Kodagu News

Kodagu News Contact information, map and directions, contact form, opening hours, services, ratings, photos, videos and announcements from Kodagu News, Media/News Company, RACECOURSE Road, Madikeri.

Kodagu News: FIRST ONLINE NEWS PORTAL IN COORG DISTRICT

News and Information about culture, tradition, tourist, Spots, hotels, home stays etc
Up-to-date information from all premises of kodagu.

ನಮ್ಮನ್ನು ಬದುಕಲು ಬಿಡಿ..! ನಮಗೂ ಜೀವ ಇದೆ.
03/08/2025

ನಮ್ಮನ್ನು ಬದುಕಲು ಬಿಡಿ..! ನಮಗೂ ಜೀವ ಇದೆ.

25/06/2025

ಮಾಡಿಕೇರಿ: ಕೊಡಗಿನಲ್ಲಿ ಭಾರಿ ಮಳೆ ಯಾಗುತ್ತಿರುವ ಹಿನ್ನಲೆ ಅಂಗನವಾಡಿ ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳಿಗೆ ಈ ದಿನ ಅಂದರೆ 25/6/2025 ರಂದು ....

ಮಾಜಿ ಸೈನಿಕ ನಾಪತ್ತೆ: ಆತ್ಮಹತ್ಯೆ ಶಂಕೆhttps://kodagunews.in/?p=7218ಕಾವೇರಿ ನದಿಗೆ ಹಾರಿ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
22/06/2025

ಮಾಜಿ ಸೈನಿಕ ನಾಪತ್ತೆ: ಆತ್ಮಹತ್ಯೆ ಶಂಕೆ
https://kodagunews.in/?p=7218
ಕಾವೇರಿ ನದಿಗೆ ಹಾರಿ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

*ಚೆಟ್ಟಳ್ಳಿ ನಿವಾಸಿ ಮಾಜಿ ಸೈನಿಕ ಗಿರೀಶ್ (46)ಎಂಬವರು ನಾಪತ್ತೆ* ಗಿರೀಶ್ ಕುಶಾಲನಗರದ ಎಸ್.ಎಲ್.ಎನ್ ಸಂಸ್ಥೆ ಯ ಉದ್ಯೋಗಿ ಉದ್ಯೋಗಿ ಗಿರೀ.....

ಇಸ್ರೇಲ್ - ಇರಾನ್ ವಾರ್ : ಅಖಾಡಕ್ಕಿಳಿದ ಅಮೆರಿಕ, ಇರಾನ್ ಅಣುಸ್ಥಾವರಗಳ ಮೇಲೆ ಏರ್‌ ಸ್ಟ್ರೈಕ್‌
22/06/2025

ಇಸ್ರೇಲ್ - ಇರಾನ್ ವಾರ್ : ಅಖಾಡಕ್ಕಿಳಿದ ಅಮೆರಿಕ, ಇರಾನ್ ಅಣುಸ್ಥಾವರಗಳ ಮೇಲೆ ಏರ್‌ ಸ್ಟ್ರೈಕ್‌

ವಾಷಿಂಗ್ಟನ್ : ಇಸ್ರೇಲ್-ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಮಹಾತಿರುವು ಪಡೆದುಕೊಂಡಿದ್ದು, ಸಂಘರ್ಷಕ್ಕೆ ವಿಶ್ವದ ದೊಡ್ಣ ಅಮೆರಿಕಾ ...

ವಿದೇಶಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
22/06/2025

ವಿದೇಶಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ : ಪ್ರಸಕ್ತ (2025-26) ಸಾಲಿಗೆ ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ವಿದೇಶಿ ವಿದ್ಯಾರ್ಥಿವ....

https://kodagunews.in/?p=6960ಕೊಡಗಿನ ಐಎನ್ ಮನೆಗಳನ್ನು ಉಳಿಸೋಣ: ಶಾಸಕ ಪೊನ್ನಣ್ಣ
07/06/2025

https://kodagunews.in/?p=6960

ಕೊಡಗಿನ ಐಎನ್ ಮನೆಗಳನ್ನು ಉಳಿಸೋಣ: ಶಾಸಕ ಪೊನ್ನಣ್ಣ

ಪೊನ್ನಂಪೇಟೆ ತಾಲೂಕು ಬೆಳ್ಳೂರು ಗ್ರಾಮದಲ್ಲಿರುವ ಮಲ್ಲಂಗಡ ಕುಟುಂಬಸ್ಥರ ಐನ್ ಮನೆಗೆ, ಇಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲ....

https://kodagunews.in/?p=6705
01/06/2025

https://kodagunews.in/?p=6705

ಮಳೆಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಪೊನ್ನನ್ನ. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಇತ್ತೀಚೆಗೆ ವಿ.....

https://kodagunews.in/?p=6698
31/05/2025

https://kodagunews.in/?p=6698

ಜಿಲ್ಲಾ ಪೊಲೀಸ್ ಘಟಕದಲ್ಲಿ‌ ದೀರ್ಘ ಕಾಲ ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದಿದ ಎಎಸ್‌ಐರವರುಗಳಾದ ಶ್ರೀ ಡಬ್ಲ್ಯು.ಬಿ. ಗೋಪಾಲ ಕ....

https://kodagunews.in/?p=6686
31/05/2025

https://kodagunews.in/?p=6686

ಮಡಿಕೇರಿ : ಭಾಗಮಂಡಲ ಹೋಬಳಿ ಕಡಿಯತ್ತೂರು ಗ್ರಾಮದ ತೊರೇರ ತಂಗಮ್ಮ ಕೋಂ ತೋರೇರ ದೇವಯ್ಯ ಇವರ ಕೊಟ್ಟಿಗೆ ಮೇಲೆ ಮರ ಬಿದ್ದು ಕೊಟ್ಟಿಗೆ ಹಾನ...

*ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಕೇರಳ ಮೂಲದ ಶ್ರೀಮಂತನ ಕೊಲೆ: ಆರೋಪಿಗಳ ಬಂಧನ**ಮಡಿಕೇರಿ : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಗಣ...
04/05/2025

*ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಕೇರಳ ಮೂಲದ ಶ್ರೀಮಂತನ ಕೊಲೆ: ಆರೋಪಿಗಳ ಬಂಧನ*

*ಮಡಿಕೇರಿ : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಗಣ ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮನೆಯೊಂದರಲ್ಲಿ ಇತ್ತೀಚೆಗೆ ನಡೆದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪ್ರದೀಪ್ ಕೊಯ್ಲಿ ಎಂಬುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊನ್ನಂಪೇಟೆಯ ತಾಲ್ಲೂಕಿನ ಮುಗುಟಗೇರಿ ಗ್ರಾಮದ అనిಲ್ (25) ಸೋಮವಾರಪೇಟೆ ತಾಲ್ಲೂಕಿನ, ಅಬ್ಬರುಕಟ್ಟೆಯ ಸೋಮವಾರಪೇಟೆ (21), ನೇರುಗಳಲೆಯ ಸ್ವೀಫನ್ ಡಿಸೋಜ(26), ಹಿತ್ತಲಮಕ್ಕಿಯ ಕಾರ್ತಿಕ್ ಹೆಚ್.ಎಂ.(27) ಹಾಗೂ ಪೊನ್ನಂಪೇಟೆಯ ನಲ್ಲೂರು ಗ್ರಾಮದ ಹರೀಶ್ ಪಿ.ಎಸ್.(29) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರ ಬಳಯಿಂದ 13.03 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ, 2 ಮೊಬೈಲ್, ಮೃತ ವ್ಯಕ್ತಿಯ ಮೊಬೈಲ್ ಮತ್ತು ಮೃತ ವ್ಯಕ್ತಿಗೆ ಸೇರಿದ ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದ ಕಣ್ಣೂರು ಜಿಲ್ಲೆಯ ಪ್ರದೀಪ್ ಕೊಯ್ಲಿಯವರನ್ನು ಇದೇ ಏ.23 ರಂದು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಅನಿಲ್ ಎನ್.ಎಸ್., ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗುವ ಪ್ರಯತ್ನದ ಆಕೆಯ ಮನೆಯ ಕಡೆಯವರು, ನಿನ್ನ ಬಳಿ ಯಾವುದೇ ಆಸ್ತಿ ಮತ್ತು ಹಣವಿಲ್ಲವೆಂದು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಶೀಘ್ರವಾಗಿ ಆಸ್ತಿ ಮತ್ತು ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಅನಿಲ್ ತಿಳಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಬಂಧಿತ ಆರೋಪಿ ಅನಿಲ್ ತಾನು ಕೆಲಸ ಮಾಡುವ ಜಾಗಗಳಲ್ಲಿ ಇರುವವರನ್ನು ಪರಿಚಯ ಮಾಡಿಕೊಂಡು ಜಮೀನಿನಲ್ಲಿ ನಿಧಿ ಇರುವುದಾಗಿ ನಂಬಿಸಿ ಬೆಂಗಳೂರು, ಹಾಸನ, ಪೊನ್ನಂಪೇಟೆ ಕಡೆಗಳಲ್ಲಿ ಹಣ ಪಡೆದು ಮೋಸ ಮಾಡಿರುವ ಕುರಿತು ಆರೋಪವಿದೆ. ಒಂಟಿಯಾಗಿ ವಾಸ ಮಾಡುತ್ತಾ ಹೆಚ್ಚಿನ ಆಸ್ತಿ ಹೊಂದಿರುವವರನ್ನು ಗುರುತಿಸಿ ಆಸ್ತಿ ಖರೀದಿ, ಮಾರಾಟ ಮಾಡುವ ನೆಪದಲ್ಲಿ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ತಿತಿಮತಿಯಲ್ಲಿನ ಒಂಟಿ ಮಹಿಳೆಯೊಬ್ಬರನ್ನು ಅನಿಲ್ ಸಂಪರ್ಕಿಸಿದ್ದ. ಮಹಿಳೆಗೆ ಸಂಬಂಧಿಕರು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ವ್ಯವಹಾರವನ್ನು ಸ್ಥಗಿತಗೊಳಿಸಿದ್ದ. ಕೋಣನಕಟ್ಟೆ ಎಂಬಲ್ಲಿ 50 ಏಕರೆ ಜಾಗದ ಮಾಲೀಕರೊಬ್ಬರನ್ನು ಆಸ್ತಿ ಖರೀದಿಸುವ ನೆಪದಲ್ಲಿ ಪರಿಚಯಿಸಿಕೊಂಡು ಮನೆಯಲ್ಲಿ ಮಕ್ಕಳು ಇರುವುದರಿಂದ ವ್ಯವಹಾರವನ್ನು ಸರಿ ಬರುವುದಿಲ್ಲ ಎಂದು ಕೈಬಿಟ್ಟಿರುವ ಕುರಿತು ಎಸ್‌ಪಿ ರಾಮರಾಜನ್ ಮಾಹಿತಿ ನೀಡಿದರು. ಮೃತ ಪ್ರದೀಪ್ ಕೊಯ್ಲಿ ಅವಿವಾಹಿತ ಮತ್ತು ಹೆಚ್ಚಿನ ಆಸ್ತಿ ಹೊಂದಿರುವ ಕುರಿತು ಮಾಹಿತಿಯನ್ನು ಖಚಿತ ಪಡಿಸಿಕೊಂಡಿದ್ದ ಅನಿಲ್‌, ತೋಟ ಖರೀದಿ ವ್ಯವಹಾರದ ಕುರಿತು ಮಧ್ಯವರ್ತಿಗಳ ಮೂಲಕ ಚರ್ಚಿಸಿದ್ದ ಎಂದು ಹೇಳಲಾಗಿದೆ. ಆಸ್ತಿ ಖರೀದಿದಾರರು ವಿದೇಶದಲ್ಲಿರುವುದಾಗಿ ತಿಳಿಸಿ ಅವರ ಪರವಾಗಿ ಮೃತ ಪ್ರದೀಪ್ ಕೊಯ್ಲಿ ಅವರಿಗೆ 1 ಲಕ್ಷ ಹಣವನ್ನು ಮುಂಗಡವಾಗಿ ನೀಡಿದ್ದನೆಂದು ಎಸ್‌ಪಿ ತಿಳಿಸಿದರು. ಪ್ರದೀಪ್ ಅವರನ್ನು ಕೊಲೆ ಮಾಡಿದ ನಂತರ ಮನೆಯಲ್ಲಿದ್ದ ಮೃತದೇಹವನ್ನು ಹೂತು ಹಾಕುವ ಕುರಿತು ಉಪಾಯ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ವಿವರಿಸಿದರು.
ಪ್ರದೀಪ್ ಕೊಯ್ಲಿ ಹತ್ಯಾಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ಉಪ ವಿಭಾಗ ಮಟ್ಟದ ವಿಶೇಷ ತನಿಖಾ ತಂಡದಲ್ಲಿ ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ឯ럿., ಗೋಣಿಕೊಪ್ಪಲು ಸಿಪಿಐ ಶಿವರಾಜ್ ಮುದೋಳ್, ವಿರಾಜಪೇಟೆ ಸಿಪಿಐ ಅನೂಪ್ ಮಾದಪ್ಪ ಪಿ. ಕುಟ್ಟ ಸಿಪಿಐ ಶಿವರುದ್ರ ಬಿ.ಎಸ್., ಗೋಣಿಕೊಪ್ಪ ಪಿಎಸ್‌ಐ ಪ್ರದೀಪ್ ಕುಮಾ‌ರ್, ವಿರಾಜಪೇಟೆ ಪಿಎಸ್‌ಐ ಪ್ರಮೋದ್ ಕುಮಾ‌ರ್, ಪೊನ್ನಂಪೇಟೆ ಪಿ.ಎಸ್.ಐ. ನವೀನ್ ಜಿ., ಶ್ರೀಮಂಗಲ ಪಿಎಸ್‌ಐ ರವಿಂದ್ರ, ಕುಟ್ಟ ಪಿಎಸ್‌ಐ ಮಹದೇವ ಹೆಚ್.ಕೆ., ವಿರಾಜಪೇಟೆ ಗ್ರಾಮಾಂತರ ಪಿಎಸ್‌ಐ ಲತಾ ಎನ್.ಜೆ. ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಮತ್ತು ಡಿಸಿಆರ್‌ಬಿ ಸಿಬ್ಬಂದಿಗಳು,ತಾಂತ್ರಿಕ ಸಿಬ್ಬಂದಿಗಳು ಕಾರ್ಯಾಚರಿಸಿದರು.

*ಜಿಲ್ಲಾ ಆಸ್ಪತ್ರೆಯಲ್ಲಿಲ್ಲ QR ಕೋಡ್**ಪಾವತಿಗಾಗಿ ಪರದಾಡುವ ಜನರು* *ಕನಿಷ್ಠ ಎಟಿಎಂ ಕೂಡ ಇಲ್ಲ*ಮಡಿಕೇರಿ: ಕೊಡಗು ಜಿಲ್ಲೆಯ ವೈದ್ಯಕೀಯ ವಿಜ್ಞಾನ...
23/02/2025

*ಜಿಲ್ಲಾ ಆಸ್ಪತ್ರೆಯಲ್ಲಿಲ್ಲ QR ಕೋಡ್*

*ಪಾವತಿಗಾಗಿ ಪರದಾಡುವ ಜನರು*

*ಕನಿಷ್ಠ ಎಟಿಎಂ ಕೂಡ ಇಲ್ಲ*

ಮಡಿಕೇರಿ: ಕೊಡಗು ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ QR ಕೋಡ್ ಅಳವಡಿಸದಿರುವುದು ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳನ್ನು ಮತ್ತು ಅವರ ಸಂಬಂಧಿಕರನ್ನು ಅಲೆದಾಡುವಂತೆ ಮಾಡುತ್ತಿದೆ. ಖಾತೆಯಲ್ಲಿ ಹಣವಿದ್ದರೂ ಸ್ಕ್ಯಾನರ್ ಇಲ್ಲದಿರುವುದು ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ನಿತ್ಯ ಸಮಸ್ಯೆ ಜೊತೆ ಮುಜುಗರವೂ ಆಗುತ್ತಿದೆ.

*ನಿತ್ಯ ನೂರಾರು ರೋಗಿಗಳು*
ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಹಾಸನ ಜಿಲ್ಲೆಯ ಕೊಣ್ಣನೂರು, ರಾಮನಾಥಪುರ, ಅರಕಲಗೂಡು, ಹೊಳೆನರಸೀಪುರ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಭಾಗದಿಂದ ನಿತ್ಯ ನಾನಾ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಭೇಟಿಗಾಗಿ ನೂರಾರು ಮಂದಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡುತ್ತಾರೆ.

*ಕೆಲವೊಮ್ಮೆ ಹತ್ತು ರೂಪಾಯಿಗೂ ಅಲೆದಾಡುವ ಪರಿಸ್ಥಿತಿ*
ರೋಗಿಗಳನ್ನು ನೋಂದಾಯಿಸಿಕೊಳ್ಳಲು ಒಪಿಡಿ ಚೀಟಿ ಅವಶ್ಯವಿದ್ದು ಅದಕ್ಕಾಗಿ ಹತ್ತು ರೂಪಾಯಿ ಪಾವತಿಸಬೇಕು, ಆದರೆ ಕೆಲವೊಮ್ಮೆ ನಗದು ಇಲ್ಲದಿದ್ದಾಗ ಅಥವಾ ಕೌಂಟರಿನಲ್ಲಿ ಚಿಲ್ಲರೆ ಇಲ್ಲದಿದ್ದಾಗ ರೋಗಿಗಳು ಆಸ್ಪತ್ರೆಯ ಹೊರಬಂದು ಅಕ್ಕಪಕ್ಕದ ಅಂಗಡಿಗಳಲ್ಲಿ ಮನವಿ ಮಾಡಿ 10 ರೂಪಾಯಿ ಪಡೆದು ಮತ್ತೆ ಸರತಿ ಸಾಲಿನಲ್ಲಿ ನಿಂತು ಚೀಟಿ ಮಾಡಬೇಕಾದ ಅನಿವಾರ್ಯತೆ ನಮ್ಮ ಬೋಧಕ ಆಸ್ಪತ್ರೆಯಲ್ಲಿದೆ.

*ವೈದ್ಯಕೀಯ ಸೌಲಭ್ಯಗಳಿದ್ದರೂ ಪಾವತಿಗಾಗಿ ಪರದಾಟ*
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಎಂ ಆರ್ ಐ, ಎಕ್ಸ್ ರೆ, ರೇರ್ ಬ್ಲಡ್ ಚೆಕ್ ಅಪ್ ವ್ಯವಸ್ಥೆಗಳಿದೆ. ಬೇರೆಡೆ ಇವುಗಳನ್ನೆಲ್ಲಾ ಮಾಡಿಸುವುದಾದರೆ ಹೆಚ್ಚು ಹಣ ಪಾವತಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಈ ಎಲ್ಲ ಮುಂದುವರೆದ ಸೌಲಭ್ಯಗಳನ್ನು ಪಡೆಯುವ ಅವಕಾಶವಿದ್ದರೂ ಆಡಳಿತ ವ್ಯವಸ್ಥೆ QR ಕೋಡ್ ಅಳವಡಿಸುವಲ್ಲಿ ವಿಫಲಗೊಂಡಿದ್ದು ಈ ಬಗ್ಗೆ ಸಾಮಾನ್ಯ ಜನರ ಮದ್ಯೆ ಅಸಮಾಧಾನ ಉಂಟುಮಾಡುವಂತಾಗಿದೆ.

*ಗೂಡಂಗಡಿಯಲ್ಲಿರುವ ಸ್ಕ್ಯಾನ್ ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಇಲ್ಲ ಯಾಕೆ?*

ಸಣ್ಣಪುಟ್ಟ ಗೂಡು ಅಂಗಡಿಗಳಿಂದಿಡಿದು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ ವರೆಗೂ ಡಿಜಿಟಲ್ ಇಂಡಿಯಾ ಆಗಬೇಕೆಂಬ ಸರಕಾರಗಳ ನಿಲುವುಗಳಿಗೆ ಸರಕಾರಿ ಆಸ್ಪತ್ರೆಯೇ ಬೆಂಬಲಿಸುವುದಿಲ್ಲ ಎಂದರೆ ಹೇಗೆ? ಇಲ್ಲಿಯೂ ಹಣದ ವಾಯಿವಾಟಿನಲ್ಲಿ ಪಾರದರ್ಶಕತೆ ಅವಶ್ಯವಿಲ್ಲವೇ?

*ಅಂಗಡಿಗಳಲ್ಲಿ ಮನವಿ ಮಾಡುವ ಸಿರಿವಂತರು*
ಖಾತೆಯಲ್ಲಿ ಸಾವಿರಾರು ರೂಪಾಯಿ ಇದ್ದರೂ ಆಸ್ಪತ್ರೆಯಲ್ಲಿ ಬಿಲ್ ಪಾವತಿಸಲು ನಗದು ಅವಶ್ಯವಿರುವ ಕಾರಣ ಅಂಗಡಿಗಳಲ್ಲಿ ವಿನಂತಿಸಿ, ಕೆಲವೊಮ್ಮೆ ಬೇಡುವ ಸ್ಥಿತಿಯೂ ಎದುರಾಗುತ್ತದೆ. ಎಟಿಎಂ ಮರೆತು ಬರುವ ಮತ್ತು ಡಿಜಿಟಲ್ ಇಂಡಿಯಾ ಮೇಲೆ ಭರವಸೆಯಿಟ್ಟು ಬರುವ ಹಲವಾರು ಮಂದಿ ನಗದು ಹಣಕ್ಕಾಗಿ ಪರದಾಡುವಂತಾಗಿದೆ. ಭಾರತ ಬದಲಾಗಬೇಕೆಂಬ ಮಹತ್ವಾಕಾಂಕ್ಷೆಗೆ ಜಿಲ್ಲಾ ಆರೋಗ್ಯ ಇಲಾಕೆಯಿಂದ ಯಾಕಿಷ್ಟು ನಿರ್ಲಕ್ಷ್ಯ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

*ಸುರೇಶ್ ಬಿಳಿಗೇರಿ*

*ಬರಲಿ QR ಕೋಡು*

*ತಪ್ಪಲಿ ಅಲೆದಾಡುವವರ ಪಾಡು*

21/02/2025

ಕಾಲೇಜು ವಿದ್ಯಾರ್ಥಿಗಳೇ ಎಚ್ಚರ.. ತಿಳಿದಿರಲಿ, ಸೈಬರ್ ಕ್ರೈಂ ವಂಚನೆಗೆ ಕೊಡಗಿನ ಕಾಲೇಜು ವಿದ್ಯಾರ್ಥಿಗಳನ್ನು ಬಳಸಲಾಗುತ್ತಿದೆ.. ನಿಮಗರಿಯದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ಹಣ ವಹಿವಾಟಾಗುತ್ತೆ..

Address

RACECOURSE Road
Madikeri
571201

Alerts

Be the first to know and let us send you an email when Kodagu News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kodagu News:

Share