Kodagu Breaking News

Kodagu Breaking News kodagu Breaking News

14/08/2023

*ಅಪಘಾತ-ಬೈಕ್ ಸವಾರ ಸಾವು*

ಗೋಣಿಕೊಪ್ಪಲಿನ ಕೈಕೇರಿ ಬಳಿ ಅಪಘಾತ
ಬೈಕ್ ಮತ್ತು ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ

ಇಂದು ಮಧ್ಯಾಹ್ನ ಸಂಭವಿಸಿದ ದುರ್ಘಟನೆ
ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಸವಾರ ಅಮೀಶ (23) ಮೃತ ದುರ್ದೈವಿ

ಮೃತ ಯುವಕ ಗೋಣಿಕೊಪ್ಪಲಿನ ಎಂಎಂ ಲೇಔಟ್ ನಿವಾಸಿ

ವಿರಾಜಪೇಟೆಯಿಂದ ಗೋಣಿಕೊಪ್ಪದತ್ತ ತೆರಳುತ್ತಿದ್ದ ಬೈಕ್

ಗೋಣಿಕೊಪ್ಪದಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ ಓಮ್ನಿವ್ಯಾನ್

ಸ್ಥಳಕ್ಕೆ ಗೋಣಿಕೊಪ್ಪಲು ಪೊಲೀಸರ ಭೇಟಿ.

ಕುಶಾಲನಗರ ಕಲಾಭವನಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ. 3.90 ಕೋಟಿ ರೂಗಳ ಯೋಜನೆ ಅಪೂರ್ಣ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕ ಡಾ.ಮಂತರ್ ಗೌಡ ಕೆಂ...
08/08/2023

ಕುಶಾಲನಗರ ಕಲಾಭವನಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ. 3.90 ಕೋಟಿ ರೂಗಳ ಯೋಜನೆ ಅಪೂರ್ಣ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕ ಡಾ.ಮಂತರ್ ಗೌಡ ಕೆಂಡಾಮಂಡಲ .

ಕಲಾಭವನ ಅನ್ನುವುದು ಕುಶಾಲನಗರದ ಸುತ್ತಮುತ್ತಲಿನ ಜನರ ಕನಸ್ಸು. ಇದರ ಕೆಲಸ ಶುರುವಾಗಿ ಹತ್ತಿರ 12 ಸುಧೀರ್ಘ ವರ್ಷಗಳಾಗಿದೆ. ಆದರೆ ಇನ್ನೂ ಲೋಕಾರ್ಪಣೆ ಆಗಿಲ್ಲ. ಇದರ ಬಗ್ಗೆ ಊರಿನ ಪ್ರಮುಖರು ಹಾಗೂ ಹಿತೈಷಿಗಳು ಹಲವಾರು ಸಲ ಮಾಧ್ಯಮ ಮುಖಾಂತರ , ಹೋರಾಟಗಳ ಮುಖಾಂತರ ಎಚ್ಚರಿಕೆ ಕೊಟ್ಟರೂ ಕಲಭವನದ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡುವ ಮನಸ್ಸು ಇಲ್ಲಿಯವರೆಗೆ ಯಾರು ಮಾಡಿಲ್ಲ. ಈಗಾಗಲೇ ಸರ್ಕಾರದಿಂದ ಈ ಕಟ್ಟಡದ ಕಾಮಗಾರಿಗೆ 3.90 ಕೋಟಿ ರೂಪಾಯಿ ಹಣ ವೆಚ್ಚ ಮಾಡಿಯೂ ಪೂರ್ಣಗೊಳ್ಳದೆ ಇರುವುದು ಹಾಗೆಯೇ ಕಾಮಗಾರಿ ಮುಗಿಯುವ ಹಂತ ಬಂದರೂ ಸಹ ಇದನ್ನು ಸಂಪೂರ್ಣ ಮಾಡುವ ಮನಸ್ಸು ಸಂಭಂದಪಟ್ಟ ಇಲಾಖೆ ಆಗಲಿ ಅಧಿಕಾರಿಗಳಾಗಲಿ ಮಾಡಿರುವುದಿಲ್ಲ .

ಇತ್ತೀಚೆಗೆ ಈ ಒಂಟಿ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು ಹಾಗೂ ಈ ಕಲಾಭವನದ ವಿಚಾರ ಮಡಿಕೇರಿ ಕ್ಷೇತ್ರದ ನೂತನ ಶಾಸಕರಾದ ಡಾ. ಮಂತರ್ ಗೌಡ ಅವರ ಗಮನಕ್ಕೆ ಬಂದಿದ್ದು ಮಾನ್ಯ ಶಾಸಕರು ಇಂದು ಕಲಾಭವನಕ್ಕೆ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಶಾಸಕರ ಅಧಿಕೃತ ಭೇಟಿಯ ಮಾಹಿತಿ ಇದ್ದರೂ ಸ್ಥಳಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಶಾಸಕ ಡಾ.ಮಂತರ್ ಗೌಡ ರವರು ಗರಂ ಆದರು.ನಂತರ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿದ ಶಾಸಕರು, ಕಲಾ ಭವನ ಕಟ್ಟಡ ಕಾಮಗಾರಿಯ ಬಗ್ಗೆ ಮಾಹಿತಿ ಕೇಳಿದಾಗ, ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕರು ಕೆಂಡಾಮಂಡಲರಾದ ಪ್ರಸಂಗ ಕೂಡ ನಡೆಯಿತು.

*ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರವನ್ನು ಮಂಜೂರು* *ಮಾಡುವಂತೆ  ಕೇಂದ್ರ ಆರೋಗ್ಯ ಸಚಿವರಿಗೆ ಪ್ರತಾಪ್* *ಸಿಂ...
08/08/2023

*ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರವನ್ನು ಮಂಜೂರು* *ಮಾಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಪ್ರತಾಪ್* *ಸಿಂಹ ಮನವಿ* .
ಇಂದು ಸಂಸದ ಪ್ರತಾಪ್ ಸಿಂಹ ಅವರು ನವ ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಿ, ಮೈಸೂರು ವೈದ್ಯಕೀಯ ಕಾಲೇಜು ವ್ಯಾಪ್ತಿಗೆ ಒಳಪಡುವ ಕೆಆರ್ ಆಸ್ಪತ್ರೆಗೆ ಹೊಸ ಒಪಿಡಿ ಬ್ಲಾಕ್ ನಿರ್ಮಾಣಕ್ಕೆ ಅನುದಾನ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಡಿಕೇರಿಗೆ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರವನ್ನು ಮಂಜೂರು ಮಾಡುವಂತೆ ಕೋರಿ ಮನವಿ ಮಾಡಿದರು. ಸಚಿವರು ಸಕಾರಾತ್ಮಕ ಭರವಸೆ ಕೊಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

*ಬರೋಬರಿ 30 ಕೆಜಿ ಗೂ ಹೆಚ್ಚು ಗಾಂಜಾ ಬೆಳೆದ ಕೃಷಿಕ*ಕಾಫಿ ತೋಟದಲ್ಲಿ ಬೆಳೆಯಲಾಗಿದ್ದ 17 ಗಾಂಜಾ ಗಿಡಗಳು.ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ವ...
07/08/2023

*ಬರೋಬರಿ 30 ಕೆಜಿ ಗೂ ಹೆಚ್ಚು ಗಾಂಜಾ ಬೆಳೆದ ಕೃಷಿಕ*

ಕಾಫಿ ತೋಟದಲ್ಲಿ ಬೆಳೆಯಲಾಗಿದ್ದ 17 ಗಾಂಜಾ ಗಿಡಗಳು.

ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ವ್ಯಾಪ್ತಿಯ ಚೆನ್ನಂಗಿ ಗೂಡ್ಲೂರಿನಲ್ಲಿ ಬೆಳೆಯಲಾದ ಗಾಂಜಾ ಗಿಡಗಳು.

ಗಾಂಜಾ ಗಿಡ ಬೆಳೆದ ಆರೋಪದಲ್ಲಿ ಗೂಡ್ಲೂರಿನ ಕಿರಣ್ ಎಂಬಾತನ ಬಂಧನ.

ಎಸ್ ಪಿ ರಾಮರಾಜನ್ ರವರ ಮಾರ್ಗದರ್ಶನ.

ಡಿವೈಎಸ್ಪಿ ಜಗದೀಶ್, ಸರ್ಕಲ್ ಇನ್ಸ್ಪೆಕ್ಟರ್ ಅನೂಪ ಮಾದಪ್ಪ, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ.

ಮನೆಯ ಸಮೀಪದ ಕಾಫಿ ತೋಟದಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳು ಪತ್ತೆ .

ವೈದ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು.

ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು.

*ಕರ್ನಾಟಕದ ಪೊಲೀಸರನ್ನು ಬಂಧಿಸಿದ ಕೇರಳ ಪೊಲೀಸರು!* ಕರ್ನಾಟಕ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ನಾಲ್ವರು ಪೊಲೀಸರನ್ನು ಕೇ...
03/08/2023

*ಕರ್ನಾಟಕದ ಪೊಲೀಸರನ್ನು ಬಂಧಿಸಿದ ಕೇರಳ ಪೊಲೀಸರು!*
ಕರ್ನಾಟಕ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ನಾಲ್ವರು ಪೊಲೀಸರನ್ನು ಕೇರಳದ ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.

ಆನ್ಲೈನ್ ವಂಚನೆ ಕೇಸ್ ರಿಕವರಿಗೆ ಹೋಗಿದ್ದಾಗ ಆರೋಪಿಯನ್ನು ಬಂಧನ ಮಾಡದೇ ಇರಲು 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಬೆಂಗಳೂರು ವೈಟ್ ಫೀಲ್ಡ್ ಸೆನ್ ಪೊಲೀಸರು ಬಂಧನಕ್ಕೊಳಗಾಗಿದ್ದಾರೆ.

ಉದ್ಯೋಗ ಆಸೆಯಿಂದ ಮೋಸಕ್ಕೆ ಒಳಗಾಗಿರುವ ಬಗ್ಗೆ ಸಾಫ್ಟ್ವೇರ್ ಇಂಜಿನಿಯರ್ ಚಂದಕ್ ಶ್ರೀಕಾಂತ್ ಎಂಬಾತ ದೂರು ಕೊಟ್ಟಿದ್ದ. ಈ ಪ್ರಕರಣದ ತನಿಖೆಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ನಡೆಸುತ್ತಿದ್ದರು.

ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್ನಲ್ಲಿ
2 ಕೋಟಿ ವರ್ಗಾವಣೆಯಾಗಿರುವುದು ಪತ್ತೆಯಾಯಿತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ ಕೇರಳಕ್ಕೆ ಹೊರಟಿತ್ತು.

ಈ ಹಿಂದೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಶಿವಪ್ರಕಾಶ್ ಸೇವೆ ಸಲ್ಲಿಸಿದರು.
ನೌಶಾದ್ ಎಂಬವನಿಂದ ಆನ್ಲೈನ್ ಫ್ರಾಡ್ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಅರೆಸ್ಟ್ ಮಾಡಲು ತೆರಳಿದ್ದ ಪೊಲೀಸರು, ಬಂಧಿಸದೇ ಇರಲು 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದಲ್ಲಿ ತನಿಖೆಗೆ ಎಂದು ಬಂದಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದರು.

ಆದರೂ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಲಾಗಿದೆ. ಇನ್ಸ್ಪೆಕ್ಟರ್ ಶಿವಪ್ರಕಾಶ್, ಶಿವಾನಿ, ವಿಜಯ್ ಕುಮಾರ್, ಸಂದೇಶ್ ಬಂಧನಕ್ಕೊಳಗಾಗಿದ್ದಾರೆ

*ಗಾಂಜಾ ಮಾರಾಟ. ಕೊಡಗಿನ ವ್ಯಕ್ತಿ ಬಂಧಿಸಿದ ಪಿರಿಯಾಪಟ್ಟಣ ಪೊಲೀಸ್.* ಪಿರಿಯಾಪಟ್ಟಣ ತಾಲೂಕಿನ ಆಯುರ್ಬೀಡು ಸಮೀಪದ ಲಿಂಗಪುರದಲ್ಲಿ ಗಾಂಜಾ ಮಾರಾಟ ಮ...
30/07/2023

*ಗಾಂಜಾ ಮಾರಾಟ. ಕೊಡಗಿನ ವ್ಯಕ್ತಿ ಬಂಧಿಸಿದ ಪಿರಿಯಾಪಟ್ಟಣ ಪೊಲೀಸ್.*

ಪಿರಿಯಾಪಟ್ಟಣ ತಾಲೂಕಿನ ಆಯುರ್ಬೀಡು ಸಮೀಪದ ಲಿಂಗಪುರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗಿನ ವ್ಯಕ್ತಿ ಬಂಧಿಸಿದ ಬೈಲುಕುಪ್ಪೆ ಪೊಲೀಸ್

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಿವಾಸಿ ಅಜೀಜ್ ಬಂಧಿತ ಆರೋಪಿ.

ಖಚಿತ ಮಾಹಿತಿಯ ಆದರದ ಮೇಲೆ ಭಾನುವಾರ ಬೆಳಿಗ್ಗೆ ಆರೋಪಿಯನ್ನು ಸೆರೆ ಹಿಡಿದು 5 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಚರಣೆಯಲ್ಲಿ ಪಿಎಸ್ಐ ಅಜಯ್ ಕುಮಾರ್, ಗುಪ್ತಚರ ಸಬ್ ಇನ್ಸ್ಪೆಕ್ಟರ್ ಮಹಾಲಿಂಗ ಸ್ವಾಮಿ, ಸಿಬ್ಬಂದಿಗಳಾದ ಚೇತನ್ ಕುಮಾರ್ ಮಹಾದೇವಪ್ಪ ಮುದ್ದುರಾಜು ಕುಮಾರಸ್ವಾಮಿ ಸುರೇಶ ಪ್ರದೀಪ್ ಭಾಗಿ

*ಕಾಫಿ ತೋಟದಲ್ಲಿ ಕಾಡಾನೆ ಸಾವು*ಕಂಬಿಬಾಣೆಯ ಉದಯ ಎಂಬವರ ತೋಟದಲ್ಲಿ ಘಟನೆ ಕಳೆದೆರಡು ದಿನಗಳ ಹಿಂದೆ ಸಾವನಪ್ಪಿರುವ ಶಂಕೆ ಅಂದಾಜು 16 ವರ್ಷದ ಕಾಡಾನ...
30/07/2023

*ಕಾಫಿ ತೋಟದಲ್ಲಿ ಕಾಡಾನೆ ಸಾವು*

ಕಂಬಿಬಾಣೆಯ ಉದಯ ಎಂಬವರ ತೋಟದಲ್ಲಿ ಘಟನೆ
ಕಳೆದೆರಡು ದಿನಗಳ ಹಿಂದೆ ಸಾವನಪ್ಪಿರುವ ಶಂಕೆ

ಅಂದಾಜು 16 ವರ್ಷದ ಕಾಡಾನೆ.

ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಶಂಕೆ

ಮರಣೊತ್ತರ ಪರೀಕ್ಷೆ ಬಳಿಕ ಆನೆ ಸಾವಿಗೆ ಸಂಬಂಧಿಸಿದಂತೆ ನಿಖರ ಮಾಹಿತಿ ದೊರೆಯಲಿದೆ.

*ಗುಂಡು ಹೊಡೆದುಕೊಂಡು ವ್ಯಕ್ತಿ  ಆತ್ಮಹತ್ಯೆ*ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಚಿಕ್ಕಮಂಡೂರು ಗ್ರಾಮದಲ್ಲಿ ಘಟನೆಚಿಕ್ಕಮಂಡೂರು ಗ್ರಾಮದ ಅ...
28/07/2023

*ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ*

ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಚಿಕ್ಕಮಂಡೂರು ಗ್ರಾಮದಲ್ಲಿ ಘಟನೆ

ಚಿಕ್ಕಮಂಡೂರು ಗ್ರಾಮದ ಅಜ್ಜಿಕುಟ್ಟೀರ ಉಮೇಶ್ ಗುಂಡು ಹೊಡೆದುಕೊಂಡು ಆತ್ಮಹತ್ಯೆ

ಇಂದು ಬೆಳಿಗ್ಗೆ ತಮ್ಮ ಲೈನ್ ಮನೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ

ಸ್ಥಳಕ್ಕೆ ಶ್ರೀಮಂಗಲ ಪೊಲೀಸ್ ಅಧಿಕಾರಿಗಳು ಭೇಟಿ, ಪರಿಶೀಲನೆ

27/07/2023

ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್‍ಗಳಲ್ಲಿ)

ಮಡಿಕೇರಿ ಜು.27:-ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 34.49 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.46 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1497.82 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1880.23 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.25 ಮಿ.ಮೀ. ಕಳೆದ ವರ್ಷ ಇದೇ ದಿನ 3.97 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2191.20 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2639.55 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 15.90 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.66 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1113.68 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1485.86 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 27.33 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.76 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1188.58 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1515.29 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 44.60, ನಾಪೋಕ್ಲು 60.20, ಸಂಪಾಜೆ 91, ಭಾಗಮಂಡಲ 45.20, ವಿರಾಜಪೇಟೆ ಕಸಬಾ 20, ಹುದಿಕೇರಿ 24.40, ಶ್ರೀಮಂಗಲ 12.60, ಪೊನ್ನಂಪೇಟೆ 17.20, ಅಮ್ಮತ್ತಿ 12, ಬಾಳೆಲೆ 9.20, ಸೋಮವಾರಪೇಟೆ ಕಸಬಾ 33.60, ಶನಿವಾರಸಂತೆ 18.80, ಶಾಂತಳ್ಳಿ 46, ಕೊಡ್ಲಿಪೇಟೆ 15.20, ಕುಶಾಲನಗರ 20.40, ಸುಂಟಿಕೊಪ್ಪ 30 ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ (27-07-2023) ವರದಿ
****************************************
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2853.61 ಅಡಿಗಳು. ಕಳೆದ ವರ್ಷ ಇದೇ ದಿನ 2856.46 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 16.40 ಮಿ.ಮೀ., ಇಂದಿನ ನೀರಿನ ಒಳಹರಿವು 14267 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2394 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 13000 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1841 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.

*ಸಂಪಾಜೆ; ನಾಡಕಚೇರಿ ಉದ್ಘಾಟನೆ**ಸರ್ಕಾರಿ ಕೆಲಸದಲ್ಲಿ ಸಾರ್ವಜನಿಕರ ಜತೆ ಸ್ಪಂದನೆ ಇರಲಿ: ಎ.ಎಸ್.ಪೊನ್ನಣ*್ಣಸಾರ್ವಜನಿಕರಿಗೆ ತೊಂದರೆ ಮಾಡದೆ ಜನರ...
27/07/2023

*ಸಂಪಾಜೆ; ನಾಡಕಚೇರಿ ಉದ್ಘಾಟನೆ*
*ಸರ್ಕಾರಿ ಕೆಲಸದಲ್ಲಿ ಸಾರ್ವಜನಿಕರ ಜತೆ ಸ್ಪಂದನೆ ಇರಲಿ: ಎ.ಎಸ್.ಪೊನ್ನಣ*್ಣ
ಸಾರ್ವಜನಿಕರಿಗೆ ತೊಂದರೆ ಮಾಡದೆ ಜನರ ಕಷ್ಟಗಳನ್ನು ನಿವಾರಿಸಲು ಎಲ್ಲಾ ಹಂತದ ಅಧಿಕಾರಿಗಳು ಜವಾಬ್ದಾರಿಯುತ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹೇಳಿದ್ದಾರೆ.
ಮಡಿಕೇರಿ ತಾಲ್ಲೂಕಿನ ಸಂಪಾಜೆಯಲ್ಲ್ಲಿ ನೂತನವಾಗಿ ನಿರ್ಮಿಸಿರುವ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆ ಜೊತೆ ಸಾರ್ವಜನಿಕರು ನೇರ ಸಂಪರ್ಕ ಹೊಂದಿದ್ದು, ಸರ್ಕಾರದ ಹಲವು ಯೋಜನೆಗಳ ಪ್ರಮಾಣ ಪತ್ರಕ್ಕೆ ನಾಡ ಕಚೇರಿಗೆ ಆಗಮಿಸುತ್ತಾರೆ. ಆದ್ದರಿಂದ ನಾಗರಿಕರನ್ನು ಸತಾಯಿಸದೆ ಸ್ಪಂದಿಸುವAತಾಗಬೇಕು ಎಂದು ಶಾಸಕರು ನುಡಿದರು.
ಕಂದಾಯ ಇಲಾಖೆ ಜನರಿಗೆ ನೇರವಾಗಿ ಸ್ಪಂದಿಸಬೇಕು ಸರ್ವೆ ಹಾಗೂ ಇನ್ನಿತರ ದಾಖಲೆಗಳನ್ನು ಜನರಿಗೆ ಕಾಲಮಿತಿಯಲ್ಲಿ ನೀಡಬೇಕು. ಸಂಪಾಜೆಗೆ ಹೊಸ ನಾಡ ಕಚೇರಿ ಕಟ್ಟಡ ಕಲ್ಪಿಸಿದ್ದು, ಜನರು ಹಾಗೂ ಅಧಿಕಾರಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು, ಜನ ಸೇವೆ ಅತಿ ಮುಖ್ಯವಾಗಿದ್ದು, ಹಿರಿಯ ಅಧಿಕಾರಿಗಳಿಂದ ಹಿಡಿದು ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಜನರ ಸೇವೆ ಮಾಡಬೇಕು, ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಜನರಿಗೆ ಕಂದಾಯ ಇಲಾಖೆಯಿಂದ ಸಿಗುವಂತಹ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಜನರಿಗೆ ಸರಿಯಾದ ಸಮಯಕ್ಕೆ ತಲುಪಿಸುವಂತಾಗಬೇಕು ಹಾಗೂ ಮಳೆಗಾಲದಲ್ಲಿ ಪ್ರವಾಹ ಪೀಡಿತ ಹಾಗೂ ತೊಂದರೆ ಆದಂತಹ ಸ್ಥಳಗಳಿಗೆ ಖುದ್ದಾಗಿ ತೆರಳಿ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹೇಳಿದರು.
ಕೊಯನಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಿರ್ಮಲ ಭರತ್ ಅವರು ಮಾತನಾಡಿ ಜನರಿಗೆ ಹಕ್ಕುಪತ್ರ ಹಾಗೂ ಸರ್ವೇ ಕಾರ್ಯಗಳನ್ನು ಸಕಾಲದಲ್ಲಿ ಕಲ್ಪಿಸುವಂತೆ ಶಾಸಕರು ತಿಳಿಸಿದರು. ಗ್ರಾಮದಲ್ಲಿ ಸರಕಾರಿ ಜಾಗದ ಕೊರತೆ ಇದ್ದು ಕಸ ವಿಲೇವಾರಿ ಮಾಡಲು ಸಹ ಕಷ್ಟಸಾಧ್ಯ ಪರಿಸ್ಥಿತಿ ಎದುರಾಗಿದೆ. ಹಾಗೆಯೇ ಮೊಬೈಲ್ ಟವರ್ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ, ಕಲ್ಲೂರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದನ್ನ ಸರಿಪಡಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಿಂಚಣಿದಾರರಿಗೆ ಮಂಜೂರಾತಿ ಆದೇಶ ಪತ್ರ ನೀಡಲಾಯಿತು. ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ಕಿರಣ್ ಗೌರಯ್ಯ, ಸಂಪಾಜೆ ಕಂದಾಯ ಪರಿವೀಕ್ಷಕರು ಬಿ.ಜಿ.ವೆಂಕಟೇಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಇತರರು ಉಪಸ್ಥಿತರಿದ್ದರು. ಮಣಿ ಅವರು ಪ್ರಾರ್ಥಿಸಿ, ಕೊಯಾನಡು ಶಾಲೆಯ ಶಿಕ್ಷಕರಾದ ವಿಶ್ವನಾಥ್ ಹೋಬಳಿದರ್ ನಿರೂಪಿಸಿದರು.

27/07/2023

*ಕೊಡಗು ಕೇಂದ್ರೀಯ ವಿದ್ಯಾಲಯದ 3 ನೇ ಎನ್ಇಪಿ ವಾರ್ಷಿಕೋತ್ಸವ*
ಶಿಕ್ಷಣ ಸಚಿವಾಲಯ ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನೆ, ನವದೆಹಲಿಯಿಂದ ಸ್ವೀಕರಿಸಿದ ಆದೇಶದ ಪ್ರಕಾರ, ಕೇಂದ್ರೀಯ ವಿದ್ಯಾಲಯ ಕೊಡಗು ಎನ್ಇಪಿ 2020ರ 3ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎನ್ಇಪಿ 2020 ಉಪಕ್ರಮಗಳು, ಉತ್ತಮ ಅಭ್ಯಾಸಗಳನ್ನು ಎನ್ಇಪಿ 2020 ಅನುಷ್ಠಾನದ ಸಾಧನೆಗಳನ್ನು ಪ್ರಸಾರ ಮಾಡಲು ಕೊಡಗು ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಜುಲೈ, 28 ರಂದು ಬೆಳಗ್ಗೆ 11 ಗಂಟೆಗೆ ಮಾಹಿತಿ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ ಸರ್ಕಾರಿ/ ಖಾಸಗಿ/ ಅನುದಾನಿತ ಶಾಲೆಗಳ ಸಂಸ್ಥೆಯ ಪ್ರಾಂಶುಪಾಲರು/ ಮುಖ್ಯಸ್ಥರು, ಆಯಾಯ ಶಾಲೆಗಳ 2 ಶಿಕ್ಷಕರು ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

*ರಾತ್ರಿ 12 ಗಂಟೆಗೆ ಗಾಯಾಳು ಭೇಟಿ ಮಾಡಿದ ಶಾಸಕ ಮಂಥರ್ ಗೌಡ*ಮಡಿಕೇರಿ  :  ನಲ್ಲೂರು ತೋಟದ ಕೂಲಿ ಕಾರ್ಮಿಕ ವಿಜಯ್ ಕುಮಾರ್ ಅವರ ಮೇಲೆ ಬುಧವಾರ ಕಾ...
27/07/2023

*ರಾತ್ರಿ 12 ಗಂಟೆಗೆ ಗಾಯಾಳು ಭೇಟಿ ಮಾಡಿದ ಶಾಸಕ ಮಂಥರ್ ಗೌಡ*
ಮಡಿಕೇರಿ : ನಲ್ಲೂರು ತೋಟದ ಕೂಲಿ ಕಾರ್ಮಿಕ ವಿಜಯ್ ಕುಮಾರ್ ಅವರ ಮೇಲೆ ಬುಧವಾರ ಕಾಡಾನೆ ದಾಳಿಯಾಗಿದ್ದು, ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಬುಧವಾರ ರಾತ್ರಿ 12 ಗಂಟೆಗೆ ಮೈಸೂರಿನ ಆಸ್ಪತ್ರೆಗೆ ಆಗಮಿಸಿ ಗಾಯಳು ಯೋಗ ಕ್ಷೇಮ ವಿಚಾರಿಸಿ ಗಾಯಾಳುವಿಗೆ ಧೈರ್ಯ ತುಂಬಿದರು.
ರೋಗಿಯ ಕುಟುಂಬಸ್ಥರಿಗೆ ಬೆಟ್ ಶಿಟ್, ಊಟದ ವ್ಯವಸ್ಥೆ ಮಾಡುವ ಮೂಲಕ ಸ್ಪಂದನೆ ಮಾಡಿದರು. ಅಲ್ಲದೆ ತುರ್ತು ಚಿಕಿತ್ಸೆಗೆ ರು.10 ಸಾವಿರ ನಗದನ್ನು ನೀಡಿದರು.
ದಾಳಿಗೆ ಒಳಗಾಗಿರುವ ಗಾಯಳು ಅವರಿಗೆ ಶ್ವಾಸಕೋಶದ ಭಾಗದಲ್ಲಿ ಪೆಟ್ಟಾಗಿದ್ದು, ಚಿಕಿತ್ಸೆಯ ಮೂಲಕ ಗುಣಮುಖರಾಗಲಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಆಸ್ಪತ್ರೆಯಲ್ಲಿದ್ದ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

10/05/2023

ಕೊಡಗಿನ ಮಾದಪುರಲ್ಲಿ ಲಾಠಿ ಚಾರ್ಜ್

ನೀರು ಕೇಳಿದ ವಿಚಾರವಾಗಿ ನಡೆದ ಮಾತುಕಥೆ‌.

ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಯುವ ಯುವಾಗ ಏಕಾ ಏಕಿಯಾಗಿ ಬಂದು ಲಾಠಿ ಚಾರ್ಜ್.

ಭದ್ರತಾ ಸಿಬ್ಬಂದಿಗಳಿಂದ ಲಾಠಿ ಚಾರ್ಜ್ ಆರೋಪ.

ಶಾಂತಿಯುವಾಗಿ ನಡೆಯುತ್ತಿದ್ದ ಮತಕೇಂದ್ರದಲ್ಲಿ ಲಾಠಿ ಚಾರ್ಜ್

ಕೊಡಗು ಜಿಲ್ಲೆ ಸೋವಾರಪೇಟೆ ತಾಲ್ಲೂಕಿನ ಮಾದಾಪುರ

ಕೆಲಕಾಲ ಉದ್ವಿಗ್ನಗೊಂಡ ಪರಿಸ್ಥಿತಿ

*ಮಡಿಕೇರಿಗೆ 29 ರಂದು ಅಮಿತ್ ಶಾ* 224 ಕ್ಷೇತ್ರದಲ್ಲಿ ವಿಶೇಷ ಪ್ರಚಾರ ಅಭಿಯಾನ ಆರಂಭ..ಇಂದು ಅಮಿತ್ ಶಾ, ಜೆ.ಪಿ.ನೆಡ್ಡಾ, ಯಡಿಯೂರಪ್ಪ, ಕಟೀಲ್, ಬ...
25/04/2023

*ಮಡಿಕೇರಿಗೆ 29 ರಂದು ಅಮಿತ್ ಶಾ*
224 ಕ್ಷೇತ್ರದಲ್ಲಿ ವಿಶೇಷ ಪ್ರಚಾರ ಅಭಿಯಾನ ಆರಂಭ..ಇಂದು ಅಮಿತ್ ಶಾ, ಜೆ.ಪಿ.ನೆಡ್ಡಾ, ಯಡಿಯೂರಪ್ಪ, ಕಟೀಲ್, ಬೊಮ್ಮಾಯಿ ಭಾಗವಹಿಸಲಿದ್ದಾರೆ.ಜನ ಮನ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸಲೊಧ..ಚುನಾವಣಾ ಇತಿಹಾಸದಲ್ಲಿ 2ನೇ ಬಾರಿ ಯಾವುದೇ ಪಕ್ಷ ಗೆದ್ದ ಇಲ್ಲ.. ಈ ಬಾರಿ ಕೇಂದ್ರ ರಾಜ್ಯದ ಅಭಿವೃದ್ಧಿ ಮುಂದಿಟ್ಟು ಪ್ರಚಾರ ನಡೆಸಲಿದೆ..ಬಿಜೆಪಿ ರಾಜ್ಯದ ಅಧಿಕಾರ ವಹಿಸಿಕೊಂಡ ಬಳಿಕ ಕೋವಿಡ್ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸರಕಾರ ಕಾರ್ಯಕರ್ತರು ಜನರ ಮಧ್ಯೆ ನಿಂತು ಕೆಲಸ ಮಾಡಿದ್ದಾರೆ..ಸರ್ವ ರಿಗೂ ಸನಪಾಲು ಸಮಬಾಳು ಎನ್ನುವ ನಿಟ್ಟಿನಲ್ಲಿ ಮನೆ, ಬೂತ್ ತಲುಪಿದ್ದೇವೆ..ಬಿಜೆಪಿ ಚುನಾವಣಾ ಮಿಷಿನರಿ ಸಿದ್ದವಾಗಿದೆ..1985 ನಂತರ ರಾಜ್ಯದ ಲ್ಲಿ ಪೂರ್ಣ ಬಹುಮತದಲ್ಲಿ ಡಬಲ್ ಇಂಜಿನ್ ಸರಕಾರ ಅಧಿಕಾರಕ್ಕೆ ಬರಲಿದೆ.. ಜನ ಬಿಜೆಪಿಯನ್ನು ಅಯ್ಕೆ ಮಾಡಲಿದ್ದಾರೆ..ಬಿಜೆಪಿ ನಿರ್ಧಾರಗಳನ್ನು ಜನ ಗಮನಿಸಿದ್ದಾರೆ.. 75 ಕ್ಷೇತ್ರದಲ್ಲಿ ಹೊಡ ಮುಖಗಳಿದ್ದಾರೆ..ಸುಳ್ಯದ ಲ್ಲಿ ಮಹಿಳೆ ಯನ್ನು ಕಣಕಿಳಿಸಲಾಗಿದೆ..ಸಾಮಾಜಿಕ ನ್ಯಾಯದ ಅಡಿಯಲ್ಲಿ ಚುನಾವಣೆ ಎದುರಿಸುತ್ತೇವೆ..
*ಪ್ರತಾಪ್ ಸಿಂಹ ನಾಯಕ್* ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ.
ಮಹಾ ಪ್ರಚಾರದ ಅಡಿಯಲ್ಲಿ ದೇಶ ಸಮಾಜ ಸೇವೆ ಸಲ್ಲಿಸಿದ ವ್ಯಕ್ತಿ ಗಳ ಪ್ರತಿಮೆಗಳಿಗೆ ಮಾಲಾರ್ಪಣೆ..ಮಠ, ಮಂದಿರಕ್ಕೇ ಬೇಟಿ ಸಭೆ, ಬಹಿರಂಗ ಸಮಾವೇಶ ನಢೆಯಲಿದೆ..ಮೋದಿ ನೇತೃತ್ವದಲ್ಲಿ ಆದಬದಲಾವಣೆ, ಹಿಂದುತ್ವ ಆದಾರದಲ್ಲಿ ಜನ ಬಿಜೆಪಿಯನ್ನ ಬೆಂಬಲಿಸಲಿದ್ದಾರೆ..ಟಿಪ್ಪು, ಗೋಹತ್ಯೆ, ಪಿಎಫ್ ಐ ನಿಷೇಧ ಜನರ ಮುಂದಿದೆ.. ಈ ಎಲ್ಲಾ ನಿಲುವುಗಳ ಪರಾಕಾಷ್ಠೆಯ ಮಾತುಗಳು ಬಿಜೆಪಿ ಯನ್ನು ಗೆಲ್ಲಿಸಲಿದೆ.. ಸಿ.ಎಂ.ಅನ್ನು ಟೀಕಿಸುವ ನೆಪದಲ್ಲಿ ಕಾಂಗ್ರೆಸ್ ಬಹುದೊಡ್ಡ ಸಮಾಜವನ್ಬು ಅವಮಾನಿಸಿದೆ.

ಪೂರ್ಣ ಬಹು ಮತದಲ್ಲಿ ಗೆಲುವು.

27ರಂದು ಗೃಹ ಮಂತ್ರಿ ಅಮಿತ್ ಶಾ ಮಡಿಕೇರಿ ಗೆ ಬರಲಿದ್ದಾರೆ.
ರಾಬಿನ್ ದೇವಯ್ಯ.ಜಿಲ್ಲಾ ಬಿಜೆಪಿ ಅಧ್ಯಕ್ಷ.

ರಾಜ್ಯದ, ಹೊರ ರಾಜ್ಯದ, ರಾಷ್ತ್ರೀಯ ನಾಯಕರು ಕೊಡಗಿಗೆ ಬರಲಿದ್ದಾರೆ.
ಅಮಿತ್ ಶಾ 29 ಕ್ಕೆ ಮಡಿಕೇರಿಗೆ ಬರುತ್ತಾರೆ.. ಗಾಂದೀ ಮೈದಾನದಲ್ಲಿ 10.30 ರಂದು ಸಬೆ ನಡೆಸಲಿದ್ದಾರೆ..ಎರಡೂ ಅಭ್ಯರ್ಥಿ ಗಳ ಪರ ಮತ ಯಾಚನೆ ನಡೆಸಲಿದ್ದಾರೆ..
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 1500 ಕೋಟಿ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಾಗಿದೆ..
ವಿಶ್ವಾಸದ ಮೂಲಕ ಚುನಾವಣೆ ಗೆ ಹೋಗುತ್ತೇವೆ..ದೇವಸ್ತಾನ ದ ಅಭಿವೃದ್ಧಿಗೆ ಈ ಮೊದಲು ಇದ್ದ ಸರಕಾರ ಅನುದಾನ ನೀಡಿಲ್ಲ..ಬಿಜೆಪಿ ಸರಕಾರ ದೇವಾಲಯಗಳಿಗೆ ಕೋಟ್ಯಾಂತರ ಅನುಧಾನ ನೀಡಿದೆ..
*ಪ್ರತಾಪ್ ಸಿಂಹ ನಾಯಕ* ..

ಎರಡೂ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಮೊದಲೇ ಮಾಡಿದ್ದೇವೆ.

ಶಕ್ತಿ ಕೇಂದ್ರ, ಬೂತ್ ಅನ್ನ ಗಟ್ಟಿ ಮಾಡಿದ್ದೇವೆ..

ಚುನಾವಣ ಘೋಷಣೆಗೂ ಮುನ್ನ ಕ್ಷೇತ್ರದಲ್ಲಿ ಸಂಚಾರ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ.ವ್ಯಾಕ್ಸಿನ್ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತು..ಬಡ ಜನರಿಗೆ ಆಹಾರ ಕಿಟ್ ನೀಡಿದ್ದೇವೆ..
ಜಿಲ್ಲೆಯ ಲ್ಲಿ ಕೋವಿಡ್ ಅನ್ನು ಸವಾಲಾಗಿ ಸ್ವೀಕರಿಸಿ ಎದುರಿಸಲಾಗಿದೆ.ಕಾಫಿಗೆ ಪರಿಹಾರ ನೀಡಿದ್ದೇವೆ 56 ಸಾವಿರ ಪರಿಹಾರ ನೀಡಿದ್ದೇವೆ..
ಆಧಾಯ ಕೋವಿಡ್ ನಿಯಂತ್ರಣ ಕ್ಕೆ ಬಳಸಿದ ಕಾರಣ ಅಭಿವೃದ್ಧಿ ಹಿನ್ನಡೆ ಆಗಿದೆ..
ಅದು ಜನರ ಮನಸಿನಲ್ಲಿಯೂ ಇದೆ.. *ಕೆ.ಜಿ.ಬೋಪಯ್ಯ*

ನಮ್ಮ ಶಕ್ತಿ ಕೇಂದ್ರ ಮತ್ತು ರಾಜ್ಯದ ನಾಯಕರು..ಮೋದಿಯವರ ಮೇಲೆ ಜನರಿಗೆ ವಿಶೇಷ ಗೌರವವಿದೆ..ಮಂಡ್ಯ ಹುಬ್ಬಳ್ಳಿ, ಯಲ್ಲೂ ಲಕ್ಷಾಂತರ ಜನ ಸೇರಿದ್ದರು..ಇದರಿಂದ ಕಾಂಗ್ರೆಸ್ ಬಯಗೊಂಡಿದೆ..
ಮೋದಿ ಬಿಜೆಪಿ ಇಲ್ಲದ ಕಡೆಗೂ ಹೋಗಿದ್ದಾರೆ.ಅಭಿವೃದ್ಧಿ ಯನ್ನು ಮಾಡಿದ್ದಾರೆ..ಅದಕ್ಕಾಗಿ ನಿರಂತರ ಗೆಲುವಿಗೆ ಬಿಜೆಪಿಗೆ ಜನ ಆಶೀರ್ವಾದ ಮಾಡುತ್ತಿದ್ದಾರೆ.. ಪೂರ್ಣ ಬಹುಮತ ಬಂದಲ್ಲಿ ಎಲ್ರಿಗೂ ಜಿಲ್ಲೆಯ ಪ್ರಾತಿನಿಧ್ಯ ಜೊತೆಗೆ ಜನಪರ ಆಡಳಿತ ನೀಡಲಿದೆ..

24/04/2023

*ಏ.25 ರಂದು ರಕ್ತದಾನ ಶಿಬಿರ*
ಕಾಲೇಜು ಶಿಕ್ಷಣ ಇಲಾಖೆ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಕೊಡಗು ಜಿಲ್ಲಾಸ್ಪತ್ರೆ, ಮತ್ತು ವಿರಾಜಪೇಟೆ ರೋಟರಿ ಕ್ಲಬ್ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ, ರೆಡ್ಕ್ರಾಸ್ ಮತ್ತು ರೆಡ್ರಿಬ್ಬನ್ ಘಟಕ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ರಕ್ತಗುಂಪು ಪರೀಕ್ಷೆಯು ಏಪ್ರಿಲ್, 25 ರಂದು ಬೆಳಗ್ಗೆ 10.30 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

24/04/2023

*ಏ.26 ರಂದು ಶ್ರೀ ಓಂಕಾರೇಶ್ವರ ಮತ್ತು ಶ್ರೀ ಆಂಜನೇಯ ದೇವಾಲಯದ ವಾರ್ಷಿಕೋತ್ಸವ*
ಮಡಿಕೇರಿ ನಗರದಲ್ಲಿರುವ ಶ್ರೀ ಓಂಕಾರೇಶ್ವರ ಮತ್ತು ಶ್ರೀ ಆಂಜನೇಯ ದೇವಾಲಯಗಳಲ್ಲಿ ರೂಢಿ ಸಂಪ್ರದಾಯದAತೆ ಏಪ್ರಿಲ್, 26 ರಂದು ಬೆಳಗ್ಗೆ 9 ಗಂಟೆಯಿAದ ಮಧ್ಯಾಹ್ನ 1 ಗಂಟೆವರೆಗೆ ‘ಪ್ರತಿಷ್ಠಾ ವಾರ್ಷಿಕೋತ್ಸವ’ ವನ್ನು ಹಮ್ಮಿಕೊಳ್ಳಲಾಗಿದೆ.
ದೇವಾಲಯದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಸಹಯೋಗದಿಂದ ಶ್ರೀ ಗಣಪತಿ ಹೋಮ ಹಾಗೂ ಕಲಶಾಭಿಷೇಕ ಪೂಜೆಗಳು ದೇವಾಲಯದ ವತಿಯಿಂದ ನಡೆಯಲಿದೆ. ಸಾರ್ವಜನಿಕ ಭಕ್ತಾಧಿಗಳು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿ ಪ್ರಸಾದ ಸ್ವೀಕರಿಸುವಂತೆ ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಲ್.ದೇವರಾಜು ಅವರು ಕೋರಿದ್ದಾರೆ.

24/04/2023

*ಸ್ವೀಪ್; ಏ.29, 30 ಮತ್ತು ಮೇ, 01 ರಂದು ರಂಗೋಲಿ ಸ್ಪರ್ಧೆ*
ಕರ್ನಾಟಕ ವಿಧಾನಸಭಾ ಚುನಾವಣೆ-2023 ಹಿನ್ನೆಲೆಯಲ್ಲಿ ಮತದಾರರ ಶಿಕ್ಷಣ ಮತ್ತು ಜಾಗೃತಿ(ಸ್ವೀಪ್) ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಸ್ತಿçÃಶಕ್ತಿ ಒಕ್ಕೂಟಗಳ ವತಿಯಿಂದ ಏಪ್ರಿಲ್, 29 ರಂದು ಪೊನ್ನಂಪೇಟೆ ಕೆಪಿಎಸ್ ಶಾಲೆಯಲ್ಲಿ, ಏಪ್ರಿಲ್, 30 ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಹಾಗೂ ಮೇ, 01 ರಂದು ಸೋಮವಾರಪೇಟೆಯ ಸ್ತಿçÃಶಕ್ತಿ ಭವನದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆವರೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.
ಸ್ಪರ್ಧೆಯ ವಿವರ ಇಂತಿದೆ: ಕೊಡಗು ಮತ್ತು ಮತದಾನ ವಿಷಯ ಕುರಿತಂತೆ ರಂಗೋಲಿ ರಚಿಸಬಹುದು. 18 ವರ್ಷ ಒಳಪಟ್ಟ ಹಾಗೂ 18 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಪ್ರತ್ಯೇಕವಾಗಿ 2 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ರಂಗೋಲಿ ಸ್ಪರ್ಧೆಗೆ ಅವಶ್ಯಕವಿರುವ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಸಂಬAಧಿಸಿದ ವಿಷಯಗಳಿಗೆ ಅವಕಾಶವಿರುವುದಿಲ್ಲ. 1 ಗಂಟೆ ಕಾಲಾವಕಾಶವಿರುತ್ತದೆ.
ಏಪ್ರಿಲ್, 28 ರೊಳಗೆ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಪೊನ್ನಂಪೇಟೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ರಾಜೇಶ್ ಮೊ.ಸಂ.9902323174 ಹಾಗೂ ರಜನಿ ತಾಲ್ಲೂಕು ಅಧ್ಯಕ್ಷರು, ಸ್ತಿçÃಶಕ್ತಿ ಒಕ್ಕೂಟ, ಪೊನ್ನಂಪೇಟೆ ಮೊ.ಸಂ.7760448363 ನ್ನು ಸಂಪರ್ಕಿಸಬಹುದು.
ನೋAದಣಿಗಾಗಿ ಮಡಿಕೇರಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಟಿ.ಎಸ್.ಸೀತಾಲಕ್ಷಿö್ಮ ಮೊ.ಸಂ.9449534724/ 9108810782 ಹಾಗೂ ರೆಹನಾ ಸುಲ್ತಾನ್, ಜಿಲ್ಲಾಧ್ಯಕ್ಷರು, ಸ್ತಿçà ಶಕ್ತಿ ಒಕ್ಕೂಟ, ಕೊಡಗು ಜಿಲ್ಲೆ ಮೊ.ಸಂ.8217511190 ಹಾಗೂ ಪುಷ್ಪಾವತಿ, ತಾಲ್ಲೂಕು ಅಧ್ಯಕ್ಷರು, ಮಡಿಕೇರಿ, ಸ್ತಿçà ಶಕ್ತಿ ಒಕ್ಕೂಟ ಮೊ.ಸಂ.9483840871 ಹಾಗೂ ತಾರಾಮಣಿ, ಕಾರ್ಯದರ್ಶಿ, ಸ್ತಿçÃಶಕ್ತಿ ಒಕ್ಕೂಟ ಮೊ.ಸಂ.9845232918 ನ್ನು ಸಂಪರ್ಕಿಸಬಹುದು.
ನೋAದಣಿಗಾಗಿ ಸೋಮವಾರಪೇಟೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತನುಜಾ ಮೊ.ಸಂ.9980014890 ಹಾಗೂ ರೆಹನಾ ಸುಲ್ತಾನ್, ಜಿಲ್ಲಾಧ್ಯಕ್ಷರು, ಸ್ತಿçÃಶಕ್ತಿ ಒಕ್ಕೂಟ, ಕೊಡಗು ಜಿಲ್ಲೆ ಮೊ.ಸಂ.8217511190 ಹಾಗೂ ಸುಮತಿ, ತಾಲ್ಲೂಕು ಅಧ್ಯಕ್ಷರು, ಸೋಮವಾರಪೇಟೆ ಸ್ತಿçà ಶಕ್ತಿ ಒಕ್ಕೂಟ ಮೊ.ಸಂ.9449699627 ನ್ನು ಸಂಪರ್ಕಿಸಬಹುದು ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.

24/04/2023

*ಕೊಡಗು - ಎಲೆಕ್ಷನ್ ಫೈಟ್ ಲಿಸ್ಟ್ ಫೈನಲ್*

*2 ವಿಧಾನಸಭಾ ಕ್ಷೇತ್ರ - 2 ಶಾಸಕ ಸ್ಥಾನಕ್ಕಾಗಿ 24 ಮಂದಿ ಫೈಟ್*..

*ಮಡಿಕೇರಿ ವಿಧಾನಸಭಾ ಕ್ಷೇತ್ರ 15 ಅಭ್ಯರ್ಥಿಗಳಿಂದ ಸ್ಪಧೆ೯*

ಅಮೀನ್ ಮೋಹಿಸಿನ್(ಎಸ್ಡಿಪಿಐ), ಮುತ್ತಪ್ಪ ಎನ್.ಎಂ.(ಜನತಾದಳ ಜಾತ್ಯಾತೀತ), ಕೆ.ಬಿ.ರಾಜು(ಆರ್ಪಿಐ ಕರ್ನಾಟಕ), ಜಿ.ಜಿ.ಹೇಮಂತ್ ಕುಮಾರ್(ಪಕ್ಷೇತರ), ಅಪ್ಪಚ್ಚುರಂಜನ್ ಎಂ.ಪಿ.(ಭಾರತೀಯ ಜನತಾ ಪಾರ್ಟಿ), ಡಾ.ಮಂಥರ್ ಗೌಡ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ), ಎಚ್.ಎಂ.ಸೋಮಪ್ಪ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ)(ಸಿಪಿಐ), ದಿವಿಲ್ ಕುಮಾರ್ ಎ.ಎ.(ಬಹುಜನ ಸಮಾಜ ಪಕ್ಷ), ಎಂ.ಖಲೀಲ್(ಪಕ್ಷೇತರ), ರಶೀದ ಬೇಗಂ (ಇಂಡಿಯನ್ ಮೂವೆಮೆಂಟ್ ಪಾರ್ಟಿ), ಶ್ರೀನಿವಾಸ ರೈ ಬಿ.ಕೆ.(ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ), ಬೋಪಣ್ಣ ಕೆ.ಪಿ.(ಆಮ್ ಆದ್ಮಿ ಪಾರ್ಟಿ), ಹರೀಶ್ ಆಚಾರ್ಯ(ಪಕ್ಷೇತರ), ಸಜೀರ್ ಮಜೀದ್ ನೆಲಾಟ್ (ಕರ್ನಾಟಕ ರಾಷ್ಟ್ರ ಸಮಿತಿ), ಶೃತಿ ಕೆ.ಪಿ.(ಪಕ್ಷೇತರ).

*ವಿರಾಜಪೇಟೆ ವಿಧಾನಸಭಾ ಕ್ಷೇತ್ರ 09 ಮಂದಿ ಫೈಟ್*
..
ಕೆ.ಜಿ.ಬೋಪಯ್ಯ (ಭಾರತೀಯ ಜನತಾ ಪಾರ್ಟಿ), ಎಂ.ಎ.ನಾಸೀರ್(ಪಕ್ಷೇತರ), ಎ.ಎಸ್.ಪೊನ್ನಣ್ಣ(ರಾಷ್ಟ್ರೀಯ ಕಾಂಗ್ರೆಸ್ ಪಕ್ಷ), ಮನ್ಸೂರ್ ಅಲಿ ಎಂ.ಎ.(ಜನತಾ ದಳ ಜಾತ್ಯಾತೀತ), ಸಿ.ಎಸ್.ರವೀಂದ್ರ (ಆಮ್ ಆದ್ಮಿ ಪಕ್ಷ), ಕೆ.ಎಸ್.ಮನು (ಸರ್ವೋದಯ ಕರ್ನಾಟಕ ಪಕ್ಷ), ದರ್ಶನ್ ಶೌರಿ ಪಿ.ಕೆ.(ಪಕ್ಷೇತರ), ಮಸೂದ್ ಫೌಜ್ದಾರ್(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ), ಸಜು ವಿ.ಎ.(ಕರ್ನಾಟಕ ರಾಷ್ಟ್ರ ಸಮಿತಿ),


ಈ ಪೈಕಿ ಯಾರು ಶಾಸಕರಾಗಿ ಮತದಾರರಿಂದ ಆಯ್ಕೆಯಾಗುತ್ತಾರೆ. ಯಾರು ತಿರಸ್ಕೖತರಾಗುತ್ತಾರೆ.?

*ಮೇ 10 ರಂದು ಚುನಾವಣೆ* ..
*ಮೇ 13 ರಂದು ಫಲಿತಾಂಶ..!!*

Address

Mercara

Website

Alerts

Be the first to know and let us send you an email when Kodagu Breaking News posts news and promotions. Your email address will not be used for any other purpose, and you can unsubscribe at any time.

Share