದ್ಯಂತ ಈ ವಿಚಾರ ಚರ್ಚಾ ವಿಷಯವಾಗಿ ಮಾರ್ಪಟ್ಟು ಈ ಹಿಂದೆ ನಮಗೆ ಈ ವಿಚಾರದಲ್ಲಿ ಸಂತ್ರಸ್ತೆಯ ಪರವಾಗಿ ನಿಲ್ಲಲು ಸಾಧ್ಯವಿಲ್ಲ ನೀವೆ ಸರಿಪಡಿಸಿಕೊಳ್ಳಿ ಎಂದ ಬಿಜೆಪಿ ಮುಖಂಡರು, ಕಾಂಗ್ರೆಸ್ ಶಾಸಕರು ಮತ್ತು ಪುತ್ತೂರಿನ ಸಂಘ ಪರಿವಾರದ ನಾಯಕರು SDPI ಪ್ರತಿಭಟನೆಯ ನಂತರ ನ್ಯಾಯ ತೆಗೆಸಿಕೊಡಲು ನಾವಿದ್ದೇವೆ ಎಂದು ಸಂತ್ರಸ್ತೆಯ ಮನೆಗೆ ಓಡೋಡಿ ಬಂದಿದ್ದಾರೆ. ಮಾತ್ರವಲ್ಲ ಮಾಧ್ಯಮಗಳಿಗೆ ಹೇಳಿಕೆಗಳ ಮೇಲೆ ಹೇಳಿಕೆ ನೀಡುತ್ತಾ ಡ್ಯಾಮೇಜ್ ಕಂಟ್ರೋಲ್ ಮಾಡುವ ನಾಟಕದಲ್ಲಿ ತೊಡಗಿದ್ದಾರೆ ಹಾಗೂ SDPI ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತಿದ್ದಾರೆ. SDPI ಇದರಲ್ಲಿ ರಾಜಕೀಯ ಬೇಳೆ ಬೇಯಿಸುತ್ತಿದೆ ಎಂಬ ಕ್ಷುಲ್ಲಕ ಆರೋಪವನ್ನು ಮಾಡುತ್ತಿದ್ದಾರೆ.*

*ಕಳೆದ ಮೇ ತಿಂಗಳಲ್ಲಿ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಹಾಗೂ ಎಬಿವಿಪಿ ಕಾರ್ಯಕರ್ತನಾದ ಕೃಷ್ಣ ಜೆ ರಾವ್ ತನ್ನ ಸಹಪಾಠಿ ಯುವತಿಗೆ ಗರ್ಭದಾರಣೆ ಮಾಡಿದ ಪ್ರಕರಣವು ಠಾಣೆಯ ಮೆಟ್ಟಿಲೇರಿದ ಸಂದರ್ಭದಲ್ಲಿ ಕೆಲವೊಂದು ಮಾಧ್ಯಮಗಳಿಂದ ಹಾಗೂ ಪಕ್ಷದ ಸ್ಥಳೀಯ ನಾಯಕರಿಂದ ವಿಚಾರ ತಿಳಿದು ಇದರ ಬಗ್ಗೆ ಪಕ್ಷದಲ್ಲಿ ನಾವು ಚರ್ಚೆ ನಡೆಸಿದಾಗ ಸದ್ರಿ ಪ್ರಕರಣವು, ಮದುವೆ ಆಗುವುದಾಗಿ ಒಪ್ಪಿಕೊಂಡು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ತಿಳಿದು ಬಂದಿತ್ತು. ಆದ್ದರಿಂದ ನಾವು ಸಧ್ಯಕ್ಕೆ ಯಾವುದೇ ಪ್ರತಿಕ್ರಿಯೆ ಕೊಡುವುದು ಬೇಡ ಎಂದು ತೀರ್ಮಾನಿಸಿದ್ದೆವು. ಯಾಕೆಂದರೆ ಇದೊಂದು ಹೆಣ್ಣು ಮಗಳ ಭವಿಷ್ಯದ ವಿಚಾರವಾಗಿದೆ. ಒಂದು ವೇಳೆ ನಮಗೆ ರಾಜಕೀಯ ಮಾಡಬೇಕೆಂದಿದ್ದರೆ ಅಂದೇ ಮಾಡಬಹುದಿತ್ತು. ಆರೋಪಿ ನಮ್ಮ ರಾಜಕೀಯ ಮತ್ತು ಸೈದ್ದಾಂತಿಕ ಎದುರಾಳಿ ಬಿಜೆಪಿ, ಸಂಘ ಪರಿವಾರದ ಪ್ರಭಾವಿ ನಾಯಕನ ಪುತ್ರ ಎಂದು ಗೊತ್ತಿದ್ದರೂ ಸಂತ್ರಸ್ತ ಯುವತಿ ಹಾಗೂ ಆಕೆಯ ಕುಟುಂಬದ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ನಾವು ಇದರಲ್ಲಿ ಯಾವುದೇ ರಾಜಕೀಯ ಮಾಡುವುದು ಬೇಡ ಒಳ್ಳೆಯ ರೀತಿಯಲ್ಲಿ ಪ್ರಕರಣ ಮುಗಿಯುವುದಾದರೆ ಮುಗಿಯಲಿ ಎಂದು ಸುಮ್ಮನಾಗಿದ್ದೆವು. ಅದೇ ರೀತಿ ನಮ್ಮ ಕಾರ್ಯಕರ್ತರಿಗೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಚರ್ಚೆ ನಡೆಸದಂತೆ ಸೂಚನೆಯನ್ನು ಕೊಟ್ಟಿದ್ದೆವು. ಆದರೆ ಜೂನ್ 23ರಂದು ಯುವಕ ಮತ್ತು ಆತನ ಕುಟುಂಬ ಮದುವೆ ನಿರಾಕರಿಸಿದಾಗ ಯುವತಿಯ ತಾಯಿ ಅನಿವಾರ್ಯವಾಗಿ ಯುವಕನ ವಿರುದ್ಧ ಕೇಸು ದಾಖಲಿಸಿ ಸಂಘಪರಿವಾರ- ಬಿಜೆಪಿ ನಾಯಕರಲ್ಲಿ ನ್ಯಾಯ ಕೊಡಿಸಲು ಮೊರಯಿಟ್ಟರು. ಆದರೆ ಅಲ್ಲೂ ಪ್ರತಿಕ್ರಿಯೆ ಸಿಗದ ಬಳಿಕ ನ್ಯಾಯಕ್ಕಾಗಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿ ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವಾಗಲಾದರೂ ಬಿಜೆಪಿ-ಸಂಘಪರಿವಾರದ ಮುಖಂಡರು ಯುವತಿಗೆ ನ್ಯಾಯ ಕೊಡಿಸಲು ಮುಂದೆ ಬರಬೇಕಾಗಿತ್ತು.*

*ನಂತರ ಸಂತ್ರಸ್ತೆಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಹಿಂದುತ್ವ ನಾಯಕರ ವಿರುದ್ಧ ಹೇಳಿಕೆ ಕೊಟ್ಟಾಗಲು ನಾವು ಕಾದು ನೋಡಿದೆವು. ಇನ್ನಾದರು ಇವರು ನ್ಯಾಯ ನೀಡಲು ಮುಂದೆ ಬರುತ್ತಾರ ಎಂದು. ಆದರೆ ನಮ್ಮ ನಿರೀಕ್ಷೆಗಳೆಲ್ಲ ಹುಸಿಯಾಗತೊಡಗಿತು. ಸಂತ್ರಸ್ತೆಯ ತಾಯಿಯು ನ್ಯಾಯದ ನಿರೀಕ್ಷೆಯನ್ನೇ ಮರೆತು ನಿಸ್ಸಹಾಯಕರಾಗಿದ್ದರು.*

ಆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಸಾಂಕೇತಿಕ ಪ್ರತಿಭಟನೆ ಮಾಡಿ ಆ ಪ್ರತಿಭಟನೆಗೆ ಸಂತ್ರಸ್ತೆಯ ತಾಯಿಯನ್ನು ಆಹ್ವಾನಿಸಲು ತೀರ್ಮಾನಿಸಿದೆವು. ಆದರೆ ಸಂತ್ರಸ್ತೆಯ ತಾಯಿ ಪ್ರತಿಭಟನೆಗೆ ಬರುವುದು ಬಹಿರಂಗವಾದರೆ ಸಾಕಷ್ಟು ಸಂಖ್ಯೆಯಲ್ಲಿ ಜ‌ನ ಹಾಗೂ ಮಾಧ್ಯಮದವರು ಸೇರುತ್ತಿದ್ದರು. ಆದರೆ ಸಂತ್ರಸ್ತೆಯ ತಾಯಿ ಬರುವುದನ್ನು ತಡೆಯುವ ಪ್ರಯತ್ನ ಹಿಂದುತ್ವವಾದಿಗಳು ಮಾಡುತ್ತಾರೆ ಎಂಬುದು ನಮಗೆ ತಿಳಿದಿತ್ತು. ಹಾಗಾಗಿ ಅದನ್ನು ಗುಟ್ಟಾಗಿ ಇಟ್ಟಿದ್ದೆವು, ಯಾಕೆಂದರೆ ನಮ್ಮ ಉದ್ದೇಶ ಸ್ಪಷ್ಟವಾಗಿತ್ತು. ಒಂದು ವೇಳೆ ಸಂತ್ರಸ್ತೆಯ ತಾಯಿ ಪ್ರತಿಭಟನೆಗೆ ಬರದಿದ್ದರೆ ಸಾದಾರಣ ಪ್ರತಿಭಟನೆಯ ತರ ಆಗುತ್ತಿತ್ತು. ನಮಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿಸುವುದು ಮುಖ್ಯ ಉದ್ದೇಶ ಆಗಿರಲಿಲ್ಲ ಬದಲಿಗೆ ಸಂತ್ರಸ್ತೆಗೆ ನ್ಯಾಯ ಸಿಗುವುದು ಮುಖ್ಯವಾಗಿತ್ತು. ಅವರು ಬಂದರೆ ಅದೊಂದು ದೊಡ್ಡ ಸುದ್ದಿಯಾಗಿ ಆಡಳಿತಕ್ಕೆ ಹಾಗೂ ಬಿಜೆಪಿಗೆ ಒತ್ತಡ ಸೃಷ್ಟಿಯಾಗಿ ಹೇಗಾದರೂ ನ್ಯಾಯ ದೊರಕಿಸಿ ಕೊಡುವುದು ಅನಿವಾರ್ಯವಾಗಬಹುದು ಎಂಬ ಸ್ಪಷ್ಟ ಯೋಚನೆ ನಮ್ಮದಾಗಿತ್ತು, ಅದರಲ್ಲಿ ನಾವು ಭಾಗಶಃ ಯಶಸ್ವಿ ಆದೆವು.
(ವಿಶೇಷ ಎಂದರೆ ಈ ಸಂದರ್ಭದಲ್ಲಿ ಪುತ್ತೂರಿನ ಕೆಲವು ಮುಸ್ಲಿಂ ಮುಖಂಡರ ಮೂಲಕ ಆರೋಪಿಯ ಹತ್ತಿರದ ಸಂಬಂದಿಯು ಆದ ಬಿಜೆಪಿ ನಾಯಕನ ಕಡೆಯಿಂದ ಪ್ರತಿಭಟನೆ ಮಾಡದಂತೆ ದಮ್ಮಯ್ಯ ದಕ್ಕಯ್ಯ ಹಾಕಿದ್ದರು.)
ನಾವು ಅಂದುಕೊಂಡಂತೆ ನಮ್ಮ ಪ್ರತಿಭಟನೆಯ ಬಳಿಕ ಸಮರೋಪಾದಿಯಲ್ಲಿ ಸಂತ್ರಸ್ತೆಯ ಕಾಲಡಿಗೆ ನಾ ಮುಂದು ತಾ ಮುಂದು ಎಂದು ಹೋಗಿ ನ್ಯಾಯದ ಭರವಸೆಯನ್ನು ನೀಡಲು ತೊಡಗಿದರು ವಿಶೇಷ ಅಂದರೆ ಅದಕ್ಕಿಂತ ಮೊದಲು ಯುವತಿಯ ಕುಟುಂಬ ಇದೇ ನಾಯಕರ ಕಾಲಡಿಗೆ ಹೋದಾಗ *ಅದು ಅವರು ಒಪ್ಪುವುದಿಲ್ಲಮ್ಮ, ನೀವೆ ಸರಿಪಡಿಸಿಕೊಳ್ಳಿ ಅಮ್ಮ* ಎಂದು ತಲೆ ಸವರಿ ಕಳಿಸುತ್ತಿದ್ದವರಿಗೆ ಈಗ ಬೆವರಿಳಿದಿದೆ. ಏನೇ ಆಗಲಿ ಯುವತಿಗೆ ಅನ್ಯಾಯವಾಗಿದೆ, ನ್ಯಾಯ ದೊರಕಿಸಿ ಆಕೆಗೆ ಭವಿಷ್ಯ ರೂಪಿಸವುದು SDPI ಪಕ್ಷದ ಕರ್ತವ್ಯವಾಗಿದೆ ಅದನ್ನು ನಿಭಾಯಿಸಿದ ಸಂತೃಪ್ತಿ ಪಕ್ಷದ ನಾಯಕರಲ್ಲಿದೆ. ಆರೋಪಿ ಹಾಗೂ ಅವರ ಕುಟುಂಬವನ್ನು ಮನವೊಲಿಸಿ ಎರಡೂ ಕುಟುಂಬವನ್ನು ಒಂದು ಮಾಡಿ, ಯುವಕ ಯುವತಿ ಸತಿಪತಿಗಳಾಗಿ ಬಾಳುವುದು ಅನಿವಾರ್ಯವಾಗಿದೆ‌. ಒಂದು ವೇಳೆ ಯುವಕ ಹಾಗೂ ಕುಟುಂಬ ಅದಕ್ಕೆ ಒಪ್ಪದೇ ಇದ್ದಲ್ಲಿ ಮಾತ್ರ ಅತನಿಗೆ ಕಾನೂನು ರೀತಿಯ ಕಠಿಣ ಶಿಕ್ಷೆ ಆಗಬೇಕು.

ಹದಿಹರೆಯದ ಪ್ರಾಯದಲ್ಲಿ ಕ್ಷಣಿಕ ಸುಖಕ್ಕೋಸ್ಕರ ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಪೋಷಕರು ತಲೆ ತಗ್ಗಿಸಿ ನಡೆಯುವಂತೆ ಮಾಡುವ ಯುವಕ ಯುವತಿಯರು ಈ ಪ್ರಕರಣದಿಂದ ಪಾಠ ಕಲಿಯಬೇಕು.
ಮಾತ್ರವಲ್ಲದೆ ನಾವು ಸದಾ ಹಿಂದುಗಳ ಪರ ಎನ್ನುತ್ತಾ ಬೀದಿ ರಂಪಾಟ ಮಾಡುವ ಸಂಘಪರಿವಾರ ಮತ್ತು ಬಿಜೆಪಿಯ ನೈಜ ಮುಖವನ್ನು ಅರಿಯಲು ಹಿಂದೂ ಸಮುದಾಯಕ್ಕೆ ಇದು ಸಕಾಲಿಕ ಸಮಯವಾಗಿದೆ. ಅವರದ್ದು ಏನಿದ್ದರೂ ಆರೋಪಿ ಮುಸ್ಲಿಂ ಆದರೆ ಮಾತ್ರ ಅವರ ಹಿಂದು ಪ್ರೇಮ ದಿಢೀರನೆ ಜಾಗೃತವಾಗುವುದು. ಇವರಲ್ಲಿ ಹಿಂದು ಪ್ರೇಮ ಇಲ್ಲ ಬದಲಿಗೆ ಮುಸ್ಲಿಂ ದ್ವೇಷವನ್ನು ತೋರ್ಪಡಿಸಲು ಹಿಂದುಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರಷ್ಟೆ. ನಾಲ್ಕು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಬಡಗನ್ನೂರಿನ ಬಿಜೆಪಿ-ಸಂಘಪರಿವಾರದಲ್ಲಿ ಸಕ್ರಿಯವಾಗಿದ್ದ ಕುದ್ಕಾಡಿ ನಾರಾಯಣ ರೈ ಎಂಬಾತ ತನ್ನ ತೋಟದ ಕೆಲಸಕ್ಕೆ ಬರುತ್ತಿದ್ದ 18 ವರ್ಷ ಪ್ರಾಯದ ದಲಿತ ಬಾಲಕಿಯನ್ನು ಲೈಂಗಿಕವಾಗಿ ಬಳಸಿ ಮಗು ಕರುಣಿಸುವಂತೆ ಮಾಡಿದ್ದ. ಆಗಲೂ ಹಿಂದುತ್ವವಾದಿ ಸಂಘಟನೆಗಳು ಮೌನಕ್ಕೆ ಜಾರಿತ್ತು, ಅಂದು ಎಸ್‌ಡಿಪಿಐ, ದಲಿತ ಸಂಘಟನೆಗಳು ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳು ಧ್ವನಿ ಎತ್ತಿದ ನಂತರ ಆತನ ಬಂಧನವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆತನಿಗೆ ಜಾಮೀನು ದೊರಕಿತ್ತು.

*ಪುತ್ತೂರು ಪ್ರಕರಣದಲ್ಲಿ ಯುವಕ ಮದುವೆ ಆಗಲು ಒಪ್ಪದೇ ಇದ್ದರೆ ಕೆಲವೇ ದಿನಗಳಲ್ಲಿ ಜಾಮೀನು ಸಿಗದಂತೆ ನೋಡಿಕೊಳ್ಳುವುದು ಪೋಲಿಸ್ ಇಲಾಖೆಯ ಜವಾಬ್ದಾರಿಯಾಗಿದೆ ಅ ಜವಾಬ್ದಾರಿಯನ್ನು ಇಲಾಖೆ ನಿರ್ವಹಿಸಬಹುದು ಎಂಬುದು ನಮ್ಮ ನಂಬಿಕೆ. ಆ ನಂಬಿಕೆ ಹುಸಿಯಾಗದಿರಲಿ.*

02/07/2025

ಮೀನು ಕದ್ದ ಒಂದೇಒಂದು ಕಾರಣಕ್ಕೆ ಈರೀತಿ ಮಾಡೂದು ಖಂಡನೀಯ ಆರೋಪಿಗಳಿಗೆ  ತಕ್ಕ ಶಿಕ್ಷೆ ನೀಡಬೇಕು ಆ ಮಹಿಳೆ ಮೀನು ಕದ್ದು ತೆಗೆಬೇಕಾದ್ರೆ ಆ  ಮಹಿಳೆ...
21/03/2025

ಮೀನು ಕದ್ದ ಒಂದೇಒಂದು ಕಾರಣಕ್ಕೆ ಈರೀತಿ ಮಾಡೂದು ಖಂಡನೀಯ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು
ಆ ಮಹಿಳೆ ಮೀನು ಕದ್ದು ತೆಗೆಬೇಕಾದ್ರೆ ಆ ಮಹಿಳೆಯ ಮನೆಯಲ್ಲಿ ಎಷ್ಟು ಕಷ್ಟದ ಜೀವನವಾಗಿರಬಹುದು ಅದನ್ನು ಅರ್ಥ ಮಾಡಿಕೊಳ್ಳದಷ್ಟು ಅಮಾನವೀಯ ಜನರು ಇರೂದ ಅಲ್ಲಿ ಮಾನವೀಯತೆ ಅನ್ನುವುದು ಇಲ್ಲವೇ ಕದ್ದುತೆಗ್ಗೆಯುವ ಅನಿವಾರ್ಯತೆ ಆ ತಾಯಿಗೆ ಇರಬಹುದು ಯಾರಿಗ್ಗೊತ್ತು ಆ ಮಹಿಳೆಯ ಮನೆಯಲ್ಲಿ ಮಕ್ಕಳು ಹಸಿದಿರಲು ಬಹುದು
ಸರ್ಕಾರ ಆ ತಾಯಿಗೆ ದೊಡ್ಡ ಮೊತ್ತದ ಪರಿಹಾರವನ್ನು ಘೋಷಿಸ ಬೇಕು ಮತ್ತು ಅಲ್ಲಿನ ಸಂಘ ಸಂಸ್ಥೆಗಳು ಆ ತಾಯಿಯ ಮನೆಗೆ ಬೇಟಿನೀಡಬೇಕು ಕಯ್ಯಲ್ಲಾದ ಸಹಾಯ ಮಾಡಬೇಕು ಮತ್ತು ಅಲ್ಲಿನ ಶ್ರೀಮಂತರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ದೇವರು ನಿಮಗೆ ನೀಡಿದ ಸಂಪತ್ತಲ್ಲಿ ಬಡವರ ಪಾಲಿದೆ ಅದು ಅವರಿಗೆ ನೀಡಲೇಬೇಕು ಇದರಲ್ಲಿ ಜಾತಿ ಧರ್ಮ ನೋಡದಿರಿ

03/02/2025

*ಈ ಸಲ ಎಕ್ಸಾಮ್ ನಲ್ಲಿ ಏನು ಬರೆದಿದ್ದಾನೋ ಏನೋ..! ಟ್ಯೂಷನ್ ಹೋಗಿಯೂ ಬದಲಾವಣೆ ಇಲ್ಲ🤦🏼‍♂️*

*ಚಿಂತೆ ಬಿಡಿ ಪರಿಹಾರ ನಮ್ಮಲ್ಲಿದೆ..!*

*ಓದಲು , ಬರೆಯಲು ಕಷ್ಟ ಪಡುವ ಮಕ್ಕಳ ಮಾನಸಿಕ ಅವಸ್ಥೆಯನ್ನು ಅರ್ಥಮಾಡಿಕೊಂಡು ಒಂದು ಮಗುವಿಗೆ ಒಂದು ಟೀಚರ್ ಎಂಬ ಉತ್ತಮ ರೀತಿಯಲ್ಲಿ ಮಗುವಿನ ಸಮಸ್ಯೆಯನ್ನು ಪರಿಹರಿಸುವ ಕೇಂದ್ರ*

*📌ಇನ್ ಲೈಟ್ ಇದೀಗ ನಿಮ್ಮೂರಲ್ಲಿ*

For more details
*7349507886*

Address

Indi

Website

Alerts

Be the first to know and let us send you an email when Public Karnataka posts news and promotions. Your email address will not be used for any other purpose, and you can unsubscribe at any time.

Share