
03/04/2025
ಹೇಳುತ್ತಿದ್ದೇನೆ. ದೇವರು ನನಗೆ ಮೇಲು ಮಾಡಿದನೆಂದು ನನಗೆ ನಿಶ್ಚಯವಾಗಿ ಹೇಳಲು ಸಾಧ್ಯವಿದೆ. ಯೇಸು ಕ್ರಿಸ್ತನನ್ನು ಪ್ರತಿಬಿಂಬಿಸಲು ನನ್ನನ್ನು ದೇವರು ಶಕ್ತಳಾಗಿಸಿದನು. ಅದು ನನ್ನ ಸ್ವಭಾವವನ್ನೆ ಬದಲೀಸಿತು. ಸಂತೋಷವನ್ನು ದ್ವಿಗುಣಗೊಳಿಸಿತ್ತು. ಸಹಿಷ್ಣತೆಯನ್ನು ಬೆಳೆಸಿತು. ನನ್ನ ಜೀವಿತಕ್ಕೆ ಒಂದರ್ಥವನ್ನು ನೀಡಿತು.
ಎಲ್ಲಕ್ಕಿಂತಲೂ ಮಿಗಿಲಾಗಿ ನಾನಿಂದೂ ಸಂತೃಪ್ತಿಯುಳ್ಳವಳಾಗಿದ್ದೇನೆ. ನನ್ನ ಕಲೆ ನನ್ನ ಮನಸ್ಸಿನ ಸಂತೃಪ್ತಿಯ ಪ್ರತೀಕವಾಗಿದೆ. ಅದನ್ನು ನೋಡುವವರು ಅರಿತುಕೊಳ್ಳಬೇಕಾದದ್ದು: ನನ್ನಂಥ ಬಲಹೀನರನ್ನು ಪರಿಸ್ಥಿತಿಯನ್ನು ಜಯಿಸಲು ದೇವರು ಶಕ್ತಿಕರಿಸುತ್ತಾನೆ ಎಂದು.!!
ನ್ಯೂಸ್ ಅಮೇರಿಕನ್ ದಿನಪತ್ರದಲ್ಲಿ, ಜೋನಿಯ ಹಾಗೂ ಆಕೆಯ ಕಲೆಯ ಬಗ್ಗೆ ಒಂದು ಪೂರ್ಣಪುಟ ಲೇಖನವು ಬರೆಯಲ್ಪಟ್ಟಿತ್ತು; ಅದರಲ್ಲಿ ದೇವರಲ್ಲಿಯ ಆಶ್ರಯದ ತನ್ನ ಆತ್ಮ ಸ್ಥೆರ್ಯದ ಮಾತುಗಳನ್ನು ಪೂರ್ಣವಾಗಿ ಬರೆದಿದ್ದರು. ಬಾಲ್ಟಿಮೋರ್ T.V ಯ ಚಾನೆಲ್ 11ರಲ್ಲಿ 'ಜೋನಿ ಎರಿಕ್ಷನ್ ದಿನ'ದ ಕುರಿತಾದ ವಾರ್ತೆಯನ್ನು ನೀಡಿದರು.
ಜೋನಿಯನ್ನು ಆಶ್ಚರ್ಯಪಡಿಸಿದ ಇನ್ನೊಂದು ವಿಷಯ ತನ್ನ ಚಿತ್ರಗಳು ಮಾರಟವಾಗಿತ್ತು. ಅದು ನಡೆಯುತ್ತದೆ ಎಂಬ ನಿರೀಕ್ಷೆಯು ಆಕೆಗಿರಲಿಲ್ಲ. ಅದನ್ನು ಅವಳು ಇಚ್ಛಿಸಿದರೂ ಸಹ.....! ಆದರೆ 'ಜೋನಿ ಎರಿಕ್ಷನ್ ದಿನೌದಲ್ಲಿ ಅವಳ ಹತ್ತು ಹನ್ನೇರಡು ಚಿತ್ರಗಳು ಸುಮಾರು ಸಾವಿರ ಡಾಲರ್ ಬೆಲೆಗೆ ಮಾರಲ್ಪಟ್ಟವು.!!
ಬಾಲ್ಟಿಮೊರ್‌ನಲ್ಲಿನ ಚಿತ್ರ ಪ್ರದರ್ಶನವನ್ನು ಜೋನಿಯನ್ನು ಪ್ರಸಿದ್ದಗೊಳಿಸಿತು. ಬಹಳ ಪ್ರದರ್ಶನವನ್ನು ನಡೆಸಲು ಆಮಂತ್ರಣಗಳು ಲಭಿಸಿದವು. ಅದರೊಟ್ಟಿಗೆ ಸ್ಕೂಲ್‌ಗಳಲ್ಲಿ, ಚರ್ಚ್ ಗಳಲ್ಲಿ, ವೈ. ಡಬ್ಲ್ಯೂ. ಸಿ. ಎ. ಗಳಲ್ಲಿಯೂ ಮತಿತ್ತರ ಸಾರ್ವಜನಿಕ ಸಭೆಗಳಲ್ಲಿಯೂ ಆಕೆ ಆಮಂತ್ರಿಸಲ್ಪಟ್ಟಳು. ಅಲ್ಲಿ ಕೇವಲ ತನ್ನ ಚಿತ್ರಗಳನ್ನು ಪ್ರದರ್ಶಿಸಲು ಮಾತ್ರವಲ್ಲ, ತನ್ನ ಕ್ರೈಸ್ತವ ಸಾಕ್ಷಿಯನ್ನು ಹೇಳಲು ಅವಕಾಶವು ಲಭಿಸಿತು. ಒಂದೊಂದು ಹೊಸ ಪ್ರದರ್ಶನಗಳು ಹಲವು ಹೊಸ ಅವಕಾಶಗಳನ್ನು ಒದಗಿಸಿದವು.
ಹಲವು TV ರೆಡಿಯೋ ಕಾರ್ಯಕ್ರಮಗಳಲ್ಲಿ ಜೋನಿ ಭಾಗವಹಿಸಿದಳು. ಚಿತ್ರಗಳು ಅತೀ ವೇಗದಲ್ಲಿ ಮಾರಲ್ಪಟ್ಟವು. ರಚಿಸಿದ ಚಿತ್ರಗಳು ಆಗಿಂದಾಗಲೇ ಎಂಬಂತೆ! ಅದು ಕುಂಟುಂಬದಲ್ಲಿನ ಸಾಲಗಳನ್ನು ತೀರಿಸಿತು ಎಂದು ಮಾತ್ರವಲ್ಲ, ತಾನು ಆರ್ಥಿಕ ವಿಷಯದಲ್ಲಿಯಾದರೂ ಇತರರಿಗೆ ಭಾರವಾಗಿಲ್ಲ ಎಂಬ ಸಂತೋಷವೂ ಆತ್ಮಸ್ಥೆರ್ಯವೂ ಆಕೆಗೆ ನೀಡಲ್ಪಟ್ಟಿತು. ಕಾಲುಗಳಿಗೆ ಬಲವಿಲ್ಲದಿದ್ದರೂ 'ಸ್ವಂತ ಕಾಲುಗಳಲ್ಲಿ' ನಿಂತುಕೊಳ್ಳಲು ದೇವರು ಸಹಾಯ ಮಾಡಿದನೆಂಬ ಒಂದು ಅನಿಸಿಕೆ!
ಚಿತ್ರಗಳ ರಚನೆಯೊಟ್ಟಿಗೆ ಜೋನಿ ಶುಭಾಷಯಗಳ ಕಾರ್ಡ್ ಗಳನ್ನು ಡಿಸೈನ್ ಮಾಡಿ ಅಚ್ಚು ಹಾಕಿಸಿದಳು. ಅದು ಒಳ್ಳೆಯ ರೀತಿಯಲ್ಲಿ ಮಾರಲ್ಪಟ್ಟವು ಆಕೆಯು ಆ ಕಂಪನಿಗೆ 'ಜೋನಿ PTL' ಎಂದು ಹೆಸರಿಟ್ಟಳು.
ಬೇರೆ ಮೂರು ಜೊತೆಗಾರರೊಂದಿಗೆ ಸೇರಿ ಜೋನಿ ಬಾಲ್ಟಿಮೋರ್‌ನಲ್ಲಿ ಒಂದು ಕ್ರೈಸ್ತವ ವಾಚನಾಲಯವನ್ನು ತೆರೆದಳು. ಅದು ಕೇವಲ ಒಂದು ವಾಚನಾಲಯವಾಗಿರದೆ ಅದೊಂದು 'ಕೌನ್ಸಿಲಿಂಗ್ ಸೆಂಟರ್' ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆ ನಗರದ ಒಂದು 'ಕ್ರೈಸ್ತವ ಕೇಂದ್ರ'ವಾಗಿ ಮಾರ್ಪಟ್ಟಿತು.
ಆ ದಿನಗಳಲ್ಲಿ ರಾಷ್ಟ್ರಾಧ್ಯಕ್ಷನನ್ನು ಭೇಟಿಯಾಗಲೂ ಜೋನಿಗೆ 'ವೈಟ್ ಹೌಸ್'ನಿಂದ ಒಂದು ಆಮಂತ್ರಣವು ಲಭಿಸಿತು! ಮರೆಯಲಾಗದ ಒಂದು ಸಂದರ್ಶನವಾಗಿತ್ತು ಅದು. ಫಸ್ಟ್ ಲೇಡಿ (ರಾಷ್ಟ್ರಧ್ಯಕ್ಷರ ಪತ್ನಿ) (ಶ್ರೀಮತಿ ಪ್ಯಾಟ ನಿಕ್ಷನ್)ಗೆ ಜೋನಿ ಒಂದು ಚಿತ್ರವನ್ನು ಉಡುಗೊರೆಯಾಗಿ ನೀಡಿದಳು.
ಜೋನಿ ತನ್ನ ಸಾಕ್ಷಿಯನ್ನು ವಿವರಿಸುವ ಒಂದು ಚಿಕ್ಕ ಪುಸ್ತಿಕವನ್ನು ಅಚ್ಚು ಹಾಕಿಸಿದಳು. ತಾನು ಆಮಂತ್ರಿಸಲ್ಪಟ್ಟಲ್ಲಿ ಎಲ್ಲಾ ಕಡೆಯೂ ಆಕೆ ತನ್ನ ಸಾಕ್ಷಿಯನ್ನು ಹೇಳುತ್ತಿದ್ದಳು. ಮತ್ತು ಈ ಚಿಕ್ಕ ಪುಸ್ತಕವನ್ನು ಹಂಚುತ್ತಿದ್ದಳು.
1974 ರಲ್ಲಿ ಒಂದು ಮರೆಯಲಾಗದ ಅನುಭವ ಜೋನಿಯ ಜೀವಿತದಲ್ಲಿ ಉಂಟಾಯಿತು. ಅಮೇರಿಕಾದಲ್ಲಿ ಅತೀ ಹೆಚ್ಚು ಜನರು ವೀಕ್ಷಿಸುವ “ಟುಡೇ ಶೋ" (ಇಂದಿನ ಪ್ರದರ್ಶನ)ವೆಂಬ ಟಿ. ವಿ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಳಿಗೆ ಅವಕಾಶ ಲಭಿಸಿತು. ಕೋಟಿಗಟ್ಟಲೇ ಜನರು ಅವಳ ಸಾಕ್ಷಿಯನ್ನು ಕೇಳಿದರು. ಅದು ಆಕೆಯ ಸಾಧ್ಯತೆಗಳನ್ನು ಹೆಚ್ಚಿಸಿತು.
ಈಗ ಜೋನಿ ಲೋಕ ಪ್ರಸಿದ್ಧಳಾಗಿದ್ದಾಳೆ. ಆಕೆಯ ಸಾಕ್ಷಿಯನ್ನು ಕೇಳಲು ಹತ್ತು ಸಾವಿರಗಟ್ಟಲೇ ಜನರು ಬಂದು ಸೇರುತ್ತಾರೆ. ಜೋನಿಯ ಕಥೆಯನ್ನು ಬಿಲ್ಲಿ ಗ್ರಾಹಂ ಇವಾಂಜೇಲಿಸ್ಟಿಕ್ ಆಸೋಸಿಯೇಶನ್ ಚಲನಚಿತ್ರವಾಗಿ ಮಾಡಿದರು. ಇಂದು ಜೋನಿ ಒಂದು ಬಹುಮುಖಿ ಪ್ರತಿಭೆಯಾಗಿ ಪ್ರಸಿದ್ಧಳಾಗಿದ್ದಾಳೆ. ಆಕೆಯು ಚಿತ್ರಕಲೆಗಾರ್ತಿ, ಹಾಡುಗಾರ್ತಿ, ಆಲೋಚನಾ ಕರ್ತೆ ಎಂಬ ರೀತಿಗಳಲ್ಲಿ ಪ್ರಸಿದ್ಧಳಾಗಿದ್ದಾಳೆ. ಇದೆಲ್ಲದರ ಮಿಗಿಲಾಗಿ ಆಕೆಯು ಯೇಸು ಕ್ರಿಸ್ತನ ಒಂದು ಶಕ್ತವಾದ ಸಾಕ್ಷಿಯಾಗಿದ್ದಾಳೆ.
ಲೇಖಕರು ಸಾಜು