Ell kaani

Ell kaani Unveiling the art, culture, customs, news, wonders of the coast

13/07/2025

ಉಡುಪಿ ಜಿಲ್ಲಾ ಪೊಲೀಸ್‌ ಹಾಗೂ ಜಂಬೂ ಸ್ಟಾರ್‌ ಸೆಕ್ಯುರಿಟಿ ಮತ್ತು ಫೆಸಿಲಿಟಿ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ರವರ ಸಹಭಾಗಿತ್ವದಲ್ಲಿ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರ ವಾರ್ಡ್‌ನಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ದೃಷ್ಠಿ ಯೋಜನೆಯನ್ನು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್‌ ಐಪಿಎಸ್‌ ರವರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿದರು. ಸೆಕ್ಯುರಿಟಿಗೆ ಸಂಬಂಧಿಸಿದಂತೆ ಏಜೆನ್ಸಿರವರ ಬೋಲೆರೋ ವಾಹನ ಮತ್ತು ಬೈಕ್‌ಗೆ ಪುಷ್ಪಾರ್ಚನೆ ಮಾಡಿ ಗಸ್ತಿಗೆ ಪೊಲೀಸ್ ಅಧಿಕ ರವರು ಚಾಲನೆ ನೀಡಿದರು....

12/07/2025

ಸೇತುವೆ ಅಡಿಯಲ್ಲಿ ಸಿಲುಕಿ ಹಾಕಿಕೊಂಡಿರುವ ಹಸುವೊಂದನ್ನು ಸುಳ್ಯ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿ ರಕ್ಷಿಸಿದ ಘಟನೆ ನಡೆದಿದೆ. ಸುಳ್ಳ ತಾಲೂಕು ಬೆಳ್ಳಾರೆ ಗ್ರಾಮದ ಜ್ಞಾನಗಂಗಾ ಶಾಲೆಯ ಬಳಿ ಈ ಘಟನೆ ನಡೆದಿದೆ. ಹಸುವೊಂದು ಸೇತುವೆಯ ಕೆಳಗಡೆ ನೀರಿನಲ್ಲಿ ಸಿಲುಕಿ ಹಾಕಿಕೊಂಡ ಹಿನ್ನಲೆಯಲ್ಲಿ ಸ್ಥಳೀಯರು ಕರೆ ಮಾಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ...

11/07/2025

ಕಾಪು ಹೊಸ ಮಾರಿಗುಡಿ ದೇವಳಕ್ಕೆ ಖ್ಯಾತ ನಟ ದಿ.ಪುನೀತ್‌ ರಾಜ್‌ ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್ ಕುಮಾರ್‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪುತ್ರಿ ವಂದಿತಾ ಪುನೀತ್‌ ರಾಜ್‌ ಕುಮಾರ್‌ ಜೊತೆಗೆ ದೇವಳಕ್ಕೆ ಆಗಮಿಸಿದ ಅವರನ್ನು ದೇವಳದ ಪರವಾಗಿ ಗೌರವಿಸಲಾಯಿತು....

11/07/2025

ಉಡುಪಿ ಜಿಲ್ಲಾ ಪೊಲೀಸ್‌ ರು ಈಗ, ಸಾರ್ವಜನಿಕರ ಮತ್ತು ಪೊಲೀಸ್‌ ನಡುವೆ ಇರುವ ಅಂತರ ದೂರ ಮಾಡಲು ಹೊರಟಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್‌ ಉಡುಪಿ ನಗರ ಠಾಣೆ ವತಿಯಿಂದ ಮನೆ ಮನೆಗೆ ಪೊಲೀಸ್‌ ೨೦೨೫ ಎನ್ನುವ ವಿನೂತನ ಕಾರ್ಯಕ್ರಮದ ಅಡಿ ನಗರದ ಪ್ರತಿ ಮನೆಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದಾರೆ....

09/07/2025

ಉಡುಪಿ ಜಿಲ್ಲೆಯ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಬೂರು ದಿಂದೊಟ್ಟು ಪರಿಸರದಲ್ಲಿ ಚಿರತೆಗಳ ಓಡಾಟ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಅಂಗಳದಲ್ಲಿ ಚಿರತೆ ಓಡಾಟ ಮಾಡುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು , ಸದ್ಯ ಚಿರತೆಯಿಂದಾಗಿ ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ...

09/07/2025

ಆಟೋ ಚಲಾಯಿಸುವಾಗಲೇ ಪ್ರತ್ಯಕ್ಷವಾದ ಹಾವು ಬೆಚ್ಚಿಬಿದ್ದ ಆಟೋ ಚಾಲಕ.... ಹಾವು ಕಂಡದ್ದೆ ತಡ ರಸ್ತೆ ಬದಿಗೆ ನಿಲ್ಲಿಸಿ ಹೊರಬಂದ ಆಟೋ ಚಾಲಕ, ಆಟೋ ಒಳಭಾಗದ ಡ್ಯಾಶ್ ಬೋರ್ಡ್ ಬಾಕ್ಸ್ ನಲ್ಲಿ ಅವಿತಿದ್ದ ಹಾವು. ಆಟೋ‌ ಡ್ಯಾಶ್ ಬಾಕ್ಸ್ ಒಳಗೆ ಅವಿತಿದ್ದ ವಿಷರಹಿತ ಸಿಲೋನ್ ಕ್ಯಾಟ್ ಸ್ನೇಕ್( ಬೆಕ್ಕು ಹಾವು), ದಾರಿ ನಡುವೆ ಸ್ಟೋರೇಜ್ ಬಾಕ್ಸ್ ನಿಂದ ಏಕಾಏಕಿ ಹೊರ ಬಂದ ಬೆಕ್ಕು ಹಾವು. ಹಾವಿನ ತಲೆ‌ ಕಂಡು ಹೌಹಾರಿ ಆಟೋ ಏಕಾಏಕಿ ನಿಲ್ಲಿಸಿದ ಚಾಲಕ, ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ. ಉರಗ ರಕ್ಷಕ ಪ್ರಾಣೇಶ್ ಪರ್ಕಳ ಅವರಿಗೆ ಕರೆ ಮಾಡಿದ ಚಾಲಕ.
ಸ್ಥಳಕ್ಕೆ ಬಂದ ಹಾವನ್ನ ರಕ್ಷಿಸಿ ಸಮೀಪದ ಅರಣ್ಯಕ್ಕೆ‌‌‌ ಬಿಟ್ಟು ಕಳುಹಿಸಿದ ಪ್ರಾಣೇಶ್ ಪರ್ಕಳ...

08/07/2025

ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಇಂದು ತಮ್ಮ ಕುಟುಂಬದೊಂದಿಗೆ ಕಾರ್ಕಳ ತಾಲೂಕಿನ ಐತಿಹಾಸಿಕ ಬೆಳ್ಮಣ್ಣು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಖಾಸಗಿ ಭೇಟಿ ನೀಡಿದರು. ಸಚಿವರು, ಕುಟುಂಬ ಸಮೇತವಾಗಿ ದೇಗುಲದಲ್ಲಿ ನಡೆಯುತ್ತಿದ್ದ ವಿಶೇಷ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ಚಂಡಿಕಾ ಹೋಮದ ಜೊತೆಗೆ ದೇಗುಲದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಮತ್ತು ಪೂಜೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರು....g.parameshwara_official

08/07/2025

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸ್ವಾಮೀಜಿಗಳು ತಲೆಯ ಮೇಲೆ ಹರಿವಾಣ ಇಟ್ಟು ನೃತ್ಯ ಸೇವೆ ನಡೆಸುವ ಅಪರೂಪದ ಸಂಪ್ರದಾಯ ಇದೆ. ಪರ್ಯಾಯ ನಡೆಸುತ್ತಿರುವ ಪುತ್ತಿಗೆ ಶ್ರೀಗಳು ಹರಿವಾಣ ನೃತ್ಯಸೇವೆ ನಡೆಸಿದ್ದಾರೆ. ಪ್ರಥಮ ಏಕಾದಶಿಯಿಂದ ಚಾತುರ್ಮಾಸ್ಯದ ನಾಲ್ಕು ತಿಂಗಳ ಕಾಲ ಪ್ರತಿ ಏಕಾದಶಿಯಂದು ರಾತ್ರಿ ಸ್ವಾಮೀಜಿಯವರು ಹರಿವಾಣ ನೃತ್ಯಸೇವೆ ನಡೆಸುತ್ತಾರೆ. ಪೂಜೆಯ ಬಳಿಕ ಗರ್ಭಗುಡಿಯ ಎದುರು ಚಂದ್ರ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ತೀರ್ಥ ಮಂಟಪದ ಎದುರು ಸ್ವಾಮೀಜಿ ಮಂಗಳಾರತಿ ಮಾಡುತ್ತಾರೆ ಬಳಿಕ ಭಾಗವತರು ದಾಸರ ಹಾಡುಗಳನ್ನು ಹಾಡುತ್ತಿರುವಾಗ ದೇವರಿಗೆ ಸಮರ್ಪಿಸಿದ ತುಳಸಿ ಹಾಗೂ ಹೂಗಳನ್ನು ಹರಿವಾಣದಲ್ಲಿ ಇರಿಸಿ ತಲೆಯ ಮೇಲೆ ಹೊತ್ತು ಸ್ವಾಮೀಜಿ ಸರಳವಾಗಿ ನರ್ತಿಸುತ್ತಾರೆ. ಏಕಾದಶಿಯ ದಿನವಿಡೀ ಉಪವಾಸವಿದ್ದು ರಾತ್ರಿ ಪೂಜೆಯಾದ ಬಳಿಕ ಈ ಸಂಪ್ರದಾಯ ನಡೆಯುತ್ತದೆ.....

08/07/2025

ಡಿವೈನ್‌ ಸ್ಟಾರ್‌, ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ 42ನೇ ಹುಟ್ಟುಹಬ್ಬವನ್ನು ಕುಂದಾಪುರದಲ್ಲಿ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಪ್ರಗತಿ ಶೆಟ್ಟಿ ಜೊತೆಗಿದ್ದು, ರಿಷಬ್‌ಗೆ ಕೇಕ್ ತಿನ್ನಿಸಿ ಪ್ರೀತಿಯಿಂದ ಶುಭ ಹಾರೈಸಿದ್ದಾರೆ. ಜೊತೆಗೆ 'ಕಾಂತಾರ: ಅಧ್ಯಾಯ 1' ಚಿತ್ರದ ತಂಡ ರಿಷಬ್ ಶೆಟ್ಟಿ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದೆ....

07/07/2025

ಕಾಂತಾರ ಚಿತ್ರ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಜಗದಗಲ ಹಬ್ಬಿಸಿದ್ದ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭ ರಿಷಬ್‌ ಶೆಟ್ಟಿ ದತ್ತು ಪಡೆದ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶುಭಾಶಯ ಕೋರಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ...
Shetty

07/07/2025

ಕರಾವಳಿಯ ಗಂಡು ಕಲೆ, ಆರಾಧನಾ ಕಲೆ ಯಕ್ಷಗಾನ, ಈ ಕಲೆಯನ್ನೇ ನಂಬಿ ಬದುಕುವ ನೂರಾರು ಕಲಾವಿದರಿದ್ದಾರೆ. ಆದರೆ ಮಳೆಗಾಲ ಬಂತೆಂದರೆ ಯಕ್ಷಗಾನ ಮೇಳಗಳ ತಿರುಗಾಟ ಇರೋದಿಲ್ಲ, ಅಲ್ಲೋಂದು ಇಲ್ಲೊಂದು ಅಪರೂಪದ ಪ್ರದರ್ಶನಗಳು ಬಿಟ್ಟರೆ ಕಲಾವಿದರು ನಿರುದ್ಯೋಗಿಗಳೂ ಎನ್ನಬಹುದು. ಹಾಗಾಗಿ ಮೇಳದ ಕಲಾವಿದರಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆ ಹೇಗೆ ಎನ್ನುವ ಮೂಡುವುದು ಸಹಜ, ಇಷ್ಟಿದ್ದರೂ ಕೂಡ ಒಂದಿಷ್ಟು ಕಲಾವಿದರು ಮಳೆಗಾಲದಲ್ಲಿ ಮನೆಮನೆಗೆ ಹೋಗಿ ಗೆಜ್ಜೆ ಸೇವೆ ಮಾಡುವ ಮೂಲಕ ಯಕ್ಷಗಾನದ ರಸವನ್ನು ಉಣಬಡಿಸುತ್ತಾರೆ. ಈ ಮೇಳಗಳನ್ನು ಚಿಕ್ಕಮೇಳ ಎಂದು ಕರೆಯುವ ಮೂಲಕ ಕರಾವಳಿಯ ಮನೆ ಮನೆಗಳಲ್ಲಿ ಬರಮಾಡಿಕೊಳ್ಳಲಾಗುತ್ತದೆ....
#ಚಿಕ್ಕಮೇಳ #ಯಕ್ಷಗಾನ 😍

06/07/2025

ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮ ಕೆರೆಬೈಲು ನಲ್ಲಿ ಹೊಸದಾಗಿ ಕಾಲುಸಂಕವೊಂದು ನಿರ್ಮಾಣವಾಗಿದೆ. ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಮುತುವರ್ಜಿ ಮತ್ತು ಅರುಣಾಚಲಂ ಚಾರಿಟೇಬಲ್‌ ಟ್ರಸ್ಟ್‌ ಬೆಂಗಳೂರು ಇವರ ಸಹಯೋಗದಲ್ಲಿ ಇಲ್ಲಿ ಕಾಲು ಸಂಕ ನಿರ್ಮಾಣವಾಗಿದೆ. ಈ ಭಾಗದಲ್ಲಿ ಮಳೆಗಾಲದಲ್ಲಿ ಅತೀ ಅಗತ್ಯವೆನಿಸಿದ್ದ ಕಾಲು ಸಂಕ ನಿರ್ಮಾಣದಿಂದಾಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ...

Address

Kundapura

Alerts

Be the first to know and let us send you an email when Ell kaani posts news and promotions. Your email address will not be used for any other purpose, and you can unsubscribe at any time.

Contact The Business

Send a message to Ell kaani:

Share