Siddi TV

Siddi TV Siddi TV | ಸಿದ್ದಿ ಟಿವಿ
"ಇದು ಕನ್ನಡಿಗರ ಧ್ವನಿ"
(3)

16/08/2026

ನೂತನ ಕಂಪ್ಲಿ ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ: ಶಾಸಕ ಜೆ.ಎನ್. ಗಣೇಶ್

ನೂತನ ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ತಿಳಿಸಿದ್ದಾರೆ.

ಇದೇ ವೇಳೆ, LLC ಕಾಲುವೆಯ ಬಲದಂಡೆಯ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಕ್ರಮ ಕೈಗೊಳ್ಳಲು ಇಂದು ಬೆಂಗಳೂರಿಗೆ ತೆರಳುತ್ತಿದ್ದು, ಮುಖ್ಯಮಂತ್ರಿ ಅವರೊಂದಿಗೆ ಹಾಗೂ ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಿ ರೈತರಿಗೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಜೆ.ಎನ್. ಗಣೇಶ್ ಹೇಳಿದ್ದಾರೆ.

ನೂತನ ಸೇತುವೆ ನಿರ್ಮಾಣ ಹಾಗೂ ರೈತರ ನೀರಿನ ಸಮಸ್ಯೆ ಕುರಿತು ಶಾಸಕರ ಹೇಳಿಕೆ ಇದೀಗ ಗಮನ ಸೆಳೆದಿದೆ.

*ಇಟಗಿ : ಖಡ್ಗ ಹಿಡಿದು ಹೋರಾಡುವ ಕಾಲ ಮುಗಿತು, ಇದು ಪೆನ್ನು ಹಿಡಿದು ಹೋರಾಡಬೇಕು : ಕಂಪ್ಲಿ ಶಾಸಕ ಗಣೇಶ್-Siddi TV**ಕ್ರಾಂತಿವೀರ ಸಂಗೊಳ್ಳಿ ರಾ...
16/08/2026

*ಇಟಗಿ : ಖಡ್ಗ ಹಿಡಿದು ಹೋರಾಡುವ ಕಾಲ ಮುಗಿತು, ಇದು ಪೆನ್ನು ಹಿಡಿದು ಹೋರಾಡಬೇಕು : ಕಂಪ್ಲಿ ಶಾಸಕ ಗಣೇಶ್-Siddi TV*

*ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭಕ್ತ ಕನಕದಾಸರ ಪುತ್ಥಳಿ ಉದ್ಘಾಟನೆ*

ಕಂಪ್ಲಿ ತಾಲೂಕಿನ ನಂ.1 ಇಟಗಿ ಗ್ರಾಮದಲ್ಲಿ ಹಾಲಮತ ಸಮಾಜದವರು ಆಯೋಜಿಸಿದ್ದ ಕ್ರಾಂ...

150 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಜೋಗತಿ ರಾಜಮ್ಮ-Siddi TVಕಂಪ್ಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್...
15/08/2026

150 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಜೋಗತಿ ರಾಜಮ್ಮ-Siddi TV

ಕಂಪ್ಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀ ಮಾತಾ ಜೋಗತಿ ರಾಜಮ್ಮ ಅಮ್ಮನವರು 150 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.

ಭಿಕ್ಷಾಟನೆಯಿಂದ ಬಂದ ಹಣವನ್ನು ಕೂಡಿಟ್ಟು ಸಮಾಜ ಸೇವೆಗೆ ಬಳಸುತ್ತಿರುವ ಜೋಗತಿ ರಾಜಮ್ಮ ಅವರು, ತಮ್ಮ ಸೇವಾ ಕಾರ್ಯಗಳ ಮೂಲಕ ಇತರ ಮಂಗಳಮುಖಿಯರಿಗೆ ಸ್ಪೂರ್ತಿಯಾಗಿದ್ದಾರೆ. ಈ ಹಿಂದೆಯೂ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ರಾಜಮ್ಮ ಅವರ ಸೇವೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರದ ಮೂಲಕ ಶ್ಲಾಘಿಸಿದ್ದರು ಎಂದು ತಿಳಿಸಲಾಯಿತು.

ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಜೋಗತಿ ರಾಜಮ್ಮ ಅವರನ್ನು ಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕರ ಬಳಗದ ವತಿಯಿಂದ ಸನ್ಮಾನಿಸಿ, ಅವರ ಸಮಾಜ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಹೊಸಮನೆ ಹನುಮಂತಪ್ಪ, ಉಪಾಧ್ಯಕ್ಷ ಗೌಡ್ರು ಕನಕಪ್ಪ ಹಾಗೂ ಸರ್ವ ಸದಸ್ಯರು, ಮುಖ್ಯಗುರುಗಳಾದ ಸಂಗನಗೌಡ ಸರ್, ಸವಿತಾ ಮೇಡಂ ಸೇರಿದಂತೆ ಶಿಕ್ಷಕರ ಬಳಗ ಹಾಗೂ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರಾದ ಶಂಕರ, ನಾಗರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೋಗತಿ ರಾಜಮ್ಮ ಅವರ ಈ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

-Raghuveer Siddi TV

14/08/2026

Happy Independence Day

ಬದುಕಿರುವ ವ್ಯಕ್ತಿಯನ್ನು ಮೃತರೆಂದು ಪಟ್ಟಿ ಮಾಡಿದ ಚುನಾವಣಾ ಆಯೋಗ: ರಾಮಸಾಗರದಲ್ಲಿ ಆಘಾತಕಾರಿ ಘಟನೆಕಂಪ್ಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸ...
14/08/2026

ಬದುಕಿರುವ ವ್ಯಕ್ತಿಯನ್ನು ಮೃತರೆಂದು ಪಟ್ಟಿ ಮಾಡಿದ ಚುನಾವಣಾ ಆಯೋಗ: ರಾಮಸಾಗರದಲ್ಲಿ ಆಘಾತಕಾರಿ ಘಟನೆ

ಕಂಪ್ಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ರಾಮಸಾಗರ ಗ್ರಾಮದ ಮತದಾರರ ಪಟ್ಟಿಯಲ್ಲಿ ಆಘಾತಕಾರಿ ಲೋಪವೊಂದು ಬೆಳಕಿಗೆ ಬಂದಿದೆ. ರಾಮಸಾಗರ ಗ್ರಾಮದ ನಿವಾಸಿ ಆನೆ ಪ್ರಕಾಶ (ತಂದೆ: ಆನೆ ಈರಪ್ಪ) ಅವರನ್ನು ಚುನಾವಣಾ ಆಯೋಗವು ಮೃತಪಟ್ಟಿದ್ದಾರೆ ಎಂದು ಪರಿಗಣಿಸಿ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಎಎಸ್‌ಡಿಡಿಒ (ASDDO) ಪಟ್ಟಿಯಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಆನೆ ಪ್ರಕಾಶ ಅವರಿಗೆ ಸುಮಾರು 70 ವರ್ಷ ವಯಸ್ಸಾಗಿದ್ದು, ವಯಸ್ಸಿನ ಆಧಾರದ ಮೇಲೆ ಅವರನ್ನು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ ಎನ್ನಲಾಗಿದೆ. ಆದರೆ ವಾಸ್ತವವಾಗಿ ಅವರು ಜೀವಂತವಾಗಿದ್ದು, ತಮ್ಮ ಸ್ವಂತ ನಿವಾಸದಲ್ಲಿಯೇ ವಾಸಿಸುತ್ತಿದ್ದಾರೆ. ಚುನಾವಣಾ ಆಯೋಗದ ಪಟ್ಟಿಯಲ್ಲಿ ಮೃತರೆಂದು ನಮೂದಿಸಲಾಗಿರುವ ವ್ಯಕ್ತಿ ತಾವೇ ಎಂದು ಸ್ಪಷ್ಟಪಡಿಸಿರುವ ಆನೆ ಪ್ರಕಾಶ ಅವರು, ತಮ್ಮ ಆಧಾರ್ ಕಾರ್ಡ್ ತೋರಿಸಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ವಸಂತರಾಜ್ ಕಹಳೆ, ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

“ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣ ಗೊಂದಲಕಾರಿ, ಅಸಂಬದ್ಧ ಹಾಗೂ ಅಸಂವಿಧಾನಿಕವಾಗಿದೆ. ಎಎಸ್‌ಡಿಡಿಒ ಪಟ್ಟಿಯಲ್ಲಿ ಬದುಕಿರುವವರನ್ನೇ ಸತ್ತಿದ್ದಾರೆಂದು ಪಟ್ಟಿ ಮಾಡಲಾಗಿದೆ. ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ 1ನೇ ವಾರ್ಡ್‌ನ ನಿವಾಸಿ ಆನೆ ಪ್ರಕಾಶ ಅವರೇ ಇದಕ್ಕೆ ಜೀವಂತ ಸಾಕ್ಷಿ. ವಾಸ್ತವವಾಗಿ ಬದುಕಿರುವ ವ್ಯಕ್ತಿಯನ್ನು ಮೃತರೆಂದು ದಾಖಲಿಸಿ ಮತಾಧಿಕಾರ ಕಸಿಯುವ ಪ್ರಯತ್ನ ನಡೆದಿದೆ. ಈ ಲೋಪಕ್ಕೆ ಚುನಾವಣಾ ಆಯೋಗ, ಸ್ಥಳೀಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಹೊಣೆಗಾರರಾಗಬೇಕು,” ಎಂದು ಅವರು ಆರೋಪಿಸಿದ್ದಾರೆ.

ಮತದಾರರ ಅಸ್ತಿತ್ವವನ್ನು ಸಮರ್ಪಕವಾಗಿ ಪರಿಶೀಲಿಸದೇ ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಸೇರಿಸಿ, ಮತದಾರರ ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿರುವುದು ಗಂಭೀರ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಆನೆ ಪ್ರಕಾಶ ಅವರು ಫಾರ್ಮ್-6 ಅರ್ಜಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿರುವುದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬದುಕಿರುವ ವ್ಯಕ್ತಿಯನ್ನೇ ಮೃತರೆಂದು ದಾಖಲಿಸಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಹಾಗೂ ಆನೆ ಪ್ರಕಾಶ ಅವರ ಮತದಾರರ ಹಕ್ಕನ್ನು ತಕ್ಷಣ ಮರುಸ್ಥಾಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-Siddi TV Raghuveer

ಇಂದು ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ
11/08/2026

ಇಂದು ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ

💐
10/08/2026

💐

80TMCಯತ್ತ TB ಡ್ಯಾಂ ನೀರು ಸಂಗ್ರಹ
10/08/2026

80TMCಯತ್ತ TB ಡ್ಯಾಂ ನೀರು ಸಂಗ್ರಹ

06/08/2026

*Kampli : TB ಡ್ಯಾಂ ನೀರಿನ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಶಾಸಕ ಜೆ.ಎನ್. ಗಣೇಶ್|Siddi TV*

https://youtu.be/xA1_UM3odFY

Address

Siddi Tv
Kampli
583132

Alerts

Be the first to know and let us send you an email when Siddi TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Siddi TV:

Shortcuts

Share