07/08/2025
#ಹಿರಿಯ_ಜೀವ_ಅದೇನು_ಕನಸು_ಕಟ್ಟಿಕೊಂಡಿತ್ತೋ!!!
ನಿನ್ನೆಯ ದಿನ ರಾತ್ರಿ ಕೊಡಗು ಜಿಲ್ಲೆಯ ಚೆoಬು ಗ್ರಾಮ ಕ್ಕೆ ಒಂದು ಅಘಾತಕಾರಿ ಸುದ್ದಿ ಬರುತ್ತದೆ ಎಲ್ಲರು ಗಾಡ ನಿದ್ರೆಯಲ್ಲಿ ಇರುವ ಸಮಯದಲ್ಲಿ ಚೆoಬು ಗ್ರಾಮದ ಅಂಡಮಾನ್ ತರ ಇರುವ ದಬ್ಬಡ್ಕ ದಲ್ಲಿರುವ ಕೊಪ್ಪ ಮನೆತನದ ಒಂದು ಹಿರಿ ಜೀವ ಆನೆಯ ಆಕ್ರಮಣ ಕ್ಕೆ ಬಲಿ ಆಗಿ ಹೋದರು, ಮನುಷ್ಯ ನ ಹಾಗೂ ವನ್ಯ ಪ್ರಾಣಿಗಳ ಕಾಳಗದಲ್ಲಿ ಒಂದು ಜೀವ ಕಳೆದುಕೊಳ್ಳಬೇಕಾಯ್ತು.
ದಬ್ಬಡ್ಕ ಅಂದರೆ ಅದೊಂದು ನೆಟ್ವರ್ಕ್ ಹಾಗೂ ಮೂಲ ಸೌಕರ್ಯ ವನ್ನು ಹೊಂದಿಲ್ಲ ದ ಸುತ್ತಲೂ ದಟ್ಟ ಕಾನನದಿಂದ ಕೂಡಿರುವ ಒಂದು ಸುಂದರ ತಾಣ, ಆದರೆ ಅಲ್ಲಿ ಪ್ರತಿ ದಿನ ವನ್ಯ ಪ್ರಾಣಿ ಗಳ ಜೊತೆ ಸೆನಸಾಡಲೇಬೇಕು, ಕೃಷಿ ಯನ್ನೇ ನಂಬಿ ಬದುಕಿರುವ ಹಲವು ಕನಸುಗಳನ್ನು ಹೊತ್ತ ಅದೆಷ್ಟೋ ಕುಟುಂಬಗಳು ಇವತ್ತಿಗೂ ಕೆಲವೊಂದು ಮೂಲ ಸೌಕರ್ಯ ದಿಂದ ವಂಚಿತರಾಗಿದ್ದಾರೆ,
ರಾಜಕಾರಣ ದ ಒಳ ಜಗಳದಲ್ಲಿ ಬರಬೇಕಾದ ಮೂಲ ಸೌಕರ್ಯ ಗಳು ಬರುತ್ತಿಲ್ಲ.
ತಂದೆ ತಾಯಿಯ ಜಗಳದಲ್ಲಿ ಮಗು ಬಡಾವಯ್ತು ಅಂದ ಹಾಗೆ ಇಲ್ಲಿ ಇರುವ 2 ಬಲಿಷ್ಠ ರಾಜಕೀಯದ ಒಳ ಜಗಳದಿಂದ ಇಲ್ಲಿನ ಜನಗಳು ಬಡವಾಗಿದ್ದಾರೆ. ಸರಿಯಾದ ರಸ್ತೆ ಸಂಪರ್ಕ ಇಲ್ಲ, ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ, ಕೆಲವೊಂದು ಮನೆಗಳಲ್ಲಿ ಪ್ರಕೃತಿ ಯ ಮಡಿಲಿನಿಂದಲೇ ಜುಳು ಜುಳು ಹರಿಯುವ ಕೊಲ್ಲಿ ನೀರಿನ ಮೂಲಕ ವಿದ್ಯುತ್ ಉತ್ಪಡಿಸಿಕೊಂಡು ಉಪಯೋಗಿಸುತ್ತಿದ್ದಾರೆ,
ದೊಡ್ಡ ದೊಡ್ಡ ರಾಜಕೀಯ ನಾಯಕರೇ ಒಮ್ಮೆ ಈ ಕಡೆ ತಿರುಗಿ ನೋಡಿ ಪ್ರಕೃತಿ ಸೌಂದರ್ಯ ಕ್ಕೆ ಹೆಸರು ವಾಸಿಯಾದ ಕೊಡಗು ಜಿಲ್ಲೆಯ ಒಂದು ಗ್ರಾಮ ನನ್ನ ಚೆoಬು ಗ್ರಾಮ,ಆದರೆ ಇಲ್ಲಿ ಮೂಲ ಸೌಕರ್ಯ ದಿಂದ ವಂಚಿತರಾದ ಹಲವು ಕುಟುಂಬ ಗಳು ಇವತ್ತಿಗೂ ಇದೆ.
ನಿಮ್ಮ ಉಚಿತ ಭಾಗ್ಯ ಗಳನ್ನು ಬದಿಗೆ ಇಟ್ಟು ಆ ಹಣದಲ್ಲಿ ಈ ತರ ಮೂಲ ಸೌಕರ್ಯ ವಂಚಿತ ಗ್ರಾಮ ಗಳಿಗೆ ಆದಷ್ಟು ಬೇಗ ಮೂಲ ಸೌಕರ್ಯ ವನ್ನು ಒದಗಿಸುವಂತೆ ಆಗಿ.
ಎಷ್ಟೋ ವಿದ್ಯಾವಂತ ವಿದ್ಯಾರ್ಥಿಗಳು ನಮ್ಮ ಗ್ರಾಮದಲ್ಲಿ ಇದ್ದರು ಕೂಡ ಸರಿಯಾದ ಹೋಗಿ ಬರುವ ವ್ಯವಸ್ಥೆ ಇಲ್ಲದೆ ಮನೆಯಲ್ಲೇ ಉಳಿಯುವಂತೆ ಆಗಿದೆ, ದೂರದ ಕಾಲೇಜು ಗಳಿಗೆ ಕಳಿಸುವುದಕ್ಕೂ ಭಯ ಪಡುತ್ತಾರೆ, ಸಂಪರ್ಕ ಮಾಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಆ ಊರಿಗೆ ಜೀಪು ಬಿಟ್ಟರೆ ಬೇರೆ ಗಾಡಿ ಗಳು ಹೋಗುವುದಕ್ಕೂ ಕಷ್ಟ.
ಅಲ್ಲಿ ನ ವಯಸ್ಸಿಗೆ ಬಂದ ಹುಡುಗರ ಪರಿಸ್ಥಿತಿ ಅಂತೂ ಕೇಳುವುದು ಬೇಡ. ಮದುವೆ ಆಗೋಣ ಅಂದರೆ ಹುಡುಗಿ ಕೊಡುವವರು ಬೇಕಲ್ಲವೇ. ನೋಡುಗರಿಗೆ ಸುಂದರ ಪ್ರಕೃತಿ ತಾಣ,ಆದರೆ ಅಲ್ಲಿ ವಾಸಿಸುವ ಜನರಿಗೆ ಅದೇ ಒಂತರ ನರಕ ತಾಣ ಆಗೋಗಿದೆ
ಇಂತಹ ಪರಿಸ್ಥಿತಿ ಯಲ್ಲಿ ಇರುವ ಗ್ರಾಮ ಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು,
ಕಣ್ಣಿಗೆ ಕಾಣುವ ಊರುಗಳನ್ನು ಮಾತ್ರ ಅಭಿವೃದ್ಧಿ ಮಾಡುವುದರಿಂದ ನಮ್ಮ ಜಿಲ್ಲೆ ಆಗಲಿ ದೇಶ ಆಗಲಿ ಅಭಿವೃದ್ಧಿ ಆಗೋದಿಲ್ಲ. ಬುಡದಿಂದಲೇ ಅಭಿವೃದ್ಧಿ ಕೆಲಸ ಆಗಬೇಕು *ಸ್ಥಳೀಯ ನಾಯಕರುಗಳು ರಾಜಕೀಯ ಬಿಟ್ಟು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಬೇಕು*
ನೀವುಗಳು ಕೇವಲ ಹೆಸರಿಗೆ ನಾನೊಬ್ಬ ನಾಯಕ ಅಂದರೆ ಸಾಲುವುದಿಲ್ಲ, ನಿಮ್ಮ ಹೆಸರು ಅಲ್ಲಿನ ಜನರ ಬಾಯಲ್ಲಿ ಅಜರಾಮರ ಆಗಿರುವಂತೆ ಕೆಲಸ ಮಾಡಬೇಕು,
ಇವತ್ತಿನ ದಿನ ಒಂದು ಹಿರಿ ಜೀವ ಅದೆಷ್ಟು ನರಳಿ ನರಳಿ ಪ್ರಾಣ ಬಿಟ್ಟಿರಬಹುದು ಒಮ್ಮೆ ಯೋಚನೆ ಮಾಡಿ ಹಲವು ಸಮಯದಿಂದ ಸಂಭಂದ ಪಟ್ಟ ಅಧಿಕಾರಿಗಳ ಜೊತೆ ದೊಡ್ಡ ದೊಡ್ಡ ನಾಯಕರ ಜೊತೆ ಅಲ್ಲಿನ ಆನೆ ಸಮಸ್ಯೆ ಯನ್ನು ಹೇಳಿದರು ಯಾವುದೇ ಪ್ರತಿಫಲ ಸಿಕ್ಕಿರುವುದಿಲ್ಲ, ಅಧಿಕಾರಿಗಳು ಆದವರು ಸ್ವಲ್ಪ ಜನ ಸಾಮಾನ್ಯ ರ ಕಷ್ಟಕ್ಕೆ ಸ್ಪಂದಿಸಿ ನೀವುಗಳು ಅಲ್ಲಿನ ಜನರು ಸಮಸ್ಯೆ ಹೇಳಿದಂದೆ ಆ ಆನೆಯನ್ನ ಹಿಡಿಯುವ ಪ್ರಯತ್ನ ಪಟ್ಟಿದರೆ ಇವತ್ತು ನಮ್ಮ್ಮ ಊರಿನ ಹಿರಿಯ ಜೀವ ಇನ್ನೊಂದಿಷ್ಟು ವರ್ಷ ಕುಟುಂಬದೊಂದಿಗೆ ಕಾಲ ಕಳೆಯುತ್ತಿದರು.
ದೊಡ್ಡ ಜನನಾಯಕರುಗಳಿಗೆ ಮನವಿ ಕೊಟ್ಟಾಗ ತಕ್ಷಣ ಕ್ಕೆ ಸ್ಪಂದಿಸಿದ್ದರೆ ಇವತ್ತು ನೀವೆಲ್ಲ ನಮಗೆ ದೇವರು ತರ ಕಾಣುವಂತೆ ಆಗಿತ್ತು.
ಈಗ ಎಲ್ಲಾ ಮುಗಿದ ಮೇಲೆ ಆನೆ ಹಿಡಿಯುವ ಕಾರ್ಯಕ್ಕೆ ಕೈ ಹಾಕಿದೀರಾ ಒಳ್ಳೆಯ ಕೆಲಸ ಆದರೆ ಇದರ ಅರ್ಥ ಸಾವಿಗೋಸ್ಕರ ಕಾಯುತ್ತಿದ್ದಿದ್ದ? ಒಂದು ಜೀವ ಹೋದಮೇಲೆ ನಿದ್ದೆಯಿಂದ ಎದ್ದಿದಾ? ಎಷ್ಟೋ ಶಾಲಾ ಮಕ್ಕಳು ಇವತ್ತು ಅದೇ ದಾರಿಯಲ್ಲಿ ಹೋಗುತ್ತಿರುತ್ತಾರೆ ದೊಡ್ಡ ಅಪಾಯ ನಡೆಯುತ್ತಿದ್ದರೆ ಏನು ಮಾಡುತ್ತಿದ್ರಿ?
ಸತ್ತ ಮೇಲೆ ಸಾಂತ್ವನ ಹೇಳೋದು ಅಲ್ಲ ಕೆಲಸ,ಜನರ ಮನವಿ ಯನ್ನು ಗಂಭೀರ ವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುವಂತಗಬೇಕು. ಸತ್ತ ಮೇಲೆ ದುಡ್ಡು ಕೊಟ್ಟರೆ ನಮ್ಮ ಹಿರಿಯ ಜೇವವಕ್ಕೆ ಬೆಲೆ ಕಟ್ಟಿದ ಹಾಗೆ ಅಷ್ಟೇ ☹️.
ದಯವಿಟ್ಟು ಇನ್ನು ಆದರೂ ಜನರ ಮನವಿಗೆ ಸ್ಪಂದಿಸಿ ರಾಜಕೀಯ ಬಿಟ್ಟು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಿ.
ಎಲ್ಲಾ ಅಧಿಕಾರಿ ವರ್ಗ ದವರನ್ನು ಎಚ್ಚರಿಸಿ, ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿ .
ಗಡಿ ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಿ
ಈ ದಿನ ನಮ್ಮನ್ನು ಅಗಲಿದ ಆ ದಬ್ಬಡ್ಕ ಕೊಪ್ಪ ಕುಟುಂಬದ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಸಿಗಲಿ
ಓಂ ಶಾಂತಿ 😥
NGB@ಕೊಂಬೆಟ್ಟು