
17/04/2022
ನಮ್ಮ ನಾಡ ಒಕ್ಕೂಟ ಕಡಬ ವತಿಯಿಂದ ಉಚಿತ ಸರ್ಕಾರಿ ಸೌಲಭ್ಯ ಶಿಬಿರ
ಕಡಬ: ನಮ್ಮ ನಾಡ ಒಕ್ಕೂಟ ಕಡಬ ತಾಲೂಕು ಸಮಿತಿ ವತಿಯಿಂದ ಇಂದು ಕಡಬದ ಕೊರುಂದೂರು ಭಾಗದಲ್ಲಿ ಉಚಿತ ಸರ್ಕಾರದ ಸೌಲಭ್ಯ ಶಿಬಿರ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸರ್ಕಾರದ ಸೌಲಭ್ಯಗಳಾದ ಇ- ಶ್ರಮ್ ಕಾರ್ಡ್, ಆಯುಶ್ಮಾನ್ ಕಾರ್ಡ್, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ನಡೆಸಲಾಯಿತು. ನಮ್ಮ ನಾಡ ಒಕ್ಕೂಟ ಕಡಬ ತಾಲೂಕು ಅಧ್ಯಕ್ಷರಾದ ಸಿದ್ದೀಕ್ ಕೊರುಂದೂರು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ನಾಡ ಒಕ್ಕೂಟ ಸಮುದಾಯದ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದೆ. ಸಮುದಾಯವನ್ನು ಒಗ್ಗಟ್ಟಿನತ್ತ ಕೊಂಡೊಯ್ಯುತ್ತಿದೆ , ಸಮುದಾಯದ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ಉಚಿತವಾಗಿ ನೀಡಿ , ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಪ್ರೋತ್ಸಾಹ ನೀಡಿ ಸಮುದಾಯಕ್ಕೆ ಮತ್ತು ಅಶಕ್ತರಿಗೆ ಆಶಾ ಕಿರಣವಾಗಿದೆ ಎಂದು ತಿಳಿಸಿದರು.