The Saffron Productions

The Saffron Productions We produce content what u like to watch.

14/03/2023

Tirugu Bana | ತಿರುಗುಬಾಣ

02/03/2023

ಅಂತರಾಳ - ಇದು ಆಂತರ್ಯದ ನೋವಿನ ಕಥೆ
ಈ ವಾರದ ಅತಿಥಿ : - ಜಾನಪದ ಕಲಾವಿದ ಯಶೋಧರ ಕುಂದರ್ ಎರ್ಮಾಳ್ ಬಡಾ

02/03/2023

ನೀರಿಲ್ಲ.. ದಾರಿಯಿಲ್ಲ.. ಕುಡಿಯೋ ನೀರಿಗೂ ತತ್ವಾರ ನಡೆಯೋ ದಾರಿಗೂ ಪುಟ್ಟ ಮಗುವಿನ ಹಾಹಾಕಾರ...

ಎಷ್ಟೇ ವರ್ಷ ಅಧಿಕಾರದಲ್ಲಿದ್ದರೂ ಮೂಲಭೂತ ಸೌಕರ್ಯಗಳನ್ನೆ ನೀಡಿಲ್ಲ..
ಇದು ನಮ್ಮೂರಿನ ಕತೆ.. ಚುನಾವಣಾ ಅಖಾಡದಲ್ಲಿ ಶಾಸಕರ ಪೈಪೋಟಿ..
ಮತದಾರ ಬಂಧುಗಳ ಪರ ವಿರೋಧಗಳ ಜಟಾಪಟಿ..
ಜನಸ್ಪಂದನ ಅತೀ ಶೀಘ್ರದಲ್ಲಿ ನಿಮ್ಮ ಸ್ಪಂದನವಾಹಿನಿಯಲ್ಲಿ

01/03/2023

Tirugu Bana | ತಿರುಗುಬಾಣ
ಈ ವಾರದ ಅತಿಥಿ : ಮೋಹನ್ ಭಟ್ - ಶ್ರೀರಾಮ ಸೇನೆ ಮಂಗಳೂರು ವಿಭಾಗದ ಉಚ್ಚಾಟಿತ ಅಧ್ಯಕ್ಷರು

27/02/2023

ಮಂಗಳೂರು : ಕಂಕನಾಡಿ ಗರಡಿ ಕ್ಷೇತ್ರ ೧೫೦ ಸಂಭ್ರಮದಲ್ಲಿ ಇದ್ದು , ಈ ಸಂಭ್ರಮವನ್ನ ಬಹಳ ಅದ್ದೂರಿಯಾಗಿ ಆಚರಣೆ ಮಾಡಲು ಸಮಿತಿ ತೀರ್ಮಾನಿಸಿದ್ದು , ಮಾರ್ಚ್ ೩ ರಂದು ಹೊರೆಕಾಣಿಕೆ, ೬ರಂದು ಬ್ರಹ್ಮ ಕಳಶ, ೭ರಂದು ನಾಗಮಂಡಲ ಸಹಿತ ಕ್ಷೇತ್ರದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಐತಿಹಾಸಿಕವಾಗಲಿದೆ ಎಂದರು. ಮತ್ತಿತರ ವಿಷಯಗಳ ಬಗ್ಗೆ ಸಂಘಟಕರಾದ, ಕಿಶೋರ್ ಕುಮಾರ್, ಮೋಹನ್ ಉಜ್ಜೋಡಿ, ವಿಠ್ಠಲ, ವಾಮನ, ಜಗದೀಪ್, ದಿನೇಶ್ ಅಂಚನ್, ವಿಜಯ ಸಹಿತ ಮತ್ತಿತರರು ಉಪಸ್ಥಿತರಿದ್ದರು.

27/02/2023

ಮಂಗಳೂರು: ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಶ್ವಶ್ರೀ”, ಹಿಂದು ರುದ್ರಭೂಮಿ ರಸ್ತೆ, ಕದ್ರಿ. ಮಂಗಳೂರು ಹಿಂದೂ ಸಮಾಜದ ಐಕ್ಯತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ 3ನೇ ವರ್ಷದ ಕೊರಗಜ್ಜನ ಅದಿ ಕ್ಷೇತ್ರಕ್ಕೆ ನಮ್ಮ ನಡೆ ದಿನಾಂಕ 19-03-2023 ಆದಿತ್ಯವಾರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರ್ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಪಾದಯಾತ್ರೆ

ಪಾದಯಾತ್ರೆ ಮುಗಿದ ನಂತರ ಸಮಾರೋಪ ಸಭೆ ಕುತ್ತಾರು ಕೊರಗಜ್ಜನ ಆದಿಕ್ಷೇತ್ರ ಬಳಿ ಬೆಳಿಗ್ಗೆ ಗಂಟೆ 9.30ಕ್ಕೆ ನಡೆಯಲಿದ್ದು ಇದರ ಅಂಗವಾಗಿ ಕೊರಗಜ್ಜನೆಡೆ ನಮ್ಮ ನಡೆ. ಶ್ರೀ ಕದ್ರಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಪುರೋಹಿತರಾದ ಶ್ರೀ ಕೃಷ್ಣ ಅಡಿಗ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಉಪಾಧ್ಯಕ್ಷರು ಮನೋಹರ್ ಸುವರ್ಣ, ಹರೀಶ್ ಕುಮಾರ್ ಶೇಟ್, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ್, ನಾರಾಯಣ ಗುರು ಸಂಘ ಕದ್ರಿ ಇದರ ಅಧ್ಯಕ್ಷರಾದ ಬಬ್ಳಿ ಕದ್ರಿ ಉಪಸ್ಥಿತಿ ಇದ್ದರು.

25/02/2023

ಸೂಪರ್ ಸೆಕೆಂಡ್.. ನೇರ ಪ್ರಸಾರ ಕಾರ್ಯಕ್ರಮ

24/02/2023

ಮಡಿಕೇರಿ ನೆನಪಿಸಿದ ಸುರತ್ಕಲ್ ನ ಮುಂಜಾನೆ ಮಂಜು!
ಸುರತ್ಕಲ್: ಕಳೆದೊಂದು ವಾರದಿಂದ ಮುಂಜಾನೆ ವೇಳೆ ವಿಪರೀತ ಮಂಜು ಬೀಳುತ್ತಿದ್ದು ಇಂದು ಮುಂಜಾನೆ ಮಾತ್ರ ಸುರತ್ಕಲ್, ಮುಕ್ಕ ಭಾಗದಲ್ಲಿ ಭಾರೀ ಮಂಜು ಕವಿದ ವಾತಾವರಣದಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು.
ಬೆಳಗ್ಗೆ 9 ಗಂಟೆಯ ವೇಳೆಯಲ್ಲೂ ಮಂಜು ಹರಡಿದ್ದು ಹೆದ್ದಾರಿಯಲ್ಲಿ ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡು ಸಂಚಾರ ನಡೆಸಿದರು. ಸಾಮಾನ್ಯವಾಗಿ ಮಡಿಕೇರಿ, ಚಿಕ್ಕಮಗಳೂರಿಗೆ ಸೀಮಿತವಾಗಿರುತ್ತಿದ್ದ ಮಂಜಿನ ವಾತಾವರಣ ಇಲ್ಲೇ ಕಂಡುಬಂದಿದ್ದು ವಾಹನ ಸವಾರರು ಪುಳಕಿತರಾದರು.

24/02/2023

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಗಳಲ್ಲಿ ಗಂಡು ಕಾಡಾನೆಯನ್ನು ಕೊನೆಗೂ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.

ಕಳೆದ ಎರಡು ದಿನಗಳಲ್ಲಿ ವಿಫಲವಾದ ಕಾರ್ಯಾಚರಣೆ ಕೊನೆಗೂ ಮೂರನೇಯ ದಿನ ಯಶಸ್ಸು ಕಂಡಿದೆ. ಕಳೆದ ಫೆ.20 ಬೆಳಿಗ್ಗೆ ಕಾಡಾನೆಯ ದಾಳಿಯಲ್ಲಿ ರೆಂಜಿಲಾಡಿಯ ನೈಲ ನಿವಾಸಿಗಳಾದ ರಂಜಿತಾ ರೈ (21) ಮತ್ತು ಅವರ ರಕ್ಷಣೆಗೆ ಧಾವಿಸಿದ ರಮೇಶ್ ರೈ (52)ಎಂಬವರನ್ನು ಕಾಡಾನೆ ದಾಳಿ ಮಾಡಿ ಸಾಯಿಸಿತ್ತು. ಇವರಿಬ್ಬರ ಮೃತದೇಹವನ್ನು ತೆಗೆಯುವ ಮುಂಚೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಡಿಎಫ್ಒ ಸ್ಥಳಕ್ಕೆ ಬರುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.ಇವರು ಸ್ಥಳಕ್ಕೆ ಬಂದಾಗ ಕಾಡಾನೆಯನ್ನು ಸೆರೆ ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದರು.

ಮೂರು ದಿನಗಳ ಕಾರ್ಯಾಚರಣೆ ಹೇಗೆ..

ಘಟನೆ ನಡೆದ ದಿನದಂದೇ ದುಬಾರೆ ಆನೆ ಕ್ಯಾಂಪ್‌ನಿಂದ ಮತ್ತು ಮತ್ತಿಗೋಡು ಎಂಬಲ್ಲಿಂದ ಅಭಿಮನ್ಯು ಆನೆ ಸೇರಿದಂತೆ ತರಬೇತಿ ಪಡೆದ 5 ಆನೆಗಳನ್ನು ತರಲಾಗಿತ್ತು.‌ ಬಳಿಕ ಫೆ.21 ರಂದು ಡ್ರೋನ್ ಕ್ಯಾಮರಾ ಬಳಸಿ ಟೆಂಪರೇಚರ್ ಟೆಕ್ನೊಲಾಜಿ ಬಳಸಿ ಮತ್ತು ಆನೆ ಟ್ಯ್ರಾಕರ್ಸ್ ಮೂಲಕ ಕಾಡಾನೆಯ ಪತ್ತೆ ಕಾರ್ಯ ಆರಂಭವಾಗಿತ್ತು. ರೆಂಜಿಲಾಡಿಯ ತುಂಬೆ ರಕ್ಷಿತಾರಣ್ಯದಲ್ಲಿ ಬಂದಿಳಿದ ಸಾಕಾನೆಗಳು ಮತ್ತು ತಜ್ಞ ವೈದ್ಯರ ತಂಡ ನೂಜಿಬಾಳ್ತಿಲ ಸಮೀಪದ ಪುತ್ಯೆ ಎಂಬಲ್ಲಿಂದ ಕಾರ್ಯಾಚರಣೆ ಆರಂಭಿಸಿತು. ಆದರೆ ಅಂದಿನ ಪ್ರಯತ್ನ ಫಲ ನೀಡಲಿಲ್ಲ. ಮತ್ತೆ ಮರ್ಧಾಳ ಸಮೀಪದ ಅಜನ ಪ್ರದೇಶದಲ್ಲಿ ಕಾಡಾನೆ ಪತ್ತೆಯಾದವು. ಆದರೆ ಅಲ್ಲೂ ಆನೆಗೆ ಅರಿವಳಿಕೆ ನೀಡುವ ಪ್ರಯತ್ನ ಸಫಲವಾಗಲಿಲ್ಲ. ಮತ್ತೆ ಮೂರನೇ ದಿನವಾದ ನಿನ್ನೆ ಸಂಜೆ ಸುಂಕದಕಟ್ಟೆ ಕೊಂಬಾರು ರಸ್ತೆಯ ಮಂಡೇಕರ ಭಾಗದಲ್ಲಿ ಕಾಡಾನೆ ಪತ್ತೆಯಾದವು. ಸಂಜೆ ವೇಳೆಗೆ ಇಲ್ಲಿಯೂ ಪ್ರಯತ್ನ ವಿಫಲವಾಗುವ ಹಂತಕ್ಕೆ ತಲುಪಿತು.ಆದರೆ ಹಟ ಬಿಡದ ಡಿಎಫ್ಓ ದಿನೇಶ್ ಒಳಗೊಂಡ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಮತ್ತು ಡಾಕ್ಟರ್ ಮುಜೀಬ್ ಅವರ ತಂಡ ಹಾಗೂ ಆನೆ ಟ್ಯ್ರಾಕರ್ಸ್ ತಂಡಗಳು ಮುಖ್ಯ ರಸ್ತೆಯಿಂದ ಸುಮಾರು ಐದು ಕಿಮೀ ಅಂತರದ ದಟ್ಟ ಅರಣ್ಯದ ಒಳಗಡೆ ಕಾಡಾನೆಯೊಂದನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ನೀಡಿ ಆನೆಯನ್ನು ಸೆರೆ ಹಿಡಿದರು. ತಕ್ಷಣವೇ ಕಾಡಾನೆ ಹಿಡಿಯಲು ನೈಪುಣ್ಯತೆ ಹೊಂದಿರುವ ಅಭಿಮನ್ಯು ಆನೆಯೊಂದಿಗೆ ಇತರ ನಾಲ್ಕು ಸಾಕಾನೆಗಳು ಸ್ಥಳಕ್ಕೆ ತೆರಳಿ ಕಾಡಾನೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ರಸ್ತೆ ಸಮೀಪಕ್ಕೆ ಎಳೆದುಕೊಂಡು ಬರಲಾಯಿತು. ಆ ಬಳಿಕ ಕ್ರೇನ್ ಸಹಾಯದಿಂದ ಕಾಡಾನೆಯನ್ನು ಲಾರಿ ಮೇಲೆ ಅಳವಡಿಸಲಾದ ಕಬ್ಬಿಣದ ಗೂಡಿನ ಒಳಗೆ ಲಾಕ್ ಮಾಡಿ ಇಳಿಸಾಯಿತು ಕೊಡಗು ಜಿಲ್ಲೆಯ ಮತ್ತಿಗೋಡು ಎಲಿಫೆಂಟ್ ಕ್ಯಾಂಪ್‌ಗೆ ಸಾಗಿಸಲಾಯಿತು.

23/02/2023

ಬಂಟ್ವಾಳ: ತುಳುನಾಡಿನ ಪರಂಪರಾಗತ ವಸ್ತುಗಳು ತನ್ಮಯತೆ, ಕಲಾತ್ಮಕತೆಯಿಂದ ರೂಪುಗೊಂಡಿದ್ದು, ಶತಶತಮಾನಗಳ ಬಾಳ್ವಿಕೆಯನ್ನೂ ಹೊಂದಿದೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮೂಲಕ ತುಳು ಸಂಸ್ಕೃತಿಗೆ ಮರುಜೀವ ನೀಡುವ ಜತೆಗೆ ರಾಣಿ ಅಬ್ಬಕ್ಕನ ಜೀವನ ಚರಿತ್ರೆಯನ್ನು ವಿವರಿಸುವ ಕಾರ್ಯ ನಡೆಯುತ್ತಿದೆ ಎಂದು ಧರ್ಮಸ್ಥಳ ಕ್ಷೇತ್ರದ ಡಾ| ಹೇಮಾವತಿ ವಿ.ಹೆಗ್ಗಡೆ ಹೇಳಿದರು.

ಅವರು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ೩೦ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಲಿಕೆಯಲ್ಲಿ ಅಳುಪರು-ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಹಾಗೂ ಐಗಳ್ ಎಂಬ ದ.ಕ.ಇತಿಹಾಸದ ದಂತಕಥೆ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದರು.

ತುಳುನಾಡಿನ ಕೃಷಿ ಪರಂಪರೆ ವಿಶಿಷ್ಟವಾಗಿದ್ದು, ವಿದ್ಯಾವಂತರು ಕೃಷಿ ಕಾರ್ಯದೆಡೆ ಮುಖ ಮಾಡಿದರೆ ಅದರ ಆಳ, ಅರಿವು ಅರಿತು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಪ್ರೊ| ತುಕರಾಮ್ ಪೂಜಾರಿ ದಂಪತಿ ತಮ್ಮ ಸಂಪತ್ತನೇ ಸುರಿದು ಈ ಕೇಂದ್ರ ನಿರ್ಮಿಸಿದ್ದಾರೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಭಾರತೀಯ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಶುಭಹಾರೈಸಿದರು.

ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ| ಪಿ.ಎನ್.ನರಸಿಂಹಮೂರ್ತಿ ಹಾಗೂ ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಶಂಕರ ಭಟ್ ಅವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸುರೇಶ್ ಕಿಣಿ ಉಪ್ಪಿನಂಗಡಿ, ಮಾಧವ ರೈ ಪೆರ್ನೆ ಅವರನ್ನು ಗೌರವಿಸಲಾಯಿತು. ಡಾ| ಸಾಯಿಗೀತಾ, ಗಾಯತ್ರಿ ಲೋಕೇಶ್ ಅವರು ಸಮ್ಮಾನ ಪತ್ರ ವಾಚಿಸಿದರು.

ಕೇಂದ್ರದ ಅಧ್ಯಕ್ಷ ಪ್ರೊ| ತುಕರಾಮ್ ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ವಂದಿಸಿದರು. ನವೀತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

23/02/2023

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರಾಗಿ ದ.ಕ. ಜಿಲ್ಲೆಯಿಂದ ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಅವರು ನೇಮಕವಾಗಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ವಿಷಯ ಪರಿಣಿತರಾಗಿ ಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿರುವುದಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

23/02/2023

ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಕಾಂಶಿ ಯೋಜನೆಗಳ ಪೋಸ್ಟರ್ ಮೂಲಕ ಪ್ರಚಾರ ಮಾಡಿದನ್ನ ಸಹಿಸದ ಯಾರೋ ಕಿಡಿಗೇಡಿಗಳು ಪ್ರಧಾನಿ ಮೋದಿ ಭಾವ ಚಿತ್ರಕ್ಕೆ ಹಾನಿ ಉಂಟು ಮಾಡಿದ ಘಟನೆ ನಡೆದಿದೆ.

ಮಂಗಳೂರು ನಾಗುರಿ ಮೂಲಕ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಪೋಸ್ಟರ್ಗೆ ಹಾನಿ ಉಂಟು ಮಾಡಿದ್ದಾರೆ.

ಕೆಲವೊಂದು ಪೋಸ್ಟರ್ ಹರಿದು ಹಾಕಿದ್ದು ಕೆಲವು ಪೋಸ್ಟರ್ ಮೋದಿ ಭಾವ ಚಿತ್ರಕ್ಕೆ ಹಾನಿ ಉಂಟು ಮಾಡಿದ್ದಾರೆ.

ಪರ ರಾಜ್ಯದ ಜನರು ಈ ರಸ್ತೆ ಮೂಲಕ ರೈಲ್ವೆ ನಿಲ್ದಾಣಕ್ಕೆ ಹೋಗೋದರಿಂದ ಎಲ್ಲರ ಗಮನ ಈ ಪೋಸ್ಟರ್ ಮೇಲೆ ಇದೆ. ಸಂಬಂಧ ಪಟ್ಟವರು ಆದಷ್ಟು ಬೇಗ ಈ ಪೋಸ್ಟರನ್ನು ತೆರವುಗಲಿಸಬೇಕಾಗಿ ಸಾರ್ವಜನಿಕರು ಮಾತನಾಡು ತ್ತಿದ್ದಾರೆ

Address

Mangalore

Website

Alerts

Be the first to know and let us send you an email when The Saffron Productions posts news and promotions. Your email address will not be used for any other purpose, and you can unsubscribe at any time.

Contact The Business

Send a message to The Saffron Productions:

Share