Canara Plus Channel

Canara Plus Channel ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ವಾಹಿನಿ

10/08/2025

10-8-25 ಧರ್ಮಸ್ಥಳದಂತಹ ಶ್ರೇಷ್ಠ ಕ್ಷೇತ್ರದ ಘನತೆಗೆ ಕುಂದು ತರುವ ಇಂತಹ ನಡೆಗಳನ್ನು ಭಕ್ತರಾದ ನಾವು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯ ಸರ್ಕಾರವು ಈ ವಿಷಯದ ಕುರಿತು ತಕ್ಷಣವೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.

10/08/2025

10-8-25 ಜನತೆಯ ಹಲವು ವರ್ಷದ ಬೇಡಿಕೆಯಂತೆ ಶಿರಸಿಯ ಟ್ರಾಫಿಕ್ ಪೊಲೀಸ್ ಠಾಣೆ ಕಳೆದ 8 ತಿಂಗಳ ಹಿಂದೆ ಪ್ರಾರಂಭಗೊಂಡು ತನ್ನ ಸೇವೆಯನ್ನು ಜನತೆಗೆ ನೀಡುತ್ತಿದೆ. ಇದೀಗ ಸಂಚಾರ ಸೂಚನಾ ನಿಯಮಗಳ ನಾಮಫಲಕ ಅಳವಡಿಸುವ ಕಾರ್ಯ ಸಾಗುತ್ತಿದೆ.

10/08/2025

10-8-25 ಭಟ್ಕಳದ ಮಾರುಕೇರಿಯ ಕೋಟಾಗುಂಡ ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

10/08/2025

10-8-25 ಕುಮಟಾ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆಯ 32ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ಪಟ್ಟಣದ ಹೆರವಟ್ಟಾ, ದೇವರಹಕ್ಕಲ, ಚಿತ್ರಗಿ, ಮಾಸೂರು ಕ್ರಾಸ್ ಸೇರಿದಂತೆ ನಗರ ಪ್ರದೇಶ, ಭಟ್ಕಳ ಹಾಗೂ ಸಾಗರದ ನಾಮಧಾರಿ ಕೂಟದಿಂದ ಗುರು ಸೇವಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

10/08/2025

10-8-25 ಕಾಳಿನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿದು ಒಂದು ವರ್ಷ ಕಳೆದಿದೆ. ಕುಸಿದುಬಿದ್ದ ಸೇತುವೆಯ ಅವಶೇಷಗಳನ್ನು ತೆಗೆಯಲಾಗಿದೆಯೇ ಹೊರತು ಹೊಸ ಸೇತುವೆ ನಿರ್ಮಾಣದ ಯಾವ ಸೂಚನೆಯೂ ಕಂಡುಬರುತ್ತಿಲ್ಲ. ಆದರೆ ಇದೀಗ ಇರುವ ಇಕ್ಕಟ್ಟಾದ ಸೇತುವೆ ಮೇಲೆಯೇ ದ್ವಿಮುಖ ಸಂಚಾರ ಮುಂದುವರಿದಿದ್ದು ಹೊಸ ಸೇತುವೆ ನಿರ್ಮಾಣ ಯಾವಾಗ ಎಂದು ಸಾರ್ವಜನಿಕರು ಪ್ರಶ್ನೆ ಮಾಡತೊಡಗಿದ್ದಾರೆ.

10/08/2025

10-8-25 ಕಾರವಾರ ತಾಲೂಕಿನ ಶಿರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ.ನಂ. 52 ರ ಸಮೀಪ ನಡೆಯುತ್ತಿರುವ ಖಾರ್ಲ್ಯಾಂಡ್ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರ, ಸಾರ್ವಜನಿಕ ಹಣದ ದುರ್ಬಳಕೆ ಹಾಗೂ ಕಾಂಡ್ಳಾ ಗಿಡಗಳ ನಾಶದ ಬಗ್ಗೆ ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯೇ ಅವರು ಕಾರವಾರ-ಅಂಕೋಲಾ ಶಾಸಕ ಸತೀಶ ಕೃಷ್ಣ ಸೈಲ್ ಅವರಿಗೆ ದೂರು ನೀಡಿದ್ದಾರೆ.

10/08/2025

10-8-25 ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಗೆ ನೆರವಾಗುವ ಕಾರ್ಯಕ್ಕೆ ಎಲ್ಲರು ಮುಂದಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದರು.

09/08/2025

ಕೆಲ ವ್ಯಕ್ತಿಗಳು ಹಾಗೂ ಅನಧಿಕೃತ ಸಂಘಟನೆಗಳು ಸರಕಾರದ ವಿವಿಧ ಸೌಲಭ್ಯಗಳನ್ನು ನಿಮಗೆ ಮಾಡಿಸಿಕೊಡುತ್ತೇನೆ ಎಂದು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು,ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ತಿಳಿಸಿದ್ದಾರೆ

09/08/2025

ಪೌರ ಕಾರ್ಮಿಕರು ನಗರದ ಸ್ವಚ್ಛತೆಯ ಜೀವಾಳ. ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಮುಟ್ಟಿಸುವಲ್ಲಿ ವ್ಯತ್ಯಾಸವಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸತೀಶ್ ಪಿ. ನಾಯ್ಕ ಹೇಳಿದರು

09/08/2025

ಸಿದ್ದಾಪುರ ತಾಲೂಕು ಹೆಗ್ಗರಣಿ ಪಂಚಾಯತ್ ವ್ಯಾಪ್ತಿಯ ಹೊಸ್ತೋಟ ಗ್ರಾಮದ ಮಹಿಳೆಯರು ತಮ್ಮ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಜ ಸೇವಕಿ ತಾರಾ ಉಮೇಶ್ ಚೈನಯ್ಯ ಅವರ ನೇತೃತ್ವದಲ್ಲಿ ಮಹಿಳೆಯರು ಕಾರವಾರದ ಅಬ್ಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಹೊಸ್ತೋಟ ಗ್ರಾಮದಲ್ಲಿಯೂ, ನೀಲಕುಂದ ಮತ್ತು ತಂಡಾಗುಂಡಿ ಪ್ರದೇಶಗಳಲ್ಲಿಯೂ ಮದ್ಯದಂಗಡಿಗಳಿಗೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿದ್ದಾರೆ

Address

Old Fish Market Road
Kumta
581343

Alerts

Be the first to know and let us send you an email when Canara Plus Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Canara Plus Channel:

Share