
19/08/2025
ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಮಿಂಚಲಿದ್ದಾರೆ ಕೊಡಗು ಮೂಲದ ಬಾಲಿವುಡ್ ನಟ ಕಂಬೆಯಂಡ ಗುಲ್ಶನ್ ದೇವಯ್ಯ !
ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹು ನೀರಿಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಕನ್ನಡ ಮೂಲದ ಆದರೆ ಬಾಲಿವುಡ್ನಲ್ಲಿ ಹೆಚ್ಚು ಪರಿಚಿತವಾಗಿರುವ ನಟ ಗುಲ್ಶನ್ ದೇವಯ್ಯ ನಟಿಸುತ್ತಿದ್ದಾರೆ. ಇವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಕುಲಶೇಖರ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜನ ರೀತಿ ಪೋಷಾಕು ಧರಿಸಿ ಸಿಂಹಾಸನದ ಮೇಲೆ ಕುಳಿತಿರುವ ಗುಲ್ಶನ್ ದೇವಯ್ಯ ಅವರಿರುವ ಪೋಸ್ಟರ್ ಅನ್ನು ಹೊಂಬಾಳೆ ಫಿಲ್ಮ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
ಗುಲ್ಶನ್ ದೇವಯ್ಯನವರು ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವ ನಟರು. ಬೆಂಗಳೂರಿನವರಾದ ಇವರು ಕೊಡವ ಜನಾಂಗದವರಾಗಿದ್ದು, ಕಂಬೆಯಂಡ ಮನೆತನಕ್ಕೆ ಸೇರಿದವರು. ಕಂಬೆಯಂಡ ದೇವಯ್ಯ ಹಾಗೂ ತಾಯಿ ಪುಷ್ಪಲತಾ ಅವರ ಏಕೈಕ ಪುತ್ರ.